BANTWAL
ಒಡಿಯೂರು ತುಳು ನಾಟಕೋತ್ಸವ ಸಂಪನ್ನ-ಫಲಿತಾಂಶ ಪ್ರಕಟ
Published
2 years agoon
By
Adminಬಂಟ್ವಾಳ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾರಂಗಣದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ದಶಂಬರ 1ರಿಂದ 7ರ ತನಕ ಶ್ರೀದತ್ತ ಜಯಂತಿ ಮಹೋತ್ಸವ – ಶ್ರೀದತ್ತ ಮಹಾಯಾಗ ಸಪ್ತಾಹ – ಹರಿಕಥಾ ಸತ್ಸಂಗ ಸಪ್ತಾಹ, ಒಡಿಯೂರು ತುಳು ನಾಟಕೋತ್ಸವ-ತುಳು ನಾಟಕ ಸ್ಪರ್ಧೆಯು ಸಂಪನ್ನಗೊಂಡಿತು. ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳ 16 ನಾಟಕ ತಂಡಗಳು ಭಾಗವಹಿಸಿ ಪ್ರದರ್ಶಿಸಿದ ನಾಟಕಗಳ ಫಲಿತಾಂಶ ಕೂಡಾ ಪ್ರಕಟವಾಗಿದೆ.
ಪ್ರೊ. ಅಮೃತ ಸೋಮೇಶ್ವರ ರಚಿಸಿದ, ವಿದ್ದು ಉಚ್ಚಿಲ್ ನಿರ್ದೇಶನದ, ಜರ್ನಿ ಥೇಟರ್ (ರಿ.) ಮಂಗಳೂರು ಇವರು ಪ್ರಸ್ತುತ ಪಡಿಸಿದ ‘ಗೋಂದೊಳು’ ಪ್ರಥಮ ಬಹುಮಾನ, ನವೀನ್ ಸಾಲ್ಯಾನ್ ಪಿತ್ರೋಡಿ ರಚಿಸಿ, ಪ್ರಭಾಕರ ಆಚಾರ್ಯ ಮೂಡುಬೆಳ್ಳೆ ನಿರ್ದೇಶಿಸಿದ, ಕಲಾಚಾವಡಿ (ರಿ.), ಅಂಬಲಪಾಡಿ ಇವರು ಪ್ರದರ್ಶಿಸಿದ ನಾಟಕ ‘ಮೋಕೆದ ಮದಿಮಾಲ್’ ದ್ವಿತೀಯ ಬಹುಮಾನ ಹಾಗೂ ಬಾಲಕೃಷ್ಣ ಶಿಬಾರ್ಲ ರಚಿಸಿ, ದಿವಾಕರ ಕಟೀಲು ನಿರ್ದೇಶಿಸಿದ, ಸುಮನಸ ಕೊಡವೂರು ಇವರು ಪ್ರದರ್ಶನಗೈದ ನಾಟಕ ‘ಕಾಪ’ ತೃತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿದೆ.
ಉತ್ತಮ ನಿರ್ದೇಶನ: ಪ್ರಥಮ : ವಿದ್ದು ಉಚ್ಚಿಲ್ – ನಾಟಕ: ಗೋಂದೋಳು (ಜರ್ನಿ ಥೇಟರ್ (ರಿ.), ಮಂಗಳೂರು)
ದ್ವಿತೀಯ: ದಿವಾಕರ ಕಟೀಲು – ನಾಟಕ: ಕಾಪ – (ಸುಮನಸ ಕೊಡವೂರು)
ತೃತೀಯ: ರಮೇಶ್ ಆಚಾರ್ಯ ನೂರಾಲ್‍ಬೆಟ್ಟು – ನಾಟಕ: ಬಾಕಿಲ್ ದೆಪ್ಪೊಡ್ಚಿ (ಘಳಿಗೆ ಕಾಲವಿದೆರ್, ನೂರಾಲ್‍ಬೆಟ್ಟು)
ಕಥಾನಾಯಕ:
ಪ್ರಥಮ : ಶರತ್ ಶೆಟ್ಟಿ ಕೆಮ್ತೂರು (ಚಂದ್ರಶೇಖರ)- ನಾಟಕ: ಮೋಕೆದ ಮದಿಮಾಲ್ (ಕಲಾಚಾವಡಿ (ರಿ.) ಅಂಬಲಪಾಡಿ)
ದ್ವಿತೀಯ: ಅಕ್ಷತ್ ಅಮೀನ್(ಗಿರಿ) – ನಾಟಕ: ಕಾಪ – (ಸುಮನಸ ಕೊಡವೂರು)
ತೃತೀಯ: ಯುವ ಶೆಟ್ಟಿ (ರಾಜ್)- ನಾಟಕ: ನಾಲಯಿ ಮಗುರುಜಿ (ಕಲಾಶ್ರೀ ಬೆದ್ರ ಕುಸಾಲ್ದ ಕಲಾವಿದೆರ್)
ಕಥಾನಾಯಕಿ
ಪ್ರಥಮ : ಸತ್ಯಾ ಜೀವನ್ ಸೋಮೇಶ್ವರ(ದೇಬೆ)- ನಾಟಕ: ಗೋಂದೋಳು (ಜರ್ನಿ ಥೇಟರ್ (ರಿ.), ಮಂಗಳೂರು
ದ್ವಿತೀಯ: ಅಶ್ವಿನಿ ಸುವರ್ಣ(ಜಾಹ್ನವಿ) – ನಾಟಕ: ನಾಲಯಿ ಮಗುರುಜಿ – (ಕಲಾಶ್ರೀ ಬೆದ್ರ ಕುಸಾಲ್ದ ಕಲಾವಿದೆರ್)
ತೃತೀಯ: ಶ್ರಾವ್ಯ ಶೆಟ್ಟಿ ಬನ್ನಂಜೆ(ಸಪ್ನ)- ನಾಟಕ: ಮೋಕೆದ ಮದಿಮಾಲ್ (ಕಲಾಚಾವಡಿ (ರಿ.) ಅಂಬಲಪಾಡಿ)
ಹಾಸ್ಯನಟ
ಪ್ರಥಮ : ಪ್ರಭಾಕರ ಆಚಾರ್ಯ(ಗಂಗು) – ನಾಟಕ: ಮೋಕೆದ ಮದಿಮಾಲ್ (ಕಲಾಚಾವಡಿ (ರಿ.) ಅಂಬಲಪಾಡಿ)
ದ್ವಿತೀಯ: ರಮೇಶ್ ಆಚಾರ್ಯ(ಪಾಂಡು)- ನಾಟಕ: ನಾಟಕ: ಬಾಕಿಲ್ ದೆಪ್ಪೊಡ್ಚಿ (ಘಳಿಗೆ ಕಾಲವಿದೆರ್, ನೂರಾಲ್‍ಬೆಟ್ಟು)
ತೃತೀಯ: ದಕ್ಷತ್ ಕಾಣಿಚ್ಚಾರು(ಪಾಂಡುರಂಗ)-ನಾಟಕ:ಸತ್ಯ ಗೊತ್ತಾನಗ (ಶ್ರೀವಾರಾಹಿ ಯುವಕ ಸಂಘ, ಉಡಲ್‍ಕಲಾವಿದೆರ್, ಕನ್ಯಾನ)
ಖಳನಾಯಕ
ಪ್ರಥಮ : ಸುನಿಲ್ ಪಲ್ಲಮಜಲು(ಪೆರ್ಗಡೆ) – ನಾಟಕ: ಗೋಂದೋಳು (ಜರ್ನಿ ಥೇಟರ್ (ರಿ.), ಮಂಗಳೂರು
ದ್ವಿತೀಯ: ಪ್ರತೀಕ್ ಸಾಲ್ಯಾನ್(ಶಂಕರ) – ನಾಟಕ: ನಾಲಯಿ ಮಗುರುಜಿ – (ಕಲಾಶ್ರೀ ಬೆದ್ರ ಕುಸಾಲ್ದ ಕಲಾವಿದೆರ್)
ತೃತೀಯ:ನಝೀರ್ ಕೊಣಾಜೆ(ಫೈನಾನ್ಸ್ ರಾಜ)-ನಾಟಕ:ಕಟ್ಟೆದ ಗುಳಿಗೆ ಕೈಬುಡಯೆ(ಮಂಗಳಾ ಕಲಾವಿದೆರ್, ಮಂಗಳಾದೇವಿ)
ಪೋಷಕ ನಟ
ಪ್ರಥಮ : ಕೇಶವ ಆಚಾರ್ಯ ನೆಲ್ಲಿಕಾರು(ದೇಜಪ್ಪ ಮಾಸ್ಟ್ರು)-ನಾಟಕ: ಬಾಕಿಲ್ ದೆಪ್ಪೊಡ್ಚಿ (ಘಳಿಗೆ ಕಾಲವಿದೆರ್,ನೂರಾಲ್‍ಬೆಟ್ಟು)
ದ್ವಿತೀಯ: ಅರುಣ್ ಶೆಟ್ಟಿ ಜಪ್ಪು(ಕೊರಗಪ್ಪ)- ನಾಟಕ: ಕಟ್ಟೆದ ಗುಳಿಗೆ ಕೈಬುಡಯೆ (ಮಂಗಳಾ ಕಲಾವಿದೆರ್, ಮಂಗಳಾದೇವಿ)
ತೃತೀಯ: ನಿತೇಶ್ ಕೊರಿಯಾ(ಕರಿಯ) – ನಾಟಕ: ಕಾಪ – (ಸುಮನಸ ಕೊಡವೂರು)
ಪೋಷಕ ನಟಿ
ಪ್ರಥಮ : ಸುಗಂಧಿ ಉಮೇಶ್ ಕಲ್ಮಾಡಿ(ರಾಮಕ್ಕ)-ನಾಟಕ: ಪಟ್ಟೆ ತತ್ತ್‍ಂಡ (ನಮತುಳುವೆರ್ ಕಲಾಸಂಘಟನೆ, ಮುದ್ರಾಡಿ)
ದ್ವಿತೀಯ: ಹರಿಣಿ ಪ್ರಕಾಶ್ ಪಕಳ(ರೇಖಾ)-ನಾಟಕ:ಸತ್ಯ ಗೊತ್ತಾನಗ (ಶ್ರೀವಾರಾಹಿ ಯುವಕ ಸಂಘ, ಉಡಲ್‍ಕಲಾವಿದೆರ್, ಕನ್ಯಾನ)
ಸಂಗೀತ:
ಪ್ರಥಮ : ಮೇಘನಾ ಕುಂದಾಪುರ – ನಾಟಕ: ಗೋಂದೋಳು (ಜರ್ನಿ ಥೇಟರ್ (ರಿ.), ಮಂಗಳೂರು)
ದ್ವಿತೀಯ: ತಂಗವೇಲು ಕೊಯಿಲ – ನಾಟಕ: ಬಾಕಿಲ್ ದೆಪ್ಪೊಡ್ಚಿ (ಘಳಿಗೆ ಕಾಲವಿದೆರ್, ನೂರಾಲ್‍ಬೆಟ್ಟು)
ತೃತೀಯ: ದಿವಾಕರ ಕಟೀಲು – ನಾಟಕ: ಕಾಪ – (ಸುಮನಸ ಕೊಡವೂರು)
ರಂಗವಿನ್ಯಾಸ:
ಪಟ್ಟೆ ತತ್ತ್‍ಂಡ (ನಮತುಳುವೆರ್ ಕಲಾ ಸಂಘಟನೆ, ಮುದ್ರಾಡಿ)
ಶಿಸ್ತುಬದ್ಧ ತಂಡ:
ಶ್ರೀ ವಾರಾಹಿ ಯುವಕ ಸಂಘ, ಉಡಲ್ ಕಲಾವಿದೆರ್, ಕನ್ಯಾನ
ಪ್ರತಿ ನಾಟಕದ ಶ್ರೇಷ್ಠ ನಟ:
ದಿನೇಶ್ ಕುಂಪಲ (ದೇವೇಂದ್ರ)- ನಾಟಕ: ಅಹಲ್ಯೆ – (ಸಂಗಮ ಕಲಾವಿದೆರ್, ಮಂಗಳೂರು)
ರವಿ
ಎಂ.ಎಸ್.ವರ್ಕಾಡಿ(ರಂಜಿತ್)-ನಾಟಕ: ಸತ್ಯ ಗೊತ್ತಾನಗ (ಶ್ರೀವಾರಾಹಿ ಯುವಕ ಸಂಘ, ಉಡಲ್‍ಕಲಾವಿದೆರ್, ಕನ್ಯಾನ)
ಹರ್ಷಿತಾ ಜೋಗಿ ಮಿತ್ತನಡ್ಕ (ಸ್ವಾತಿ)-ನಾಟಕ: ಅಂಚಾಯಿನೆಟ್ ಇಂಚಾಂಡ್ (ಸಂತೋಷ್ ಕಲಾವಿದೆರ್, ಪಾವಳ, ವರ್ಕಾಡಿ)
ಶ್ರೀನಿವಾಸ ಶೆಟ್ಟಿ ವಿಟ್ಲ (ಸಾಯಿಬ)- ನಾಟಕ: ಅಮರ್ ಸಿರಿಕುಲು – (ಬಂಟವಾಳದ ಕಲಾವಿದೆರ್)
ರಾಜು ಸಾಲ್ಯಾನ್ ಕೋಜಕುಳಿ (ಗೋಪಾಲ)- ನಾಟಕ: ಮೋಕೆದ ಮದಿಮಾಲ್ – (ರಂಗಚಾವಡಿ (ರಿ.), ಉಡುಪಿ)
ರೋಹಿತ್ ಶೆಟ್ಟಿ(ಡಾ.ಮಧು) – ನಾಟಕ: ಬಯ್ಯಮಲ್ಲಿಗೆ – (ಕೂಡ್ದಿ ಕಲಾವಿದರು, ಪೆರ್ಡೂರು)
ನಮಿತ ಅಳಪೆ(ನಮಿತ)- ನಾಟಕ: ಕಟ್ಟೆದ ಗುಳಿಗೆ ಕೈ ಬುಡಯೆ – (ಮಂಗಳ ಕಲಾವಿದೆರ್, ಮಂಗಳಾದೇವಿ)
ಸತೀಶ್ ಶೆಣೈ(ಅಲ್ಲಮಪ್ರಭು)- ನಾಟಕ: ಅಕ್ಕಮಹಾದೇವಿ – (ಸರಕಾರಿ ನೌಕರರ ಕಲಾ ಮತ್ತು ಸಾಂಸ್ಕøತಿಕ ಸಂಘ, ಮಂಗಳೂರು)
ರಾಮಚಂದ್ರ ಶೆಟ್ಟಿಗಾರ್ ಸಾಣೂರು(ಆದಿಶೇಷ) – ನಾಟಕ: ಬಾಕಿಲ್ ದೆಪ್ಪೊಡ್ಚಿ – (ಘಳಿಗೆ ಕಾಲವಿದರು, ನೂರಾಲ್‍ಬೆಟ್ಟು)
ಚಂದ್ರಿಕಾ ವಿ.ಕೋಟ್ಯಾನ್(ದುಗ್ಗಣ್ಣ ಕೊಂಡೆ) – ನಾಟಕ: ದೇವು ಪೂಂಜೆ – (ಶ್ರೀ ಶಾರದಾ ಮಹೋತ್ಸವ ನಾಡಹಬ್ಬ ಸಮಿತಿ, ಕೈರಂಗಳ)
ವಿಕಾಸ್(ರಾಮೇಗೌಡ)- ನಾಟಕ: ಅಮರಸಂಗ್ರಾಮ – (ಕುಕ್ಕೆಶ್ರೀ ಸರಕಾರಿ ಪದವಿಪೂರ್ವ ಕಾಲೇಜು, ಸುಬ್ರಹ್ಮಣ್ಯ)
ಸಾಯಿನಾರಾಯಣ ಕಲ್ಮಡ್ಕ(ರೈಟರ್) – ನಾಟಕ: ಚೋಮನದುಡಿ – (ಕಲಾಗ್ರಾಮ ಕಲ್ಮಡ್ಕ)
ಹರೀಶ್ ನೀಲಿಪಾಲ್(ಕಾಂತು) – ನಾಟಕ: ಗೋಂದೊಳು – (ಜರ್ನಿ ಥೇಟರ್ (ರಿ.), ಮಂಗಳೂರು)
ಪ್ರವೀಣ್‍ಚಂದ್ರ ತೋನ್ಸೆ(ಬಾಣೆರೆ ಅಣ್ಣೆರ್)- ನಾಟಕ: ಕಾಪ – (ಸುಮನಸ ಕೊಡವೂರು)
ಸುಕುಮಾರ ಮೋಹನ್(ರಂಗಣ್ಣ)- ನಾಟಕ: ಪಟ್ಟೆ ತತ್ತ್‍ಂಡ – (ನಮತುಳುವೆರ್ ಕಲಾಸಂಘಟನೆ, ಮುದ್ರಾಡಿ)
ಸಂದೀಪ್ ಶೆಟ್ಟಿ ರಾಯಿ(ಮೋಹನ)- ನಾಟಕ: ನಾಲಯಿ ಮಗುರುಜಿ – (ಕಲಾಶ್ರೀ ಬೆದ್ರ ಕುಸಾಲ್ದ ಕಲಾವಿದೆರ್)
ಮೆಚ್ಚುಗೆ ಪಡೆದ ಪಾತ್ರಗಳು: ಮಹಿಮಾ (ಅಹಲ್ಯೆ) – ನಾಟಕ: ಅಹಲ್ಯೆ – (ಸಂಗಮ ಕಲಾವಿದೆರ್, ಮಂಗಳೂರು)
ಹೊನ್ನಪ್ಪ ಗೌಡ(ಚೋಮ) – ನಾಟಕ: ಚೋಮನದುಡಿ – (ಕಲಾಗ್ರಾಮ ಕಲ್ಮಡ್ಕ)
ನಿತಿನ್ ಹೊಸಂಗಡಿ (ಶರತ್) – ನಾಟಕ:ಅಂಚಾಯಿನಟ್ ಇಂಚಾಂಡ್-(ಸಂತೋಷ್ ಕಲಾವಿದೆರ್, ಪಾವಳ, ವರ್ಕಾಡಿ)
ಸಂತೋಷ್ (ವಾಮನ ಬಾಳಿಗ) -ನಾಟಕ:ಅಮರಸಂಗ್ರಾಮ-(ಕುಕ್ಕೆಶ್ರೀ ಸರಕಾರಿ ಪದವಿಪೂರ್ವ ಕಾಲೇಜು, ಸುಬ್ರಹ್ಮಣ್ಯ)
ಪ್ರವೀಣ್ ಮರ್ಕಮೆ (ಮಾರಪ್ಪ) – ನಾಟಕ: ನಾಲಯಿ ಮಗುರುಜಿ – (ಕಲಾಶ್ರೀ ಬೆದ್ರ ಕುಸಾಲ್ದ ಕಲಾವಿದೆರ್
ರಶ್ಮಿತಾ (ಶಾಂತಿ) – ನಾಟಕ: ಬಯ್ಯಮಲ್ಲಿಗೆ – (ಕೂಡ್ದಿ ಕಲಾವಿದೆರ್, ಪೆರ್ಡೂರು)
ಅಕ್ಷತಾ ಮುದ್ರಾಡಿ (ಅಮ್ಮು) – ನಾಟಕ: ಪಟ್ಟೆ ತತ್ತ್‍ಂಡ – (ನಮತುಳುವೆರ್ ಕಲಾಸಂಘಟನೆ, ಮುದ್ರಾಡಿ)
ಅತ್ಯುತ್ತಮ ನೃತ್ಯ:
ಸುರಕ್ಷಾ ಶೆಟ್ಟಿ & ಸುದೀಕ್ಷಾ ಶೆಟ್ಟಿ – ನಾಟಕ: ಅಮರ್ ಸಿರಿಕುಲು – (ಬಂಟವಾಳದ ಕಲಾವಿದೆರ್)
ಶ್ರೀ ಮಹಾಬಲೇಶ್ವರ ಹೆಬ್ಬಾರ್ ಮೊಡಂಕಾಪು, ಶ್ರೀ ಮಂಜು ವಿಟ್ಲ, ಶ್ರೀ ಮಧು ಬಂಗೇರ ಕಲ್ಲಡ್ಕ ಇವರು ತೀರ್ಪುಗಾರರಾಗಿ ಸಹಕರಿಸಿದರು.
BANTWAL
ಬ್ರೇಕಪ್ ಆದ್ರೂ ಬಿಡದ ಪಾಗಲ್ ಪ್ರೇಮಿ; ನಿಮಿಷಕ್ಕೊಮ್ಮೆ ಗೂಗಲ್ ಪೇ ಮಾಡಿ ಹಿಂಸೆ..!
Published
5 hours agoon
23/11/2024ಪ್ರೀತಿ ಒಂದು ಮಾಯೆ. ಯುವಕ – ಯುವತಿಯ ನಡೆವಿನ ಅನ್ಯೋನ್ಯತೆ, ಹೊಂದಿಕೊಳ್ಳುವುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತವೆ. ಪ್ರೀತಿ ಎಂದರೆ ಕೇವಲ ಆಕರ್ಷಣೆಯಲ್ಲ. ಅಥವಾ ಒಂದು ಹೆಣ್ಣಿನ ಅಂಗಾಂಗ ನೋಡಿ ಉಕ್ಕಿ ಬರುವ ಭಾವವೂ ಅಲ್ಲ. ಅದೊಂದು ಪವಿತ್ರ ಬಂಧ. ಎಲ್ಲಿ ಸರಿಯಾದ ಹೊಂದಾಣಿಕೆ ಇರುವುದಿಲ್ಲವೋ ಅಲ್ಲಿ ಬ್ರೇಕಪ್ ಆಗುತ್ತದೆ. ಅಷ್ಡು ಮಾತ್ರವಲ್ಲದೇ ಯಾವುದೋ ಒತ್ತಡ, ಕೌಟುಂಬಿಕ ಕಲಹಗಳಿಂದಲೂ ಪ್ರೇಮಿಗಳ ಸಂಬಂಧಕ್ಕೆ ಬಿರುಕು ಬೀಳುತ್ತದೆ.
ಪ್ರೇಮಿಗಳ ನಡುವೆ ಬ್ರೇಕಪ್ ಸರ್ವೇ ಸಾಮಾನ್ಯ. ಆದರೆ, ಆ ನೋವಿನಿಂದ ಹೊರಬರುವುದಂತೂ ತುಂಬಾ ಕಷ್ಟ. ಕೆಲವರು ಹಳೆಯ ಪ್ರೇಮಿಯ ನೆನಪಲ್ಲಿ ದಿನ ಕಳೆದರೆ, ಇನ್ನು ಕೆಲವರು ಕೈ ಕೊಟ್ಟ ಪ್ರಿಯತಮೆಗೆ ಬುದ್ಧಿ ಕಲಿಸಲು ಮುಂದಾಗುತ್ತಾರೆ. ಆದರೆ, ಇಲ್ಲೊಬ್ಬ ಯುವಕ ಬ್ರೇಕಪ್ ಬಳಿಕ ಮಾಜಿ ಪ್ರಿಯತಮೆಗೆ ವಿಚಿತ್ರವಾಗಿ ಹಿಂಸೆ ನೀಡಿದ್ದಾನೆ ಎಂದು ಉಲ್ಲೇಖವಾಗಿದೆ. ಈ ಕುರಿತು ಸ್ವತಃ ಯುವತಿಯೇ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾಳೆ.
ಬ್ರೇಕಪ್ ಬಳಿಕ ಯುವತಿಯು ಮಾಜಿ ಪ್ರಿಯಕರನ ನಂಬರನ್ನು ಎಲ್ಲ ಕಡೆಯೂ ಬ್ಲಾಕ್ ಮಾಡಿದ್ದಾಳೆ. ಆದರೆ ಅವನು ತನ್ನ ಪ್ರೇಯಸಿಯನ್ನು ಹಿಂಸಿಸಲು ಗೂಗಲ್ ಪೇ ಆಯ್ಕೆ ಮಾಡ್ಕೊಂಡಿದ್ದಾನೆ. ಬ್ರೇಕಪ್ ನಂತರ ಅವನು ಗೂಗಲ್ ಪೇ ನಲ್ಲಿ ನಿಮಿಷಕ್ಕೆ ಒಂದು ರೂಪಾಯಿ ಸೆಂಡ್ ಮಾಡುತ್ತಿದ್ದಾನಂತೆ.
ಆಯುಷಿ ಎಂಬುವವರು ತಮ್ಮ ಎಕ್ಸ್ ಖಾತೆ @ShutupAyushiii ಯಲ್ಲಿ ಮಾಜಿ ಪ್ರಿಯಕರ ಬಗ್ಗೆ ಬರೆದುಕೊಂಡಿದ್ದಾಳೆ. ಪೋಸ್ಟ್ ನಲ್ಲಿ, ‘ಎಲ್ಲ ಕಡೆ ಆತನನ್ನು ಬ್ಲಾಕ್ ಮಾಡಿದ ಮೇಲೆ ಗೂಗಲ್ ಪೇನಲ್ಲಿ ಪ್ರತಿ ನಿಮಿಷಕ್ಕೆ ಒಂದು ರೂಪಾಯಿ ಸೆಂಡ್ ಮಾಡ್ತಿದ್ದಾನೆ’ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದು, ಅದರೊಂದಿಗೆ ಅಳುವ ಎಮೋಜಿ ಹಾಕಿದ್ದಾಳೆ. ಈ ಪೋಸ್ಟ್ ನೋಡಿದರೆ ಒಂದು ಕ್ಷಣ ಹೀಗೂ ಹಿಂಸೆ ಕೊಡುತ್ತಾರಾ ? ಎಂದೆನಿಸುತ್ತದೆ.
ಈ ಪೋಸ್ಟ್ ಒಂದು ಲಕ್ಷದವರೆಗೆ ವೀಕ್ಷಣೆ ಕಂಡಿದ್ದು, ನೆಟ್ಟಿಗರು ವಿಧವಿಧವಾಗಿ ಕಾಮೆಂಟ್ ಮಾಡಿದ್ದಾರೆ.ಒಬ್ಬರು, ‘ನಿಮ್ಮ ಮಾಜಿ ಇದೇ ಕೆಲಸ ಮುಂದುವರೆಸಿದ್ರೆ ತಿಂಗಳಿಗೆ ನೀವು 40 ಸಾವಿರಕ್ಕಿಂತ ಹೆಚ್ಚು ಸಂಪಾದನೆ ಮಾಡಬಹುದು. ಏನೂ ಕೆಲಸ ಮಾಡದೆ ಕುಳಿತಲ್ಲೇ ಹಣ ಬರುತ್ತೆ ಅಂದ್ರೆ ಟೆನ್ಷನ್ ಏಕೆ’ ಎಂದಿದ್ದಾರೆ. ಇನ್ನೊಬ್ಬರು, ‘ನಿಮಿಷದ ಲೆಕ್ಕದಲ್ಲಿ ನೋಡೋದಾದ್ರೆ ನೀವು ದಿನಕ್ಕೆ 1440 ರೂಪಾಯಿ ಪಡೆಯುತ್ತೀರಿ’ ಎಂದಿದ್ದಾರೆ. ಮತ್ತೊಬ್ಬರು, ‘ಎರಡು ದಿನ ಮಾಡ್ತಾನೆ, ಹಣ ಖಾಲಿ ಆದ್ಮೇಲೆ ಆತನೇ ಸುಮ್ಮನಾಗ್ತಾನೆ’ ಎಂದು ಕಾಮೆಂಟ್ ಮಾಡಿದ್ದಾರೆ.
ಬಂಟ್ವಾಳ: ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದ ಟೀಕೆಗೆ ಗುರಿಯಾಗಿದ್ದ ಕಲ್ಲಡ್ಕದಲ್ಲಿ ಇದೀಗ ಸರ್ವೀಸ್ ರಸ್ತೆಗೆ ಡಾಮರು ಹಾಕುವ ಕಾರ್ಯ ಆರಂಭಗೊಂಡಿದೆ.
ಮಳೆ ದೂರವಾದ ಹಿನ್ನೆಲೆಯಲ್ಲಿ ಕಲ್ಲಡ್ಕದ ಪೂರ್ಲಿಪ್ಪಾಡಿ ಭಾಗದಿಂದ ಒಂದು ಬದಿಯಲ್ಲಿ ಡಾಮರು ಹಾಕಲಾಗುತ್ತಿದೆ.
ಕಳೆದ 2-3 ವರ್ಷಗಳಿಂದ ಹೆದ್ದಾರಿ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದ್ದು, ಈ ಬಾರಿಯ ಮಳೆಗಾಲದಲ್ಲಿ ಕಲ್ಲಡ್ಕ ಪೇಟೆಯನ್ನು ಎಲ್ಲ ರೀತಿಯಿಂದಲೂ ಹಿಂಡಿ ಹಿಪ್ಪೆ ಮಾಡಲಾಗಿತ್ತು. ಮಳೆ ಬಂದರೆ ಕೆಸರು, ಬಿಸಿಲಾದರೆ ಧೂಳು ಎಂಬ ಸ್ಥಿತಿ ಇತ್ತು. ಹೆದ್ದಾರಿ ತುಂಬಾ ಕೆಸರು ತುಂಬಿ ನಡೆದಾಡುವುದು ಕಷ್ಟವಾಗಿರುವ ಜತೆಗೆ ಹೊಂಡಗಳು ಸೃಷ್ಟಿಯಾಗಿ ವಾಹನ ಸಾಗುವುದು ತೀರಾ ತ್ರಾಸದಾಯಕವಾಗಿತ್ತು. ಇದೀಗ ಸರ್ವೀಸ್ ರಸ್ತೆಗೆ ಡಾಮರು ಹಾಕುವ ಕಾರ್ಯ ಆರಂಭಗೊಂಡಿದೆ.
ಮಂಗಳೂರು: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಮಹಮ್ಮದ್ ಮುಸ್ತಾಫ(21) ಎಂಬಾತನನ್ನು ಕಂಬಕ್ಕೆ ಕಟ್ಟಿ ಹಾಕಿದ ಥಳಿಸಿದ ಆರು ಮಂದಿ ಆರೋಪಿಗಳನ್ನು ಬಂಟ್ವಾಳ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಹಲ್ಲೆ ಮಾಡಿ, ಕೊಲೆ ಬೆದರಿಕೆಯೊಡ್ಡಿದ ಆರೋಪಿಗಳಾದ ಕಂಚಿನಡ್ಕದ ನಿವಾಸಿಗಳಾಗಿರುವ ಮಹಮ್ಮದ್ ಸಪ್ವಾನ್( 25), ಮಹಮ್ಮದ್ ರಿಜ್ವಾನ್ (25), ಇರ್ಪಾನ್(27), ಅನೀಸ್ ಅಹಮ್ಮದ್ (19), ನಾಸೀರ್ (27), ಇಬ್ರಾಹಿಂ, ಶಾಕೀರ್ (18)ನನ್ನು ಬಂಧಿಸಲಾಗಿದೆ.
ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನವೆಂಬರ್ 7ರಂದು ರಾತ್ರಿ 10 ಗಂಟೆ ಸುಮಾರಿಗೆ ಕಂಚಿನಡ್ಕ ಪದವು ನಿವಾಸಿಯಾಗಿರುವ ಯುವತಿಯೊಬ್ಬಳು ಮಹಮ್ಮದ್ ಮುಸ್ತಾಫಾನನ್ನು ಮನೆಗೆ ಬರಲು ಹೇಳಿದ್ದು, ಆಕೆ ಸೂಚನೆಯಂತೆ ಮಹಮ್ಮದ್ ಮುಸ್ತಾಫಾ ಅಲ್ಲಿಗೆ ಹೋಗಿದ್ದ. ಈ ವೇಳೆ ಅಲ್ಲಿದ್ದ ಆರೋಪಿಗಳು ಮಹಮ್ಮದ್ ಮುಸ್ತಾಫ್ ನ ಬಗ್ಗೆ ಸಂಶಯ ವ್ಯಕ್ತಪಡಿಸಿ ಗುಂಪು ಸೇರಿಕೊಂಡು ಆತನನ್ನು ಹಿಡಿದು ರಕ್ತ ಒಸರುವಂತೆ ಥಳಿಸಿದ್ದಲ್ಲದೇ ಕಂಬಕ್ಕೆ ಕಟ್ಟಿ ಹಾಕಿ ಹೊಡೆದಿದ್ದಾರೆ. ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ.
ಇದನ್ನೂ ಓದಿ : ಬಂಟ್ವಾಳ : ಮನೆಗೆ ಬಂದಿದ್ದ ಪ್ರಿಯಕರನ್ನು ಅ*ರೆಬೆತ್ತಲು ಮಾಡಿ ಹ*ಲ್ಲೆ
ಮಹಮ್ಮದ್ ಮುಸ್ತಾಫ್ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಬಳಿಕ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಸಂದರ್ಭದಲ್ಲಿ ಪೊಲೀಸರು ವಿಚಾರಣೆ ಮಾಡಲು ತೆರಳಿದಾದ ಮಹಮ್ಮದ್ ಮುಸ್ತಾಫ್ ಆರೋಪಿಗಳು ತನ್ನನ್ನು ಕೊಲೆ ನಡೆಸುವ ಉದ್ದೇಶದಿಂದ ಗುಂಪು ಸೇರಿ ಕಂಬಕ್ಕೆ ಕಟ್ಟಿ ಹಾಕಿ ಕೊಲೆಯತ್ನ ನಡೆಸಿದ್ದಾನೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಲಾಗಿದೆ.
LATEST NEWS
3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ
ಸಾರಿಗೆ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್: KSRTC ಬಸ್ಸಿನಲ್ಲಿ ‘UPI’ ಮೂಲಕ ಟಿಕೆಟ್ ಖರೀದಿಸಲು ಅವಕಾಶ
ಪಿಲಿಕುಳ ಕಂಬಳಕ್ಕೆ ಪ್ರಾಣಿಪ್ರಿಯರ ವಿರೋಧ !
Viral Video: ಮಿಂಚಿನ ವೇಗದಲ್ಲಿ ಊಟ ಬಡಿಸಿದ ನಾಲ್ವರು ಯುವಕರು
ವಿದ್ಯಾಸಿರಿ ವಿದ್ಯಾರ್ಥಿ ವೇತನ 2 ಸಾವಿರಕ್ಕೆ ಏರಿಕೆ: ಸಿಎಂ ಸಿದ್ದರಾಮಯ್ಯ
ಜಾರ್ಖಂಡ್ನಲ್ಲಿ ಬಿಗ್ ಟ್ವಿಸ್ಟ್; ಜೆಎಂಎಂ ಮುನ್ನಡೆ – ಎನ್ಡಿಎ ಹಿಂದಿಕ್ಕಿದ ಇಂಡಿಯಾ ಒಕ್ಕೂಟ
Trending
- LATEST NEWS3 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- Baindooru1 day ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- LIFE STYLE AND FASHION2 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ
- LATEST NEWS5 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!