Friday, August 19, 2022

ವಿಶ್ವಕಪ್ ಪದಕ ವಿಜೇತ ಹಾಕಿ ಆಟಗಾರ ವರಿಂದರ್ ಸಿಂಗ್ ನಿಧನ

ನವದೆಹಲಿ: ಜಗತ್ತಿನ ಪ್ರಸಿದ್ಧ ಒಲಿಂಪಿಕ್ ಆಟಗಾರ ವಿಶ್ವಕಪ್ ಪದಕ ವಿಜೇತ ಹಾಕಿ ಆಟಗಾರ ವರಿಂದರ್ ಸಿಂಗ್ (75) ಇಂದು ಬೆಳಿಗ್ಗೆ ಜಲಂಧರ್ ನಲ್ಲಿ ನಿಧನರಾಗಿದ್ದಾರೆ.

70 ರ ದಶಕಗಳಲ್ಲಿ ವರಿಂದರ್ ಸಿಂಗ್ ಭಾರತೀಯ ಹಾಕಿಯ ಸ್ಮರಣೀಯ ವಿಜಯಗಳ ಭಾಗವಾಗಿದ್ದರು.

1975ರಲ್ಲಿ ಕೌಲಲಾಮ್ಪುರದಲ್ಲಿ ನಡೆದ ಪುರುಷರ ವಿಭಾಗದ ಹಾಕಿಯ ಚಿನ್ನದ ಪದಕ ಗೆದ್ದ ವಿಶ್ವಕಪ್ ತಂಡದಲ್ಲಿ ವರಿಂದರ್ ಸಿಂಗ್ ಇದ್ದರು.

ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 2-1 ಅಂತರದಿಂದ ಗೆದ್ದು ಚಿನ್ನದ ಪದಕ ಗೆದ್ದ ಏಕೈಕ ಪಂದ್ಯ ಇದಾಗಿದೆ.

1972 ರಲ್ಲಿ ಮುನೀಚ್ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತ ತಂಡದಲ್ಲಿ ಹಾಗೂ 1973 ರಲ್ಲಿ ಆಮ್ಸ್ಟ್ರಾಡಾಮ್ ನಲ್ಲಿ ನಡೆದ ವಿಶ್ವಕಪ್ ನ ಬೆಳ್ಳಿ ಪದಕ ಗೆದ್ದ ತಂಡ, 1974, 1978 ರ ಏಷ್ಯನ್ ಗೇಮ್ಸ್ ನಲ್ಲಿ ಸ್ವರ್ಣ ಪದಕ ವಿಜೇತ ತಂಡಗಳಲ್ಲಿಯೂ ವರಿಂದರ್ ಸಿಂಗ್ ಇದ್ದರು.

ಭಾರತದ ಹಾಕಿಯ ದೈತ್ಯ ಪ್ರತಿಭೆ ವರಿಂದರ್ ಸಿಂಗ್ ಗೆ 2007 ರಲ್ಲಿ ಧ್ಯಾನ್ ಚಂದ್ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

LEAVE A REPLY

Please enter your comment!
Please enter your name here

Hot Topics

“ಹಿಂದೂಗಳು ಸತ್ರೆ BJPಗೆ ಓಟು ಬರುತ್ತದೆ-ಅಲ್ಪಸಂಖ್ಯಾತರು ಸತ್ತರೆ ಓಟ್ ಸಿಗಲ್ಲ”

ಮಂಗಳೂರು: ಬಿಜೆಪಿಗರಿಗೆ ಹಿಂದೂಗಳು ಸತ್ತರೆ ಅದ್ರಲ್ಲೂ ಬಿಲ್ಲವರು ಸತ್ತರೆ ಮಾತ್ರ ಓಟು ಬರುತ್ತದೆ. ಅಲ್ಪಸಂಖ್ಯಾತರು ಸತ್ತರೆ ಓಟು ಬರೋದಿಲ್ಲ. ಅದಕ್ಕಾಗಿ ಹರೀಶ್ ಪೂಜಾರಿಯವರ ಹತ್ಯೆಯಾಯ್ತು. ಕಾಂಗ್ರೆಸ್ ಪಕ್ಷ ಯಾವಾಗಲೂ ಸಾಮರಸ್ಯವನ್ನು ಬಯಸುವ ಪಕ್ಷ....

ಪುಂಡ ಕಾಂಗ್ರೆಸ್ಸಿಗರೇ ನಿಮಗೆ ಎಚ್ಚರಿಕೆ ಕೊಡ್ತೇನೆ ಎಂದ ಯಶ್ಪಾಲ್‌ ಸುವರ್ಣ

ಮಂಗಳೂರು: ಇವತ್ತಿನ ಪೀಳಿಗೆಗೆ ಸಾವರ್ಕರ್ ಅವರ ಆದರ್ಶ, ಕೊಡುಗೆಗಳನ್ನು ತಿಳಿಸುವ ನಿಟ್ಟಿನಲ್ಲಿ ನಾವು ಕೇವಲ ಆ ಭಾಗದಲ್ಲಿ ಫ್ಲೆಕ್ಸ್ ಮಾತ್ರವಲ್ಲ,ಪುತ್ಥಳಿ ನಿರ್ಮಾಣಕ್ಕೆ ಅನುಮತಿ ಕೋರಿ ಉಡುಪಿ ನಗರ ಸಭೆಗೆ ಪತ್ರವನ್ನು ಬರೆದಿದ್ದೇವೆ ಎಂದು...

ಮಂಗಳೂರು: ಆ.22ರಂದು ನಾಡದೋಣಿ ಎಂಜಿನ್ ತಪಾಸಣೆ

ಮಂಗಳೂರು: 2022-23ನೇ ಸಾಲಿಗೆ ಮೀನುಗಾರಿಕೆ ಉದ್ದೇಶಕ್ಕಾಗಿ ಬಳಸುವ ಸೀಮೆಎಣ್ಣೆಯ ಪರವಾನಿಗೆಯನ್ನು ನವೀಕರಿಸುವ ಹಿನ್ನಲೆಯಲ್ಲಿ ನಾಡದೋಣಿ ಎಂಜಿನ್ ತಪಾಸಣೆ ಆ.22ರ ಸೋಮವಾರ ನಡೆಯಲಿದೆ.ದೋಣಿ ಮಾಲಕರು ದೋಣಿಯ ನೋಂದಣಿ ಪತ್ರದ ಪ್ರತಿ, ಆಧಾರ್ ಪ್ರತಿ ಮತ್ತು...