Monday, January 24, 2022

ಜನವರಿಯಿಂದ ದುಬೈನಲ್ಲಿ ನಾಲ್ಕೂವರೆ ದಿನ ಮಾತ್ರ ಕೆಲಸ

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ ನ (UAE) ಸರಕಾರಿ ಸಂಸ್ಥೆಗಳ ಉದ್ಯೋಗಿಗಳಿಗೆ ಮುಂದಿನ ಜನವರಿಯಿಂದ ಹೊಸ ವಾರದ ರಜೆ ನಿಯಮವನ್ನು ಘೋಷಿಸಲಾಗಿದೆ.

ಬದಲಾವಣೆಯ ಪ್ರಕಾರ ಶುಕ್ರವಾರದ ಜುಮುಆ ನಮಾಝ್ ಬಳಿಕ ರಜೆ ಇರುತ್ತದೆ. ಅದೇ ರೀತಿ ಶನಿವಾರ ಮತ್ತು ಆದಿತ್ಯವಾರ ಕೂಡಾ ವಾರದ ರಜಾ ದಿನ ಎಂದು ಘೋಷಿಸಲಾಗಿದೆ.

ಸದ್ಯಕ್ಕೆ ಈ ನಿಯಮ ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ ಅನ್ವಯವಾಗುವುದಾದರೂ, ಭವಿಷ್ಯದಲ್ಲಿ ಖಾಸಗಿ ಕಂಪನಿಗಳು ಕೂಡಾ ಇದೇ ನಿಯಮವನ್ನು ಅನುಷ್ಟಾನಗೊಳಿಸುವ ಸಾಧ್ಯತೆಯೂ ಇದೆಯೆನ್ನಲಾಗಿದೆ.

ಹಿಂದೆ ವಾರದ ರಜೆ ಹೇಗಿತ್ತು ?
ಈ ಹಿಂದೆ ಯುಎಇಯಲ್ಲಿ ಶುಕ್ರವಾರ ಮತ್ತು ಶನಿವಾರ ಎರಡು ದಿನ ವಾರದ ರಜೆಯಾಗಿತ್ತು. ಇದೀಗ ಘೋಷಿಸಿರುವ ಹೊಸ ನಿಯಮದ ಪ್ರಕಾರ ಶುಕ್ರವಾರದ ಇಡೀ ದಿನದ ರಜೆಯಲ್ಲಿ ಬದಲಾವಣೆ ತರಲಾಗಿದ್ದು, ಅರ್ಧ ದಿನ ಮಾತ್ರ ರಜೆ ಇರಲಿದೆ.

ಜೊತೆಗೆ ಆದಿತ್ಯವಾರ ಒಂದು ದಿನ ಹೆಚ್ಚುವರಿ ವಾರದ ರಜಾದಿನವಾಗಿ ಸೇರ್ಪಡೆಗೊಂಡಿದೆ. ಹೀಗಾಗಿ ಸರಕಾರಿ ಉದ್ಯೋಗಿಗಳು ವಾರದಲ್ಲಿ ನಾಲ್ಕುವರೆ ದಿನ ಮಾತ್ರ ಕೆಲಸ ನಿರ್ವಹಿಸುವಂತೆ ಮಾಡಲಾಗಿದೆ.


ಯುಎಇ ರಾಷ್ಟ್ರವು ಇಸ್ರೇಲ್ ಜೊತೆಗೆ ವ್ಯಾಪಾರ ಸಂಬಂಧ ಮರು ಪ್ರಾರಂಭಿಸಿದ ಬಳಿಕ ಇಸ್ರೇಲಿನ ವಸಾಹತಾಗಿ ಮಾರ್ಪಾಟಾಗುತ್ತಿದೆ ಎಂಬ ಆರೋಪಗಳ ಮಧ್ಯೆಯೇ ಒಂದು ಇಸ್ಲಾಮಿಕ್ ರಾಷ್ಟ್ರವಾದ ಯುಎಇ,

ಮುಸ್ಲಿಮರ ಶುಕ್ರವಾರದ ಜುಮುಆ ದಿನದ ಪೂರ್ತಿ ರಜೆಯನ್ನು ಕಡಿತಗೊಳಿಸಿ, ಅರ್ಧ ದಿನಕ್ಕೆ ಮೊಟಕುಗೊಳಿಸಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.

Hot Topics

ಮಲಗಿದ್ದ ಅತ್ತೆಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಸೊಸೆ

ಚಿತ್ರದುರ್ಗ: ಅತ್ತೆ-ಸೊಸೆ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರೋ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯಲ್ಲಿ ನಡೆದಿದೆ.ರುದ್ರಮ್ಮ(60) ಹತ್ಯೆಗೀಡಾದ ದುರ್ದೈವಿಯಾಗಿದ್ದು, ಆರೋಪಿ ಸೊಸೆ ಮುದ್ದಕ್ಕ (38)ಳನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಅತ್ತೆ-ಸೊಸೆ ನಡುವೆ ಹೊಂದಾಣಿಕೆ...

ಯಕ್ಷಗಾನ ಕಲಾವಿದ ಗೋವಿಂದ ಶೇರಿಗಾರ್ ನಿಧನ: ಯಕ್ಷಗಾನ ಕಲಾರಂಗ ಸಂತಾಪ

ಕುಂದಾಪುರ: ಗಂಡುಕಲೆಯಲ್ಲಿ ಸ್ತ್ರೀ ವೇಷಧಾರಿ ಪಾತ್ರ ಮಾಡುತ್ತಿದ್ದ ಮಾರ್ಗೋಳಿ ಗೋವಿಂದ ಶೇರಿಗಾರ್ (96) ನಿಧನರಾಗಿದ್ದು ಇಬ್ಬರು ಪುತ್ರರು ಹಾಗೂ ಪುತ್ರಿಯರನ್ನು ಅಗಲಿದ್ದಾರೆ.ಬಡಗುತಿಟ್ಟು ಪುರಾಣ ಪ್ರಸಂಗಗಳಲ್ಲಿ ಅತ್ಯಂತ ಪ್ರಸಿದ್ಧವಾದ ದೇವಿ ಮಹಾತ್ಮೆ ಪ್ರಸಂಗಗಳಲ್ಲಿ ಮೊದಲು...

‘ಸುಳ್ಳುಗಳ ಮೂಲಕ ನಾರಾಯಣಗುರುವಿಗೆ ಮಾಡಿದ ಅಪಚಾರವನ್ನು ಮುಚ್ಚಿಟ್ಟುಕೊಳ್ಳಲಾಗದು’

ಮಂಗಳೂರು: ಸುಳ್ಳುಗಳ ಮೂಲಕ ಸಾಮಾಜಿಕ ಸುಧಾರಣೆಯ ಹರಿಕಾರ  ನಾರಾಯಣ ಗುರು ಅವರಿಗೆ ಮಾಡಿದ ಅಪಚಾರವನ್ನು ಬಿಜೆಪಿ ಮುಚ್ಚಿಟ್ಟುಕೊಳ್ಳಲಾಗದು ಎಂದು ಸಿಪಿಐಎಂ ಹೇಳಿದೆ.ಕೇರಳ ರಾಜ್ಯ ಸರಕಾರ ಸೂಚಿಸಿದ ನಾರಾಯಣಗುರು ಇರುವ ಸ್ಥಬ್ದ ಚಿತ್ರವನ್ನು ಪರಿಗಣಿಸದೇ...