ಕೋಲ್ಕತ: ಮಾಡೆಲ್ ಅಥವಾ ಸಿನಿಮಾ ಲೋಕದಲ್ಲಿ ಮಿಂಚಬೇಕು ಎಂಬ ಅತಿಯಾಸ ಆಸೆ ಇಟ್ಟುಕೊಂಡಂತಹ ಯುವತಿಯರನ್ನು ಬಲವಂತವಾಗಿ ಅಶ್ಲೀಲ ವಿಡಿಯೋಗಳಲ್ಲಿ ಬಳಸಿಕೊಳ್ಳುತ್ತಿದ್ದರು ಎಂಬ ಆರೋಪದ ಮೇಲೆ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ ಮೂಲದ ನಂದಿತಾ ದತ್ತ ಎಂಬ ಮಾಡೆಲ್ ಬಂಧನವಾಗಿದೆ.
ನಂದಿತಾ ಜತೆಯಲ್ಲಿ ಆಕೆಯ ಆಪ್ತ ಸಹಾಯಕ ಮೈನಕ್ ಘೋಷ್ ಎಂಬಾತನು ಸಹ ಪ್ರಕರಣದಲ್ಲಿ ಬಂಧಿಯಾಗಿದ್ದಾನೆ. ಮಾಡೆಲ್ ಅಥವಾ ಸಿನಿಮಾ ಲೋಕದಲ್ಲಿ ಮಿಂಚಬೇಕು ಎಂಬ ಅತಿಯಾಸ ಆಸೆ ಇಟ್ಟುಕೊಂಡಂತಹ ಯುವತಿಯರನ್ನು ಬಲವಂತವಾಗಿ ಅಶ್ಲೀಲ ವಿಡಿಯೋಗಳಲ್ಲಿ ಬಳಸಿಕೊಳ್ಳುತ್ತಿದ್ದರು ಎಂಬ ಆರೋಪವಿದೆ. ಒಟಿಟಿ ಮುಖ್ಯವಾಹಿನಿಯಲ್ಲಿ ಒಳ್ಳೆಯ ಬ್ರೇಕ್ ಕೊಡುತ್ತೇವೆ ಎಂಬ ಸುಳ್ಳು ಭರವಸೆಯನ್ನು ನೀಡಿ ಅಥವಾ ಬೆದರಿಸಿ ದುಷ್ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ನ್ಯಾನ್ಸಿ ಭಾಬಿ ಅಂತಲೂ ಪರಿಚಿತವಾಗಿರುವ ನಂದಿತಾ ಅನೇಕ ಅರೆ ಅಶ್ಲೀಲ ಚಿತ್ರಗಳಲ್ಲಿಯೂ ನಟಿಸಿದ್ದಾರೆ.
30 ವರ್ಷದ ನಂದಿತಾ ಮತ್ತು ಮೈನಕ್ ಇಬ್ಬರನ್ನು ಪಶ್ಚಿಮ ಬಂಗಾಳದ ದಮ್ ದಮ್ ಮತ್ತು ನಕ್ತಾಲಾ ಏರಿಯಾದಲ್ಲಿ ಬಂಧಿಸಲಾಗಿದೆ. ಇಬ್ಬರು ಯುವ ಮಾಡೆಲ್ಗಳು ಜುಲೈ 26ರಂದು ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಬಂಧಿಸಲಾಗಿದೆ.
ಬಲ್ಲಿಗುಂಗೆ ಪ್ರದೇಶದಲ್ಲಿರುವ ಸ್ಟುಡಿಯೋದಲ್ಲಿ ಬಲವಂತವಾಗಿ ಬೆತ್ತಲೆ ವಿಡಿಯೋದಲ್ಲಿ ಭಾಗವಹಿಸುವಂತೆ ಮಾಡಿದರು.
ಅಲ್ಲದೆ, ನ್ಯೂ ಟೌನ್ ಹೋಟೆಲ್ನಲ್ಲಿ ನನ್ನ ಸ್ನೇಹಿತೆಯನ್ನು ಬಲವಂತವಾಗಿ ವಯಸ್ಕರ ಚಿತ್ರದಲ್ಲಿ ಭಾಗವಹಿಸುವಂತೆ ಮಾಡಿದರು ಎಂದು ಸಂತ್ರಸ್ತೆ ಮಾಡೆಲ್ ಒಬ್ಬಳು ಆರೋಪಿಸಿದ್ದಾಳೆ.
ಇದೀಗ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಇಬ್ಬರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರರ ಬಂಧನಕ್ಕೆ ಬಲೆ ಬೀಸಿದ್ದಾರೆ.