Thursday, September 29, 2022

ಒಲಿಂಪಿಕ್ಸ್ ಯುನಿಫೈಡ್ ಫುಟ್ಬಾಲ್ ಪಂದ್ಯಾಟ: ಮಂಗಳೂರು ಮೂಲದ ಲಿಖಿತಾ ಹರೀಶ್ ತಂಡಕ್ಕೆ ಕಂಚು

ಮಂಗಳೂರು: ಅಮೆರಿಕಾದ ಮೆಚಿಗನ್‌ನಲ್ಲಿ ಸ್ಪೆಷಲ್ ಒಲಿಂಪಿಕ್ ಭಾರತ್ ನ್ಯಾಷನಲ್ ಕೋಚಿಂಗ್ ಕ್ಯಾಂಪ್‌ನ ಪಾಲುದಾರಿಕೆಯಲ್ಲಿ ಆಯೋಜಿಸಿದ್ದ ಸ್ಪೆಷಲ್ ಒಲಿಂಪಿಕ್ ಯುನಿಫೈಡ್ ಕಪ್-2022 ಅಂತರಾಷ್ಟ್ರೀಯ ಫುಟ್‌ಬಾಲ್‌ ಕ್ರೀಡೆಯಲ್ಲಿ ಮಂಗಳೂರಿನ ಸುರತ್ಕಲ್ ಲಯನ್ಸ್ ವಿಶೇಷ ಶಾಲೆಯ ವಿದ್ಯಾರ್ಥಿನಿ ಲಿಖಿತಾ ಹರೀಶ್ ಪುತ್ರನ್ ಕರ್ನಾಟಕದಿಂದ ಭಾಗವಹಿಸಿ ಭಾರತವು ತೃತೀಯ ಸ್ಥಾನವನ್ನು ಮುಡಿಗೇರಿಸಿಕೊಳ್ಳುವಲ್ಲಿ ಕಾರಣೀಭೂತಳಾಗಿದ್ದಾಳೆ.


ಜುಲೈ 30ರಿಂದ ಅಗಸ್ಟ್ 6ರವರೆಗೆ ನಡೆದ ‘ಡೆಕಾಥ್ಲೋನ್ ಸ್ಪೆಷಲ್ ಒಲಂಪಿಕ್ ಭಾರತ್’ ಕ್ರೀಡಾಕೂಟದಲ್ಲಿ ಸುಮಾರು 11 ದೇಶದ ತಂಡಗಳು ಭಾಗವಹಿಸಿದ್ದವು.


ಕರ್ನಾಟಕದಿಂದ ಲಿಖಿತಾ ಹರೀಶ್ ಪುತ್ರನ್ ಹಾಗೂ ಬೆಳಗಾವಿಯ ಧನಶ್ರೀ ಸೇರಿ ಇತರ ರಾಜ್ಯದ ವಿದ್ಯಾರ್ಥಿನಿಗಳು ಸೇರಿ ಭಾರತ ತಂಡ ರೂಪುಗೊಂಡಿತ್ತು.

ಅದರಲ್ಲಿ ಭಾರತ ತಂಡವು ಶ್ರೀಲಂಕಾ ತಂಡವನ್ನು 12-01 ಗೋಲ್ ಅಂತರದಿಂದ ಸೋಲಿಸಿ ಕಂಚಿನ ಪದಕ ಗೆದ್ದಿದೆ.


ಮಂಗಳೂರಿನ ಬಾಲಕಿ ಲಿಖಿತಾ ಹರೀಶ್‌ ಪುತ್ರನ್‌ಗೆ ಪಾರ್ಟ್‌ನರ್‌ ಆಗಿ ಬೆಳಗಾವಿ ಮೂಲದ ಧನಶ್ರೀ ಸದಾನಂದ್ ಸಾಥ್ ನೀಡಿದ್ದು ಇದೀಗ ಇವರು ದೇಶಕ್ಕೆ ಹೆಮ್ಮೆ ತಂದುಕೊಟ್ಟಿರುವುದಕ್ಕೆ ಶ್ಲಾಘನೆ ವ್ಯಕ್ತವಾಗಿದೆ.


ಹರೀಶ್ ಪುತ್ರನ್ ಹಾಗೂ ಜಲಜಾಕ್ಷಿ ದಂಪತಿಯ ಮಗಳಾದ ಲಿಖಿತಾ ಹರೀಶ್ ಪುತ್ರನ್ ಇವರು ಸುರತ್ಕಲ್‌ನ ವಿಶೇಷ ಶಾಲೆಯ ವಿದ್ಯಾರ್ಥಿನಿಯಾಗಿದ್ದು ಅಂತರಾಷ್ಟ್ರೀಯ ಮಟ್ಟದ ಫುಟ್‌ಬಾಲ್‌ ಪಂದ್ಯಾಟದಲ್ಲಿ ಭಾಗವಹಿಸಿ ವಿಶೇಷ ಸಾಧನೆ ಮಾಡಿದ್ದಾರೆ.

ಇವರಿಗೆ ಸೌಮ್ಯ ದೇವಾಡಿಗ ಎಂಬವರು ಮಾರ್ಗದರ್ಶನ ನೀಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಆಡಳಿತದ ಜೊತೆ ವಿಲೀನವಾದ ಪದವಿನಂಗಡಿ ವಿಕಾಸ್ ಕಾಲೇಜು

ಮಂಗಳೂರು: ಮಂಗಳೂರು ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಇದರ ಆಡಳಿತ ಮಂಡಳಿಯಲ್ಲಿ ನಗರದ ಹೆಸರಾಂತ ಶಿಕ್ಷಣ ಸಂಸ್ಥೆಯಾಗಿರುವ ವಿಕಾಸ್ ಎಜುಕೇಶನ್ ಟ್ರಸ್ಟ್ ನಿರ್ವಹಿಸುತ್ತಿದ್ದ ಕಾಲೇಜುಗಳು ವಿಲೀನವಾಗಿದೆ.ಮುಂದಿನ ದಿನಗಳಲ್ಲಿ ವಿಕಾಸ್...

ಬಂಟ್ವಾಳ: ನಿಷೇಧಿತ PFI ಕಚೇರಿ ಮೇಲೆ ಏಕಕಾಲದಲ್ಲಿ ಪೊಲೀಸರ ಅಟ್ಯಾಕ್-4 ಆಫೀಸ್‌ ಲಾಕ್…

ಬಂಟ್ವಾಳ: ನಿಷೇಧಿತ ಸಂಘಟನೆಯಾದ ಪಿ.ಎಫ್.ಐ.ಹಾಗೂ ಎಸ್.ಡಿ‌‌‌.ಪಿ.ಐ ಕಚೇರಿಗೆ ಎ.ಸಿ.ಮದನ್ ಮೋಹನ್ ನೇತೃತ್ವದಲ್ಲಿ ಬಂಟ್ವಾಳ ತಾಲೂಕಿನ ನಾಲ್ಕು ಕಚೇರಿಗೆ ಇಂದು ಮುಂಜಾನೆ ವೇಳೆ ಬೀಗ ಹಾಕಿದ್ದಾರೆ.ಸರಕಾರ ನಿಷೇಧ ಮಾಡಿದ ಬಳಿಕವೂ ಎಸ್.ಡಿ.ಪಿ. ಕಚೇರಿಯಲ್ಲಿ ಪಿ.ಎಫ್.ಐ.ಸಂಘಟನೆಯ...

ಮಂಗಳೂರು: ಮಾರ್ನಮಿಕಟ್ಟೆ ದೇವಿ ಪ್ರತ್ಯಂಗಿರಾ ಕ್ಷೇತ್ರದಲ್ಲಿ ಶರನ್ನವರಾತ್ರಿ ಸಂಭ್ರಮ, ದುರ್ಗಾ ನಮಸ್ಕಾರ ಪೂಜೆ

ಮಂಗಳೂರು: ಕರಾವಳಿಯಲ್ಲೀಗ ನವರಾತ್ರಿ ಸಂಭ್ರಮ. ದೇವಿ ದೇಗುಲಗಳಲ್ಲಿ ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಲಾಗುತ್ತಿದೆ.ಕಾರಣಿಕದ ಶಕ್ತಿಗೆ ಮನೆಮತಾಗಿರುವ ಹಾಗೂ ದೇವಿಯ ಸನ್ನಿಧಾನಕ್ಕೆ ಬಂದು ಪ್ರಾರ್ಥಿಸಿ ಹರಕೆ ಹೇಳಿದವರ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವಂತಹ ಮಂಗಳೂರು ಮಾರ್ನಮಿಕಟ್ಟೆಯ ತಾಯಿ...