ತೊಕ್ಕೊಟ್ಟು ,ಬದಲಾದ ಸಂಚಾರಿ ವ್ಯವಸ್ಥೆಯಲ್ಲೂ ಮತ್ತೆ ಅಪಘಾತ : ಬಸ್ಸಿನಡಿಗೆ ಬಿದ್ದ ಬುಲೆಟ್ ಸವಾರ..!
ಮಂಗಳೂರು : ಸರಣಿ ಅಪಘಾತ- ಜೀವಹಾನಿಗೆ ಕುಖ್ಯಾತಿ ಪಡೆದ ಮಂಗಳೂರು ಹೊರ ವಲಯದ ತೊಕ್ಕೊಟ್ಟು ಹೈವೆಯಲ್ಲಿಂದು ಮತ್ತೆ ಅಪಘಾತ ಸಂಭವಿಸಿದೆ.
2 ದಿನಗಳ ಹಿಂದೆ ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಲಾರಿ ಅಡಿಗೆ ದಂಪತಿಗಳು ಬಿದ್ದು ಮೃತಪಟ್ಟ ದಾರುಣ ಘಟನೆಯಿಂದ ಎಚ್ಚೆತ್ತ ಪೊಲೀಸ್ ಮತ್ತು ಹೆದ್ದಾರಿ ಅಧಿಕಾರಿಗಳು ಅಪಘಾತ ಮತ್ತು ವಾಹನ ದಟ್ಟಣೆ ಕಡಿಮೆ ಮಾಡಲು ಪರ್ಯಾಯ ವ್ಯವಸ್ಥೆ ಮಾಡಿದ್ದರು.
ಆದರೆ ಬದಲಾದ ಸಂಚಾರಿ ವ್ಯವಸ್ಥೆಯಲ್ಲೂ ಮತ್ತೆ ಅಪಘಾತವಾಗಿದೆ. ತೊಕ್ಕೊಟ್ಟು ಕಾಪಿಕಾಡಿನ ತಿರುವಿನಲ್ಲಿ ಉಳ್ಳಾಲಕ್ಕೆ ಹೋಗುವ ಬಸ್ಸಿನಡಿಗೆ ಬುಲೆಟ್ ಬೈಕೊಂದು ಬಿದ್ದಿದ್ದು ವಾಹ ಸವಾರ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಉಳ್ಳಾಲಕ್ಕೆ ಬಸ್ ತಿರುಗುತ್ತಿದ್ದ ಈ ದುರ್ಘಟನೆ ಸಂಭವಿಸಿದ್ದು ಅದೃಷ್ಟವಶಾತ್ ಬುಲೆಟ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬುಲೆಟ್ ಸವಾರ ಮೌಶೂಕ್ ಎಂಬಾತ ಮುಂಬೈಯಿಂದ ಕೇರಳಕ್ಕೆ ಪಯಣಿಸುತ್ತಿದ್ದ ಎನ್ನಲಾಗಿದೆ.