Connect with us

    LATEST NEWS

    ಅ.22ಕ್ಕೆ ರಾಜ್ಯದ ಅತಿ ಎತ್ತರದ ಶ್ರೀರಾಮಾಂಜನೇಯ ಮೂರ್ತಿ ಲೋಕಾರ್ಪಣೆ

    Published

    on

    ಬೆಂಗಳೂರು: ರಾಜಾಜಿನಗರದ ಶ್ರೀರಾಮಮಂದಿರದಲ್ಲಿ ಶ್ರೀರಾಮ ಸೇವಾ ಮಂಡಳಿಯಿಂದ ಕರ್ನಾಟಕದ ಅತಿ ಎತ್ತರದ 63 ಅಡಿ ಉದ್ದದ ಶ್ರೀರಾಮಾಂಜನೇಯ ಪ್ರತಿಮೆಯ ಚರ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ ಅ.21 ರಿಂದ ಮೂರು ದಿನಗಳ ಕಾಲ ಅದ್ದೂರಿಯಾಗಿ ನೆರವೇರಲಿದೆ. 23 ರಂದು ವಿಧ್ಯುಕ್ತವಾಗಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ಮಾಗಡಿ ಕೆಂಪೇಗೌಡ ಅಭಿವೃದ್ದಿ ಸಮಿತಿ ಅಧ್ಯಕ್ಷ ಹೆಚ್.ಎಂ.ಕೃಷ್ಣಮೂರ್ತಿ ತಿಳಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿರವರ ದಿವ್ಯ ಸಾನಿಧ್ಯದಲ್ಲಿ ಈ ಮೂರ್ತಿ ಲೋಕಾರ್ಪಣೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ರಾಜ್ಯದ ಪ್ರಮುಖ ಧಾರ್ಮಿಕ ಮುಖಂಡರು, ಧರ್ಮಗುರುಗಳು, ರಾಜಕೀಯ ನೇತರಾರರ ಸಮ್ಮುಖದಲ್ಲಿ, ಭಕ್ತರ ಅಮಿತೋತ್ಸಾಹದ ನಡುವೆ ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ.

    21 ರಂದು ಸಂಜೆ ಗಣಪತಿಪೂಜೆ, ವಿದ್ವಜ್ಜನ ಪ್ರಾರ್ಥನೆ, ದೇವತಾ ಪ್ರಾರ್ಥನೆ, ಕಳಸ ಪ್ರತಿಷ್ಟಾಪನೆ ಕಾರ್ಯ ಶುಭಾರಂಭವಾಗಲಿದೆ. 22 ರಂದು ಬೆಳಗ್ಗೆ 63ಅಡಿಯ ಶ್ರೀರಾಮಾಂಜನೇಯ ಚರಪ್ರತಿಷ್ಟಾನದ ಪೂಜೆ, ಹೋಮ ಸಂಕಲ್ಪವನ್ನು ಸಿದ್ದಗಂಗಾಮಠ ಸಿದ್ದಲಿಂಗಾಮಹಾಸ್ವಾಮೀಜಿ ನೇತೃತ್ವದಲ್ಲಿ ಪ್ರಾರಂಭವಾಗಲಿದೆ.

    23 ರಂದು ಬೆಳಗ್ಗೆ 11ಗಂಟೆಗೆ ಶ್ರೀರಾಮಾಂಜನೇಯ ಚರ ಪ್ರತಿಷ್ಠಾಪನೆ ಮತ್ತು ಲೋಕರ್ಪಣೆಯನ್ನು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು, ಅದಿ ಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಅವರು ನೆರವೇರಿಸಲಿದ್ದಾರೆ.

    DAKSHINA KANNADA

    ಕಡಬ: ಅಲಂಕಾರಿನಲ್ಲಿ ಹುಲಿ ಹೆಜ್ಜೆ

    Published

    on

    ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆಲಂಕಾರು ಪರಿಸರದಲ್ಲಿ ಮಂಗಳವಾರ (ಅ.22) ಬೆಳಗ್ಗೆ ಹುಲಿಯೊಂದು ಕಂಡುಬಂದಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ.

    ಅಲಂಕಾರು ಗ್ರಾಮದ ನೆಕ್ಕಿಲಾಡಿ ಬೈಲು ನೈಯಲ್ಗ ನಿವಾಸಿ ಜನಾರ್ದನ ಬಂಗೇರ ಎಂಬವರ ಮನೆಯ ಸಮೀಪ ಹುಲಿ ಕಂಡುಬಂದಿದೆ ಎನ್ನಲಾಗಿದೆ.

    ಕೂಡಲೇ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಉಪ ವಲಯ ಅರಣ್ಯಾಧಿಕಾರಿ ಜಯಕುಮಾರ್, ಗಸ್ತು ಅರಣ್ಯ ಪಾಲಕ ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಸ್ಥಳ ಪರಿಶೀಲನೆ ವೇಳೆ ಸ್ಥಳದಲ್ಲಿ ಕಾಡುಪ್ರಾಣಿಯ ಹೆಜ್ಜೆ ಗುರುತು ಕಂಡುಬಂದಿದ್ದು ಅದು ಚಿರತೆಯದ್ದೋ ಅಥವಾ ಹುಲಿಯದ್ದೋ ಅನ್ನುವುದು ಪರಿಶೀಲನೆಯ ಬಳಿಕ ತಿಳಿದು ಬರಬೇಕಿದೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    Continue Reading

    LATEST NEWS

    ಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ: ಅವಶೇಷಗಳಡಿ 16 ಕಾರ್ಮಿಕರು ಸಿಲುಕಿರುವ ಶಂಕೆ

    Published

    on

    ಬೆಂಗಳೂರು: ನಗರದಲ್ಲಿ ಭಾರೀ ಮಳೆಯಿಂದಾಗಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದು ಬಿದ್ದಿದೆ. ಈ ಪರಿಣಾಮ ಕಟ್ಟಡ ಕಾಮಗಾರಿಯಲ್ಲಿ ತೊಡಗಿದ್ದಂತ 16 ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

    ಬೆಂಗಳೂರು ನಗರದಲ್ಲಿ ಮತ್ತೆ ಭಾರೀ ಮಳೆಯಾಗುತ್ತಿದೆ. ಮಲ್ಲೇಶ್ವರಂ ಸುತ್ತಾಮುತ್ತ ಆಲಿಕಲ್ಲು ಸಹಿತ ಮಳೆಯಾಗುತ್ತಿದೆ. ಮಳೆಯಿಂದಾಗಿ ಮರವೊಂದು ಮುರಿದು ಬಿದ್ದ ಪರಿಣಾಮ ಆಟೋ, ಬೈಕ್ ಜಖಂಗೊಂಡಿದ್ದಾವೆ. ರಸ್ತೆಗಳು ಜಲಾವೃತಗೊಂಡು ಎಲ್ಲೆಲ್ಲೂ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸವಾರರು ಪರದಾಡುತ್ತಿದ್ದಾರೆ.

    ಮತ್ತೊಂದೆಡೆ ಬೆಂಗಳೂರಿನ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದು ಬಿದ್ದಿದೆ. ಮೊದಲ ಮಹಡಿಯವರೆಗೆ ನಿರ್ಮಿಸಿದ್ದಂತ ಕಟ್ಟದ ಕುಸಿದು ಬಿದ್ದ ಪರಿಣಾಮ, ಅವಶೇಷಗಳ ಅಡಿಯಲ್ಲಿ ಕೆಲ ಕಾರ್ಮಿಕರು ಸಿಲುಕಿರುವಂತ ಶಂಕೆ ವ್ಯಕ್ತವಾಗಿದೆ.

    ಈ ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದು, ಕುಸಿದು ಬಿದ್ದಿರುವಂತ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಿ, ಅದರಡಿಯಲ್ಲಿ ಸಿಲುಕಿರುವಂತ ಕಾರ್ಮಿಕರನ್ನು ರಕ್ಷಣೆ ಮಾಡುವಂತ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

    Continue Reading

    LATEST NEWS

    ರಾತ್ರಿ ಮಲಗಿದಾಗ ತುಂಬಾ ಬೆವರುತ್ತಿದೆಯಾ ? ಯಾಕೆ ಗೊತ್ತಾ ?

    Published

    on

    ಮಂಗಳೂರು: ರಾತ್ರಿ ನಿದ್ರಿಸುತ್ತಿರುವಾಗ ಬೆವರುವುದು ಸಾಮಾನ್ಯ ಸಮಸ್ಯೆ ಆದರೂ, ಇದಕ್ಕೆ ಒಂದಲ್ಲ ಹಲವು ಕಾರಣಗಳಿರುತ್ತದೆ. ಅತಿಯಾದ ಬೆವರುವಿಕೆ ಇದ್ದರೆ ಜಾಗರೂಕರಾಗಿರಬೇಕು, ಏಕೆಂದರೆ ಇದು ಅನಾರೋಗ್ಯದ ಸಂಕೇತವಾಗಿದೆ. ರಾತ್ರಿಯಲ್ಲಿ ಅತಿಯಾದ ಬೆವರುವಿಕೆಗೆ ಕಾರಣಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

     

     

     

    ರಾತ್ರಿಯಲ್ಲಿ ಬೆವರಿಕೆಯ ಮುಖ್ಯ ಕಾರಣಗಳು:

    1. ಹಾರ್ಮೋನ್ ಬದಲಾವಣೆ:
    ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಯಿಂದಾಗಿ, ರಾತ್ರಿಯಲ್ಲಿ ಅತಿಯಾದ ಬೆವರುವಿಕೆ ಸಂಭವಿಸಬಹುದು. ಇದು 45-55 ವರ್ಷ ವಯಸ್ಸಿನ ಮಹಿಳೆಯರಲ್ಲಿ ಋತುಬಂಧದ ಚಿಹ್ನೆಯಾಗಿರಬಹುದು. ಇದಲ್ಲದೆ, ಥೈರಾಯ್ಡ್‌ನಂತಹ ಸಮಸ್ಯೆಗಳು ಬೆವರುವಿಕೆಗೆ ಕಾರಣವಾಗಬಹುದು.

    2. ಒತ್ತಡ ಮತ್ತು ಆತಂಕ:
    ಅತಿಯಾದ ಒತ್ತಡ ಮತ್ತು ಆತಂಕದಿಂದಾಗಿ, ದೇಹದಲ್ಲಿ ಅಡ್ರಿನಾಲಿನ್ ಹಾರ್ಮೋನ್ ಮಟ್ಟವು ಹೆಚ್ಚಾಗುತ್ತದೆ, ಇದು ಬೆವರುವಿಕೆಯ ಸಮಸ್ಯೆಯನ್ನು ಉಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಒತ್ತಡವನ್ನು ಕಡಿಮೆ ಮಾಡುವ ಅವಶ್ಯಕತೆಯಿದೆ.

    3. ನಿದ್ರೆಯ ಕೊರತೆ:
    ನೀವು ರಾತ್ರಿಯಿಡೀ ಎಚ್ಚರವಾಗಿದ್ದರೆ ಅಥವಾ ಕೆಲವು ಕಾರಣಗಳಿಂದ ನಿದ್ರೆ ಮಾಡಲು ಸಾಧ್ಯವಾಗದಿದ್ದರೆ, ಅತಿಯಾಗಿ ಬೆವರು ಬರಬಹುದು. ವಾಸ್ತವವಾಗಿ, ನಿದ್ರೆಯ ಕೊರತೆಯಿಂದಾಗಿ ದೇಹದ ಉಷ್ಣತೆಯು ಹೆಚ್ಚಾಗುತ್ತದೆ, ಇದು ಬೆವರುವಿಕೆಯ ಸಮಸ್ಯೆಯನ್ನು ಉಂಟುಮಾಡುತ್ತದೆ.

    4. ಕಡಿಮೆ ರಕ್ತದ ಸಕ್ಕರೆ:
    ಹೈಪೊಗ್ಲಿಸಿಮಿಯಾ , ಕಡಿಮೆ ರಕ್ತದ ಸಕ್ಕರೆ ಅಥವಾ ಕಡಿಮೆ ರಕ್ತದ ಗ್ಲೂಕೋಸ್ ಎಂದೂ ಕರೆಯಲ್ಪಡುತ್ತದೆ. ಕಡಿಮೆ ರಕ್ತದ ಸಕ್ಕರೆಯ ಸಂದರ್ಭದಲ್ಲಿ ಸಹ, ಬಹಳಷ್ಟು ಬೆವರು ಸಾಮಾನ್ಯ. ಕಡಿಮೆ ರಕ್ತದ ಸಕ್ಕರೆಯ ಮಟ್ಟದಿಂದಾಗಿ, ಅಡ್ರಿನಾಲಿನ್ ಹಾರ್ಮೋನ್ ಬಿಡುಗಡೆಯಾಗುವುದರಿಂದ ದೇಹವು ರಾತ್ರಿಯಲ್ಲಿ ಹೆಚ್ಚು ಬೆವರುತ್ತದೆ, ಏಕೆಂದರೆ ಈ ಕಾರಣದಿಂದಾಗಿ ಬೆವರು ಗ್ರಂಥಿಗಳು ತುಂಬಾ ಸಕ್ರಿಯವಾಗುತ್ತವೆ.

    5. ಕ್ಯಾನ್ಸರ್ ನಂತಹ ರೋಗದ ಲಕ್ಷಣ:
    ಕೆಲವು ವಿಧದ ಕ್ಯಾನ್ಸರ್ಗಳಲ್ಲಿ ರಾತ್ರಿ ಬೆವರುವಿಕೆ ಸಂಭವಿಸಬಹುದು. ಇದು ಹೆಚ್ಚಾಗಿ ಲಿಂಫೋಮಾ ಅಂದರೆ ರಕ್ತದ ಕ್ಯಾನ್ಸರ್ ನಲ್ಲಿ ಸಂಭವಿಸುತ್ತದೆ. ಇದಲ್ಲದೇ ಮಧುಮೇಹ, ಹೃದ್ರೋಗದಂತಹ ಗಂಭೀರ ಕಾಯಿಲೆಗಳಲ್ಲಿ ರಾತ್ರಿ ವೇಳೆ ದೇಹ ಹೆಚ್ಚು ಬೆವರುತ್ತದೆ.

    Continue Reading

    LATEST NEWS

    Trending