ಅಮೃತಸರ್: ಪಂಜಾಬ್ ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಅನ್ಮೋಲ್ ರತ್ತನ್ ಸಿಧು, ತಾವು ತಮ್ಮ ಕೆಲಸಕ್ಕೆ ಕೇವಲ 1 ರೂಪಾಯಿ ಸಂಬಳ ಪಡೆಯುವುದಾಗಿ ಹೇಳಿದ್ದಾರೆ.
ಎಲ್ಲ ಕೇಸ್ಗಳನ್ನು ಪಾರದರ್ಶಕವಾಗಿ ನಡೆಸುತ್ತೇನೆ. ಆದರೆ ಹೆಚ್ಚಿನ ವೇತನ ಪಡೆದು ಸರ್ಕಾರಕ್ಕೆ ಹೊರೆಯಾಗುವುದಿಲ್ಲ ಎಂದು ಹೇಳಿದ್ದಾಗಿ.
ಕಾನೂನು ವಿಚಾರದಲ್ಲಿ ಅತ್ಯುತ್ತಮ ಅನುಭವ ಹೊಂದಿದ ಅನ್ಮೋಲ್ ರತ್ತನ್ ಸಿಧು ಅವರು ಪಂಜಾಬ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪರ್ಮಾನ್ ಪಾತ್ರಕ್ಕೆ ಭಾಜನರಾಗಿದ್ದಾರೆ.
ಪಂಜಾಬ್ನಲ್ಲಿ ಆಮ್ ಆದ್ಮಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸರ್ಕಾರದ ಪರ ಅಡ್ವೋಕೇಟ್ ಜನರಲ್ ಆಗಿ ನೇಮಕ ಮಾಡಲಾಗಿದೆ.