ಮಂಗಳೂರು: ಕೇಂದ್ರ ಸರಕಾರದ ವಿತ್ತ ಸಚಿವೆ ನರ್ಮಲಾ ಸೀತಾರಾಮನ್ ಶನಿವಾರ ಮಂಡಿಸಿದ ಬಜೆಟ್ನಲ್ಲಿ ದೇಶದ ಭವಿಷ್ಯ ಪ್ರಕಾಶಿಸುವ ಯಾವುದೇ ಅಂಶಗಳು ಇಲ್ಲ. ಈ ಬಾರಿಯ ಕೇಂದ್ರ ಸರಕಾರದ ಬಜೆಟ್ ಬಗ್ಗೆ ಭಾರೀ ಅಪೇಕ್ಷೆ ಮತ್ತು ನಿರೀಕ್ಷೆಗಳಿದ್ದವು. ಆದರೆ, ಬಜೆಟ್ನಿಂದ ದೇಶದ ಜನರಿಗೆ ನಿರಾಶೆಯಾಗಿದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.
ಮಂಗಳೂರು ನಗರದ ರ್ಕ್ಯೂಟ್ ಹೌಸ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಜಿಡಿಪಿ ದರ ಶೇ.೩.೫ಕ್ಕೆ ಕುಸಿತ ಕಂಡಿದೆ. ಅಟೋಮೊಬೈಲ್ ಕ್ಷೇತ್ರ ನಶಿಸುತ್ತಿದೆ. ರೈತರು ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ. ಜನತೆ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಭಾವನಾತ್ಮಕ ವಿಚಾರಗಳಿಂದ ದೇಶ ಬಲಿಷ್ಠಗೊಳ್ಳಲು ಸಾಧ್ಯವಿಲ್ಲ. ರೈತರ ಸ್ಥಿತಿಗತಿ ಉತ್ತಮಪಡಿಸಲು ಬಜೆಟ್ನಲ್ಲಿ ಯಾವುದೇ ಯೋಜನೆ ಇಲ್ಲ. ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ರಾಜ್ಯದ ಸಂಸದರು ಲೋಕಸಭೆಯಲ್ಲಿ ಹೋರಾಟ ನಡೆಸಬೇಕು ಎಂದು ಆಗ್ರಹಿಸಿದರು.
ಐಡಿಬಿಐ, ಎಲ್ಐಸಿ ಖಾಸಗೀಕರಣಕ್ಕೆ ಹೊರಟಿರುವುದು ದೇಶದ ರ್ಥಿಕ ದುಃಸ್ಥಿತಿಯನ್ನು ತೋರಿಸುತ್ತದೆ. ಭಾರತೀಯ ಜನತಾ ಪಕ್ಷವು ಯಾವುದೇ ಅಭಿವೃದ್ಧಿ ಕರ್ಯ ಮಾಡದಿದ್ದರೂ ಸಾಮಾಜಿಕ ಮಾಧ್ಯಗಳಲ್ಲಿ ವಿಶ್ವವಿದ್ಯಾಲಯವನ್ನೇ ತೆರೆದಿದೆ ಎಂದು ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ವ್ಯಂಗ್ಯವಾಡಿದ್ದಾರೆ. ಉಳ್ಳಾಲದ ಒಂಭತ್ತುಕರೆಯಲ್ಲಿ ಪಾಳುಬಿದ್ದ ಮನೆಗಳ ಕುರಿತು ಟ್ರೋಲ್ ನಡೆಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, ಟ್ರೋಲ್ ಮಾಡುವವರನ್ನು ಯಾರು ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ ? ಸುಳ್ಳನ್ನು ಸತ್ಯ ಮಾಡಲು ಟ್ರೋಲ್ ನಡೆಸುತ್ತಿದ್ದಾರೆ ಎಂದರು. ೨೦೦೨ರಲ್ಲಿ ಉಳ್ಳಾಲದ ಒಂಭತ್ತುಕರೆಯಲ್ಲಿ ಮನೆ ಕಟ್ಟಿ ಆಗಿದೆ. ಒಳಚರಂಡಿ ಆಗದೇ ಸಮಸ್ಯೆಯಾಗಿದೆ. ಈ ಮನೆಗಳ ಪ್ರಕರಣ ನ್ಯಾಯಾಲಯದಲ್ಲಿದೆ. ಬಿಜೆಪಿ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ, ಅವರದೇ ಸರಕಾರದ ಮೂಲಕ ಮನೆಗಳ ವಿತರಣೆ ಮಾಡಲಿ ಎಂದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಮುಖಂಡರಾದ ಈಶ್ವರ ಉಳ್ಳಾಲ್, ಸಂತೋಷ್ ಕುಮಾರ್ ಶೆಟ್ಟಿ, ಝಕರಿಯ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು/ ನವದೆಹಲಿ : ಇತ್ತೀಚಿನ ದಿನಗಳಲ್ಲಿ ಅಭಿವೃದ್ದಿಯ ಹೆಸರಿನಲ್ಲಿ ಅನೇಕ ಜನರು ತಮ್ಮ ಕೃಷಿ ಹಾಗೂ ಪಟ್ಟಾ ಜಮೀನುಗಳನ್ನು ಸರ್ಕಾರಕ್ಕೆ ಬಿಟ್ಟುಕೊಡುವ ಪರಿಸ್ಥಿತಿ ಬಂದಿದೆ. ಹೀಗೆ ಬಿಟ್ಟು ಕೊಟ್ಟ ಜಮೀನಿಗೆ ಪರಿಹಾರ ನೀಡಲಾಗುತ್ತಿದೆಯಾದ್ರೂ ಪರಿಹಾರದ ಹಣಕ್ಕಾಗಿ ಜನರು ಅಲೆದಾಡುವ ಪರಿಸ್ಥಿತಿ ಕೂಡಾ ಇದೆ. ಆದ್ರೆ ಇನ್ನು ಮುಂದೆ ಈ ರೀತಿ ಸ್ವಾಧೀನಪಡಿಸಿದ ಜಮೀನಿಗೆ ಪರಿಹಾರ ನೀಡಲು ವಿಳಂಬವಾದ್ರೆ ಚಿಂತಿಸಬೇಕಾಗಿಲ್ಲ. ಯಾಕಂದ್ರೆ ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಭೂ ಪರಿಹಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಭೂಮಿ ಕಳೆದುಕೊಳ್ಳುವ ಸಂತ್ರಸ್ತರ ಪರವಾಗಿ ತೀರ್ಪೊಂದನ್ನು ನೀಡಿದೆ. ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ವಿಶೇಷ ಅಧಿಕಾರ ಬಳಸಿಕೊಂಡು ನ್ಯಾಯಾಲಯವು ಈ ತೀರ್ಪು ನೀಡಿದೆ. ಈ ತೀರ್ಪಿನಿಂದಾಗಿ ಇನ್ನು ಮುಂದೆ ಭೂ ಸ್ವಾಧೀನ ಮಾಡಿ ಪರಿಹಾರ ಸಮಯಕ್ಕೆ ಸರಿಯಾಗಿ ನೀಡದೇ ಇದ್ರೆ ಸರ್ಕಾರದ ಬೊಕ್ಕಸಕ್ಕೇ ನಷ್ಟ ಉಂಟಾಗಲಿದೆ. ಯಾಕಂದ್ರೆ ಇನ್ನು ಮುಂದೆ ಸರ್ಕಾರ ಭೂ ಸ್ವಾಧೀನ ಮಾಡಿ ಧೀರ್ಘಕಾಲ ಪರಿಹಾರ ನೀಡದೇ ಇದ್ದರೆ ಪರಿಹಾರ ನೀಡುವ ಸಮಯದಲ್ಲಿನ ಮಾರುಕಟ್ಟೆಯ ದರವನ್ನು ಸಂತ್ರಸ್ತರಿಗೆ ನೀಡಬೇಕಾಗುತ್ತದೆ.
ಯಾವ ಕಾರಣಕ್ಕೆ ಈ ಅದೇಶ ನೀಡಲಾಗಿದೆ..?
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(KIADB) ವಿರುದ್ಧ ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿ ಈ ಆದೇಶ ನೀಡಲಾಗಿದೆ. ಬೆಂಗಳೂರು ಮೈಸೂರು ಕಾರಿಡಾರ್ ಯೋಜನೆಗಾಗಿ ಸಾವಿರಾರು ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು 2003 ರಲ್ಲಿ KIADB ಅಧಿಸೂಚನೆ ಹೊರಡಿಸಿತ್ತು. ಆದ್ರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೂ ಸಂತ್ರಸ್ತರಿಗೆ ಪರಿಹಾರವನ್ನು ನೀಡಿರಲಿಲ್ಲ. ನೋಟಿಫಿಕೇಷನ್ ಬಳಿಕವೂ ಪರಿಹಾರ ಸಿಗದ ಕಾರಣ ಜಮೀನು ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. 2019 ರಲ್ಲಿ ಪರಿಹಾರ ನೀಡಲು KIADB ಮುಂದಾಗಿತ್ತಾದ್ರೂ ಅದು 2003 ರ ಮಾರುಕಟ್ಟೆ ದರವಾಗಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪ್ರಕರಣದ ತೀರ್ಪು ಹೊರಬಿದ್ದಿದೆ. ಕೆಐಎಡಿಬಿಯು ಸಂತ್ರಸ್ತರಿಗೆ 2019 ರ ಮಾರುಕಟ್ಟೆ ದರದಲ್ಲೇ ಪರಿಹಾರ ನೀಡಬೇಕು ಎಂದು ಆದೇಶ ನೀಡಿದೆ. ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠ ಈ ಪ್ರಕರಣದ ವಿಚಾರಣೆ ನಡೆಸಿದೆ
ಬಂಟ್ವಾಳ: ನೇತ್ರಾವತಿ ನದಿಯ ದೋಣಿಯ ಅಂಬಿಗ ಬರಿಮಾರು ಕಡವಿನಬಾಗಿಲು ನಿವಾಸಿ ದಿವಾಕರ ನಾಪತ್ತೆಯಾಗಿದ್ದಾರೆ.
ದಿವಾಕರ ಅವರು ಸುಮಾರು 30 ವರ್ಷಗಳಿಂದ ಅಂಬಿಗನಾಗಿ ಕೆಲಸ ಮಾಡುತ್ತಿದ್ದು, ಇವರು ನುರಿತ ಈಜುಗಾರರಾಗಿದ್ದರು. ಬರಿಮಾರು-ಸರಪಾಡಿಗೆ ದೋಣಿ ಮೂಲಕ ಸಂಪರ್ಕ ಸೇತುವೆಯಾಗಿ ಇವರು ಪ್ರತಿದಿನ ಕೆಲಸ ಮಾಡುತ್ತಿದ್ದರು.
ಜ.3 ರ ಶುಕ್ರವಾರ ಬೆಳಿಗ್ಗೆ ಸುಮಾರು 9 ಗಂಟೆಗೆ ಬರಿಮಾರಿನಿಂದ ಸರಪಾಡಿಗೆ ಹೋಗಿ ಅಲ್ಲಿನ ಅಂಗಡಿಯೊಂದರಿಂದ ಮನೆಗೆ ತರಕಾರಿ ಪಡೆದು, ವಾಪಸ್ ತೆರಳಿದ್ದು, 11 ಗಂಟೆ ವೇಳೆ ದೋಣಿ ಬರಿಮಾರು ಕಡವಿನ ಬಾಗಿಲಿನಲ್ಲಿ ತೇಲಾಡುವ ಸ್ಥಿತಿಯಲ್ಲಿ ಕಂಡು ಬಂದಿದೆ. ದಿವಾಕರ ಅವರು ಕಾಣಿಸಿದ ಕಾರಣ ಅವರ ಪತ್ನಿ ಸರಪಾಡಿಯ ಅಂಗಡಿಯ ಮೂಲಕ ಮಾಲೀಕರಿಗೆ ಫೋನ್ ಮಾಡಿ ವಿಚಾರಿಸಿದ್ದರು.
ಬರಿಮಾರು ಕಡವಿನ ಬಾಗಿಲಿನಲ್ಲಿ ಹಸಿಹುಲ್ಲು ಕಟ್ಟು, ಮೊಬೈಲ್, ಚಪ್ಪಲಿ ಕಂಡು ಬಂದಿದೆ. ದಿವಾಕರ ಅವರಿಗೆ ಮೂರ್ಛೆ ರೋಗವಿದ್ದು, ಈ ಹಿಂದೆ ಕೂಡಾ ನದಿ ಬದಿಯಲ್ಲಿ ಬಿದ್ದ ಘಟನೆ ನಡೆದಿತ್ತು. ಇವತ್ತು ಕೂಡಾ ಮೂರ್ಛೆ ರೋಗ ಭಾದಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಸ್ಥಳೀಯರು ನದಿ ಸುತ್ತಮುತ್ತ ಹುಡುಕಾಟ ನಡೆಸುತ್ತಿದ್ದು, ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ.
ಹೊಸ ವರ್ಷ ಬಂದಾಗ ಹಳೆಯ ಕ್ಯಾಲೆಂಡರ್ ತೆಗೆದು ಹೊಸ ಕ್ಯಾಲೆಂಡರ್ ಹಾಕುವುದು ಪದ್ಧತಿ. ವಾಸ್ತುಪ್ರಕಾರ ಕೆಲವೊಂದು ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕುವುದರಿಂದ ಲಾಭವಿದೆ. ಆದರೆ ಇನ್ನು ಕೆಲವು ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕಿದರೆ ಅಪಾಯ ಕಟ್ಟಿಟ್ಟ ಭುತ್ತಿ. ಅದರ ಕುರಿತು ವಿವರ ಇಲ್ಲಿದೆ.
ವಾಸ್ತುಶಾಸ್ತ್ರದ ಪ್ರಕಾರ ಹಳೆಯ ಕ್ಯಾಲೆಂಡರ್ಗಳನ್ನು ಮನೆಯಲ್ಲಿ ಇಡುವುದು ಒಳ್ಳೆಯದಲ್ಲ. ಇದು ಪ್ರಗತಿಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಹಳೆ ಕ್ಯಾಲೆಂಡರ್ ತೆಗೆದು ಹೊಸ ವರ್ಷದಲ್ಲಿ ಹೊಸ ಕ್ಯಾಲೆಂಡರ್ ಅಳವಡಿಸಬೇಕು. ಇದರಿಂದ ಹೊಸ ವರ್ಷದಲ್ಲಿ ಹಳೆ ವರ್ಷಕ್ಕಿಂತ ಹೆಚ್ಚು ಶುಭ ಅವಕಾಶಗಳು ಲಭಿಸುತ್ತವೆ. ಹೊಸ ಕ್ಯಾಲೆಂಡರ್ ಅನ್ನು ಇಡುವಾಗ ಅನುಸರಿಸಬೇಕಾದ ವಾಸ್ತು ನಿಯಮಗಳು ಯಾವುವು ಎಂದು ತಿಳಿಯೋಣ.
ವಾಸ್ತು ಪ್ರಕಾರ, ನಿಮ್ಮ ಮನೆಯ ಮುಖ್ಯ ಬಾಗಿಲಿಗೆ ಕ್ಯಾಲೆಂಡರ್ ಅನ್ನು ಹಾಕಬೇಡಿ. ಹಾಗೆ ಮಾಡುವುದರಿಂದ ನಿಮ್ಮ ಪ್ರಗತಿಗೆ ಅಡ್ಡಿಯಾಗುತ್ತದೆ ಮತ್ತು ನಿಮ್ಮ ಕೆಲಸಕ್ಕೂ ಸಹ ಅಡ್ಡಿಯಾಗುತ್ತದೆ. ಕ್ಯಾಲೆಂಡರ್ಗಳನ್ನು ಮುಖ್ಯ ಬಾಗಿಲಿನ ಮೇಲೆ ಇಡಬಾರದು.
ಹೊಸ ವರ್ಷದ ಕ್ಯಾಲೆಂಡರ್ ಅನ್ನು ಬಾಗಿಲಿನ ಹಿಂದೆ ಇಡುವುದರಿಂದ ಬಹಳಷ್ಟು ಹಾನಿಯಾಗುತ್ತದೆ. ವಾಸ್ತವವಾಗಿ, ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಕ್ಯಾಲೆಂಡರ್ ಅನ್ನು ಯಾವಾಗಲೂ ನಿಮ್ಮ ಮುಂದೆ ಇರಿಸಿ ಮತ್ತು ಅದರ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಬೇಕು.
ಅನೇಕ ಜನರು ಹೊಸ ವರ್ಷದ ಕ್ಯಾಲೆಂಡರ್ ಅನ್ನು ಇಟ್ಟುಕೊಳ್ಳುತ್ತಾರೆ ಆದರೆ ಹಳೆಯದನ್ನು ತೆಗೆದುಹಾಕಲು ಮರೆಯುತ್ತಾರೆ. ಆ ತಪ್ಪನ್ನು ಮಾಡಬೇಡಿ. ಹಳೆಯ ಕ್ಯಾಲೆಂಡರ್ ಅನ್ನು ಮನೆಯಲ್ಲಿ ಇಡಬೇಡಿ. ಅದು ನಿಮ್ಮನ್ನು ಜೀವನದಲ್ಲಿ ಮುನ್ನಡೆ ಸಾಧಿಸಲು ಬಿಡುವುದಿಲ್ಲ. ನೀವು ಎಷ್ಟೇ ಪ್ರಯತ್ನಿಸಿದರೂ ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ.
ಅದರಲ್ಲೂ ಕ್ಯಾಲೆಂಡರ್ ಅನ್ನು ಉತ್ತರ, ಪಶ್ಚಿಮ ಅಥವಾ ಪೂರ್ವ ದಿಕ್ಕಿನಲ್ಲಿರುವ ಗೋಡೆಯ ಮೇಲೆ ಇಡಬೇಕು. ಬಹಳ ಮುಖ್ಯವಾಗಿ ಹಿಂಸಾತ್ಮಕ ಪ್ರಾಣಿಗಳು, ದುಃಖದ ಮುಖಗಳ ಚಿತ್ರಗಳೊಂದಿಗೆ ಇರುವ ಕ್ಯಾಲೆಂಡರ್ ಹಾಕಬೇಡಿ. ಉತ್ತರ ದಿಕ್ಕು ಕುಬೇರನ ದಿಕ್ಕು. ಈ ದಿಕ್ಕಿನಲ್ಲಿ ಹಸಿರು, ಕಾರಂಜಿ, ನದಿ, ಸಮುದ್ರ, ಜಲಪಾತಗಳು, ಮದುವೆ ಇತ್ಯಾದಿಗಳ ಚಿತ್ರಗಳನ್ನು ಹೊಂದಿರುವ ಕ್ಯಾಲೆಂಡರ್ ಅನ್ನು ಈ ದಿಕ್ಕಿನಲ್ಲಿ ಇಡಬೇಕು. ಇನ್ನು ಈ ದಿಕ್ಕಿನದಲ್ಲಿ ಕ್ಯಾಲೆಂಡರ್ ಹಾಕಿದರೆ ಮನೆಯಲ್ಲಿ ಸುಖ ಸಮೃದ್ಧಿ ನೆಲೆಯಾಗುತ್ತದೆ.