Connect with us

    LATEST NEWS

    ದೇವರನಾಡಲ್ಲಿ ‘ಓಣಂ’ ಸಂಭ್ರಮಾಚರಣೆ

    Published

    on

    ‘ಸುಗ್ಗಿ ಹಬ್ಬ’ ಎಂದೇ ಕರೆಯಲ್ಪಡುವ ‘ಓಣಂ’ ಹಬ್ಬವನ್ನು ದಕ್ಷಿಣ ಭಾರತದ ಕೇರಳ ರಾಜ್ಯದಲ್ಲಿ ಬಹು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಅಷ್ಟು ಮಾತ್ರವಲ್ಲದೆ ಕೇರಳ ಮೂಲದವರು ಎಲ್ಲಿದ್ದರೂ ಈ ಹಬ್ಬವನ್ನು ಸಂಭ್ರಮಿಸಲು ಹಿಂದೇಟು ಹಾಕುವುದಿಲ್ಲ. ಜಾತಿ, ಮತ, ಭೇದವನ್ನು ಮರೆತು ಎಲ್ಲರೂ ಒಟ್ಟಾಗಿ ಬರೋಬ್ಬರಿ 10 ದಿನಗಳ ಕಾಲ ಹಬ್ಬವನ್ನು ಸಂಭ್ರಮಿಸುತ್ತಾರೆ. ಈ ಬಾರಿ ಸೆ.6 ರಿಂದ ಸೆ.15 ರ ವರೆಗೆ ಆಚರಿಸಲಾಗುತ್ತಿದ್ದು , ಕೊನೆಯ ದಿನವಾದ ಇಂದು(ಸೆ.15) ಬಹು ವಿಶೇಷವಾಗಿದೆ. ‘ತಿರುವೋಣಂ’ ಎಂದು ಇದನ್ನು ಕರೆಯುತ್ತಾರೆ. ‘ಓಣಂ’ ನ ಇತಿಹಾಸ, ಮಹತ್ವ, ಹಬ್ಬ ಆಚರಣೆ ವಿಧಾನ ಎಲ್ಲದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.


    ‘ಓಣಂ’ ಇತಿಹಾಸ:
    ದೇವರನಾಡಿನ ವಿಶೇಷ ಹಬ್ಬಗಳಲ್ಲಿ ಒಂದು ಈ ಓಣಂ. ಪುರಾಣಗಳ ಪ್ರಕಾರ ಒಂದು ಕಾಲದಲ್ಲಿ ರಾಜ ಮಹಾಬಲಿ ಭೂಲೋಕವನ್ನು ಆಳುತ್ತಿದ್ದನು. ರಾಜನಾಗಿದ್ದ ಆತನು ತನ್ನ ಪ್ರಜೆಗಳ ಮೇಲೆ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದನು. ಈ ಬಲಿರಾಜನ ರಾಜ್ಯವು ಬಹಳ ಸಮೃದ್ಧಿಯಿಂದ ಕೂಡಿತ್ತು. ಹೀಗಾಗಿ ಅಲ್ಲಿನ ಪ್ರಜೆಗಳೆಲ್ಲರೂ ಬಹಳ ಸಂತೋಷದಿಂದ ಜೀವನ ನಡೆಸುತ್ತಿದ್ದರು. ಹೀಗೆ ಭೂಲೋಕದಲ್ಲಿ ಆಡಳಿತ ನಡೆಸುತ್ತಿದ್ದ ಮಹಾಬಲಿಯು ತನ್ನ ಪರಾಕ್ರಮದಿಂದ ಮೂರು ಲೋಕವನ್ನು ವಶಪಡಿಸಿಕೊಂಡಾಗ, ಇಂದ್ರನು ದೇವಲೋಕದ ನಿಯಂತ್ರಣವವನ್ನು ಮರಳಿ ಪಡೆಯಲು ವಿಷ್ಣು ದೇವರ ಸಹಾಯವನ್ನು ಕೋರಿದನು. ಮಹಾಬಲಿ ವಿಷ್ಣುವಿನ ಮಹಾನ್ ಭಕ್ತನಾಗಿದ್ದ ಕಾರಣ ವಿಷ್ಣುವಿಗೆ ಇವರ ನಡುವೆ ಪಕ್ಷಪಾತ ಮಾಡಲು ಕಷ್ಟವಾಯಿತು. ಆದರೆ ಈ ದೇವಲೋಕವನ್ನು ಇಂದ್ರನಿಗೆ ಮರಳಿಸುವ ಸಲುವಾಗಿ ವಿಷ್ಣು ಸಣ್ಣ ವಾಮನನ ಅವತಾರವನ್ನು ತಾಳಿದನು.

    ಮಹಾಬಲಿಯನ್ನು ಭೇಟಿಯಾಗಿ ಮೂರು ಹೆಜ್ಜೆ ಗಾತ್ರದ ಜಮೀನಿನ ಮಾಲೀಕತ್ವದ ಹಕ್ಕನ್ನು ಕೇಳಿದನು. ಈ ವೇಳೆ ರಾಜನು ಇದಕ್ಕೆ ಒಪ್ಪಿಗೆ ನೀಡಿದನು. ಈ ಸಂದರ್ಭದಲ್ಲಿ ವಾಮನ ಅವತಾರದಲ್ಲಿದ್ದ ವಿಷ್ಣುವಿನ ಗಾತ್ರ ಹಿಗ್ಗುತ್ತಾ ಹೋಯಿತು. ಬಲಿ ರಾಜ ವಶಪಡಿಸಿಕೊಂಡ ಸಂಪೂರ್ಣ ಪ್ರದೇಶವನ್ನು ಎರಡು ಹೆಜ್ಜೆಗಳನ್ನಿಡುವ ಮೂಲಕ ವಾಮನನು ಆವರಿಸಿಕೊಂಡನು. ಮೂರನೇ ಹೆಜ್ಜೆಯನ್ನು ಎಲ್ಲಿ ಇಡುವುದೆಂದು ನೋಡಿದಾಗ, ಉದಾತ್ತನಾಗಿದ್ದ ಮಹಾಬಲಿಯು ಮೂರನೇ ಹಜ್ಜೆಯನ್ನು ತನ್ನ ತಲೆಯ ಮೇಲಿಡಲು ಹೇಳಿದನು. ಹೀಗೆ ವಾಮನ ರೂಪದಲ್ಲಿದ್ದ ವಿಷ್ಣುವು ಮಹಾಬಲಿಯ ತಲೆ ಮೇಲೆ ಕಾಲನ್ನಿಟ್ಟಾಗ ಆತ ಪಾತಾಳ ಲೋಕಕ್ಕೆ ತಳ್ಳಿದನು. ಕೊನೆಗೆ ಈತನ ನಿಷ್ಠೆಗೆ ಮೆಚ್ಚಿದ ವಿಷ್ಣುವು ಮಹಾಬಲಿಗೆ ವರ್ಷಕ್ಕೊಮ್ಮೆ ಭೂಮಿಗೆ ಬಂದು ತನ್ನ ಪ್ರಜೆಗಳನ್ನು ಭೇಟಿಯಾಗುವ ವರವನ್ನು ನೀಡುತ್ತಾರೆ. ಬಲಿಚಕ್ರವರ್ತಿ ಭೂಮಿಗೆ ಬರುವ ದಿನವನ್ನು ‘ಓಣಂ ಹಬ್ಬ’ವೆಂದು ಆಚರಿಸಲಾಗುತ್ತದೆ.

    ಧಾರ್ಮಿಕ ಮಹತ್ವ:
    ‘ಓಣಂ’ ಹಬ್ಬವು ಮಲಯಾಳಂ ತಿಂಗಳ ಚಿಂಗಮ್‌ನಲ್ಲಿ ಪ್ರಾರಂಭವಾಗುತ್ತದೆ. ಇದು ಸಾಮಾನ್ಯವಾಗಿ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಬರುತ್ತದೆ. ಈ ಹಬ್ಬವು ಹತ್ತು ದಿನಗಳವರೆಗೆ ಇರುತ್ತದೆ ಮತ್ತು ಓಣಂನ ಪ್ರತಿಯೊಂದು ದಿನವೂ ತನ್ನದೇ ಆದ ಸಂಪ್ರದಾಯಗಳು ಮತ್ತು ಮಹತ್ವವನ್ನು ಹೊಂದಿದೆ. ಹಬ್ಬದ ಮೊದಲ ದಿನವು ಹಬ್ಬದ ಪ್ರಾರಂಭವನ್ನು ಸೂಚಿಸುತ್ತದೆ. ಜನರು ಪ್ರಮುಖ ಆಚರಣೆಗೆ ತಯಾರಿ ನಡೆಸುತ್ತಾರೆ. ಹೂವಿನ ರಂಗೋಲಿಯ ತಯಾರಿಕೆಯು ಪ್ರಾರಂಭವಾಗುತ್ತದೆ ಮತ್ತು ಪ್ರತಿದಿನ ಗಾತ್ರದಲ್ಲಿ ಏರುತ್ತದೆ. ಇದು ರಾಜ ಮಹಾಬಲಿಯ ಆಗಮನವನ್ನು ಸಂಕೇತಿಸುತ್ತದೆ.
    ಎರಡನೇ ದಿನ ದೇವಸ್ಥಾನಗಳಿಗೆ ಭೇಟಿ ನೀಡಲಾಗುತ್ತದೆ ಮತ್ತು ಮೂರನೇ ದಿನ ಜನರು ಹೊಸ ಬಟ್ಟೆ ಮತ್ತು ಉಡುಗೊರೆಗಳಿಗಾಗಿ ಶಾಪಿಂಗ್ ಮಾಡಲು ಪ್ರಾರಂಭಿಸುತ್ತಾರೆ. ನಾಲ್ಕನೇ ದಿನವನ್ನು ‘ವಿಶಾಖಂ’ ಎಂದು ಕರೆಯಲಾಗುತ್ತದೆ ಮತ್ತು ಇದು ಸುಂದರವಾದ ‘ಓಣಂ ಸಧ್ಯ’ (ಹಬ್ಬ) ದ ಆರಂಭವನ್ನು ಸೂಚಿಸುತ್ತದೆ. ಐದನೇ ದಿನವು ‘ವಲ್ಲಂಕಾಳಿ’ ಅಥವಾ ‘ದೋಣಿ ಸ್ಪರ್ಧೆ’ಗೆ ಹೆಸರುವಾಸಿಯಾಗಿದೆ. ಆರನೇ ಮತ್ತು ಏಳನೇ ದಿನದಂದು, ಜನರು ಹಬ್ಬಕ್ಕಾಗಿ ತಯಾರಿ ಪ್ರಾರಂಭಿಸುತ್ತಾರೆ. ನಂತರ ಅನೇಕ ಸಾಂಪ್ರದಾಯಿಕ ಆಟಗಳು ಮತ್ತು ಪ್ರದರ್ಶನಗಳು ನಡೆಯುತ್ತವೆ. ಎಂಟನೆಯ ದಿನ ರಾಜ ಮಹಾಬಲಿಯ ವಿಗ್ರಹಗಳನ್ನು ರಚಿಸಲು ಮೀಸಲಾಗಿದೆ. ಒಂಬತ್ತನೇ ದಿನವನ್ನು ‘ಉತ್ತರಾಮ್’ ಎಂದೂ ಕರೆಯುತ್ತಾರೆ, ಇದನ್ನು ಓಣಂನ ಮುನ್ನಾದಿನವೆಂದು ಪರಿಗಣಿಸಲಾಗುತ್ತದೆ ಮತ್ತು ಹತ್ತನೇ ದಿನವು ಹಬ್ಬದ ಪ್ರಮುಖ ದಿನವಾಗಿದೆ. ಇದನ್ನು ಭವ್ಯವಾದ ‘ಓಣಂ ಸಂಧ್ಯಾ’ದಿಂದ ಗುರುತಿಸಲಾಗುತ್ತದೆ.


    ಆಚರಣೆಯ ವಿಧಿ ವಿಧಾನ:
    ಓಣಂ ಹಬ್ಬವನ್ನು ಪ್ರಾರ್ಥನೆಗಳು, ಹಬ್ಬಗಳು ಮತ್ತು ಸಾಂಪ್ರದಾಯಿಕ ಆಟಗಳೊಂದಿಗೆ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಸ್ನೇಕ್ ಬೋಟ್ ರೇಸ್ ಎಂದು ಕರೆಯಲ್ಪಡುವ ವಲ್ಲಂಕಾಳಿಯು ಹಬ್ಬದ ಅತ್ಯಂತ ಅದ್ಭುತ ಘಟನೆಗಳಲ್ಲಿ ಒಂದಾಗಿದೆ. ಓಣಂನ ಮತ್ತೊಂದು ವಿಶಿಷ್ಟ ವೈಶಿಷ್ಟ್ಯವೆಂದರೆ ಜಾನಪದ ನೃತ್ಯ ಪುಲಿಕಲಿ. ಇದರಲ್ಲಿ ಪುರುಷರು ಹುಲಿ ಮತ್ತು ಚಿರತೆಗಳ ವೇಷಭೂಷಣ ಮತ್ತು ಸಾಂಪ್ರದಾಯಿಕ ಸಂಗೀತಕ್ಕೆ ನೃತ್ಯ ಮಾಡುತ್ತಾರೆ.
    ಕೈಕೊಟ್ಟಿಕಳಿ ಅಥವಾ ತಿರುವಾತಿರಕಳಿ, ಸಂತೋಷ ಮತ್ತು ಏಕತೆಯನ್ನು ವ್ಯಕ್ತಪಡಿಸಲು ಬೆಳಗಿದ ದೀಪದ ಸುತ್ತಲೂ ಮಹಿಳೆಯರು ಮಾಡುವ ಆಕರ್ಷಕವಾದ ನೃತ್ಯವಾಗಿದೆ. ಕುಮ್ಮಟ್ಟಿಕಳಿ ಮತ್ತೊಂದು ನೃತ್ಯ ಪ್ರಕಾರವಾಗಿದ್ದು, ಇದರಲ್ಲಿ ಕಲಾವಿದರು ಪೌರಾಣಿಕ ಪಾತ್ರಗಳನ್ನು ಪ್ರತಿನಿಧಿಸುವ ವರ್ಣರಂಜಿತ ವೇಷಭೂಷಣಗಳು ಮತ್ತು ಮರದ ಮುಖವಾಡಗಳನ್ನು ಬಳಸುತ್ತಾರೆ.


    ಓಣಂ ಸಂಧ್ಯಾ, ಈ ಹಬ್ಬದ ನಂತರದ ಭವ್ಯವಾದ ಹಬ್ಬ ಈ ಆಚರಣೆಯ ಪ್ರಮುಖ ಅಂಶವಾಗಿದೆ. ಇದು ಬಾಳೆ ಎಲೆಗಳ ಮೇಲೆ 26 ಕ್ಕೂ ಹೆಚ್ಚು ಭಕ್ಷ್ಯಗಳನ್ನು ಒಳಗೊಂಡಿದೆ ಮತ್ತು ಕೇರಳದ ವಿಶಿಷ್ಟ ಪರಿಮಳವನ್ನು ಪ್ರತಿನಿಧಿಸುತ್ತದೆ. ಕೊನೆಯ ದಿನವಾದ ತಿರುವೋಣಂನ್ನು ಬಹಳ ವಿಜೃಂಭಣೆ ಹಾಗೂ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.


    ಈ ದಿನದಂದು ಕೇರಳದ ಪ್ರಸಿದ್ಧ ದೋಣಿ ಸ್ಪರ್ಧೆ, ಅಥಾಚಮಯಂ, ಥ್ರುವತಿರಕಳಿ, ಓಣಂ ಕಲಿ ಮತ್ತು ಕಥಕ್ಕಳಿ ನೃತ್ಯ ಸೇರಿದಂತೆ ವಿವಿಧ ಆಚರಣೆಗಳಿರುತ್ತದೆ. ಈ ಹಬ್ಬದಂದು ಕೃಷಿಕರು ಉತ್ತಮ ಬೆಳೆ ಮತ್ತು ಇಳುವರಿಗಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಭೂಮಿ ತಾಯಿ ಒದಗಿಸಿದ ಸಮೃದ್ಧ ಫಸಲಿಗೆ ಧನ್ಯವಾದ ಸಲ್ಲಿಸುತ್ತಾರೆ. ಹೀಗಾಗಿ ಈ ಹಬ್ಬವನ್ನು ‘ಸುಗ್ಗಿ ಹಬ್ಬ’ವೆಂದು ಕರೆಯಲಾಗುತ್ತದೆ.

     

    BIG BOSS

    ಧನರಾಜ್ ಗೆ ಒಲಿದ ಅದೃಷ್ಟ; ಭವ್ಯಾಗೆ ಆಘಾತ !

    Published

    on

    ಸಾಕಷ್ಟು ಟ್ವಿಸ್ಟ್ ಗಳನ್ನು ಕಂಡ ‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋ ಈಗ ಫಿನಾಲೆಯ ಹಂತಕ್ಕೆ ತಲುಪುತ್ತಿದೆ. ಇದೇ ಹೊತ್ತಲ್ಲಿ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್ ಆಗಿದ್ದರು. ಹೀಗಾಗಿ 7 ಸ್ಪರ್ಧಿಗಳ ಎದೆಯಲ್ಲಿ ನಡುಕ ಶುರುವಾಗಿತ್ತು.

    ಈ ವಾರದ ನಾಮಿನೇಷನ್ ನಿಂದ ಪಾರಾಗಲು ಬಿಗ್ ಬಾಸ್ ಕಾಲ ಕಾಲಕ್ಕೆ ಟಾಸ್ಕ್ ನೀಡುತ್ತಿದ್ದರು. ಬಿಗ್ ಬಾಸ್ ಕೊಟ್ಟ ಟಾಸ್ಕ್ ನಲ್ಲಿ ಯಾರು ಗೆಲ್ಲುತ್ತಾರೋ ಅವರು ಈ ವಾರದ ನಾಮಿನೇಷನ್ ಪ್ರಕ್ರಿಯೆಯಿಂದ ಪಾರಾಗಲಿದ್ದಾರೆ ಎಂದು ಘೋಷಿಸಿದ್ದರು.

    ಈ ವಾರ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ. ಹೀಗಾಗಿ ಸ್ಪರ್ಧಿಗಳು ಬಿಗ್ ಬಾಸ್ ಕೊಡುವ ಟಾಸ್ಕ್ ಗಳನ್ನು ಕಷ್ಟಪಟ್ಟು ಆಡುತ್ತಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ಧನರಾಜ್ ಬಿಗ್ ಬಾಸ್ ಕೊಟ್ಟ ಟಾಸ್ಕ್ ವೊಂದರಲ್ಲಿ ವಿನ್ ಆಗಿದ್ದಾರೆ.

    ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ನ್ಯೂ ಪೋಸ್ಟ್; ದರ್ಶನ್ ಅಭಿಮಾನಿಗಳಿಗೆ ದಿಲ್‌ಖುಷ್

    ಕೊನೆಯ ಟಾಸ್ಕ್ ನಲ್ಲೂ ಗೆದ್ದುಕೊಂಡ ಧನರಾಜ್ ಬಿಗ್ ಬಾಸ್ 100 ಅಂಕಗಳನ್ನು ಕೊಟಿದ್ದರು. ಅದರಲ್ಲೂ ಕೊನೆಗೆ ಧನರಾಜ್ ಪ್ರತಿ ಸ್ಪರ್ಧಿಯ ಅಂಕವನ್ನು ಪಡೆದುಕೊಳ್ಳಬೇಕು ಅಂತ ಹೇಳಿದ್ದರು. ಆಗ ಧನರಾಜ್ ಭವ್ಯಾ ಗೌಡ ಅವರ ಅಂಕವನ್ನು ಪಡೆದುಕೊಂಡಿದ್ದರು. ಇದಾದ ಬೆನ್ನಲ್ಲೇ ಬಿಗ್ ಬಾಸ್ ಈ ವಾರದ ಮಿಡ್ ವೀಕ್ ಎಲಿಮಿನೇಷನ್ ನಿಂದ ಧನರಾಜ್ ಸೇಫ್ ಆಗಿದ್ದೀರಿ ಎಂದು ಘೋಷಣೆ ಮಾಡಿದ್ದಾರೆ.

    ಮಿಡ್​​ ವೀಕ್​ ನಾಮಿನೇಷನ್​ ಸೀಟ್​ನಲ್ಲಿ ಭವ್ಯಾ ಗೌಡ, ತ್ರಿವಿಕ್ರಮ್​, ಮಂಜಣ್ಣ, ರಜತ್​, ಮೋಕ್ಷಿತಾ ಹಾಗೂ ಗೌತಮಿ ಇದ್ದಾರೆ. ಸ್ಟ್ರಾಂಗ್ 6 ಸ್ಪರ್ಧಿಗಳು ಯಾರು ಬಿಗ್​ಬಾಸ್​ ಮನೆಯಿಂದ ಮಿಡ್​ ವೀಕ್​ ಎಲಿಮಿನೇಟ್​ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ.

    ಒಂದು ಕಡೆ ಟಾಸ್ಕ್ ಪಾಯಿಂಟ್ ಟೇಬಲ್ ನಲ್ಲಿ ಟಾಪ್ ನಲ್ಲಿದ್ದ ಭವ್ಯಾಗೆ, ಧನರಾಜ್ ಅವರ ನಿರ್ಧಾರ ಶಾಕ್ ಆಗಿತ್ತು.

     

    Continue Reading

    bengaluru

    ಸರಿಗಮ ವಿಜಿ ಹೆಸರಿಗೆ ‘ಸರಿಗಮ’ ಸೇರಿಕೊಳ್ಳಲು ಆ ಒಂದು ನಾಟಕ ಕಾರಣ !

    Published

    on

    ಮಂಗಳೂರು/ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ನಿಧ*ನ ಹೊಂದಿದ್ದಾರೆ. ಅವರು ಕನ್ನಡ ಸಿನಿಮಾ, ಧಾರವಾಹಿ ಹಾಗೂ ರಂಗಭೂಮಿಯಲ್ಲಿ ನಟಿಸಿದ್ದರು.

    ಸರಿಗಮ ವಿಜಿ ಅವರ ಮೂಲ ಹೆಸರು ವಿಜಯ್ ಕುಮಾರ್. ಆದರೆ ಅವರ ಹೆಸರಿನ ಮುಂದೆ ‘ಸರಿಗಮ’ ಸೇರಿಕೊಂಡಿದ್ದು ಹೇಗೆ ಎನ್ನುವ ಕುತೂಹಲ ಹಲವರಲ್ಲಿ ಇದೆ.

    ‘ಸರಿಗಮ ವಿಜಿ’ ಎಂದೇ ಕರೆಯಲ್ಪಡುವ ನಟ ವಿಜಯ್ ಕುಮಾರ್ (76) ಅವರು ಬುಧವಾರ (ಜ.15) ನಿಧ*ನರಾದರು. ಅವರಿಗೆ ಇಬ್ಬರು ಪುತ್ರರು ಇದ್ದಾರೆ. ಶ್ವಾಸಕೋಶದ ಸೋಂಕು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ವಾರದ ಹಿಂದೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಿಗ್ಗೆ 9:45ರ ಸುಮಾರಿಗೆ ಅವರು ನಿಧ*ನ ಹೊಂದಿದ್ದಾರೆ.

    ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ಇ*ನ್ನಿಲ್ಲ

    ಬೆಂಗಳೂರಿನ ವಿಮಾನಪುರದಲ್ಲಿ (ಎಚ್ಎಎಲ್ ಪ್ರದೇಶ) ಜನಿಸಿದ ವಿಜಯ್ ಕುಮಾರ್, ನಾಟಕದ ನಂಟು ಇಟ್ಟುಕೊಂಡು ಸಿನಿಮಾಲೋಕ ಪ್ರವೇಶಿಸಿದವರು. ‘ಬೆಳುವಲದ ಮಡಿಲಲ್ಲಿ’ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ, ನಟನಾಗಿ ಮೊದಲ ಹೆಜ್ಜೆ ಇಟ್ಟ ಅವರು ಎನ್ ಜಿಇಎಫ್ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ದುಡಿದವರು. ಈ ಅವಧಿಯಲ್ಲೇ ಅವರು ‘ಸಂಸಾರದಲ್ಲಿ ಸರಿಗಮ’ ಎಂಬ ನಾಟಕ ಬರೆದರು.

    ಇದು ಕರ್ನಾಟಕದ ಹಲವು ಜಿಲ್ಲೆಗಳು ಸೇರಿದಂತೆ, ಹೈದರಾಬಾದ್, ಚೆನ್ನೈ, ದೆಹಲಿಗಳಲ್ಲಿಯೂ ಆ ನಾಟಕ ಪ್ರದರ್ಶನವಾಗಿತ್ತು. ಸುಮಾರು 1390 ಪ್ರದರ್ಶನಗಳಲ್ಲಿ ‘ಸಂಸಾರದಲ್ಲಿ ಸರಿಗಮ’ ನಾಟಕ ಕಂಡಿತ್ತು. ಇದೇ ಕಾರಣಕ್ಕೆ ವಿಜಿ ಅವರ ಹೆಸರಿನ ಮುಂದೆ ‘ಸರಿಗಮ’ ಸೇರಿಕೊಂಡು ಸರಿಗಮ ವಿಜಿ ಎಂದೇ ಜನಪ್ರಿಯರಾದರು.

    ಹಲವು ದಿಗ್ಗಜ ನಟರ ಜೊತೆ ತೆರೆಹಂಚಿಕೊಂಡಿದ್ದ ವಿಜಿ ಅವರು, ಹಾಸ್ಯ ಪಾತ್ರಗಳಲ್ಲಿ ಮಿಂಚಿದ್ದರು. ಹಲವು ಧಾರವಾಹಿಗಳಲ್ಲೂ ಅವರು ಬಣ್ಣಹಚ್ಚಿದ್ದಾರೆ. 400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರು 100ಕ್ಕೂ ಅಧಿಕ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

    Continue Reading

    BANTWAL

    ಬೈಕ್‌ಗಳು ಪರಸ್ಪರ ಮು*ಖಾಮು*ಖಿ ; ಬಾಲಕಿ ಸಾ*ವು

    Published

    on

    ಬಂಟ್ವಾಳ: ಬೈಕ್ ಗಳ ನಡುವೆ ಭೀ*ಕರ ಅ*ಪಘಾ*ತ ಸಂಭವಿಸಿ ಬೈಕ್ ನಲ್ಲಿ ಸಹ ಪ್ರಯಾಣಿಕೆಯಾಗಿದ್ದ ಬಾಲಕಿ ಮೃ*ತಪಟ್ಟ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಾಮಲ್ ಕಟ್ಟೆ ಎಂಬಲ್ಲಿ ನಿನ್ನೆ (ಜ.14) ರಾತ್ರಿ ನಡೆದಿದೆ.

    ಕುಕ್ಕಿಪಾಡಿ ಗ್ರಾಮದ ಕೊಡಂಬೆಟ್ಟು ನಿವಾಸಿ ಇಸ್ಮತ್ ಆಯಿಶಾ (13) ಮೃ*ತ ಬಾಲಕಿ ಎಂದು ಗುರುತಿಸಲಾಗಿದೆ.

    ಬಾಲಕಿಯ ತಂದೆ ಬೈಕ್ ಚಾಲಕ ಅಬ್ದುಲ್ ರಹಮಾನ್ ಕೂಡ ಗಾ*ಯಗೊಂಡಿದ್ದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

     

    ಇದನ್ನೂ ಓದಿ : ಮಂಗಳೂರು: ಕೈದಿಗಳಿಂದ ಜೈಲು ಅಧಿಕಾರಿ, ಸಿಬಂದಿಯ ಕರ್ತವ್ಯಕ್ಕೆ ಅಡ್ಡಿ

     

    ರಾಮಲ್ ಕಟ್ಟೆಯಿಂದ ಹೆದ್ದಾರಿಯಲ್ಲಿ ರಾಂಗ್ ಸೈಡ್ ನಲ್ಲಿ ಬಂದ ನೆತ್ತರಕೆರೆ ನಿವಾಸಿ ರಂಜಿತ್ ಎಂಬಾತ ಬಿ.ಸಿ ರೋಡಿನ ಕಡೆಯಿಂದ ತುಂಬೆ ಕಡೆಗೆ ಸರಿಯಾದ ದಿಕ್ಕಿನಲ್ಲಿ ಬರುತ್ತಿದ್ದ ಬೈಕ್ ಗೆ ಡಿ*ಕ್ಕಿ ಹೊಡೆದಿದ್ದಾನೆ. ರಂಜಿತ್ ಗೆ ಕೂಡ ಗಾ*ಯವಾಗಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.

    ಅ*ಪಘಾ*ತ ನಡೆದ ರಭಸಕ್ಕೆ ಬೈಕ್ ಸಂಪೂರ್ಣ ಜ*ಖಂಗೊಂಡಿದೆ. ಘಟನಾ ಸ್ಥಳಕ್ಕೆ ಪಾಣೆಮಂಗಳೂರು ಟ್ರಾಫಿಕ್ ಎಸ್.ಐ ಸುತೇಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

    LATEST NEWS

    Trending