Connect with us

    LATEST NEWS

    ಜಾರಿಗೆ ಬಂದ “ಒಂದು ರಾಷ್ಟ್ರ ಒಂದು ಚಂದಾದಾರಿಕೆ”..! ಏನಿದು ONOS..?

    Published

    on

    ಮಂಗಳೂರು/ ನವದೆಹಲಿ : ನವೆಂಬರ್ 2024 ರಂದು ಸಂಸತ್‌ನಲ್ಲಿ ಅನುಮೋದನೆ ಪಡೆದುಕೊಂಡಿರುವ ” ಒಂದು ರಾಷ್ಟ್ರ ಒಂದು ಚಂದಾದಾರಿಕೆ” (One Nation One Susbriber) ಜನವರಿ 1 ರಿಂದ ಜಾರಿಗೆ ಬಂದಿದ್ದು, ನೋಂದಣಿ ಕೂಡ ಆರಂಭವಾಗಿದೆ. ದೇಶದ ಮೂಲೆ ಮೂಲೆಯ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಸಿಗಲಿದ್ದು, ವಿದ್ಯಾರ್ಥಿಗಳು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

    ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಈ ONOS ಜಾರಿ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗಳು ಸೇರಿದಂತೆ ವಿದೇಶದಲ್ಲಿ ಕಲಿಯುವ ಅವಕಾಶಗಳಿಗೆ ಪರೀಕ್ಷೆ ಬರೆಯಲು ಅನುಕೂಲವಾಗಲಿದೆ. ಈ ಯೋಜನೆ ಎರಡು ಹಂತಗಳಲ್ಲಿ ಜಾರಿಯಾಗಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ 6 ಸಾವಿರ ಕೋಟಿಯನ್ನು ಮೀಸಲಿಟ್ಟಿದೆ.

    ಒಂದು ರಾಷ್ಟ್ರ ಒಂದು ಚಂದಾದಾರಿಕೆ ಎಂದರೇನು ?

    ಈ ಯೋಜನೆಯಲ್ಲಿ ಐಐಟಿ ಸೇರಿದಂತೆ ಎಲ್ಲಾ ಸರ್ಕಾರಿ ಅನುದಾನಿತ ಉನ್ನತ ಸಂಸ್ಥೆಗಳ ಸರಿ ಸುಮಾರು 1.80 ಕೋಟಿ ವಿದ್ಯಾರ್ಥಿಗಳಿಗೆ ಪ್ರಯೋಜನ ಸಿಗಲಿದೆ. ವಿದ್ಯಾರ್ಥಿಗಳು ಒಂದೇ ಸ್ಥಳದಲ್ಲಿ 13400 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ನಿಯತಕಾಲಿಕೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಪೋರ್ಟಲ್‌ನಲ್ಲಿ 6300 ಸಂಸ್ಥೆಗಳು ನೋಂದಾಯಿತವಾಗಿದ್ದು, ಐಐಟಿ, ಎನ್‌ಐಟಿಯಂತಹ ಸಂಸ್ಥೆಗಳೂ ಸೇರಿಕೊಳ್ಳಲಿವೆ. ಇದೊಂದು ಸಂಪೂರ್ಣ ಡಿಜಿಟಲ್ ಪೋರ್ಟಲ್ ಆಗಿದ್ದು ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನೆ ಮತ್ತು ನಿಯತಕಾಲಿಕಗಳು ಬಳಸಲು ಸಹಕಾರಿಯಾಗಲಿದೆ. ಈ ಯೋಜನೆಯಡಿಯಲ್ಲಿ, ಮೊದಲ ಹಂತದಲ್ಲಿ, ಎಂಜಿನಿಯರಿಂಗ್, ತಂತ್ರಜ್ಞಾನ, ವಿಜ್ಞಾನ, ಗಣಿತ, ವೈದ್ಯಕೀಯ, ನಿರ್ವಹಣೆ, ರಾಜ್ಯಶಾಸ್ತ್ರ ಮತ್ತು ಮಾನವಿಕ ವಿಷಯಗಳಿಗೆ 13400 ಕ್ಕೂ ಹೆಚ್ಚು ಜರ್ನಲ್‌ಗಳು ಮತ್ತು ಸಂಶೋಧನೆಗಳು ಲಭ್ಯವಿರುತ್ತವೆ. ಇದರ ಎರಡನೇ ಹಂತವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯ ಆಧಾರದ ಮೇಲೆ ಮುಂದಕ್ಕೆ ತೆಗೆದುಕೊಳ್ಳಲಾಗುವುದು.

    ಪೋರ್ಟಲ್ ಲಿಂಕ್ ಇಲ್ಲಿದೆ

    https://www.psa.gov.in/oneNationOneSubscription
    https://pib.gov.in/PressReleasePage.aspx?PRID=2089179

    LATEST NEWS

    ಚಹಲ್-ಧನಶ್ರೀ ದಾಂಪತ್ಯದಲ್ಲಿ ಬಿರುಕು; ಖಚಿತ ಪಡಿಸಿತು ಕ್ರಿಕೆಟರ್ ಮಾಡಿದ ಆ ಒಂದು ಕೆಲಸ !

    Published

    on

    ಮಂಗಳೂರು/ಮುಂಬೈ : ಟೀಂ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಹಲ್ ಹಾಗೂ ಖ್ಯಾತ ಕೊರಿಯೋಗ್ರಾಫರ್ ಧನಶ್ರೀ ವರ್ಮಾ ದಾಂಪತ್ಯ ಜೀವನ ಮುರಿದುಬಿತ್ತಾ ಎಂಬ ಅನುಮಾನ ಶುರುವಾಗಿದೆ.

    ಕಳೆದ ಕೆಲವು ವರ್ಷಗಳಿಂದಲೂ ಚಹಲ್-ಧನಶ್ರೀ ದಾಂಪತ್ಯ ಜೀವನದಲ್ಲಿ ಬಿರುಕುಬಿಟ್ಟಿದೆ ಎನ್ನುವಂತಹ ಮಾತುಗಳು ಕೇಳಿ ಬಂದಿದ್ದವು.

    ಇದೀಗ ಅಚ್ಚರಿ ಎಂಬಂತೆ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಇಬ್ಬರು ಇನ್ ಸ್ಟಾಗ್ರಾಂನಲ್ಲಿ ಒಬ್ಬರಿಗೊಬ್ಬರು ಅನ್ ಫಾಲೋ ಮಾಡಿದ್ದಾರೆ. ಚಹಲ್ ಅವರು ಧನಶ್ರೀ ಅವರೊಂದಿಗಿನ ಎಲ್ಲಾ ಫೋಟೊಗಳನ್ನು ಸಾಮಾಜಿಕ ಮಾಧ್ಯಮ ಇನ್ ಸ್ಟಾಗ್ರಾಂನಲ್ಲಿ ಅಳಿಸಿ ಹಾಕಿದ್ದಾರೆ. ಆದರೆ, ಚಹಲ್ ಅವರನ್ನು ಅನ್ ಫಾಲೋ ಮಾಡಿರುವ ಧನಶ್ರೀ ಅವರೊಂದಿಗಿನ ಫೋಟೊಗಳನ್ನು ಈವರೆಗೆ ಅಳಿಸಿ ಹಾಕಿಲ್ಲ.

    ಇದನ್ನೂ ಓದಿ: 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಟೀಂ ಇಂಡಿಯಾ

    2023ರಲ್ಲಿ ಧನಶ್ರೀ ಅವರು ಇನ್ ಸ್ಟಾಗ್ರಾಂ ಯುಸರ್ ನೇಮ್ ನಿಂದ ‘ಚಹಲ್’ ಅನ್ನು ಕೈಬಿಟ್ಟ ನಂತರ ವಿಚ್ಛೇದನ ವದಂತಿಗಳು ಹರಿದಾಡಿದ್ದವು. ಆದರೆ, ಈ ವದಂತಿಯನ್ನು ಆಗ ಯಜುವೇಂದ್ರ ಚಹಲ್ ನಿರಾಕರಿಸಿದ್ದರು.

    ಲಾಕೌಡೌನ್ ಸಮಯದಲ್ಲಿ ಪರಸ್ಪರ ಪರಿಚಯವಾಗಿದ್ದ ಚಹಲ್ ಮತ್ತು ಧನಶ್ರೀ, 2020ರ ಡಿಸೆಂಬರ್ 11ರಂದು ವಿವಾಹವಾಗಿದ್ದರು.

     

    Continue Reading

    LATEST NEWS

    ಅಜ್ಮೀರ ದರ್ಗಾಕ್ಕೆ ‘ಚಾದರ್’ ಸಮರ್ಪಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು..!

    Published

    on

    ಮಂಗಳೂರು/ಜೈಪುರ : ಭಾರತದ ಶ್ರೀಮಂತ ಆಧ್ಯಾತ್ಮಿಕ ಪರಂಪರೆ ಮತ್ತು ಶಾಂತಿ ಮತ್ತು ಏಕತೆಯ ಸಂದೇಶ ಸಾರುವ ಅಜ್ಮೀರ್ ಷರೀಫ್ ದರ್ಗಾದಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಭಾಗವಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ದರ್ಗಾಗೆ ಭೇಟಿ ನೀಡಿ ಚಾದರ್ ಸಮರ್ಪಿಸುವ ಮೂಲಕ ಖ್ವಾಜಾ ಮೊಯಿನುದ್ದೀನ್ ಚಸ್ತಿ ಅವರ 813 ನೇ ಉರೂಸ್ ನಲ್ಲಿ ಭಾಗವಹಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಸತತ ಹನ್ನೊಂದು ವರ್ಷಗಳಿಂದ ಅಜ್ಮೀರ್ ಷರೀಫ್ ದರ್ಗಾದ ಉರೂಸ್‌ ಸಮಯದಲ್ಲಿ ದರ್ಗಾಕ್ಕೆ ಚಾದರ್ ಸಮರ್ಪಣೆ ಮಾಡಿದ್ದಾರೆ. ಈ ಬಾರಿ ಸಚಿವ ಕಿರಣ್ ರಿಜಿಜು ಅವರು ಪ್ರಧಾನಿ ಮೋದಿ ಅವರ ಪರವಾಗಿ ದರ್ಗಾಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಸಚಿವ ರಿಜಿಜು, “ಅಜ್ಮೀರ್ ಉರೂಸ್ ಸಮಯದಲ್ಲಿ ಗರೀಬ್ ನವಾಜ್ ದರ್ಗಾಕ್ಕೆ ಭೇಟಿ ನೀಡುವುದು ದೇಶದ ಹಳೆಯ ಸಂಪ್ರದಾಯವಾಗಿದೆ. ಸೌಹಾರ್ದತೆ ಮತ್ತು ಭಾತೃತ್ವದ ಸಂದೇಶವನ್ನು ರವಾನಿಸಲು ಪ್ರಧಾನಿ ಮೋದಿ ಅವರ ಪರವಾಗಿ ಚಾದರ್ ಅರ್ಪಿಸುವ ಅವಕಾಶ ಸಿಕ್ಕಿದೆ. ಉರೂಸ್‌ ಸಂದರ್ಭದಲ್ಲಿ ದೇಶದಲ್ಲಿ ಶಾಂತಿಯುತ ವಾತಾವರಣಕ್ಕಾಗಿ ನಾವು ಆಶೀರ್ವಾದವನ್ನು ಬಯಸುತ್ತಿದ್ದೇನೆ” ಎಂದು ಹೇಳಿದ್ದಾರೆ.

    ಇದೇ ವೇಳೆ ದರ್ಗಾಕ್ಕೆ ಭೇಟಿ ನೀಡುವ ಲಕ್ಷಾಂತರ ಯಾತ್ರಾರ್ಥಿಗಳಿಗೆ ಅನುಕೂಲ ಆಗುವ ಎಲ್ಲಾ ಮೂಲಸೌಕರ್ಯಗಳನ್ನು ಸುಧಾರಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.

    Continue Reading

    LATEST NEWS

    ಕಮರಿಗೆ ಬಿದ್ದ ಸೇನಾ ವಾಹನ; ಇಬ್ಬರೂ ಯೋಧರ ಸಾವು, ಮೂವರಿಗೆ ಗಂಭೀರ ಗಾಯ

    Published

    on

    ಮಂಗಳೂರು/ಶ್ರೀನಗರ: ಜಮ್ಮು ಕಾಶ್ಮೀರದ ಬಂಡಿಪೊರಾದಲ್ಲಿ ಸೇನಾ ವಾಹನ ಕಂದಕಕ್ಕೆ ಬಿದ್ದ ಹಿನ್ನೆಲೆಯಲ್ಲಿ ಇಬ್ಬರು ಯೋಧರು ಮೃತಪಟ್ಟಿದ್ದಾರೆ.

    ಈ ದುರ್ಘಟನೆಯಲ್ಲಿ 3 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಂಡಿಪೋರಾದ ವುಲರ್ ವ್ಯೂಪಾಯಿಂಟ್ ಬಳಿ ಸೇನಾ ವಾಹನವೊಂದು ರಸ್ತೆಯಿಂದ ಕೆಳಗಿಳಿದು ಆಳವಾದ ಕಮರಿಗೆ ಉರುಳಿದ ಘಟನೆ ನಡೆದಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

    ಉತ್ತರ ಕಾಶ್ಮೀರ ಜಿಲ್ಲೆಯ ಎಸ್.ಕೆ ಪಯೆನ್ ಬಳಿ ಸೇನಾ ವಾಹನ ಕಮರಿಗೆ ಬಿದ್ದು ಇಬ್ಬರು ಸೈನಿಕರ ಸಾವು, ಮೂವರು ಗಂಭೀರವಾಗಿರುವುದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಬಂಡಿಪೋರಾ- ಶ್ರೀನಗರ ರಸ್ತೆಯ ಎಸ್ ಕೆ ಪಯೀನ್ ಬಳಿ ವಾಹನ ಸ್ಕಿಡ್ ಆಗಿ ಆಳವಾದ ಕಮರಿಗೆ ಬಿದ್ದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ಚೀನಾದ ನಿಗೂಢ ವೈರಸ್ ಕುರಿತು ಆರೋಗ್ಯ ಸಂಸ್ಥೆ ಮಾಹಿತಿ !

    ಈ ಘಟನೆಯಲ್ಲಿ ಐವರು ಯೋಧರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ಬಂಡಿಪೋರಾಕ್ಕೆ ಕರೆದೊಯ್ಯಲಾಯಿತು. ಇಲ್ಲಿ ಇಬ್ಬರು ಬರುವಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ತೀವ್ರವಾಗಿ ಗಾಯಗೊಂಡ ಮೂವರು ಸೈನಿಕರನ್ನು ಚಿಕಿತ್ಸೆಗಾಗಿ ಶ್ರೀನಗರಕ್ಕೆ ಸ್ಥಳಾಂತರಿಸಲಾಗಿದೆ.

    Continue Reading

    LATEST NEWS

    Trending