ಮಂಗಳೂರು/ಮುಂಬೈ : ಭಾರತೀಯ ಕ್ರಿಕೆಟ್ ತಂಡ ಮಾಜಿ ಆಟಗಾರ ಪಂಜಾಬ್ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹೇಳಿಕೆ ಈಗ ಭಾರಿ ಸಂಚಲನ ಮೂಡಿಸಿದೆ. ತನ್ನ ಪತ್ನಿ ನವಜೋತ್ ಕೌರ್ ಸಿಧು ಅವರ ನಾಲ್ಕನೇ ಹಂತದ ಕ್ಯಾನ್ಸರ್ ಆಹಾರ ಕ್ರಮ ಹಾಗೂ ಪಾರಂಪರಿಕ ಔಷಧಿಯಿಂದ ಗುಣವಾಗಿದೆ ಎಂಬ ಹೇಳಿಕೆ ನೀಡಿದ್ದರು. ಆದ್ರೆ ಇದೀಗ ಈ ಹೇಳಿಕೆ ನೀಡಿ ಕ್ಯಾನ್ಸರ್ ಪೀಡಿತರ ದಾರಿ ತಪ್ಪಿಸಿದ್ದು, ಜನರು ಅಲೋಪತಿ ಔಷಧಿಯ ಬಗ್ಗೆ ಅನುಮಾನ ಪಡುವಂತೆ ಮಾಡಿದ್ದಾರೆ. ಇದರಿಂದ ಕ್ಯಾನ್ಸರ್ ಪೀಡಿತರ ಜೀವದ ಜೊತೆ ಸಿದ್ದು ಆಟ ಆಡಿದ್ದಾರೆ ಎಂದು 850 ಕೋಟಿ ರೂಪಾಯಿ ಮಾನನಷ್ಟ ಭರಿಸುವ ನೋಟಿಸ್ ನೀಡಲಾಗಿದೆ. ಛತ್ತೀಸ್‌ಗಢ ಸಿವಿಲ್ ಸೊಸೈಟಿ ನೋಟಿಸ್ ನೀಡಿದ್ದು, ಹಲವು ಪ್ರಶ್ನೆಗಳನ್ನು ಸಿದ್ದು ಹಾಗೂ ಅವರ ಪತ್ನಿಯ ಮುಂದಿಟ್ಟಿದೆ. ಸಮರ್ಪಕ ಉತ್ತರವನ್ನು ವಾರದೊಳಗೆ ನೀಡದೇ ಇದ್ರೆ 850 ಕೋಟಿ ಮಾನನಷ್ಟ ನೀಡಬೇಕು ಎಂದು ನೋಟಿಸ್‌ನಲ್ಲಿ ಹೇಳಿದೆ.
ನವಜೋತ್ ಕೌರ್ ಸಿಧು ಹೇಳಿದ್ದೇನು ..?
ಕೆಲ ದಿನಗಳ ಹಿಂದೆ ಮಾಧ್ಯಮಗಳ ಜೊತೆ ಮಾತನಾಡಿದ್ದ ನವಜೋತ್ ಕೌರ್ ಸಿಧು, ಪತ್ನಿ ಕ್ಯಾನ್ಸರ್ ಗೆದ್ದಿರುವ ಬಗ್ಗೆ ಹೇಳಿಕೊಂಡಿದ್ದರು. ಅಮೇರಿಕಾದ ಕ್ಯಾನ್ಸರ್ ಸ್ಪೆಷಲಿಸ್ಟ್ ಇನ್ನು ಬರುವುದಿಲ್ಲ ಎಂದು ಹೇಳಿದ್ದ ಅವರು, ನನ್ನ ಪತ್ನಿ ನಲುವತ್ತು ದಿನದಲ್ಲಿ ಕ್ಯಾನ್ಸರ್ ಗೆದ್ದಿರುವುದಾಗಿ ಹೇಳಿದ್ದರು. ಇದಕ್ಕೆ ಆಹಾರ ಕ್ರಮದಲ್ಲಿ ಮಾಡಿದ ಬದಲಾವಣೆ ಮತ್ತು ನಿಂಬೆ ರಸ, ತುಳಸಿರಸ, ಹಳದಿ ಮತ್ತು ಕಹಿಬೇವಿನ ಎಲೆಯ ಉಪಯೋಗ ಕಾರಣವಾಗಿತ್ತು ಎಂದಿದ್ದರು. ಕ್ಯಾನ್ಸರ್ ಚಿಕಿತ್ಸೆಗೆ ಕೋಟಿ ಕೋಟಿ ಖರ್ಚು ಮಾಡುವುದೆಲ್ಲಿ? ನಮ್ಮದೇ ಸುತ್ತಮುತ್ತ ಸಿಗುವ ವಸ್ತುಗಳಿಂದ ಸಿಗುವ ಚಿಕಿತ್ಸೆ ಎಲ್ಲಿ? ಅಂತ ಪ್ರಶ್ನೆ ಮಾಡಿದ್ದರು.
ಸಿವಿಲ್ ಸೊಸೈಟಿಯಿಂದ ಸಿಧುಗೆ ನೋಟಿಸ್ :
ಸಿಧು ಹೇಳಿಕೆಯಿಂದ ಕ್ಯಾನ್ಸರ್ ಪೀಡಿತರನ್ನು ಅಪಾಯಕ್ಕೆ ಸಿಲುಕುವಂತೆ ಮಾಡಿದ್ದು, ಹಲವು ಕ್ಯಾನ್ಸರ್ ಪೀಡಿತರು ಅಲೋಪಥಿಯನ್ನು ನಂಬದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಹೇಳಿಕೆ ಸಮಂಜಸಕಾರಿಯಾಗಿದ್ದಲ್ಲ ಮತ್ತು ಇದಕ್ಕಾಗಿ ನವಜೋತ್ ಕೌರ್ ಸಿಧು ಕ್ಷಮೆ ಯಾಚಿಸಬೇಕು ಎಂದು ಸಿವಿಲ್ ಸೊಸೈಟಿ ಆಗ್ರಹಿಸಿದೆ. ಛತ್ತೀಸ್‌ಗಢ ಸಿವಿಲ್ ಸೊಸೈಟಿಯ ಡಾ. ಕುಲದೀಪ್ ಸೋಲಂಕಿ ಅವರು, ನವಜೋತ್ ಕೌರ್ ಅವರಿಗೆ ನೀಡಲಾದ ಅಲೋಪಥಿ ಚಿಕಿತ್ಸೆಯ ದಾಖಲೆ ನಮ್ಮ ಬಳಿ ಇದೆ. ಆದ್ರೆ, ಗೌಪ್ಯತೆಯ ಕಾರಣದಿಂದ ಅದನ್ನು ನಾವು ಬಿಡುಗಡೆ ಮಾಡುವುದಿಲ್ಲ . ಬದಲಾಗಿ ನವಜೋತ್ ಸಿಂಗ್ ಅವರು ಆ ಎಲ್ಲಾ ದಾಖಲೆಗಳನ್ನು ಒಂದು ವಾರದ ಒಳಗಾಗಿ ಸಲ್ಲಿಸಬೇಕು ಎಂದಿದ್ದಾರೆ.
ಇಲ್ಲವಾದಲ್ಲಿ 850 ಕೋಟಿ ರೂಪಾಯಿಗಳ ಮಾನನಷ್ಟ ಭರಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಇದರ ಜೊತೆಗೆ ನವಜೋತ್ ಕೌರ್ ಸಿಧು ಅವರಿಗೂ ಕೆಲವೊಂದು ಪ್ರಶ್ನೆ ಕೇಳಿದ್ದು, ಚಿಕಿತ್ಸೆಯ ಭಾಗವಾಗಿ ನೀವು ಅಲೋಪಥಿ ಔಷಧಿ ಸೇವನೆಯೇ ಮಾಡಿಲ್ಲವೇ ? ಅಲೋಪಥಿ ಔಷಧಿ ಸೇವಿಸದೇ ಕೇವಲ ನಿಮ್ಮ ಪತಿ ಹೇಳಿರುವ ಕಥೆಯಂತೆ ನೀವು ಗುಣಮುಖರಾಗಿದ್ದೀರಾ ? ನಿಮ್ಮ ಪತಿಯ ಹೇಳಿಕೆಯನ್ನು ನೀವು ಸಮರ್ಥಿಸುವುದಿಲ್ಲ ಎಂದಾದರೆ ಮಾಧ್ಯಮದ ಮುಂದೆ ನೀವು ಸತ್ಯವನ್ನು ಹೇಳಬೇಕು ಎಂದು ಆಗ್ರಹಿಸಿದೆ.
ನವಜೋತ್ ಕೌರ್ ಸಿಧು ಹೇಳಿಕೆಯ ಬಳಿಕ ಜನರು ಕ್ಯಾನ್ಸರ್ ಮಾತ್ರವಲ್ಲದೆ, ಇತರೆ ರೋಗಗಳ ಬಗ್ಗೆಯೂ ಅಲೋಪಥಿಯ ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ಇದು ಜನರ ಜೀವದ ಜೊತೆ ಚೆಲ್ಲಾಟ ಮಾಡುವ ಹೇಳಿಕೆಯಾಗಿದ್ದು, ಇದಕ್ಕೆ ಸಿದ್ದು ಸ್ಪಷ್ಟನೆ ನೀಡಲೇಬೇಕು ಎಂದು ಸಿವಿಲ್ ಸೊಸೈಟಿ ಹೇಳಿದೆ.
ಕಾರ್ಕಳ: ದುರ್ಗಾ ಫಾಲ್ಸ್‌ಗೆ ಈಜುಲು ಹೋದ ವಿದ್ಯಾರ್ಥಿಯೋರ್ವ ನೀರು ಪಾಲಾದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.
ಮೃ*ತ ವಿದ್ಯಾರ್ಥಿಯನ್ನು ಜಾಯಲ್ ಡಯಾಸ್ (19) ಎಂದು ಗುರುತಿಸಲಾಗಿದೆ. ಈತ ಉಡುಪಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಂ. ಪದವಿ ವ್ಯಾಸಂಗ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.
7 ಮಂದಿ ವಿದ್ಯಾರ್ಥಿಗಳ ತಂಡ ದುರ್ಗಾ ಫಾಲ್ಸ್ ಗೆ ಬಂದಿದ್ದು, ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭ ಜಾಯಲ್ ಡಯಾಸ್ ಆಯ ತಪ್ಪಿ ನೀರು ಪಾಲಾಗಿದ್ದಾನೆ ಎಂದು ತಿಳಿದುಬಂದಿದೆ. ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಮಂಗಳೂರು/ರಾಂಚಿ: ಜಾರ್ಖಂಡ್ ರಾಜ್ಯದ 14ನೇ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಪ್ರಮಾಣವಚನ ಸ್ವೀಕರಿಸಿದರು. 4ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆಗೆ ಏರಿದ್ದಾರೆ. ಈ ವೇಳೆ ಇಂಡಿಯಾ ಬಣದ ಹಲವು ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರಾಂಚಿಯ ಮೊರಾಬಾದಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಆದಿವಾಸಿ ನಾಯಕ 49 ವರ್ಷದ ಹೇಮಂತ್ ಸೊರೇನ್ ಅವರಿಗೆ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಪ್ರತಿಜ್ಞಾವಿಧಿ ಬೋಧಿಸಿದರು.
ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಖುರ್ತಾ, ಪೈಜಾಮಾ ಧರಿಸಿ ತಮ್ಮ ತಂದೆ, ಜೆಎಂಎಂ ಅಧ್ಯಕ್ಷ ಶಿಬು ಸೊರೇನ್ ಅವರನ್ನು ಭೇಟಿಯಾದರು.
ಇತ್ತೀಚೆಗೆ ಮುಕ್ತಾಯಗೊಂಡ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ 81 ಕ್ಷೇತ್ರಗಳ ಪೈಕಿ ಜೆಎಂಎಂ ನೇತೃತ್ವದ ಮೈತ್ರಿಕೂಟವು 56 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಎನ್ ಡಿಎ 24 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.