Connect with us

LATEST NEWS

ಸ್ಥಳ-ಸಮಯದ ಕಾರಣ, ಕೇವಲ12 ರಾಜ್ಯ ಮಾತ್ರ ಆಯ್ಕೆ: ರಕ್ಷಣಾ ಸಚಿವಾಲಯ

Published

on

ದೆಹಲಿ: ದೆಹಲಿ ಗಣರಾಜ್ಯೋತ್ಸವದ ಪರೇಡ್‌ನ ಸ್ತಬ್ಧಚಿತ್ರಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. 12 ರಾಜ್ಯಗಳು ಮತ್ತು ಒಂಬತ್ತು ಸಚಿವಾಲಯಗಳ ಸ್ತಬ್ಧಚಿತ್ರಗಳು ಪರೇಡ್‌ನಲ್ಲಿ ಭಾಗವಹಿಸುತ್ತವೆ.


ಸೀಮಿತ ಸ್ಥಳ ಮತ್ತು ಸಮಯದ ಕಾರಣದಿಂದಾಗಿ 12 ರಾಜ್ಯಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ ಎಂದು ಶನಿವಾರ ಶಿಬಿರದಲ್ಲಿದ್ದ ರಕ್ಷಣಾ ಸಚಿವಾಲಯದ ಪಿಆರ್ ಒ ನಂಬಿಬೌ ಮರಿನ್ಮಾಯಿ ಹೇಳಿದ್ದಾರೆ.
“ಹಲವು ರಾಜ್ಯಗಳು ಈ ಬಗ್ಗೆ ದನಿಯೆತ್ತಿವೆ. ನಮಗೆ ಸೀಮಿತ ಸ್ಥಳ, ಸೀಮಿತ ಸಮಯವಿದೆ. ಕಲೆ, ಸಂಗೀತ, ಸಂಸ್ಕೃತಿ ಮತ್ತು ಇತರ ಪರಿಣತಿಯ ತಜ್ಞರ ಸಮಿತಿ ಇದೆ.

ಸಮಿತಿಯು ಈ ವಿಷಯಗಳನ್ನು ಪರಿಶೀಲಿಸಿದೆ. ಸ್ತಬ್ಧಚಿತ್ರ ಪ್ರದರ್ಶಿಸಲು ನಾವು 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಅರ್ಜಿಗಳನ್ನು ಸ್ವೀಕರಿಸಿದ್ದೇವೆ. ಆದರೆ ಸ್ಥಳ ಮತ್ತು ಸಮಯದ ಕಾರಣ, ನಾವು 12 ರಾಜ್ಯಗಳನ್ನು ಮಾತ್ರ ಆಯ್ಕೆ ಮಾಡಿದ್ದೇವೆ.

ಬೇರೆ ಯಾವುದೇ ಕಾರಣವಿಲ್ಲ, ”ಎಂದು ಮರಿನ್ಮಾಯಿ ಹೇಳಿದರು. ಪರೇಡ್‌ಗೆ ಆಯ್ಕೆಯಾಗದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳದ ಮುಖ್ಯಮಂತ್ರಿಗಳು ಪ್ರಧಾನಿಗೆ ಪತ್ರ ಬರೆದಿದ್ದರು.

LATEST NEWS

ಡಾಲಿ ಚಾಯ್ ವಾಲಾ ಮಂಗಳೂರಿನವನಲ್ಲ, ಇಲ್ಲದಿದ್ದರೆ ಅವನ ಅಂಗಡಿ ಮೇಲೆ ಬುಲ್ಢೋಝರ್ ಹೋಗ್ತಿತ್ತು-ರಾಜ್ ಬಿ ಶೆಟ್ಟಿ

Published

on

ಮಂಗಳೂರು : ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟಾ ಉದ್ಘಾಟನೆಗೆ ಡಾಲಿ ಚಾಯ್ ವಾಲಾ ಅವರನ್ನು ಅತಿಥಿಯಾಗಿ ಆಹ್ವಾನಿಸಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಆದರೆ, ಡಾಲಿ ಚಾಯ್ ವಾಲಾ ಮಂಗಳೂರಿನವನಲ್ಲ ಎಂಬುವುದು ಸಂತೋಷದ ವಿಷಯ. ಒಂದು ವೇಳೆ ಅವರು ಮಂಗಳೂರಿನವರಾಗಿದ್ದರೆ ಅವರ ಅಂಗಡಿಗಳ ಮೇಲೆ ಬುಲ್ಡೋಝರ್ ಹರಿಸಿ ಧ್ವಂಸ ಮಾಡುತ್ತಿದ್ದರು ಎಂದು ಖ್ಯಾತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೊ*ಲೆ ಪ್ರಕರಣ: 21ನೇ ಆರೋಪಿಯನ್ನು ಬಂಧಿಸಿದ ಎನ್‌ಐಎ ಅಧಿಕಾರಿಗಳ ತಂಡ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ‘ಟೈಗರ್ ಕಾರ್ಯಾಚರಣೆ’ ನಡೆಸಿ ಬೀದಿ ಬದಿ ವ್ಯಾಪಾರಿಗಳ ಅಂಗಡಿಗಳನ್ನು ಬುಲ್ಡೋಝರ್ ಹಾಯಿಸಿ ತೆರವುಗೊಳಿಸಲಾಗಿತ್ತು. ಆದರೆ, ಮಂಗಳೂರಿನ ಲಾಲ್ ಬಾಗ್ ಸ್ಟ್ರೀಟ್ ಫುಡ್ ಫೆಸ್ಟ್‌ಗೆ ಬೀದಿ ಬದಿ ಚಹಾ ಮಾರಾಟಗಾರ ಡಾಲಿ ಚಾಯ್ ವಾಲಾ ಅವರನ್ನು ಅತಿಥಿಯಾಗಿ ಆಹ್ವಾನಿಸಿರುವ ಬೆನ್ನಲ್ಲೇ ಖ್ಯಾತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಮಾಡಿರುವ ಪೋಸ್ಟ್ವೊಂದು ಬೀದಿ ಬದಿ ವ್ಯಾಪಾರಿಗಳ ಮೇಲೆ ನಡೆಸಿದ ದಬ್ಬಾಳಿಕೆಯನ್ನು ಮತ್ತೆ ಮುನ್ನಲೆಗೆ ತಂದಿದೆ.

ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿರುವ ರಾಜ್ ಬಿ ಶೆಟ್ಟಿ,’ಬೀದಿ ಬದಿ ವ್ಯಾಪಾರಿ ಡಾಲಿ ಚಾಯ್ ವಾಲಾ ಅವರನ್ನು ಮಂಗಳೂರಿಗೆ ಕರೆಸಿ ಸಂಭ್ರಮಿಸಲಾಯಿತು. ಇದೇ ನಗರದಲ್ಲಿ ಕೆಲವು ತಿಂಗಳುಗಳ ಹಿಂದೆ ಬುಲ್ಡೋಝರ್ ಕಾರ್ಯಾಚರಣೆಯ ಮೂಲಕ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲಾಯಿತು. ಆದರೆ, ಡಾಲಿ ಮಂಗಳೂರಿನವನಲ್ಲ ಎಂಬುವುದು ಸಂತೋಷದ ವಿಷಯ. ಒಂದು ವೇಳೆ ಅವರು ಮಂಗಳೂರಿನವರಾಗಿದ್ದರೆ ಅವರ ಅಂಗಡಿಗಳನ್ನು ಧ್ವಂಸ ಮಾಡಲಾಗುತ್ತಿತ್ತು’ ಎಂದು ಬರೆದಿದ್ದಾರೆ.

Continue Reading

LATEST NEWS

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ಇನ್ಮುಂದೆ ಹಾಯಾಗಿ ಕಳೆಬಹುದು ನಿವೃತ್ತಿ ಜೀವನ

Published

on

ಉದ್ಯೋಗಿಗಳು ಹಾಗೂ ಕುಟುಂಬದ ಮೇಲೆ ಪರಿಣಾಮ ಬೀರುವ ಮಹತ್ವದ ವಿಷ್ಯಗಳಲ್ಲಿ ನಿವೃತ್ತಿ ವಯಸ್ಸು ಒಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಗಾಗ ಚರ್ಚೆಗಳು ನಡೆಯುತ್ತಿರುತ್ತವೆ. ಸರ್ಕಾರಿ ನೌಕರರ ನಿವೃತ್ತಿಗೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಉದ್ಯೋಗಿಗಳ ನಿವೃತ್ತಿ ವಯಸ್ಸು, ಪಿಂಚಣಿ ಸೇರಿದಂತೆ ಕೆಲ ಬದಲಾವಣೆಗಳು ಮಾಡಲಾಗತ್ತಿದೆ ಎಂಬ ಸುದ್ಧಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 2025 ರ ಮಾರ್ಚ್ 1 ರಿಂದ ಈ ಹೊಸ ನಿಯಮಗಳು ಜಾರಿಯಾಗಲಿದೆ ಎನ್ನಲಾಗುತ್ತಿದ್ದು, ಒಂದು ವೇಳೆ  ಹೊಸ ಮಾರ್ಗಸೂಚಿ ಜಾರಿಗೆ ಬಂದರೆ ಏನೆಲ್ಲ ಬದಲಾವಣೆ ಆಗಲಿದೆ ಎಂಬ ವಿವರ ಇಲ್ಲಿದೆ.

ನಿವೃತ್ತಿ ವಯಸ್ಸಿನಲ್ಲಿ ಬದಲಾವಣೆ : ಸದ್ಯ ನಿವೃತ್ತಿ ವಯಸ್ಸು ಕೇಂದ್ರ ಸರ್ಕಾರಿ ನೌಕರರಿಗೆ 60 ಆದ್ರೆ ರಾಜ್ಯ ಸರ್ಕಾರಿ ನೌಕರರ ವಯಸ್ಸು 58 -60 ವರ್ಷವಿದೆ. ಈ ವಯಸ್ಸನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಬದಲಿಸಲಿದೆ. ಮುಂದಿನ ದಿನಗಳಲ್ಲಿ ವಯಸ್ಸು 62 ಆಗಲಿದೆ ಎಂಬ ಸುದ್ದಿ ಹರಡಿದೆ.

ಪಿಂಚಣಿ ವೃದ್ಧಿ : ನಿವೃತ್ತಿ ವಯಸ್ಸಿನ ಜೊತೆ ಸರ್ಕಾರ ಪಿಂಚಣಿಯನ್ನೂ ಹೆಚ್ಚಿಸಲಿದೆ. ಇದ್ರಿಂದ ಉದ್ಯೋಗಿಗಳ ಮುಂದಿನ ಭವಿಷ್ಯ ಉತ್ತಮವಾಗಿರಲಿದೆ.

ಗ್ರಾಚ್ಯುಟಿ ಸುಧಾರಣೆ : ಸರ್ಕಾರಿ ನೌಕರರಿಗೆ ಗ್ರಾಚ್ಯುಟಿಯಲ್ಲಿ ಮತ್ತಷ್ಟು ಸುಧಾರಣೆ ತರುವ ಸಾಧ್ಯತೆ ಇದೆ ಎಂದು ವರದಿ ಮಾಡಲಾಗಿದೆ.

ವಯಸ್ಸು ಹೆಚ್ಚಳ : ನಿವೃತ್ತಿ ವಯಸ್ಸು ಏರಿಕೆ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ನಿವೃತ್ತಿ ವಯಸ್ಸನ್ನು ಹೆಚ್ಚಿಸಬೇಕು ಎನ್ನುವ ವಾದ ಹಿಂದಿನಿಂದಲೂ ಕೇಳಿ ಬರ್ತಿದೆ. ಅದಕ್ಕೆ ಕಾರಣ ಜೀವಿತಾವಧಿಯಲ್ಲಿ ಹೆಚ್ಚಳ. ಹಿಂದೆ 1998ರಲ್ಲಿ ಸರಾಸರಿ ಜೀವಿತಾವಧಿ 61.4 ವರ್ಷವಿತ್ತು. ಆದ್ರೀಗ ಅದು 72.24 ವರ್ಷವಾಗಿದೆ. ಸರ್ಕಾರಕ್ಕೆ ಇನ್ನೆರಡು ವರ್ಷ ಅನುಭವಿ ಉದ್ಯೋಗಿಗಳು ಲಭ್ಯವಾಗ್ತಾರೆ ಹಾಗೂ ನಿವೃತ್ತಿ ವಯಸ್ಸು ಹೆಚ್ಚಿಸುವುದರಿಂದ ಪಿಂಚಣಿ ಎರಡು ವರ್ಷ ವಿಳಂಬವಾಗುತ್ತದೆ. ಇದ್ರಿಂದ ಸರ್ಕಾರಕ್ಕೆ ಲಾಭವಾಗುತ್ತದೆ ಎಂದು ಕೆಲವರ ವಾದವಾಗಿದೆ.

ವಯಸ್ಸಿನ ಹೆಚ್ಚಳದ ಲಾಭ : ಒಂದ್ವೇಳೆ ಸರ್ಕಾರ ವಯಸ್ಸಿನಲ್ಲಿ ಹೆಚ್ಚಳ ಮಾಡಿದ್ರೆ ಕೆಲ ಉದ್ಯೋಗಿಗಳಿಗೆ ಲಾಭವಾದ್ರೆ ಕೆಲ ಉದ್ಯೋಗಿಗಳು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಉದ್ಯೋಗಿಗಳಿಗೆ ದೀರ್ಘಾವಧಿಯವರೆಗೆ ಕೆಲಸ ಮಾಡಲು ಮತ್ತು ಗಳಿಸಲು ಅವಕಾಶ ಸಿಗುತ್ತದೆ. ಅನುಭವಿ ಉದ್ಯೋಗಿಗಳಿಂದ ಕೆಲಸ ಸುಲಭವಾಗುತ್ತದೆ.

ನಕಾರಾತ್ಮಕ ಪ್ರಭಾವ : ಯುವಕರಿಗೆ ಉದ್ಯೋಗಾವಕಾಶಗಳು ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಉದ್ಯೋಗಿಗಳು ದೀರ್ಘ ಗಂಟೆಗಳ ಕಾಲ ಕೆಲಸ ಮಾಡಬೇಕಾಗಬಹುದು. ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು. ಪ್ರಸ್ತುತ ಸರ್ಕಾರವು ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಅಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಬಳಿ ಬಾಕಿ ಇಲ್ಲ ಎಂದು ಹೇಳಿದ್ದರು.

Continue Reading

International news

ಟರ್ಕಿಯ ಸ್ಕಿ ರೆಸಾರ್ಟ್‌ನಲ್ಲಿ ಅಗ್ನಿ ಅವಘಡ; ಮೃತರ ಸಂಖ್ಯೆ 76ಕ್ಕೆ ಏರಿಕೆ

Published

on

ಮಂಗಳೂರು/ ಅಂಕಾರ : ವಾಯುವ್ಯ ಟರ್ಕಿಯಲ್ಲಿನ ಜನಪ್ರಿಯ ಸ್ಕೀ ರೆಸಾರ್ಟ್‌ನಲ್ಲಿ ನಡೆದ ಭಾರೀ ಅಗ್ನಿ ಅವಘಡದಲ್ಲಿ ಮೃತರ ಸಂಖ್ಯೆ 76ಕ್ಕೆ ಏರಿಕೆಯಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.

ಟರ್ಕಿಯ ಬೋಲು ಪ್ರಾಂತ್ಯದ ಕಾರ್ಟಲ್ಕಾಯಾ ರೆಸಾರ್ಟ್‌ನಲ್ಲಿರುವ 12 ಅಂತಸ್ಥಿತಿನ ಗ್ರ್ಯಾಂಡ್ ಕಾರ್ತಾಲ್ ಹೋಟೆಲ್‌ನ ರೆಸ್ಟೋರೆಂಟ್‌ನಲ್ಲಿ ಬೆಳಗಿನ ಜಾವ 3.30ರ ಸುಮಾರಿಗೆ ಹೋಟೆಲ್ ಬೆಂಕಿಗೆ ಆಹುತಿಯಾಯಿತು. ಬೆಂಕಿಯ ಕಾರಣ ಇನ್ನೂ ತಿಳಿದುಬಂದಿಲ್ಲ.

ಘಟನೆಗೆ ಪ್ರಮುಖ ಕಾರಣ ಇನ್ನೂ ತಿಳಿದುಬಂದಿಲ್ಲ. ರೆಸಾರ್ಟ್‌ನಲ್ಲಿದ್ದ ಇಬ್ಬರೂ ಭಯಭೀತರಾಗಿ ಕಟ್ಟಡದಿಂದ ಹಾರಿ ಸಾವನ್ನಪ್ಪಿದ್ದಾರೆ. ಕೆಲವು ಜನರು ಬೆಡ್‌ರೂಂನ ಬೆಡ್‌ಶೀಟ್‌ಗಳನ್ನು ಬಳಸಿ ತಮ್ಮ ಕೋಣೆಗಳಿಂದ ಕೆಳಗೆ ಇಳಿಯಲು ಪ್ರಯತ್ನಿಸಿದ್ದಾರೆ. ಹೋಟೆಲ್‌ನಲ್ಲಿ 234 ಅತಿಥಿಗಳು ತಂಗಿದ್ದರು ಎಂದು ಸ್ಥಳಿಯ ಮಾಧ್ಯಮಗಳು ಹೇಳಿವೆ.

ಇದನ್ನೂ ಓದಿ: ಅರೆಬೈಲ್ ಘಾಟ್‌ನಲ್ಲಿ ತರಕಾರಿ ತುಂಬಿದ್ದ ಲಾರಿ ಪಲ್ಟಿ: 9 ಜನರ ಸಾವು

ಅವಘಡದಲ್ಲಿ ಒಟ್ಟು 76 ಮಂದಿ ಸಾವನ್ನಪ್ಪಿದ್ದು, 51ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಹೋಟೆಲ್‌ನಲ್ಲಿ 234 ಅತಿಥಿಗಳು ತಂಗಿದ್ದರು. ಕಟ್ಟಡ ಕುಸಿಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದು ಹೋಟೆಲ್‌ನಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಈ ನಡುವೆ ಅಗ್ನಿ ಅವಘಡಕ್ಕೆ ಕಾರಣ ಏನೆಂಬ ಬಗ್ಗೆ ತನಿಖೆ ಮುಂದುವರೆದಿದ್ದು, ತನಿಖೆಗಾಗಿ 6 ಪ್ರಾಸಿಕ್ಯೂಟರ್‌ಗಳನ್ನು ಸರ್ಕಾರ ನೇಮಿಸಿದೆ.

ಮತ್ತೊಂದು ಅವಘಡ

ಕೇಂದ್ರ ಟರ್ಕಿಯಲ್ಲಿ ಇರುವ ಮತ್ತೊಂದು ಸ್ಕಿ ರೆಸಾರ್ಟ್‌ನ ಹೋಟೆಲ್‌ವೊಂದರಲ್ಲಿ ಅಡುಗೆ ಅನಿಲ ಸ್ಪೋಟಗೊಂಡಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

 

Continue Reading

LATEST NEWS

Trending

Exit mobile version