ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಶೀಘ್ರದಲ್ಲೇ ರಸ್ತೆಗಿಳಿಯಲಿದೆ. ಈಗಾಗಲೇ ಕಂಪೆನಿ ಬುಕ್ಕಿಂಗ್ ಆರಂಭಿಸಿದ್ದು, 1 ಲಕ್ಷಕ್ಕೂ ಅಧಿಕ ಮಂದಿ ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬುಕ್ ಮಾಡಿಕೊಂಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಓಲಾ ಸ್ಕೂಟರ್‌ನ ಮೊದಲ ಆವೃತ್ತಿ ಬಿಡುಗಡೆಯಾಗಲಿದೆ.
ಶೀಘ್ರದಲ್ಲೇ ಆಯ್ದ ನಗರಗಳಲ್ಲಿ ಫಾಸ್ಟ್ ಚಾರ್ಜಿಂಗ್ ಸೆಂಟರ್ಗಳನ್ನು ನಿರ್ಮಿಸಲಿದ್ದು, ಈಗಾಗಲೇ ನಿರ್ಮಾಣ ಪ್ರಕ್ರಿಯೆಗಳ ಸಿದ್ಧತೆಗಳು ಶುರುವಾಗಿದೆ. ಇದರಿಂದ ಓಲಾ ಸ್ಕೂಟರ್ನ್ನು ಚಾರ್ಜಿಂಗ್ ಸ್ಟೇಷನ್ ಮೂಲಕ ವೇಗವಾಗಿ ಚಾರ್ಜ್ ಮಾಡಿಕೊಳ್ಳಬಹುದು.
ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ನೀವು ಚಾರ್ಜಿಂಗ್ ಸ್ಟೇಷನ್‌ನಿಂದ ಚಾರ್ಜ್ ಮಾಡಿದರೆ ಶೂನ್ಯದಿಂದ ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು ಎರಡೂವರೆ ಗಂಟೆ ಸಮಯ ತೆಗೆದುಕೊಳ್ಳಲಿದೆ. ಹೈಪರ್ ಚಾರ್ಜಿಂಗ್ ಕೇಂದ್ರದಲ್ಲಿ, ಕೇವಲ 18 ನಿಮಿಷಗಳಲ್ಲಿ 50% ವರೆಗೆ ಚಾರ್ಜ್ ಮಾಡಬಹುದು. ಇನ್ನು ಮನೆಯಲ್ಲಿಯೇ ಸಂಪೂರ್ಣವಾಗಿ ಚಾರ್ಜ್ ಮಾಡಲು ಐದಾರು ಗಂಟೆ ತೆಗೆದುಕೊಳ್ಳಲಿದೆ. ಓಲಾ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂರು ಮಾಡೆಲ್ಗಳಲ್ಲಿ ಬಿಡುಗಡೆ ಮಾಡಲಿದೆ. ಈ ಮೂರು ಮಾಡೆಲ್ಗಳಿಗೆ ಓಲಾ ಎಸ್, ಎಸ್ 1 ಮತ್ತು ಓಲಾ ಎಸ್ 1 ಪ್ರೊ ಎಂದು ಹೆಸರಿಡಲಾಗಿದೆ. ಇವುಗಳು ಕ್ರಮವಾಗಿ 2kW, 4kW ಮತ್ತು 7kW ಮೋಟರ್‌ಗಳನ್ನು ಹೊಂದಿರಲಿವೆ.
ಇನ್ನು ಓಲಾ ಎಲೆಕ್ಟ್ರಿಕ್ ಸಿಇಒ ಭಾವೀಶ್ ಅಗರ್ವಾಲ್, ತಮ್ಮ ಕಂಪೆನಿಯ ನೂತನ ಸ್ಕೂಟರ್‌ನ ಟಾಪ್ ಸ್ಪೀಡ್ ಎಷ್ಟಿರಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಸಮೀಕ್ಷೆ ನಡೆಸಿದ್ದಾರೆ. 80Kmph, 90Kmph, 100Kmph ಗಿಂತ ಹೆಚ್ಚಿನ ವೇಗದ ಆಯ್ಕೆಗಳನ್ನು ನೀಡಿ ಕೇಳಲಾದ ಈ ಪ್ರಶ್ನೆಗೆ ಶೇ. 49.4 ರಷ್ಟು ಮಂದಿ 100 ಕಿ.ಮೀ ವೇಗಕ್ಕಿಂತ ಹೆಚ್ಚಿರಬೇಕೆಂದು ತಿಳಿಸಿದ್ದಾರೆ. ಈ ಸಮೀಕ್ಷೆ ಪ್ರಕಾರ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನ ವೇಗ 100 ಕಿ.ಮೀ ಅಸುಪಾಸಿನಲ್ಲಿರಲಿದೆ ಎಂಬುದನ್ನು ಅಂದಾಜಿಸಬಹುದು.
ಆಟೋಮೊಬೈಲ್ ಎಕ್ಸ್ಪರ್ಟ್ಗಳ ಮಾಹಿತಿ ಪ್ರಕಾರ, ಓಲಾ ಸ್ಕೂಟರ್ ಬೇಸ್ ಮಾಡೆಲ್ 45 ಕಿಲೋಮೀಟರ್ ವೇಗ ಹೊಂದಿದ್ದರೆ, ಎರಡನೆಯದು 70 ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ. ಇದೀಗ ಭಾವೀಶ್ ಅಗರ್ವಾಲ್ ಅವರು ಟಾಪ್ ಸ್ಪೀಡ್ ಸಮೀಕ್ಷೆಯನ್ನು ನಡೆಸಿದ್ದರಿಂದ 7kW ಮೋಟರ್ ಮಾಡೆಲ್ ವೇಗ 100 ಅಥವಾ ಅದಕ್ಕಿಂತ ಹೆಚ್ಚಿರಲಿದೆ ಎಂದೇ ಹೇಳಲಾಗುತ್ತಿದೆ. ಒಂದು ವೇಳೆ 100 ಕಿ.ಮೀ ಗಿಂತ ಹೆಚ್ಚಿನ ವೇಗ ನೀಡಿದರೆ ಹೈವೇ ಸೇರಿದಂತೆ ದೂರದ ಪ್ರಯಾಣಕ್ಕೆ ಓಲಾ ಸ್ಕೂಟರ್ನ್ನು ಬಳಸಿಕೊಳ್ಳಬಹುದು.
ಇನ್ನು ಒಟ್ಟು 10 ಬಣ್ಣಗಳಲ್ಲಿ ಓಲಾ ಸ್ಕೂಟರ್ ಖರೀದಿಗೆ ಬುಕ್ಕಿಂಗ್ಗೆ ಲಭ್ಯವಿದ್ದು, ಗ್ರಾಹಕರು ಕೆಂಪು, ಪಿಂಕ್, ಹಳದಿ, ಸ್ವಿಲರ್, ಬಿಳಿ ಹಾಗೂ ನೀಲಿ ಬಣ್ಣಗಳಲ್ಲಿ ಖರೀದಿಸಬಹುದು. ಹಾಗೆಯೇ ಈ ಸ್ಕೂಟರ್‌ನ ಮೈಲೇಜ್ ಅದರ ವೇಗಕ್ಕೆ ಅನುಗುಣವಾಗಿರಲಿದೆ. ಅಂದರೆ 20 ಕಿ.ಮೀ ವೇಗದಲ್ಲಿ ಚಲಾಯಿಸಿದರೆ ಬರೋಬ್ಬರಿ 240 ಕಿ.ಮೀ ರೇಂಜ್ (ಮೈಲೇಜ್) ಸಿಗಲಿದೆ ಎಂದು ಕಂಪೆನಿ ತಿಳಿಸಿದೆ. ಸಾಮಾನ್ಯ ವೇಗದಲ್ಲಿ 130-150 ಕಿಲೋಮೀಟರ್ ವ್ಯಾಪ್ತಿಯವರೆಗೆ ಚಲಿಸಬಹುದು. ಈ ಸ್ಕೂಟರ್ ಬೆಲೆಯು ಸುಮಾರು 1 ಲಕ್ಷ ರೂ.ನಿಂದ ಆರಂಭವಾಗಲಿದ್ದು, ಆ ಮಾಡೆಲ್ಗೆ ಅನುಗುಣವಾಗಿ ಬೆಲೆಯಲ್ಲಿ ವ್ಯತ್ಯಾಸಗಳು ಕಂಡು ಬರುತ್ತದೆ.
ಮಂಗಳೂರು/ಆಂಧ್ರಪ್ರದೇಶ: ಭಕ್ತರು ದೇವರಿಗೆ ಹಾಲಿನ ಅಭಿಷೇಕ, ಹೂವಿನ ಅಭಿಷೇಕ ನೀರು, ಚಂದನ ಅಥವಾ ಗಂಧದ ಅಭಿಷೇಕ ಮುಂತಾದವುಗಳನ್ನು ಅರ್ಪಿಸುವುದು ಸಾಮಾನ್ಯವಾಗಿದೆ. ಆದರೆ, ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಶ್ರೀ ಶಿವದತ್ತ ಸ್ವಾಮಿಜಿ ಭಕ್ತರಿಂದ ಮೆಣಸಿನ ಪುಡಿ ಅಭಿಷೇಕ ಮಾಡಿಸಿಕೊಂಡಿರುವ ಸುದ್ಧಿ ಫುಲ್ ವೈರಲ್ ಆಗುತ್ತಿದೆ.
ಆಂಧ್ರಪ್ರದೇಶದ ಪ್ರತ್ಯಂಗಿರ ಆಶ್ರಮದಲ್ಲಿ ಈ ವಿಶಿಷ್ಟವಾದ ಅಭಿಷೇಕ ನಡೆದಿದ್ದು, ಸುಮಾರು 100 ಕೆಜಿ ಮೆನಸಿನಕಾಯಿಯನ್ನು ಬಳಸಲಾಗಿದ್ದು, ಇದನ್ನು ಮಾಡುವುದರಿಂದ ಭಕ್ತರ ಕಷ್ಟಗಳು ದೂವಾಗುತ್ತದೆ ಎಂಬ ನಂಬಿಕೆ ಇದೆ. ಪ್ರತ್ಯಂಗಿರಿ ದೇವಿಗೆ ಮೆಣಸಿನಕಾಯಿ ಎಂದರೆ ತುಂಬಾ ಇಷ್ಟ. ದೇವಿಯ ಕೊರಳಿಗೆ ಕೆಂಪು ಮೆಣಸಿನಕಾಯಿ ಮಾಲೆ ಹಾಕಿ ಪೂಜಿಸಲಾಗಿದ್ದು, ಇದನ್ನು ‘ಕರಂ ಅಭಿಷೇಕ’ ಎಂದು ಕೂಡ ಕರೆಯಲಾಗುತ್ತದೆ.
ಕಳೆದ 14 ವರ್ಷಗಳಿಂದ ಪ್ರತ್ಯಂಗಿರ ಆಶ್ರಮದಲ್ಲಿ ಮೆಣಸಿನಕಾಯಿಯಿಂದ ಅಭಿಷೇಕ ನಡೆಸಿಕೊಂಡು ಬರುತ್ತಿದೆ. ಪ್ರತೀ ವರ್ಷ ಈ ಅಭಿಷೇಕದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮೆಣಸಿನ ಪುಡಿ ಸಮರ್ಪಿಸುತ್ತಾರೆ. ಈ ಕ್ರಮ ಭಕ್ತರ ನಂಬಿಕೆಯೋ, ದೇವರ ಪವಾಡವೋ ಗೋತ್ತಿಲ್ಲ, ಆದರೆ ಇಂತಹ ಆಚರಣೆ ಆಧುನಿಕ ಯುಗದಲ್ಲಿ ಎಷ್ಟು ಸರಿ ಎಂಬುವುದು ಚಿಂತಾದಾಯಕ ವಿಷಯವಾಗಿದೆ.
ಮಂಗಳೂರು: ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ ಸಮಾರಂಭ ಗುರುವಾರ ಬೆಳಗ್ಗೆ ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಜರುಗಿತು. ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಳಿಕ ಮಾತಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು, “ತುಳು ಭಾಷೆ, ಸಂಸ್ಕೃತಿ, ಆಹಾರ ಪದ್ಧತಿಯನ್ನು ವಿಶ್ವದಗಲ ಮೆಚ್ಚಿಕೊಂಡ ಅಸಂಖ್ಯ ಜನರಿದ್ದಾರೆ. ತುಳು ಭಾಷೆಯ ಬೆಳವಣಿಗೆಗೆ ತುಳು ನಾಟಕ, ಸಿನಿಮಾ ಮತ್ತು ತುಳು ಕಲಾವಿದರು ಬಹಳಷ್ಟು ಪ್ರಯತ್ನ ಪಡುತ್ತಿದ್ದಾರೆ. ಪಡುಬಿದ್ರಿಯ ಮಹಾಗಣಪತಿ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿದರೆ ನಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಈ ಸಿನಿಮಾ ಯಶಸ್ಸು ಕಾಣಲಿ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅತೀವ ಸಂತಸವಾಗುತ್ತಿದೆ“ ಎಂದು ಶುಭ ಹಾರೈಸಿದರು.
ಹಿರಿಯ ರಂಗಕರ್ಮಿ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಮಾತಾಡಿ, ”ತುಳು ಚಿತ್ರರಂಗಕ್ಕೆ ಈಗ ಪರ್ವಕಾಲ. ಮಂಗಳೂರಿನಲ್ಲಿ 9 ಸಿನಿಮಾಗಳಿಗೆ ಚಿತ್ರೀಕರಣ ನಡೆಯುತ್ತಿವೆ. ಒಳ್ಳೊಳ್ಳೆ ಸಿನಿಮಾಗಳನ್ನು ಜನರು ಖಂಡಿತ ಸ್ವೀಕರಿಸುತ್ತಾರೆ. ಸಿನಿಮಾ ತಂಡದ ಪ್ರಯತ್ನಕ್ಕೆ ತುಳುವರು ಬೆಂಬಲ ನೀಡಬೇಕು, ಚಿತ್ರತಂಡಕ್ಕೆ ಶುಭವಾಗಲಿ“ ಎಂದರು.
ಕುಸೆಲ್ದರಸೆ ನವೀನ್ ಡಿ. ಪಡೀಲ್ ಮಾತನಾಡಿ, ”ಸಿನಿಮಾ ಯಶಸ್ಸು ಕಾಣಲಿ. ತುಳುನಾಡಿನಲ್ಲಿ ಸಿನಿಮಾ ಒಳ್ಳೆಯ ಹೆಸರು ಮಾಡಲಿ“ ಎಂದರು.
ನಾಯಕ ನಟ ಶೋಧನ್ ಶೆಟ್ಟಿ ಮಾತನಾಡಿ, ”2019ರಲ್ಲಿಯೇ ಸಿನಿಮಾ ಮಾಡಲು ತಯಾರಿ ಮಾಡಿದ್ದೆ. ಆದರೆ ಕಾರಣಾಂತರದಿಂದ ವಿಳಂಬವಾಯಿತು. ಈಗ ಕಾಲ ಕೂಡಿಬಂದಿದೆ. ನಿಮ್ಮೆಲ್ಲರ ಸಹಕಾರದಿಂದ ಸಿನಿಮಾ ಚೆನ್ನಾಗಿ ಮೂಡಿಬರಲಿದೆ. ಭಾಗ 1ರ ಚಿತ್ರೀಕರಣ ಮುಗಿದ ಬಳಿಕ ಟೈಟಲ್ ಲಾಂಚ್ ಮಾಡಲಿದ್ದೇವೆ“ ಎಂದರು.
ದೇವಸ್ಥಾನದ ಮೊಕ್ತೇಸರ ಭವಾನಿ ಶಂಕರ್ ಹೆಗ್ಡೆ, ಉಮೇಶ್ ಶೆಟ್ಟಿ, ನಟ ಶೋಧನ್ ಶೆಟ್ಟಿ, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಡಾ ಪ್ರತೀಕ್ಷಾ, ಡಾ ನಿಖಿಲ್ ಶೆಟ್ಟಿ, ಸಂಜಯ್ ಶೆಟ್ಟಿ ಗೋಣಿಬೀಡು, ಡಾ ವೈಎನ್ ಶೆಟ್ಟಿ, ಮಿಥುನ್, ನವೀನ್ ಚಂದ್ರ ಶೆಟ್ಟಿ, ಜಗನ್ನಾಥ ಶೆಟ್ಟಿ ಕುಳಾಯಿ, ವಿಠಲ್ ಶೆಟ್ಟಿ ಕನಕಪಾಡಿ, ಶಾಂತಾರಾಮ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಉದ್ಯಮಿ ಪಲ್ಲವಿ ಸಂತೋಷ್ ಶೆಟ್ಟಿ ಕೆಮರಾ ಚಾಲನೆ ಮಾಡಿದರು. ಶಾಹಿಲ್ ರೈ ಕಾರ್ಯಕ್ರಮ ನಿರೂಪಿಸಿದರು.
ಸಿನಿಮಾ ಕುರಿತು:
ಶುಭಾ ಶೆಟ್ಟಿ ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ಧನರಾಜ್ ಶೆಟ್ಟಿ, ಉಮೇಶ್ ಶೆಟ್ಟಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಶರತ್ ಪೂಜಾರಿ ಬಗ್ಗತೋಟ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು ಸಂದೀಪ್ ಉಡುಪಿ ಕೆಮರಾ ಕಣ್ಣಲ್ಲಿ ಸಿನಿಮಾ ಮೂಡಿಬರಲಿದೆ. ರವಿರಾಜ್ ಗಾಣಿಗ ಎಡಿಟರ್, ಪ್ರಸಾದ್ ಕೆ.ಶೆಟ್ಟಿ ಸಂಗೀತ ಸಂಯೋಜನೆ ಸಿನಿಮಾಕ್ಕಿರಲಿದೆ.
ಕಲಾವಿದರಾಗಿ ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಪ್ರಸನ್ನ ಶೆಟ್ಟಿ ಬೈಲೂರು, ರಮೇಶ್ ಶೆಟ್ಟಿ, ಸೂರಜ್ ಸನಿಲ್, ನಿತೇಶ್ ಶೆಟ್ಟಿ, ಕೀರ್ತನಾ ಸಾಲಿಯಾನ್, ಶೋಭಾ ಪ್ರಿಯಾ ನಾಯರ್, ಸಂದೀಪ್ ಪೂಜಾರಿ ಬಣ್ಣ ಹಚ್ಚಲಿದ್ದಾರೆ. ಕಟೀಲು, ಪಡುಬಿದ್ರಿ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.
‘ಶಬರಿಮಲೆ’ ಎಂದಾಕ್ಷಣ ನಮಗೆ ಮೊದಲು ನೆನಪಿಗೆ ಬರೋದು ಅಯ್ಯಪ್ಪ ಸ್ವಾಮಿ ಮತ್ತು ಭಕ್ತಿಯಿಂದ ಮಾಲೆ ಧರಿಸುವ ಭಕ್ತರು. ಕಾರ್ತಿಕ ಮಾಸ ಆರಂಭವಾಗುತ್ತಿದ್ದಂತೆ ಲಕ್ಷಾಂತರ ಜನ ಅಯ್ಯಪ್ಪ ಮಾಲೆಯನ್ನು ಧರಿಸುತ್ತಾರೆ. ಕೆಲವರು ಮಂಡಲ ದೀಕ್ಷಾ, ಇನ್ನು ಕೆಲವರು ಅರ್ಥ ಮಂಡಲ ದೀಕ್ಷಾ ತೆಗೆದುಕೊಳ್ಳುತ್ತಾರೆ. 41 ದಿನಗಳ ದೀಕ್ಷೆ ಪಡೆದು ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಪಡೆದು ಬಂದ ಬಳಿಕ ಪೂಜೆಯೊಂದಿಗೆ ಅಯ್ಯಪ್ಪ ಮಾಲೆಯನ್ನು ತೆಗೆಯುತ್ತಾರೆ.
ಪ್ರತಿವರ್ಷ ಭಕ್ತಿಯಿಂದ ಮಾಲೆ ಧರಿಸಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯುವ ಸ್ವಾಮಿಗಳಿಗೆ ಒಂದೊಂದು ಹೆಸರಿನಿಂದ ಕರೆಯಲಾಗುತ್ತದೆ ಎಂಬ ವಿಷಯ ಎಷ್ಟೋ ಜನರಿಗೆ ಗೊತ್ತೇ ಇರುವುದಿಲ್ಲ. ಸಾಮಾನ್ಯವಾಗಿ ಐದಕ್ಕಿಂತ ಹೆಚ್ಚು ಬಾರಿ ಮಾಲೆ ಧರಿಸಿ ಅಯ್ಯಪ್ಪನ ದರ್ಶನ ಪಡೆದವರನ್ನು ‘ಗುರು ಸ್ವಾಮಿ’ ಎನ್ನಲಾಗುತ್ತದೆ.
ಇದಕ್ಕೆ ಹೊರತಾಗಿ ಪ್ರತಿವರ್ಷ ಮಾಲೆ ಹಾಕಿದವರನ್ನು ಒಂದೊಂದು ಹೆಸರುಗಳಿಂದ ಕರೆಯಲಾಗುತ್ತದೆ. ಆ ಹೆಸರುಗಳು ಯಾವುದ್ಯಾವುದು ಎಂಬ ವಿವರ ಇಲ್ಲಿವೆ.
18 ವರ್ಷಗಳಿಂದ ಮಾಲೆ ಹಾಕುವ ಸ್ವಾಮಿಗಳ ಹೆಸರು :
ಮೊದಲನೇ ಬಾರಿಗೆ ದೀಕ್ಷೆ ಪಡೆದುಕೊಂಡ ಸ್ವಾಮಿಗಳನ್ನು ಕನ್ನೆಸ್ವಾಮಿ ಎಂದು ಕರೆಯಲಾಗುತ್ತದೆ. ಎರಡನೇ ಬಾರಿಗೆ ಮಾಲೆ ಹಾಕಿದ ಸ್ವಾಮಿಗಳನ್ನು ಕತ್ತಿಸ್ವಾಮಿ, ಮೂರನೇ ಬಾರಿಗೆ ಮಾಲೆ ಹಾಕಿದವರನ್ನು ಗಂಟ ಸ್ವಾಮಿ, ನಾಲ್ಕನೇ ಬಾರಿಗೆ ಮಾಲೆ ಹಾಕಿದರೇ ಅವರನ್ನು ಗದಸ್ವಾಮಿ, ಆ ಬಳಿಕ ಮಾಲೆ ಹಾಕುವ ಸ್ವಾಮಿಗಳನ್ನು ಬಿಲ್ಲು ಸ್ವಾಮಿ, ಆರನೇ ಬಾರಿಗೆ ಮಾಲೆ ಹಾಕಿದ ಸ್ವಾಮಿಗಳನ್ನು ಜ್ಯೋತಿ ಸ್ವಾಮಿ, ಏಳನೇ ಬಾರಿಗೆ ಸೂರ್ಯ ಸ್ವಾಮಿ, ಎಂಟನೇ ಬಾರಿಗೆ ಚಂದ್ರ ಸ್ವಾಮಿ, ಒಂಬತ್ತನೇ ಬಾರಿಗೆ ಮಾಲೆ ಹಾಕಿದವರನ್ನು ವೇಲು ಸ್ವಾಮಿ, ಹತ್ತನೇ ಬಾರಿಗೆ ಮಾಲೆ ಹಾಕಿದರೆ ಅವರನ್ನು ವಿಷ್ಣು ಚಕ್ರ ಸ್ವಾಮಿ ಎಂದು ಕರೆಯಲಾಗುತ್ತದೆ. ಹನ್ನೊಂದನೇ ಬಾರಿಗೆ ಮಾಲೆ ಹಾಕಿದರೆ ಶಂಖಾದರ ಸ್ವಾಮಿ, ಹನ್ನೆರಡನೇ ಬಾರಿಗೆ ಮಾಲೆ ಹಾಕಿದವರನ್ನು ನಾಗಾಭರಣ ಸ್ವಾಮಿ, ಬಳಿಕ ಹದಿಮೂರನೇ ಬಾರಿಗೆ ಮಾಲೆ ಹಾಕುವ ಸ್ವಾಮಿಗಳನ್ನು ಶ್ರೀಹರಿ ಸ್ವಾಮಿ, ಹದಿನಾಲ್ಕನೇ ಬಾರಿಗೆ ಮಾಲೆ ಹಾಕುವ ಸ್ವಾಮಿಗಳನ್ನು ಪದ್ಮಸ್ವಾಮಿ, ಹದಿನೈದನೇ ಬಾರಿಗೆ ಮಾಲೆ ಹಾಕುವ ಸ್ವಾಮಿಗಳನ್ನು ತ್ರಿಶೂಲಸ್ವಾಮಿ ಎಂದು ಹೇಳಲಾಗುತ್ತದೆ.ಹದಿನಾರನೇ ಬಾರಿಗೆ ಮಾಲೆ ಹಾಕಿದರೆ ಅಂತಹ ಸ್ವಾಮಿಯನ್ನು ಶಬರಿಗಿರಿಸ್ವಾಮಿ, ಹದಿನೇಳನೇ ಬಾರಿಗೆ ಮಾಲೆ ಹಾಕುವ ಸ್ವಾಮಿಯನ್ನು ಓಂಕಾರ ಸ್ವಾಮಿ, ಹದಿನೆಂಟನೇ ಬಾರಿಗೆ ಮಾಲೆ ಹಾಕಿದರೆ ಅವರನ್ನು ನಾರಿಕೇಳಸ್ವಾಮಿ ಎಂದು ಕರೆಯಲಾಗುತ್ತದೆ.