Connect with us

BANTWAL

ಒಡಿಯೂರು ತುಳು ನಾಟಕೋತ್ಸವ ಸಂಪನ್ನ-ಫಲಿತಾಂಶ ಪ್ರಕಟ

Published

on

ಬಂಟ್ವಾಳ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾರಂಗಣದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ದಶಂಬರ 1ರಿಂದ 7ರ ತನಕ ಶ್ರೀದತ್ತ ಜಯಂತಿ ಮಹೋತ್ಸವ – ಶ್ರೀದತ್ತ ಮಹಾಯಾಗ ಸಪ್ತಾಹ – ಹರಿಕಥಾ ಸತ್ಸಂಗ ಸಪ್ತಾಹ, ಒಡಿಯೂರು ತುಳು ನಾಟಕೋತ್ಸವ-ತುಳು ನಾಟಕ ಸ್ಪರ್ಧೆಯು ಸಂಪನ್ನಗೊಂಡಿತು. ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳ 16 ನಾಟಕ ತಂಡಗಳು ಭಾಗವಹಿಸಿ ಪ್ರದರ್ಶಿಸಿದ ನಾಟಕಗಳ ಫಲಿತಾಂಶ ಕೂಡಾ ಪ್ರಕಟವಾಗಿದೆ.

ಪ್ರೊ. ಅಮೃತ ಸೋಮೇಶ್ವರ ರಚಿಸಿದ, ವಿದ್ದು ಉಚ್ಚಿಲ್ ನಿರ್ದೇಶನದ, ಜರ್ನಿ ಥೇಟರ್ (ರಿ.) ಮಂಗಳೂರು ಇವರು ಪ್ರಸ್ತುತ ಪಡಿಸಿದ ‘ಗೋಂದೊಳು’ ಪ್ರಥಮ ಬಹುಮಾನ, ನವೀನ್ ಸಾಲ್ಯಾನ್ ಪಿತ್ರೋಡಿ ರಚಿಸಿ, ಪ್ರಭಾಕರ ಆಚಾರ್ಯ ಮೂಡುಬೆಳ್ಳೆ ನಿರ್ದೇಶಿಸಿದ, ಕಲಾಚಾವಡಿ (ರಿ.), ಅಂಬಲಪಾಡಿ ಇವರು ಪ್ರದರ್ಶಿಸಿದ ನಾಟಕ ‘ಮೋಕೆದ ಮದಿಮಾಲ್’ ದ್ವಿತೀಯ ಬಹುಮಾನ ಹಾಗೂ ಬಾಲಕೃಷ್ಣ ಶಿಬಾರ್ಲ ರಚಿಸಿ, ದಿವಾಕರ ಕಟೀಲು ನಿರ್ದೇಶಿಸಿದ, ಸುಮನಸ ಕೊಡವೂರು ಇವರು ಪ್ರದರ್ಶನಗೈದ ನಾಟಕ ‘ಕಾಪ’ ತೃತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿದೆ.


ಉತ್ತಮ ನಿರ್ದೇಶನ: ಪ್ರಥಮ : ವಿದ್ದು ಉಚ್ಚಿಲ್ – ನಾಟಕ: ಗೋಂದೋಳು (ಜರ್ನಿ ಥೇಟರ್ (ರಿ.), ಮಂಗಳೂರು)
ದ್ವಿತೀಯ: ದಿವಾಕರ ಕಟೀಲು – ನಾಟಕ: ಕಾಪ – (ಸುಮನಸ ಕೊಡವೂರು)
ತೃತೀಯ: ರಮೇಶ್ ಆಚಾರ್ಯ ನೂರಾಲ್‍ಬೆಟ್ಟು – ನಾಟಕ: ಬಾಕಿಲ್ ದೆಪ್ಪೊಡ್ಚಿ (ಘಳಿಗೆ ಕಾಲವಿದೆರ್, ನೂರಾಲ್‍ಬೆಟ್ಟು)

ಕಥಾನಾಯಕ:
ಪ್ರಥಮ : ಶರತ್ ಶೆಟ್ಟಿ ಕೆಮ್ತೂರು (ಚಂದ್ರಶೇಖರ)- ನಾಟಕ: ಮೋಕೆದ ಮದಿಮಾಲ್ (ಕಲಾಚಾವಡಿ (ರಿ.) ಅಂಬಲಪಾಡಿ)
ದ್ವಿತೀಯ: ಅಕ್ಷತ್ ಅಮೀನ್(ಗಿರಿ) – ನಾಟಕ: ಕಾಪ – (ಸುಮನಸ ಕೊಡವೂರು)
ತೃತೀಯ: ಯುವ ಶೆಟ್ಟಿ (ರಾಜ್)- ನಾಟಕ: ನಾಲಯಿ ಮಗುರುಜಿ (ಕಲಾಶ್ರೀ ಬೆದ್ರ ಕುಸಾಲ್ದ ಕಲಾವಿದೆರ್)

ಕಥಾನಾಯಕಿ
ಪ್ರಥಮ : ಸತ್ಯಾ ಜೀವನ್ ಸೋಮೇಶ್ವರ(ದೇಬೆ)- ನಾಟಕ: ಗೋಂದೋಳು (ಜರ್ನಿ ಥೇಟರ್ (ರಿ.), ಮಂಗಳೂರು
ದ್ವಿತೀಯ: ಅಶ್ವಿನಿ ಸುವರ್ಣ(ಜಾಹ್ನವಿ) – ನಾಟಕ: ನಾಲಯಿ ಮಗುರುಜಿ – (ಕಲಾಶ್ರೀ ಬೆದ್ರ ಕುಸಾಲ್ದ ಕಲಾವಿದೆರ್)
ತೃತೀಯ: ಶ್ರಾವ್ಯ ಶೆಟ್ಟಿ ಬನ್ನಂಜೆ(ಸಪ್ನ)- ನಾಟಕ: ಮೋಕೆದ ಮದಿಮಾಲ್ (ಕಲಾಚಾವಡಿ (ರಿ.) ಅಂಬಲಪಾಡಿ)

ಹಾಸ್ಯನಟ
ಪ್ರಥಮ : ಪ್ರಭಾಕರ ಆಚಾರ್ಯ(ಗಂಗು) – ನಾಟಕ: ಮೋಕೆದ ಮದಿಮಾಲ್ (ಕಲಾಚಾವಡಿ (ರಿ.) ಅಂಬಲಪಾಡಿ)
ದ್ವಿತೀಯ: ರಮೇಶ್ ಆಚಾರ್ಯ(ಪಾಂಡು)- ನಾಟಕ: ನಾಟಕ: ಬಾಕಿಲ್ ದೆಪ್ಪೊಡ್ಚಿ (ಘಳಿಗೆ ಕಾಲವಿದೆರ್, ನೂರಾಲ್‍ಬೆಟ್ಟು)
ತೃತೀಯ: ದಕ್ಷತ್ ಕಾಣಿಚ್ಚಾರು(ಪಾಂಡುರಂಗ)-ನಾಟಕ:ಸತ್ಯ ಗೊತ್ತಾನಗ (ಶ್ರೀವಾರಾಹಿ ಯುವಕ ಸಂಘ, ಉಡಲ್‍ಕಲಾವಿದೆರ್, ಕನ್ಯಾನ)

ಖಳನಾಯಕ
ಪ್ರಥಮ : ಸುನಿಲ್ ಪಲ್ಲಮಜಲು(ಪೆರ್ಗಡೆ) – ನಾಟಕ: ಗೋಂದೋಳು (ಜರ್ನಿ ಥೇಟರ್ (ರಿ.), ಮಂಗಳೂರು
ದ್ವಿತೀಯ: ಪ್ರತೀಕ್ ಸಾಲ್ಯಾನ್(ಶಂಕರ) – ನಾಟಕ: ನಾಲಯಿ ಮಗುರುಜಿ – (ಕಲಾಶ್ರೀ ಬೆದ್ರ ಕುಸಾಲ್ದ ಕಲಾವಿದೆರ್)
ತೃತೀಯ:ನಝೀರ್ ಕೊಣಾಜೆ(ಫೈನಾನ್ಸ್ ರಾಜ)-ನಾಟಕ:ಕಟ್ಟೆದ ಗುಳಿಗೆ ಕೈಬುಡಯೆ(ಮಂಗಳಾ ಕಲಾವಿದೆರ್, ಮಂಗಳಾದೇವಿ)

ಪೋಷಕ ನಟ
ಪ್ರಥಮ : ಕೇಶವ ಆಚಾರ್ಯ ನೆಲ್ಲಿಕಾರು(ದೇಜಪ್ಪ ಮಾಸ್ಟ್ರು)-ನಾಟಕ: ಬಾಕಿಲ್ ದೆಪ್ಪೊಡ್ಚಿ (ಘಳಿಗೆ ಕಾಲವಿದೆರ್,ನೂರಾಲ್‍ಬೆಟ್ಟು)
ದ್ವಿತೀಯ: ಅರುಣ್ ಶೆಟ್ಟಿ ಜಪ್ಪು(ಕೊರಗಪ್ಪ)- ನಾಟಕ: ಕಟ್ಟೆದ ಗುಳಿಗೆ ಕೈಬುಡಯೆ (ಮಂಗಳಾ ಕಲಾವಿದೆರ್, ಮಂಗಳಾದೇವಿ)
ತೃತೀಯ: ನಿತೇಶ್ ಕೊರಿಯಾ(ಕರಿಯ) – ನಾಟಕ: ಕಾಪ – (ಸುಮನಸ ಕೊಡವೂರು)

ಪೋಷಕ ನಟಿ
ಪ್ರಥಮ : ಸುಗಂಧಿ ಉಮೇಶ್ ಕಲ್ಮಾಡಿ(ರಾಮಕ್ಕ)-ನಾಟಕ: ಪಟ್ಟೆ ತತ್ತ್‍ಂಡ (ನಮತುಳುವೆರ್ ಕಲಾಸಂಘಟನೆ, ಮುದ್ರಾಡಿ)
ದ್ವಿತೀಯ: ಹರಿಣಿ ಪ್ರಕಾಶ್ ಪಕಳ(ರೇಖಾ)-ನಾಟಕ:ಸತ್ಯ ಗೊತ್ತಾನಗ (ಶ್ರೀವಾರಾಹಿ ಯುವಕ ಸಂಘ, ಉಡಲ್‍ಕಲಾವಿದೆರ್, ಕನ್ಯಾನ)

ಸಂಗೀತ:
ಪ್ರಥಮ : ಮೇಘನಾ ಕುಂದಾಪುರ – ನಾಟಕ: ಗೋಂದೋಳು (ಜರ್ನಿ ಥೇಟರ್ (ರಿ.), ಮಂಗಳೂರು)
ದ್ವಿತೀಯ: ತಂಗವೇಲು ಕೊಯಿಲ – ನಾಟಕ: ಬಾಕಿಲ್ ದೆಪ್ಪೊಡ್ಚಿ (ಘಳಿಗೆ ಕಾಲವಿದೆರ್, ನೂರಾಲ್‍ಬೆಟ್ಟು)
ತೃತೀಯ: ದಿವಾಕರ ಕಟೀಲು – ನಾಟಕ: ಕಾಪ – (ಸುಮನಸ ಕೊಡವೂರು)

ರಂಗವಿನ್ಯಾಸ:
ಪಟ್ಟೆ ತತ್ತ್‍ಂಡ (ನಮತುಳುವೆರ್ ಕಲಾ ಸಂಘಟನೆ, ಮುದ್ರಾಡಿ)

ಶಿಸ್ತುಬದ್ಧ ತಂಡ:
ಶ್ರೀ ವಾರಾಹಿ ಯುವಕ ಸಂಘ, ಉಡಲ್ ಕಲಾವಿದೆರ್, ಕನ್ಯಾನ
ಪ್ರತಿ ನಾಟಕದ ಶ್ರೇಷ್ಠ ನಟ:
ದಿನೇಶ್ ಕುಂಪಲ (ದೇವೇಂದ್ರ)- ನಾಟಕ: ಅಹಲ್ಯೆ – (ಸಂಗಮ ಕಲಾವಿದೆರ್, ಮಂಗಳೂರು)
ರವಿ
ಎಂ.ಎಸ್.ವರ್ಕಾಡಿ(ರಂಜಿತ್)-ನಾಟಕ: ಸತ್ಯ ಗೊತ್ತಾನಗ (ಶ್ರೀವಾರಾಹಿ ಯುವಕ ಸಂಘ, ಉಡಲ್‍ಕಲಾವಿದೆರ್, ಕನ್ಯಾನ)
ಹರ್ಷಿತಾ ಜೋಗಿ ಮಿತ್ತನಡ್ಕ (ಸ್ವಾತಿ)-ನಾಟಕ: ಅಂಚಾಯಿನೆಟ್ ಇಂಚಾಂಡ್ (ಸಂತೋಷ್ ಕಲಾವಿದೆರ್, ಪಾವಳ, ವರ್ಕಾಡಿ)
ಶ್ರೀನಿವಾಸ ಶೆಟ್ಟಿ ವಿಟ್ಲ (ಸಾಯಿಬ)- ನಾಟಕ: ಅಮರ್ ಸಿರಿಕುಲು – (ಬಂಟವಾಳದ ಕಲಾವಿದೆರ್)
ರಾಜು ಸಾಲ್ಯಾನ್ ಕೋಜಕುಳಿ (ಗೋಪಾಲ)- ನಾಟಕ: ಮೋಕೆದ ಮದಿಮಾಲ್ – (ರಂಗಚಾವಡಿ (ರಿ.), ಉಡುಪಿ)
ರೋಹಿತ್ ಶೆಟ್ಟಿ(ಡಾ.ಮಧು) – ನಾಟಕ: ಬಯ್ಯಮಲ್ಲಿಗೆ – (ಕೂಡ್ದಿ ಕಲಾವಿದರು, ಪೆರ್ಡೂರು)
ನಮಿತ ಅಳಪೆ(ನಮಿತ)- ನಾಟಕ: ಕಟ್ಟೆದ ಗುಳಿಗೆ ಕೈ ಬುಡಯೆ – (ಮಂಗಳ ಕಲಾವಿದೆರ್, ಮಂಗಳಾದೇವಿ)
ಸತೀಶ್ ಶೆಣೈ(ಅಲ್ಲಮಪ್ರಭು)- ನಾಟಕ: ಅಕ್ಕಮಹಾದೇವಿ – (ಸರಕಾರಿ ನೌಕರರ ಕಲಾ ಮತ್ತು ಸಾಂಸ್ಕøತಿಕ ಸಂಘ, ಮಂಗಳೂರು)
ರಾಮಚಂದ್ರ ಶೆಟ್ಟಿಗಾರ್ ಸಾಣೂರು(ಆದಿಶೇಷ) – ನಾಟಕ: ಬಾಕಿಲ್ ದೆಪ್ಪೊಡ್ಚಿ – (ಘಳಿಗೆ ಕಾಲವಿದರು, ನೂರಾಲ್‍ಬೆಟ್ಟು)
ಚಂದ್ರಿಕಾ ವಿ.ಕೋಟ್ಯಾನ್(ದುಗ್ಗಣ್ಣ ಕೊಂಡೆ) – ನಾಟಕ: ದೇವು ಪೂಂಜೆ – (ಶ್ರೀ ಶಾರದಾ ಮಹೋತ್ಸವ ನಾಡಹಬ್ಬ ಸಮಿತಿ, ಕೈರಂಗಳ)

ವಿಕಾಸ್(ರಾಮೇಗೌಡ)- ನಾಟಕ: ಅಮರಸಂಗ್ರಾಮ – (ಕುಕ್ಕೆಶ್ರೀ ಸರಕಾರಿ ಪದವಿಪೂರ್ವ ಕಾಲೇಜು, ಸುಬ್ರಹ್ಮಣ್ಯ)

ಸಾಯಿನಾರಾಯಣ ಕಲ್ಮಡ್ಕ(ರೈಟರ್) – ನಾಟಕ: ಚೋಮನದುಡಿ – (ಕಲಾಗ್ರಾಮ ಕಲ್ಮಡ್ಕ)

ಹರೀಶ್ ನೀಲಿಪಾಲ್(ಕಾಂತು) – ನಾಟಕ: ಗೋಂದೊಳು – (ಜರ್ನಿ ಥೇಟರ್ (ರಿ.), ಮಂಗಳೂರು)

ಪ್ರವೀಣ್‍ಚಂದ್ರ ತೋನ್ಸೆ(ಬಾಣೆರೆ ಅಣ್ಣೆರ್)- ನಾಟಕ: ಕಾಪ – (ಸುಮನಸ ಕೊಡವೂರು)

ಸುಕುಮಾರ ಮೋಹನ್(ರಂಗಣ್ಣ)- ನಾಟಕ: ಪಟ್ಟೆ ತತ್ತ್‍ಂಡ – (ನಮತುಳುವೆರ್ ಕಲಾಸಂಘಟನೆ, ಮುದ್ರಾಡಿ)
ಸಂದೀಪ್ ಶೆಟ್ಟಿ ರಾಯಿ(ಮೋಹನ)- ನಾಟಕ: ನಾಲಯಿ ಮಗುರುಜಿ – (ಕಲಾಶ್ರೀ ಬೆದ್ರ ಕುಸಾಲ್ದ ಕಲಾವಿದೆರ್)

ಮೆಚ್ಚುಗೆ ಪಡೆದ ಪಾತ್ರಗಳು: ಮಹಿಮಾ (ಅಹಲ್ಯೆ) – ನಾಟಕ: ಅಹಲ್ಯೆ – (ಸಂಗಮ ಕಲಾವಿದೆರ್, ಮಂಗಳೂರು)
ಹೊನ್ನಪ್ಪ ಗೌಡ(ಚೋಮ) – ನಾಟಕ: ಚೋಮನದುಡಿ – (ಕಲಾಗ್ರಾಮ ಕಲ್ಮಡ್ಕ)
ನಿತಿನ್ ಹೊಸಂಗಡಿ (ಶರತ್) – ನಾಟಕ:ಅಂಚಾಯಿನಟ್ ಇಂಚಾಂಡ್-(ಸಂತೋಷ್ ಕಲಾವಿದೆರ್, ಪಾವಳ, ವರ್ಕಾಡಿ)
ಸಂತೋಷ್ (ವಾಮನ ಬಾಳಿಗ) -ನಾಟಕ:ಅಮರಸಂಗ್ರಾಮ-(ಕುಕ್ಕೆಶ್ರೀ ಸರಕಾರಿ ಪದವಿಪೂರ್ವ ಕಾಲೇಜು, ಸುಬ್ರಹ್ಮಣ್ಯ)

ಪ್ರವೀಣ್ ಮರ್ಕಮೆ (ಮಾರಪ್ಪ) – ನಾಟಕ: ನಾಲಯಿ ಮಗುರುಜಿ – (ಕಲಾಶ್ರೀ ಬೆದ್ರ ಕುಸಾಲ್ದ ಕಲಾವಿದೆರ್
ರಶ್ಮಿತಾ (ಶಾಂತಿ) – ನಾಟಕ: ಬಯ್ಯಮಲ್ಲಿಗೆ – (ಕೂಡ್ದಿ ಕಲಾವಿದೆರ್, ಪೆರ್ಡೂರು)
ಅಕ್ಷತಾ ಮುದ್ರಾಡಿ (ಅಮ್ಮು) – ನಾಟಕ: ಪಟ್ಟೆ ತತ್ತ್‍ಂಡ – (ನಮತುಳುವೆರ್ ಕಲಾಸಂಘಟನೆ, ಮುದ್ರಾಡಿ)

ಅತ್ಯುತ್ತಮ ನೃತ್ಯ:
ಸುರಕ್ಷಾ ಶೆಟ್ಟಿ & ಸುದೀಕ್ಷಾ ಶೆಟ್ಟಿ – ನಾಟಕ: ಅಮರ್ ಸಿರಿಕುಲು – (ಬಂಟವಾಳದ ಕಲಾವಿದೆರ್)

ಶ್ರೀ ಮಹಾಬಲೇಶ್ವರ ಹೆಬ್ಬಾರ್ ಮೊಡಂಕಾಪು, ಶ್ರೀ ಮಂಜು ವಿಟ್ಲ, ಶ್ರೀ ಮಧು ಬಂಗೇರ ಕಲ್ಲಡ್ಕ ಇವರು ತೀರ್ಪುಗಾರರಾಗಿ ಸಹಕರಿಸಿದರು.

 

BANTWAL

ವಿಟ್ಲ: ವಿದ್ಯಾರ್ಥಿನಿಗೆ ಕಿರುಕುಳ-ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

Published

on

ಬಂಟ್ವಾಳ: ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ವಿಚಾರದಲ್ಲಿ ಪೆರುವಾಯಿ ಮೂಲದ ಯುವಕನ ವಿರುದ್ಧ ವಿಟ್ಲ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ಕೇಪು ಗ್ರಾಮದ 9ನೇ ತರಗತಿ ವಿದ್ಯಾರ್ಥಿಯೊಬ್ಬಳನ್ನು ಯುವಕ ಕೆಲವು ದಿನಗಳಿಂದ ಹಿಂಬಾಲಿಸುತ್ತಿದ್ದು, ಮೊಬೈಲ್ ನಂಬರ್ ನೀಡುವಂತೆ ಕಿರುಕುಳ ನೀಡಿದ್ದಾನೆ. ಶಾಲೆ ಸಮೀಪ ಬಂದು ಬೈಕ್ ನಲ್ಲಿ ಕೂರುವಂತೆ ಹೇಳಿದ್ದಾನೆ.

ಈ ಎಲ್ಲಾ ವಿಚಾರವನ್ನು ಬೇರೆ ಕಡೆ ಹೇಳಬಾರದೆಂದು ಬೆದರಿಸುವ ಕಾರ್ಯ ಮಾಡಿದ್ದಾನೆ. ಇದರಿಂದ ಭಯಗೊಂಡ ಬಾಲಕಿ ಶಾಲೆಯ ಶಿಕ್ಷಕರಲ್ಲಿ ತಿಳಿಸಿದ್ದು, ಅವರು ಪೋಷಕರಿಗೆ ಮಾಹಿತಿ ನೀಡಿ, ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Continue Reading

BANTWAL

Bantwala: ಹೃದಯ ಸಂಬಂಧಿ ಖಾಯಿಲೆಯಿಂದ 4 ವರ್ಷದ ಬಾಲಕಿ ನಿಧನ..!

Published

on

ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ 4 ವರ್ಷದ ಪುಟ್ಟ ಬಾಲಕಿಯೋರ್ವಳು ಮೃತಪಟ್ಟ ಘಟನೆ ಸೆ.24ರಂದು ಬಂಟ್ವಾಳದ ಮಿತ್ತೂರಿನಲ್ಲಿ ನಡೆದಿದೆ.

ಬಂಟ್ವಾಳ: ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ 4 ವರ್ಷದ ಪುಟ್ಟ ಬಾಲಕಿಯೋರ್ವಳು ಮೃತಪಟ್ಟ ಘಟನೆ ಸೆ.24ರಂದು ನಡೆದಿದೆ.

ಮೃತ ಬಾಲಕಿಯನ್ನು ಬಂಟ್ವಾಳ ಮಿತ್ತೂರು ಸಮೀಪದ ಪಾಟ್ರಕೋಡಿ ನಿವಾಸಿ ಇಬ್ರಾಹಿಂ ಬಾತಿಷಾ ರವರ ಪುತ್ರಿ ಜಮೀಲಾ ಸನಿಕ (4) ಎಂದು ತಿಳಿದು ಬಂದಿದೆ.

ಜಮೀಲಾ  ಬಾಲಕಿ ಪುತ್ತೂರಿನ ಮುರದಲ್ಲಿರುವ ಅಲ್ ಬಿರ್ರ್ ಸ್ಕೂಲ್ ನ ಎಲ್.ಕೆ.ಜಿ. ಯಲ್ಲಿ ಕಲಿಯುತ್ತಿದ್ದಳು.

ಈಕೆ ಅನಾರೋಗ್ಯದಿಂದ ಇದ್ದು, ಬೆಂಗಳೂರಿನ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

Continue Reading

BANTWAL

Bantwala: ಓವರ್ ಟೇಕ್ ಮಾಡಲು ಹೋದ ಟೆಂಪೋ ರಿಕ್ಷಾ – ಕರೆಂಟ್ ಕಂಬಕ್ಕೆ ಗುದ್ದಿದ ಬಸ್..!

Published

on

ಬಂಟ್ವಾಳ: ಸರಕಾರಿ ಬಸ್ ಒಂದು ಓವರ್ ಟೇಕ್ ಮಾಡುತ್ತಿದ್ದ ಟೆಂಪೋ ರಿಕ್ಷಾವನ್ನು ತಪ್ಪಿಸಲು ಹೋಗಿ ಕರೆಂಟ್ ಕಂಬಕ್ಕೆ ಗುದ್ದಿದ ಘಟನೆ ಬಂಟ್ವಾಳದ ಸಜಿಪಮೂಡ ಗ್ರಾಮದ ಕಂದೂರು ಎಂಬಲ್ಲಿ ನಡೆದಿದೆ.

ಮೆಲ್ಕಾರಿನಿಂದ ಬರುತ್ತಿದ್ದ ಇಲ್ಯಾಸ್ ಟೆಂಪೋ ರಿಕ್ಷಾ ಚಾಲಕನು ಕಂದೂರಿನ ಬಜಾರ್ ಅಡಿಟೋರಿಯಮ್ ಬಳಿ ಬರುತ್ತಿದ್ದ ಆಕ್ಟಿವಾ ಗಾಡಿಯೊಂದನ್ನು ಓವರ್ ಟೇಕ್ ಮಾಡುತ್ತಿದ್ದ.

ಈ ವೇಳೆ ಮುಡಿಪು ಮಾರ್ಗವಾಗಿ ಬರುತ್ತಿದ್ದ ಕಾಸರಗೋಡು ಬಿ.ಸಿ.ರೋಡ್ ಬಸ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಬಸ್ ಗುದ್ದಿದ್ದ ರಭಸಕ್ಕೆ ಕರೆಂಟ್ ಕಂಬ ತುಂಡಾಗಿದೆ.

ಬಸ್ಸಿನಲ್ಲಿದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣಾ ಪೋಲಿಸರು ಆಗಮಿಸಿ, ಪರಿಶೀಲನೆ ನಡೆಸಿದರು.

Continue Reading

LATEST NEWS

Trending