ಮಂಗಳೂರು: ಕಡಲ ತೀರದಲ್ಲಿ ಅಲೆಗಳೊಂದಿಗೆ ಭಾರಿ ಪ್ರಮಾಣದಲ್ಲಿ ತೈಲ ಜಿಡ್ಡು ಸುರತ್ಕಲ್ನ ದೊಡ್ಡಕೊಪ್ಪಲು ಬೀಚ್‌ನಲ್ಲಿ ಕಂಡುಬಂದಿದೆ.
ಹಡಗುಗಳು ಕಡಲ ತೀರ ಪ್ರದೇಶದಲ್ಲಿ ಲಂಗರು ಹಾಕಿದ ಸಂದರ್ಭ ತೈಲ ಜಿಡ್ಡಿನ ತ್ಯಾಜ್ಯವನ್ನು ಸಮುದ್ರಕ್ಕೆ ಸುರಿಯುತ್ತಿರುವ ಬಗ್ಗೆ ಆರೋಪಗಳು ಬಹಳ ಹಿಂದಿನಿಂದಲೂ ಕೇಳಿ ಬರುತ್ತಿದ್ದವು.
ಅದೇ ರೀತಿ ಬೃಹತ್ ಹಡಗುಗಳು ತಮ್ಮ ಅಳಿದುಳಿದ ತೈಲ ತ್ಯಾಜ್ಯಗಳನ್ನು ಬಂದರು ಒಳಭಾಗದಲ್ಲಿ ವಿಲೇವಾರಿ ಮಾಡಲು ಅವಕಾಶವಿದ್ದರೂ, ಶುಲ್ಕ ಪಾವತಿಸಬೇಕೆಂಬ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ತೈಲ ಜಿಡ್ಡು ತ್ಯಾಜ್ಯ ಸುರಿದು ಹೋಗುತ್ತಿರುವ ಬಗ್ಗೆ ಆರೋಪಗಳು ಇದ್ದವು.
ಅದೇ ರೀತಿ ಸಮುದ್ರತೀರದಲ್ಲಿ ಮುಳುಗಿರುವ ಬೋಟ್ಗಳಿಂದಲೂ ತೈಲತ್ಯಾಜ್ಯ ಹೊರ ತೆಗೆಯದ ಬಗ್ಗೆ ಆತಂಕ ಕಂಡು ಬರುತ್ತಿತ್ತು.
ಇದೆಲ್ಲದರ ನಡುವೆ ಸುರತ್ಕಲ್ನ ದೊಡ್ಡ ಕೊಪ್ಪಲು ಸಮುದ್ರ ತೀರದಲ್ಲಿ ಇದೀಗ ಭಾರಿ ಅಲೆಗಳೊಂದಿಗೆ ತೈಲತ್ಯಾಜ್ಯ ಕಾಣಿಸಿಕೊಳ್ಳುತ್ತಿರುವುದು ಆತಂಕ ಸೃಷ್ಟಿಸಿದೆ.
ಸೈಕ್ಲೋನ್‌ನ ಎಫೆಕ್ಟ್ ನಿಂದ ಕಡಲ ಅಲೆಗಳು ಪ್ರಕ್ಷುಬ್ಧವಾಗಿದ್ದು, ಭಾರಿ ಅಲೆಗಳ ಜೊತೆಗೆ ತೈಲ ತ್ಯಾಜ್ಯವು ತೀರಕ್ಕಪ್ಪಳಿಸುತ್ತಿದೆ.