ರಾಮನಗರ: ನಾನು ಪೂಜೆ ಮಾಡುತ್ತಿರುವ ಸಂದರ್ಭ ಮಹಿಳೆ ನಗ್ನವಾಗಿ ನಿಂತರೆ ನಿನ್ನ ಭೂಮಿಯಲ್ಲಿ ಅಡಗಿರುವ ನಿಧಿ ತನ್ನಿಂದ ತಾನಾಗಿಯೇ ಮೇಲೆ ಬರುತ್ತದೆ ಎಂದು ಮಹಿಳೆಯ ಬೆತ್ತಲೆ ಪೂಜೆ ನಡೆಸುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮಿಳುನಾಡು ಮೂಲದ ಪಾರ್ಥಸಾರಥಿ, ನಾಗರಾಜು, ಶಶಿಕುಮಾರ್, ಲೋಕೇಶ್, ಮೋಹನ್, ಲಕ್ಷ್ಮಿನರಸಪ್ಪ ಬಂಧಿತರು.
ಪೂಜೆ ನೆಪದಲ್ಲಿ ಬಲಿಯಾಗುತ್ತಿದ್ದ ಯಾದಗಿರಿ ಮೂಲದ ಕೂಲಿ ಕಾರ್ವಿುಕ ಮಹಿಳೆಯನ್ನು ರಕ್ಷಿಸಲಾಗಿದೆ.
ಘಟನೆ ಹಿನ್ನೆಲೆ
ಶ್ರೀನಿವಾಸ್ ಎಂಬಾತ ತನ್ನೂರಿನಲ್ಲಿ ಏಳಿಗೆ ಕಂಡಿರಲಿಲ್ಲ. ಜಮೀನು ಕೈತಪ್ಪಿತ್ತು. ಹೀಗಾಗಿ ಊರು ಬಿಟ್ಟು ಹೆಂಡತಿ ತವರು (ಬನ್ನೂರು) ಸೇರಿಕೊಂಡಿದ್ದ.
6 ತಿಂಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ಸಂಬಂಧಿಯೊಬ್ಬರ ಸಾವಿಗೆ ಹೋಗಿದ್ದಾಗ ಅಲ್ಲಿನ ಮೇಸ್ತ್ರಿ ಪಾರ್ಥಸಾರಥಿ ಪರಿಚಯವಾಗಿತ್ತು. ಮನೆಯಲ್ಲಿ ನಿಧಿ ಇದ್ದರೆ, ಹೀಗೆಲ್ಲ ಆಗುತ್ತದೆ.
ನಮ್ಮ ಕಡೆ ಪೂಜಾರಿಯೊಬ್ಬರು ಇದ್ದಾರೆ. ಅವರ ಬಳಿ ಮಾತನಾಡುತ್ತೇನೆಂದು ಶಶಿಕುಮಾರ್ ಪರಿಚಯಿಸಿದ್ದ.
ಅದರಂತೆ ಆ ಪೂಜಾರಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದ, ಆ ಪ್ರಕಾರ ಮನೆಯೊಳಗೆ ಗುಂಡಿಯೊಂದನ್ನು ಅಗೆದು ಅಲ್ಲಿ ಪೂಜೆ ನಡೆಯಬೇಕು.
ಈ ವೇಳೆ ಮನೆಯ ಯಜಮಾನನ ಪತ್ನಿ ಬೆತ್ತಲಾಗಿ ನಿಲ್ಲಬೇಕೆಂದು ಪೂಜಾರಿ ಹೇಳಿದ್ದನು. ಇದನ್ನು ಶ್ರೀನಿವಾಸ್ ತನ್ನ ಪತ್ನಿಗೆ ಒತ್ತಾಯಿಸಿದ್ದಾನೆ. ಆದರೆ ಆಕೆ ಬೆತ್ತಲಾಗಲು ಒಪ್ಪಲಿಲ್ಲ.
ಕೂಲಿಯಾಳನ್ನು 50 ಸಾವಿರ ಕೊಟ್ಟು ತಂದಿದ್ದರು
ನಿಧಿಯ ಮೋಹ ಬಿಡದ ಶ್ರೀನಿವಾಸ್ ತನ್ನ ಜೊತೆಗಿದ್ದ ಪಾರ್ಥಸಾರಥಿಯ ಮನೆಯಲ್ಲಿದ್ದ ಕೆಲಸದಾಳು ಸುಜಾತಳನ್ನು 50 ಸಾವಿರ ರೂಪಾಯಿ ಕೊಟ್ಟು ಬೆತ್ತಲು ಪೂಜೆಗೆ ಬುಕ್ ಮಾಡಿಕೊಂಡಿದ್ದ,
ಅದರಂತೆ ನ.2ರಂದು ಸುಜಾತ ಬೆತ್ತಲೆ ಪೂಜೆಗೆ ತನ್ನ 4 ವರ್ಷದ ಹೆಣ್ಣು ಮಗುವಿನೊಂದಿಗೆ ಬಂದಿದ್ದಾಳೆ.
ಆದರೆ ಕೆಲಸದಾಳು ಸುಜಾತ ನೋಡಲು ಕಪ್ಪು ಸುಂದರಿ, ಅದು ಪೂಜಾರಿ ಹಿಡಿಸಲಿಲ್ಲ. ಇದರಿಂದ ಅಸಮಾಧಾನ ಮಾಡಿಕೊಂಡ ಪೂಜಾರಿ ಸುಜಾತಾ ನೋಡಲು ಸುಂದರವಾಗಿಲ್ಲ ಆದ್ದರಿಂದ ಮತ್ತೊಂದು ಸಲ ಇಂತಹವನ್ನೆಲ್ಲ ಬಿಟ್ಟು ಸುಂದರ ಹೆಣ್ಣನ್ನು ಕರೆತನ್ನಿ ಆಗ ಪೂಜೆ ಮಾಡುತ್ತೇನೆ ಎಂದಿದ್ದಾನೆ.
ಅಷ್ಟರೊಳಗೆ ಪೊಲೀಸರು ದಾಳಿ ನಡೆಸಿದ್ದಾರೆ. ಮನೆ ಮಾಲೀಕನ ವಿರುದ್ಧ ವಂಚನೆ, ಮೌಢ್ಯ ನಿಷೇಧ ಕಾಯ್ದೆ ಉಲ್ಲಂಘನೆ, ಮಹಿಳೆ ಮೇಲಿನ ದೌರ್ಜನ್ಯ ಸೇರಿ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಟೈಟ್ ಸೆಕ್ಯೂರಿಟಿ ಇತ್ತು
ಭೂಹಳ್ಳಿಯಲ್ಲಿಯೇ ಶ್ರೀನಿವಾಸ್ ಅವರದು ದೊಡ್ಡ ಮನೆ. ನಿಧಿಗಾಗಿ ಕಳೆದ ಹುಣ್ಣಿಮೆಯಿಂದಲೂ ಪೂಜೆ ನಡೆಯುತ್ತಲೇ ಇತ್ತು.
ರಾತ್ರಿ ವೇಳೆ ತಮಿಳುನಾಡು ನೋಂದಣಿ ಸಂಖ್ಯೆಯ ವಾಹನಗಳಲ್ಲಿಯೇ ಬರುತ್ತಿದ್ದ ಇವರು, ತಮ್ಮೊಂದಿಗೆ ಪುಡಿ ರೌಡಿಗಳನ್ನು ಕರೆತಂದು ಗ್ರಾಮದಲ್ಲಿ ಕಾವಲು ಕಾಯಿಸುತ್ತಿದ್ದರು.
ಬೆಳಗ್ಗೆ ಆಗುತ್ತಿದ್ದಂತೆ ಎಲ್ಲರೂ ಸದ್ದಿಲ್ಲದೆ ಜಾಗ ಖಾಲಿ ಮಾಡುತ್ತಿದ್ದರು.