Connect with us

BANTWAL

ಬಂಟ್ವಾಳ: ವೃದ್ಧಾಪ್ಯದಲ್ಲೂ ಬಾಡದ ಸೇವಾಗುಣ-ಆಶ್ರಮ ಕಟ್ಟಲು ಮುಂದಾದ ಕುಮುದಜ್ಜಿ

Published

on

ಬಂಟ್ವಾಳ: ಸಮಾಜದಲ್ಲಿ ಯಾರಿಗೂ ಬೇಡವಾಗಿ ಅನಾಥವಾಗಿರುವ ಹೆಣ್ಣು ಮಕ್ಕಳು-ಮಹಿಳೆಯರಿಗೆ ಆಶ್ರಯ ಕಲ್ಪಿಸುವ ದೃಷ್ಟಿಯಿಂದ ಪಾಣೆಮಂಗಳೂರಿನ ಮಹಿಳೆಯೊಬ್ಬರು ಉಚಿತವಾಗಿ ಆಶ್ರಮ ನಿರ್ಮಾಣಕ್ಕೆ ಮುಂದಾಗಿದ್ದು, ನರಿಕೊಂಬು ರಸ್ತೆಯ ಮೊಗರ್ನಾಡಿನಲ್ಲಿ ತಮ್ಮ ಸ್ವಂತ ಜಮೀನಿನಲ್ಲಿ ಆಶ್ರಮಕ್ಕಾಗಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ.


ಪಾಣೆಮಂಗಳೂರಿನ ಕುಮುದಾ ಜೆ.ಕುಡ್ವ ಅವರೇ ಆಶ್ರಮ ನಿರ್ಮಾಣಕ್ಕೆ ಮುಂದಾಗಿರುವ ಮಹಿಳೆಯಾಗಿದ್ದು, ಸುಮಾರು 10 ವರ್ಷಗಳ ಹಿಂದೆಯೇ ಆಶ್ರಮ ನಿರ್ಮಾಣ ಮಾಡಬೇಕು ಎಂಬ ಇಚ್ಛೆಯೊಂದಿಗೆ 2011ರಲ್ಲಿ ಜೆ.ಕೆ.ಸೇವಾ ಟ್ರಸ್ಟ್ ಸ್ಥಾಪಿಸಿದ್ದರು.

ಆದರೆ ಹಲವು ಕಾರಣಕ್ಕೆ ಆಶ್ರಮ ನಿರ್ಮಾಣ ಸಾಧ್ಯವಾಗಿರಲಿಲ್ಲ. ಪ್ರಸ್ತುತ ಆರಂಭಿಸುವ ಆಶ್ರಮದಲ್ಲಿ ಗರಿಷ್ಠ ಅಂದರೆ 100 ಮಂದಿಗೆ ಅವಕಾಶ ನೀಡುವ ಗುರಿಯನ್ನು ಇಟ್ಟುಕೊಂಡಿದ್ದಾರೆ.

ಆದರೆ ಇದೀಗ ಮೊಗರ್ನಾಡಿನಲ್ಲಿ ತಮ್ಮ 53ಸೆಂಟ್ಸ್ ಜಮೀನಿನಲ್ಲಿ ಆಶ್ರಮಕ್ಕಾಗಿ ಸುಸಜ್ಜಿತ ವಸತಿ ವ್ಯವಸ್ಥೆ, ಶೌಚಾಲಯ, ನೀರು, ವಿದ್ಯುತ್ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು, ಜೂನ್ ತಿಂಗಳಲ್ಲಿ ಆಶ್ರಮ ಆರಂಭಿಸುವ ಕುರಿತು ಸಿದ್ಧತೆ ನಡೆಸಿದ್ದಾರೆ. ಆ ಜಮೀನಿನಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವೊಂದನ್ನು ಆಶ್ರಮಕ್ಕೆ ಹೊಂದಿಕೊಳ್ಳುವ ರೀತಿ ನವೀಕರಣಗೊಳಿಸಿದ್ದಾರೆ.

ಕುಮುದಾ ಜೆ.ಕುಡ್ವ ಅವರು ಪಾಣೆಮಂಗಳೂರಿನ ಕೇಂದ್ರ ಭಾಗದಲ್ಲಿ ವಾಣಿಜ್ಯ ಸಂಕೀರ್ಣವೊಂದನ್ನು ಹೊಂದಿದ್ದು, ಅದರ ಬಾಡಿಗೆ ಮೊತ್ತದಿಂದಲೇ ಆಶ್ರಮ ನಡೆಸುವುದಾಗಿ ತಿಳಿಸಿದ್ದಾರೆ.

ಅಂದರೆ ಕುಮುದಾ ಜೆ.ಕುಡ್ವ ಅವರ ಇಬ್ಬರು ಮಕ್ಕಳು ಹೊರಗಿದ್ದು, ಪ್ರಸ್ತುತ ಅವರು ಮನೆಯಲ್ಲೇ ಒಬ್ಬರೇ ವಾಸಿಸುತ್ತಿದ್ದಾರೆ. ಮುಂದೆ ಆಶ್ರಮ ಆರಂಭವಾದ ಬಳಿಕ ಅವರು ಕೂಡ ಅದೇ ಆಶ್ರಮದಲ್ಲಿ ಉಳಿದುಕೊಳ್ಳುವ ಹಾಗೆ ಪ್ರತ್ಯೇಕ ಕೊಠಡಿಯೊಂದನ್ನು ನಿರ್ಮಿಸಿದ್ದಾರೆ.

 

ಜಮೀನಿನಲ್ಲಿ ಒಂದಷ್ಟು ತೆಂಗಿನಮರಗಳಿದ್ದು, ಅದರ ಆದಾಯವನ್ನೂ ಅಶ್ರಮಕ್ಕೆ ಬಳಕೆ ಮಾಡುತ್ತೇವೆ. ಉಳಿದಂತೆ ಆಶ್ರಮವಾಸಿಗಳಿಗೆ ಪ್ರಾರಂಭದಲ್ಲಿ ಅಡುಗೆಗೆ ವ್ಯವಸ್ಥೆ ಮಾಡಿ ಮುಂದೆ ಅವರೇ ಅಡುಗೆ ತಯಾರಿ ಮಾಡುವ ಆಲೋಚನೆಯನ್ನೂ ಹೊಂದಿದ್ದಾರೆ.

ಹೆಣ್ಣು ಮಕ್ಕಳಿಂತ ಹಿರಿಯ ಮಹಿಳೆಯರಿಗೂ ಆಶ್ರಮದಲ್ಲಿ ಆಶ್ರಯ ನೀಡುವ ಆಲೋಚನೆ ಹೊಂದಿದ್ದು, ಆರೋಗ್ಯವಂತರಾಗಿರುವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎನ್ನುತ್ತಾರೆ.

ಪ್ರಾಣಿ ಪ್ರೇಮಿಯಾಗಿರುವ ಕುಮುದಾ ಅವರಿ ಹಿಂದೆ ಹತ್ತಾರು ನಾಯಿಗಳನ್ನು ಸಾಕುತ್ತಿದ್ದು, ಅದಕ್ಕೆ ಬೇಕಾದ ಆರೈಕೆಯನ್ನೂ ಸ್ವತಃ ಅವರೇ ಮಾಡುತ್ತಿದ್ದರು. ಆದರೆ ಪ್ರಸ್ತುತ ವಯಸ್ಸಾದ ಕಾರಣದಿಂದ ನಾಯಿಗಳನ್ನು ಸಾಕುವುದನ್ನು ಬಿಟ್ಟು ಬಿಟ್ಟಿದ್ದಾರೆ.

ಆದರೆ ಮುಂದೆ ಆಶ್ರಮವಾಸಿಗಳ ಜತೆ ನಾಯಿಗಳನ್ನೂ ಸಾಕುವ ಯೋಜನೆಯೊಂದಿಗೆ ಅದಕ್ಕಾಗಿ ಪ್ರತ್ಯೇಕ ಗೂಡಿನ ವ್ಯವಸ್ಥೆಗಳನ್ನು ಮಾಡಿದ್ದಾರೆ.

ಈ ಸೇವಾ ಯೋಜನೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಅವರು ‘ಆಶ್ರಮ ಸ್ಥಾಪನೆಯ ಉದ್ದೇಶದಿಂದ 10 ವರ್ಷಗಳ ಹಿಂದೆಯೇ ಜಗದೀಶ್ ಕುಡ್ವಾ, ಕುಮುದಾ ಹೆಸರಿನಲ್ಲಿ ಜೆ.ಕೆ.ಸೇವಾ ಟ್ರಸ್ಟ್ ಸ್ಥಾಪಿಸಿದ್ದು, ಮುಂದೆ ಜೆ.ಕೆ.ಮಹಿಳಾ ಸೇವಾಶ್ರಮವನ್ನು ಆರಂಭಿಸಲಿದ್ದೇವೆ.

ಆದರೆ ನಮ್ಮ ಆಶ್ರಮದಲ್ಲಿ ಒಬ್ಬರಿಂದ ಒಬ್ಬರಿಗೆ ತಗಲುವ ರೋಗದ ಲಕ್ಷಣವಿರುವವರನ್ನು, ಅತೀ ಹೆಚ್ಚು ಸಿಡುಕು ಸ್ವಭಾವ ಹೊಂದಿದವರನ್ನು ಸೇರಿಸಿಕೊಳ್ಳುವುದಿಲ್ಲ. ಅದರಿಂದ ಉಳಿದವರಿಗೆ ತೊಂದರೆ ಆಗುವ ಸಾಧ್ಯತೆ ಹೆಚ್ಚು.

ಅದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ಆಶ್ರಮವಾಸಿಗಳ ಆರೋಗ್ಯದ ದೃಷ್ಟಿಯಿಂದ ವೈದ್ಯರ ಜತೆಯೂ ಮಾತುಕತೆ ನಡೆಸಿದ್ದು, ಅವರು ಆಶ್ರಮಕ್ಕೆ ಬಂದು ಸೇವೆ ನೀಡುವ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

Click to comment

Leave a Reply

Your email address will not be published. Required fields are marked *

BANTWAL

Bantwala: ಅಕ್ಕಪಕ್ಕ ಮನೆಯ ಯುವಕ-ಯುವತಿ ಒಂದೇ ದಿನ ನಾಪತ್ತೆ..!

Published

on

ಬಂಟ್ವಾಳ: ಅಕ್ಕ ಪಕ್ಕದ ಮನೆಯ ಯುವಕ ಮತ್ತು ಯುವತಿ ಒಂದೇ ದಿನ ನಾಪತ್ತೆ ಯಾದ ಘಟನೆ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದಲ್ಲಿ ನಡೆದಿದ್ದು, ಈ ಕುರಿತಂತೆ ಎರಡೂ ಮನೆಯವರು ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಜೀಪಮುನ್ನೂರು ಗ್ರಾಮದ ಉದ್ದೊಟ್ಟು ನಿವಾಸಿ ಆಯಿಷತ್‌ ರಸ್ಮಾ (18) ಮತ್ತು  ಮಹಮ್ಮದ್‌ ಸಿನಾನ್‌ (23) ನಾಪತ್ತೆಯಾದವರು. ರಸ್ಮಾ ನಡುಪದವು ಖಾಸಗಿ ಕಾಲೇಜಿನಲ್ಲಿ ಫಾರ್ಮಸಿ ವಿದ್ಯಾರ್ಥಿನಿಯಾಗಿದ್ದಾರೆ. ಅವರು ನ. 23ರ ರಾತ್ರಿ ಊಟ ಮುಗಿಸಿ ಮನೆಯಲ್ಲಿ ಮಲಗಿದ್ದು, ಮರುದಿನ ಬೆಳಗ್ಗೆ ಎದ್ದು ನೋಡಿದಾಗ ನಾಪತ್ತೆಯಾಗಿದ್ದರು. ಸಿನಾನ್‌ ಕೆಲವು ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಬಳಿಕ ಊರಿಗೆ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದರು. ಅವರು ನ. 23ರ ರಾತ್ರಿ ಊಟ ಮಾಡಿ ಮಲಗಿದವರು ಮರುದಿನ ಬೆಳಗಾಗುವಷ್ಟರಲ್ಲಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಎರಡೂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

Continue Reading

BANTWAL

Bantwala: ಅಕ್ರಮ ಮರ ಸಾಗಾಟ-ಇಬ್ಬರು ಆರೋಪಿಗಳು ವಶ..!

Published

on

ಬಂಟ್ವಾಳ: ಅಕ್ರಮ ಮರ ಸಾಗಟ ಮಾಡುತ್ತಿದ ಸ್ಥಳಕ್ಕೆ ಖಚಿತ ಮಾಹಿತ ಪಡೆದ ಬಂಟ್ವಾಳ ಅರಣ್ಯ ಇಲಾಖೆಯವರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಸಜೀಪಮುನ್ನೂರು ಗ್ರಾಮದ ಮಾರ್ನಬೈಲು ಹಾಗೂ ಉಳ್ಳಾಲ ತಾಲೂಕಿನ ಸಜೀಪಪಡು ಗ್ರಾಮದ ಕೋಟೆಕಣಿಯಲ್ಲಿ ನಡೆದಿದೆ.

ಮರ ಹಾಗೂ ವಿವಿಧ ಜಾತಿಯ ದಿಮ್ಮಿಗಳನ್ನು ಪಿಕಪ್ ಮೂಲಕ ಆಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹಾಗೂ 2 ಪಿಕಪ್ ವಾಹನ,6 ಲಕ್ಷ ರೂ ಮೌಲ್ಯದ ದಿಮ್ಮಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಲು ಪಾಲ್ಗೊಂಡಿದ್ದರು. ವಲಯ ಅರಣ್ಯ ಅಧಿಕಾರಿ ಪ್ರಪುಲ್ ಶೆಟ್ಟಿ ಪಿ.ಅವರು ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ.

Continue Reading

BANTWAL

ಇಂಡೋನೇಷ್ಯಾದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಬಂಟ್ವಾಳದ ಧನೇಶ್‌ ಶೆಟ್ಟಿ ಆಯ್ಕೆ

Published

on

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುಕ್ಕಿಪ್ಪಾಡಿ ಗ್ರಾಮದ ಯುವಕ ಇಂಡೋನೇಶ್ಯಾದ ರಾಷ್ಟ್ರೀಯ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಕುಕ್ಕಿಪ್ಪಾಡಿ ಹುಣಸೆಬೆಟ್ಟು ನಿವಾಸಿ ಮಹಾಬಲ ಶೆಟ್ಟಿ ಅವರ ಪುತ್ರ ಧನೇಶ್ ಶೆಟ್ಟಿ ಇಂಡೋನೇಶ್ಯಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದವರು. ವಿವಾಹಿತರಾಗಿರುವ ಧನೇಶ್ ಅವರು ತನ್ನ ಪತ್ನಿಯೊಂದಿಗೆ ಇಂಡೋನೇಶ್ಯಾದಲ್ಲಿ ನೆಲೆಸಿದ್ದು, ಆರೋಗ್ಯ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ನಲ್ಲಿ ಆಸಕ್ತಿ ಹೊಂದಿದ್ದ ಇವರು ಇದೀಗ ಇಂಡೋನೇಸ್ಯಾದ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Continue Reading

LATEST NEWS

Trending