Connect with us

LATEST NEWS

ಕುಂದಾಪುರ:17 ವರ್ಷದ ಬಾಲಕಿಗೆ 28 ವರ್ಷದ ಯುವಕ -ಮದುವೆಗೆ ಮನೆಗೆ ಅಧಿಕಾರಿಗಳ ದಾಳಿ..!

Published

on

ಕುಂದಾಪುರ:17 ವರ್ಷದ ಬಾಲಕಿಗೆ 28 ವರ್ಷದ ಯುವಕ -ಮದುವೆಗೆ ಮನೆಗೆ ಅಧಿಕಾರಿಗಳ ದಾಳಿ..!

ಉಡುಪಿ : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಲ್ಲೂರು ಗುಡ್ಡೆಯಂಗಡಿಯಲ್ಲಿ ನಡೆಯುತ್ತಿದ್ದ ಬಾಲ್ಯವಿವಾಹವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಡೆ ಹಿಡಿದಿದ್ದಾರೆ.

ಇಲ್ಲಿನ ತ್ರಾಸಿ ಮಹಾಗಣಪತಿ ಸಭಾಭವನದಲ್ಲಿ ತಲ್ಲೂರು ಗುಡ್ಡೆಯಂಗಡಿಯ 17 ವರ್ಷದ ಬಾಲಕಿಗೆ 28 ವರ್ಷದ ಹುಡುಗನೊಂದಿಗೆ ಮದುವೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಂಡು 200 ಕ್ಕೂ ಹೆಚ್ಚು ಮಂದಿ ಮದುವೆ ಹಾಲ್ ನಲ್ಲಿ ಸೇರಿದ್ದರು,

ಈ ಮಾಹಿತಿ ಬಂದ ಕೂಡಲೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ .ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕುಂದಾಪುರ .ಪೊಲೀಸ್ ಇಲಾಖೆ ಗಂಗೊಳ್ಳಿ .ಗ್ರಾಮ ಪಂಚಾಯತ್ ತ್ರಾಸಿ ಇಲ್ಲಿನ ಅಧಿಕಾರಿಗಳ ತಂಡ ಮದುವೆ ಹಾಲ್ ಗೆ ಹಠಾತ್ ಭೇಟಿ ನೀಡಿ ಬಾಲ್ಯವಿವಾಹವನ್ನು ತಡೆದಿದ್ದಾರೆ.

ಬಳಿಕ ಕುಟುಂಬದ ಎರಡೂ ಕಡೆಯವರಿಗೂ ಬಾಲ್ಯವಿವಾಹ ನಿಷೇದ ಮತ್ತು ತಡೆಗಟ್ಟುವಿಕೆ ಕಾಯ್ದೆ ಬಗ್ಗೆ ಅರಿವು ಮೂಡಿಸಿದರು.

ಕುಟುಂಬಿಕರಿಂದ ಮತ್ತು ಹಾಲ್ ಮಾಲಿಕರು ಮತ್ತು ಪುರೋಹಿತರಿನಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಯಿತು.

ಮದುವೆಗೆ ಬಂದವರೆನ್ನೆಲ್ಲಾ ವಾಪಸು ಮನೆಗೆ ಕಳುಹಿಸಿ ಕೊಡಲಾಯಿತು .

ಕಾರ್ಯಾಚರಣೆಯಲ್ಲಿ ಪ್ರಭಾಕರ ಆಚಾರ್ ಕಾನೂನು ಪರಿವೀಕ್ಷಣಾಧಿಕಾರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ .ಶೋಭಾ ಶೆಟ್ಟಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಂದಾಪುರ .ಪ್ರಭಾವತಿ ಅಂಗನವಾಡಿ ಮೇಲ್ವಿಚಾರಕಿ ಕುಂದಾಪುರ .ಕಪಿಲ ರಕ್ಷಣಾಧಿಕಾರಿ .ಸುರಕ್ಷಾ ಸಮಾಜ ಕಾರ್ಯಕರ್ತೆ .ರಘುರಾಮ ಸಹಾಯಕ ಉಪನಿರೀಕ್ಷಕರು .ಮೋಹನ್ ಪೂಜಾರಿ ಹೆಡ್ ಕಾನ್ಸ್ಟೇಬಲ್ .ರೂಪ ಮಾಹಿಳಾ ಪೊಲೀಸ್ ಗಂಗೊಳ್ಳಿ ಠಾಣೆ .ಶೋಭಾ ಎಸ್ ಪಿ .ಡಿ .ಓ .ಶಿವಾನಂದ ಅಕೌಂಟಂಟ್ .ಸಂದೀಪ್ ತ್ರಾಸಿ ಗ್ರಾಮ ಪಂಚಾಯತ್ .ಜಯಮಾಲಾ ಅಂಗನವಾಡಿ ಕಾರ್ಯಕರ್ತೆ ಗುಡ್ಡೆಯಂಗಡಿ ಭಾಗವಹಿಸಿದ್ದರು.

Click to comment

Leave a Reply

Your email address will not be published. Required fields are marked *

International news

4 ಸಾವಿರ ಕೋಟಿಯ ಮನೆ..8 ಖಾಸಗಿ ಜೆಟ್..700 ಹೈಎಂಡ್ ಕಾರುಗಳು..! ಯಾರು ಈ ಶ್ರೀಮಂತ..?

Published

on

ಮಂಗಳೂರು : ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಎಲೋನ್ ಮಸ್ಕ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಎಲ್ಲರೂ ಹುಬ್ಬೇರುವಷ್ಟು ಆಸ್ತಿ, ಪಾಸ್ತಿ ಹೊಂದಿದ್ದಾರೆ. ಆದರೆ, ಅವರಿಗಿಂತಲೂ ಶ್ರೀಮಂತರಿದ್ದಾರೆ ಗೊತ್ತಾ!? ಅಬ್ಬಾ! ಹೌದಾ! ಹಾಗಾದರೆ ಅವರ ಬಳಿ ಎಷ್ಟು ಆಸ್ತಿ ಇದೆ ಎಂದು ನೀವು ಹುಬ್ಬೇರಿಸುತ್ತಿರಬಹುದು. ಇಲ್ಲಿದೆ ಆ ಕುಟುಂಬದ ಸಂಪೂರ್ಣ ವಿವರ.

ಬ್ಲೂಮ್‌ಬರ್ಗ್ ವರದಿ ಮಾಡಿರೋ ಶ್ರೀಮಂತರು

ಎಲೋನ್ ಮಸ್ಕ್ ಮನೆ ಬರೋಬ್ಬರಿ 4 ಸಾವಿರ ಕೋಟಿ ಬೆಲೆ ಬಾಳಿದ್ರೆ, ಈ ಕುಟುಂಬ 8 ಖಾಸಗಿ ಜೆಟ್ ಗಳನ್ನು ಹೊಂದಿದೆ. 700 ಹೈ ಎಂಡ್ ಕಾರುಗಳು ಇವರಲ್ಲಿದೆ. ಬ್ಲೂಮ್‌ ಬರ್ಗ್ ಇತ್ತೀಚಿಗೆ ಮಾಡಿದ ವರದಿಯಂತೆ ಜಗತ್ತಿನ ಶ್ರೀಮಂತ ವ್ಯಕ್ತಿ ಎಂದು ಕರೆಸಿಕೊಳ್ಳುವ ಎಲೋನ್ ಮಸ್ಕ್ ಆಸ್ತಿ 14,87,360 ಕೋಟಿ(ಹದಿನಾಲ್ಕು ಲಕ್ಷದ ಎಂಬತ್ತೇಳು ಸಾವಿರದ ಮುನ್ನೂರ ಅರುವತ್ತು ಕೋಟಿ)ಯಾಗಿದೆ.

ಆದ್ರೆ, ಆ ಕುಟುಂಬದ ಒಟ್ಟು ಆಸ್ತಿ ಕನಿಷ್ಟ ಅಂದ್ರೂ 25,33,113 ಕೋಟಿ (ಇಪ್ಪತೈದು ಲಕ್ಷದ ಮೂವತ್ತಮೂರು ಸಾವಿರದ ನೂರ ಹದಿಮೂರು ಕೋಟಿ) ಎಂದು ಅಂದಾಜಿಸಿದೆ. ಆದ್ರೆ, ಎಲೋನ್ ಮಸ್ಕ್ ಆಸ್ತಿ ವೈಯಕ್ತಿಕವಾಗಿದ್ದರೆ, ಇವರದ್ದು ಕುಟುಂಬದ ಆಸ್ತಿಯಾಗಿದೆ. ಆದ್ರೆ ಜಗತ್ತಿನಲ್ಲೇ ಅತ್ಯಂತ ಐಶಾರಾಮಿ ಜೀವನ ನಡೆಸ್ತಾ ಇದೆ ಈ ಕುಟುಂಬ.

ಯಾವುದು ಆ ಕುಟುಂಬ?


ಅಂದಹಾಗೆ ಅತ್ಯಂತ ಐಷಾರಾಮಿ ಜೀವನ ಸಾಗಿಸುತ್ತಿರುವ ಆ ಕುಟುಂಬ  ‘ಅಬುಧಾಬಿಯ ರಾಜಮನೆತನ‘. ಇದನ್ನು ಅಲ್‌-ನಯನ್ ಕುಟುಂಬ ಎಂದೂ ಕೂಡಾ ಕರೆಯಲಾಗುತ್ತದೆ. ಸದ್ಯದ ಮಟ್ಟಿಗೆ ಜಗತ್ತಿನಲ್ಲಿ ಇವರೇ ಅತ್ಯಂತ ಐಶಾರಾಮಿ ಜೀವನ ಸಾಗಿಸುತ್ತಿರುವ ಕುಟುಂಬ. ಇವರು ವಾಸವಾಗಿರುವ ಅರಮನೆಯ ಅಂದಾಜು ಮೌಲ್ಯ 4000 ಕೋಟಿಯದ್ದಾಗಿದೆ. ಇನ್ನು 700 ಐಶಾರಾಮಿ ಕಾರುಗಳು, ಗಾಲ್ಫ್ ಆಡಬಹುದಾದ ದೊಡ್ಡದಾದ ವಿಹಾರ ನೌಕೆ, ಇನ್ನು ತಿರುಗಾಡಲು 8 ಖಾಸಗಿ ಜೆಟ್‌ಗಳು ಇವರ ಬಳಿ ಇದೆ.

ಜಗತ್ತಿನಾದ್ಯಂತ ಸಾವಿರಾರು ಕೋಟಿ ಹೂಡಿಕೆ


ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷ ಮತ್ತು ಮುಖ್ಯಸ್ಥ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಯಾನ್ ಅವರ ಕುಟುಂಬವು ಪ್ರಪಂಚದಾದ್ಯಂತ ಸಾವಿರಾರು ಹೂಡಿಕೆಗಳನ್ನು ಹೊಂದಿದೆ. ಅಲ್ಲದೇ, ಜಗತ್ತಿನಾದ್ಯಂತ ಸಾಕಷ್ಟು ಆಸ್ತಿಗಳನ್ನು ಈ ಕುಟುಂಬ ಖರೀದಿಸಿದೆ. ಪ್ಯಾರಿಸ್‌ನಲ್ಲಿರುವ ಚಟೌ ಡಿ ಬೈಲೊ ಮತ್ತು ಯುಕೆಯಲ್ಲಿನ ಅನೇಕ ಆಸ್ತಿಗಳ ಮಾಲೀಕತ್ವದ ಕಾರಣ ಶೇಖ್ ಖಲೀಫಾ ಅವರನ್ನು ಲಂಡನ್‌ನ ಜಮೀನುದಾರ ಎಂದು ಕರೆಯಲಾಗುತ್ತದೆ. ಈ ಕುಟುಂಬವು ಪ್ರಪಂಚದಾದ್ಯಂತ ಲೆಕ್ಕವಿಲ್ಲದಷ್ಟು ಹೂಡಿಕೆ ಮಾಡಿದೆ. ಇದು ಎಲೋನ್ ಮಸ್ಕ್ ಅವರ ಕಂಪನಿ ಸ್ಪೇಸ್‌ ಎಕ್ಸ್ ಮತ್ತು ರಿಹಾನ್ನಾ ಅವರ ಐಷಾರಾಮಿ ಕಂಪನಿ ಸ್ಯಾವೇಜ್ ಎಕ್ಸ್‌ನ ಹೆಸರುಗಳನ್ನು ಸಹ ಒಳಗೊಂಡಿದೆ.

ಇದನ್ನೂ ಓದಿ : ಅಂಬಾನಿ ಪುತ್ರನ ಮದುವೆ ಎಲ್ಲಿ ನಡೆಯುತ್ತೆ ಗೊತ್ತಾ…!! ಹೇಗಿದೆ ಅದ್ಧೂರಿ ತಯಾರಿ?

ರಾಯಲ್ ವಿಹಾರ ನೌಕೆ :


ರಾಯಲ್ ಫ್ಯಾಮಿಲಿ ಅಂದ್ರೆ ಕೇಳ್ಬೇಕಾ..! ಎಲ್ಲವೂ ರಾಯಲ್ ಆಗೇ ಇರುತ್ತದೆ. ಈ ಕುಟುಂಬ ಪ್ರಪಂಚದ ಅತಿದೊಡ್ಡ ವಿಹಾರ ನೌಕೆಯನ್ನು ಹೊಂದಿದೆ, ಅದರ ಮೇಲೆ ಗಾಲ್ಫ್ ಕೋರ್ಸ್ ಅನ್ನು ನಿರ್ಮಿಸಲಾಗಿದೆ. ನೀಲಿ ಸೂಪರ್‌ಯಾಚ್‌ನ ಉದ್ದವು ಸುಮಾರು 591 ಅಡಿಗಳು, ಇದರ ಬೆಲೆ ಸುಮಾರು 4,991 ಕೋಟಿ ರೂ. ಜೊತೆಗೆ ಹಲವು ಐಶಾರಾಮಿ ಕಾರುಗಳೂ ಇವೆ. ಬುಗಾಟಿ, ಫೆರಾರಿ, ಮೆಕ್ಲಾರೆನ್, ಮರ್ಸಿಡಿಸ್-ಬೆನ್ಜ್ ಮತ್ತು ಲಂಬೋರ್ಘಿನಿ ಸೇರಿದಂತೆ ಹಲವು ಕಾರುಗಳಿವೆ.

Continue Reading

LATEST NEWS

ಕೇರಳದಲ್ಲಿ ಬಹಿರಂಗವಾಗಿ ಕಾಣಿಸಿದ ನಕ್ಸಲರ ತಂಡ; ಚುನಾವಣೆ ಬಹಿಷ್ಕಾರಕ್ಕೆ ಕರೆ

Published

on

ಕೇರಳ : ವಯನಾಡು ಜಿಲ್ಲೆಯ ಕಂಬಮಲೆ ಅರಣ್ಯ ಹಾಗೂ ಮಕ್ಕಿಮಲೆ ಅರಣ್ಯದಲ್ಲಿ ನಕ್ಸಲರು ಇದ್ದಾರೆ ಅನ್ನೋ ಅನುಮಾನ ಬಲವಾಗಿತ್ತು. ಹೀಗಾಗಿ ಕೇರಳದ ನಕ್ಸಲ್ ನಿಗ್ರಹ ತಂಡ ನಿರಂತರ ಕೂಂಬಿಂಗ್ ನಡೆಸಿತ್ತು. ಆದ್ರೆ, ನಕ್ಸಲರ ಸುಳಿವು ಪತ್ತೆಯಾಗದ ಕಾರಣ ಕೂಂಬಿಂಗ್ ನಿಲ್ಲಿಸಲಾಗಿತ್ತು. ಆದ್ರೆ, ಇದೀಗ ಲೋಕಸಭಾ ಚುನಾವಣೆ ವೇಳೆ ಮತ್ತೆ ನಕ್ಸಲರು ಗ್ರಾಮದಲ್ಲಿ ಕಾಣಿಸಿಕೊಂಡಿದ್ದಾರೆ.


ಚುನಾವಣೆ ಬಹಿಷ್ಕರಿಸಲು ಸೂಚನೆ :

ಮಾವೋವಿಸ್ಟ್ ಜಿಂದಾಬಾದ್ ಎಂಬ ಘೋಷಣೆ ಕೂಗಿ ಗ್ರಾಮಕ್ಕೆ ಎಂಟ್ರಿ ಕೊಟ್ಟು ನಾಲ್ವರ ತಂಡ ಚುನಾವಣೆಗೆ ಬಹಿಷ್ಕಾರ ಮಾಡುವಂತೆ ಕರೆ ನೀಡಿದ್ದಾರೆ. ಗ್ರಾಮಸ್ಥರ ಜೊತೆ ಮಾತನಾಡಿ ಕಳೆದ ನಲುವತ್ತು ವರ್ಷದಿಂದ ಕಂಬಮಲೆ ಅರಣ್ಯ ತಪ್ಪಲಿನ ಜನರ ಸಮಸ್ಯೆಯನ್ನು ಸರ್ಕಾರ ಗಮನಿಸಿಲ್ಲ. ಇಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕರ ಕಷ್ಟ ಸರ್ಕಾರ ಅರ್ಥ ಮಾಡಿಕೊಂಡಿಲ್ಲ. ಹೀಗಾಗಿ ಎಲ್ಲರೂ ಚುನಾವಣೆ ಬಹಿಷ್ಕಾರ ಮಾಡಿ ಎಂದು ಕರೆ ನೀಡಿದ್ದಾರೆ.

ಈ ತಂಡದಲ್ಲಿ ಕೇರಳ ರಾಜ್ಯಕ್ಕೆ ಬಹಳಷ್ಟು ವರ್ಷಗಳಿಂದ ತಲೆ ಮರೆಸಿಕೊಂಡಿರುವ ನಕ್ಸಲರು ಇದ್ದರು ಅನ್ನೋ ಮಾಹಿತಿಯನ್ನು ಸ್ಥಳೀಯರು ನೀಡಿದ್ದಾರೆ. ಕಂಬಮಲೆ ಎಂಬ ಪ್ರದೇಶದಲ್ಲಿ ಟೀ ಎಸ್ಟೇಟ್ ಇದ್ದು, ಇಲ್ಲಿನ ಕೂಲಿ ಕಾರ್ಮಿಕರ ಜೊತೆ ನಕ್ಸಲರು ಮಾತುಕತೆ ನಡಿಸಿದ ವಿಡಿಯೋ ಈಗ ಪೊಲೀಸರಿಗೆ ಲಭ್ಯವಾಗಿದೆ.

ಇದನ್ನೂ ಓದಿ : ಖತರ್ನಾಕ್ ಕಳ್ಳನನ್ನು ಬಂಧಿಸಿದ ಕೋಟ ಪೊಲೀಸರು; ‘ನನ್ನ ಬಗ್ಗೆ ಮಾಹಿತಿ ಬೇಕಾದ್ರೆ ಯೂಟ್ಯೂಬ್ ನೋಡಿ’ ಎಂದ ಖದೀಮ!

ವಿಡಿಯೋ ಮಾಡುತ್ತಿರುವುದು ಗಮನಕ್ಕೆ ಬಂದರೂ ಏನೂ ಮಾತನಾಡದೆ ಶಸಸ್ತ್ರರಾಗಿದ್ದ ನಕ್ಸಲರು ಮಕ್ಕಿಮಲೆ ಕಾಡಿನೊಳಗೆ ಹೋಗಿ ಕಣ್ಮರೆ ಆಗಿದ್ದಾರೆ.

 

Continue Reading

bangalore

ರಾಜ್ಯದ ಎಂಟು ಜಿಲ್ಲೆಗಳಲ್ಲಿ ಮಳೆಯಾಗಲಿದೆ: ಹವಾಮಾನ ಇಲಾಖೆ ಮುನ್ಸೂಚನೆ

Published

on

ಬೆಂಗಳೂರು : ಬಿಸಿಲಿನ ಉರಿಗೆ ಜನರು ಬೆಂದು ಹೋಗಿದ್ದಾರೆ. ವರುಣ ಕೃಪೆ ತೋರಯ್ಯ ಎಂದು ಬೇಡಿಕೊಳ್ಳುತ್ತಿದ್ದಾರೆ. ಈ ನಡುವೆ ಅಲ್ಲಲ್ಲಿ ಮಳೆಯಾಗಿದ್ರೂ ಸೂರ್ಯ ತಾಪವೇನೂ ಕಮ್ಮಿಯಾಗಿಲ್ಲ. ಇದೀಗ 8 ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

heavy rain
ಎಲ್ಲೆಲ್ಲಿ ಮಳೆ ?
ರಾಜ್ಯದ ಜನತೆ ಮಳೆರಾಯನಿಗಾಗಿ ಕಾಯುತ್ತಿದ್ದಾರೆ. ಹವಾಮಾನ ಇಲಾಖೆ ಕೆಲವು ಜಿಲ್ಲೆಗಳಿಗೆ ಶುಭ ಸುದ್ದಿ ನೀಡಿದೆ. ಏಪ್ರಿಲ್ 24ರಂದು ಬಾಗಲಕೋಟೆ, ಬೆಳಗಾವಿ, ಬೀದರ್, ಮೈಸೂರು, ಕೊಡಗು, ಹಾಸನ ಸೇರಿ 8 ಜಿಲ್ಲೆಗಳಲ್ಲಿ ಕೆಲವೆಡೆ ಮಳೆ ಬೀಳಬಹುದು ಎಂದು ಹೇಳಿದೆ.

ತಾಪಮಾನ ಹೆಚ್ಚಳ :
ಭಾರತೀಯ ಹವಾಮಾನ ಇಲಾಖೆ ದೇಶದ ಹಲವು ಭಾಗಗಳಲ್ಲಿ ಬಿಸಿಲಿನ ತಾಪ ತೀವ್ರವಾಗಲಿದೆ ಎಂದು ಕೂಡ ಮಾಹಿತಿ ನಡಿದೆ. ಅದರಲ್ಲೂ ಪೂರ್ವ ಮತ್ತು ದಕ್ಷಿಣ ಭಾರತದ ಹೆಚ್ಚಿನ ಭಾಗಗಳಲ್ಲಿ ಶಾಖದ ಅಲೆಗಳು ಹೆಚ್ಚಲಿವೆ ಎಂದಿದೆ. ಏಪ್ರಿಲ್ 25 ರ ವರೆಗೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ. ಏಪ್ರಿಲ್ 27 ರ ವರೆಗೆ ಈ ಪ್ರದೇಶಗಳಲ್ಲಿ ಉಷ್ಣಾಂಶ 2 ರಿಂದ 2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ : ಖತರ್ನಾಕ್ ಕಳ್ಳನನ್ನು ಬಂಧಿಸಿದ ಕೋಟ ಪೊಲೀಸರು; ‘ನನ್ನ ಬಗ್ಗೆ ಮಾಹಿತಿ ಬೇಕಾದ್ರೆ ಯೂಟ್ಯೂಬ್ ನೋಡಿ’ ಎಂದ ಖದೀಮ!

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಏಪ್ರಿಲ್ 6 ರಂದು ರಾಜಧಾನಿಯಲ್ಲಿ ಗರಿಷ್ಠ 37.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಎಂಟು ವರ್ಷಗಳಲ್ಲಿ ಅತಿ ಹೆಚ್ಚು ಎಂದು ವರದಿಯಾಗಿದೆ.

ಮುಂದಿನವಾರ ನಗರದಲ್ಲಿ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

Continue Reading

LATEST NEWS

Trending