ಕುವೈಟ್: ಕೇರಳದ ಸಂಪ್ರದಾಯ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಓಣಂ ಹಬ್ಬವನ್ನು ಸಂಭ್ರಮ ಮತ್ತು ಗೌರವ ಪೂರ್ವಕವಾಗಿ ಕುವೈಟ್ ನ ಫರ್ವಾನಿಯಾದ ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್ನಲ್ಲಿ ಆಚರಿಸಲಾಯಿತು.
ರಾಜ ಮಹಾಬಲಿಗೆ ಗೌರವ ಸೂಚಿಸುವ ಈ ಹಬ್ಬವನ್ನು ಕುವೈಟ್ನಲ್ಲೂ ಅತ್ಯಂತ ಸಡಗರದಿಂದ ಆಚರಿಸಿ ಸಂಭ್ರಮಿಸಲಾಯಿತು.
ಮೆಡಿಕಲ್ ಸೆಂಟರ್ ನ ಮುಂಭಾಗದಲ್ಲಿ ಬಿಡಿಸಲಾದ ಸುಂದರವಾದ ಪೂಕಲಂ ಓಣಂ ಹಬ್ಬದ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು, ಹಬ್ಬದ ಆಚರಣೆಯ ಅಂಗವಾಗಿ ಎಲ್ಲಾ ಉದ್ಯೋಗಿಗಳಿಗೆ ಓಣಂ ಸದ್ಯವನ್ನು ಬಡಿಸಲಾಯಿತು.
ಅಷ್ಟೇ ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡಾ ನಡೆದವು. ಕೇರಳದ ಅತ್ಯಂತ ಪ್ರಾಚೀನ ನೃತ್ಯ ಪ್ರಕಾರಗಳಲ್ಲಿ ಒಂದಾದ ತಿರುವಾತಿರ ಎಂಬ ಸಾಂಪ್ರದಾಯಿಕ ನೃತ್ಯವನ್ನು ಪ್ರದರ್ಶಿಸಲಾಯಿತು.
ಇನ್ನು ಸಿಬ್ಬಂದಿಯ ಸುಮಧುರ ಓಣಂ ಹಾಡುಗಳು ಸಭಿಕರನ್ನು ಮನರಂಜಿಸಿತು.
ಹಬ್ಬದ ವಾತಾವರಣವನ್ನು ಮತ್ತಷ್ಟು ಹೆಚ್ಚಿಸಲು ಕೇರಳ ಕಾಸರಗೋಡು ಶೈಲಿಯ ಆಟಗಳನ್ನು ಏರ್ಪಡಿಸಲಾಗಿತ್ತು.
ಇನ್ನು ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್ ಶಾಖೆ ವ್ಯವಸ್ಥಾಪಕರಾದ ಅಬ್ದುಲ್ ರಜಾಕ್ ಸ್ವಾಗತಿಸಿದರು.
ಹಬ್ಬದ ಕುರಿತು ಬದ್ರ್ ಅಲ್ ಸಮಾದ ಡಾ.ರಾಜಶೇಖರನ್ ಮತ್ತು ಅಶ್ರಫ್ ಅಯೂರ್ ಎಲ್ಲಾ ಸಿಬ್ಬಂದಿಗೆ ಓಣಂ ಸಂದೇಶವನ್ನು ನೀಡಿದರು.