Saturday, August 20, 2022

ನಗ್ನ ಚಿತ್ರ ವೈರಲ್ ಬೆದರಿಕೆ; ಯುವತಿಯರಿಂದ ಹನಿಟ್ರ್ಯಾಪ್..

ನಗ್ನ ಚಿತ್ರ ವೈರಲ್ ಬೆದರಿಕೆ; ಯುವತಿಯರಿಂದ ಹನಿಟ್ರ್ಯಾಪ್..

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದುದನ್ನೇ  ಬಂಡವಾಳವಾಗಿಸಿ ಇಬ್ಬರು ಯುವತಿಯರು ಇನ್ನಿಬ್ಬರು ಯುವಕರೊಂದಿಗೆ ಹನಿಟ್ರ್ಯಾಪ್ ನಡೆಸಲು ಹೋಗಿ ಪೊಲೀಸರ ಅತಿಥಿಯಾದ ಘಟನೆ ನಡೆದಿದೆ.

  ಫೇಸ್ಬುಕ್‌ನಲ್ಲಿ ಆತ್ಮೀಯನಾಗಿದ್ದ ಕುಂಬಳೆ ಮೂಲದ ವ್ಯಕ್ತಿಯೊಬ್ಬನನ್ನು ಹನಿಟ್ರ್ಯಾಪ್‌ಗೆ ಒಳಪಡಿಸಿ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟ ಇಬ್ಬರು ಯುವತಿಯರ ಸಹಿತ ನಾಲ್ಕು ಮಂದಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಈ ನಾಲ್ವರು ಕೂಡಾ ಇದೇ ರೀತಿ ಹಲವರನ್ನು ಹನಿಟ್ರಾಪ್‌ಗೆ ಒಳಪಡಿಸಿ ಹಣ ಮಾಡುತ್ತಿದ್ದರು ಎಂದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

ಕುಂಬಳೆ ಯುವಕನೋರ್ವನಿಗೆ  ಸುರತ್ಕಲ್ ಕೃಷ್ಣಾಪುರದ ಇಬ್ಬರು ಯುವತಿಯರ ಪರಿಚಯವಾಗಿತ್ತು.  ಆತನೊಂದಿಗೆ ವಾಟ್ಸಾಪ್ ಮೂಲಕ ಮೆಸ್ಸೇಜ್ ಕಳುಹಿಸುತ್ತಾ  ಆತ್ಮೀಯರಾಗಿದ್ದರು.

ಕೊನೆಗೆ ಆತನನ್ನು ಕೃಷ್ಣಾಪುರದ ಮನೆಯೊಂದಕ್ಕೆ ಬರಲು ಹೇಳಿದ್ದು, ಅಲ್ಲಿದ್ದ ಇನ್ನಿಬ್ಬರು ಯುವಕರು ಸೇರಿ ಈತನನ್ನು ಅಜ್ಞಾತ ಸ್ಥಳಕ್ಕೆ ಕಾರೊಂದರಲ್ಲಿ ಕರೆದೊಯ್ದಿದ್ದಾರೆ.

ಬಳಿಕ ಆತನನ್ನು ವಿವಸ್ತ್ರಗೊಳಿಸಿ ಫೋಟೋ ತೆಗೆದು ೫ ಲಕ್ಷ ರೂಪಾಯಿ ನೀಡಬೇಕು. ಇಲ್ಲದೇ ಇದ್ದಲ್ಲಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.

ಆದರೆ ಅಷ್ಟು ಹಣ ಇಲ್ಲದ ಕಾರಣ ಕಾರನ್ನು ಒತ್ತೆ ಇಟ್ಟುಕೊಂಡು ಆತನನ್ನು ಕಳುಹಿಸಿದ್ದಾರೆ. ಹಣಕ್ಕಾಗಿ ಕಿರುಕುಳ ಹೆಚ್ಚಾದಾಗ ಸಿಸಿಬಿ ಪೊಲೀಸರಿಗೆ ಯುವಕ ದೂರು ನೀಡಿದ್ದಾನೆ.

ತನ್ನ ಬಳಿ 30 ಸಾವಿರ ಇದೆ ಬನ್ನಿ ಎಂದು ಅವರನ್ನು ಪಂಪ್ವೆಲ್ ಬರಲು ಹೇಳಿ ನಾಟಕವಾಡಿದ್ದು, ಅದಾಗಲೇ ಸಿದ್ಧರಾಗಿದ್ದ ಸಿಸಿಬಿ ಪೊಲೀಸರು ನಾಲ್ವರನ್ನೂ ಬಂಧಿಸಿ, ಹೆಚ್ಚಿನ ವಿಚಾರಣೆಗೆ ಸುರತ್ಕಲ್ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

 

updates 

ಹಲವು ಸಮಯಗಳಿಂದ ಹನಿ ಟ್ರ್ಯಾಪ್ ಮಾಡುತ್ತಿದ್ದ ಇಬ್ಬರು ಯುವತಿಯರು ಸೇರಿದಂತೆ  ನಾಲ್ವರ ಬಂಧನ ..

ಮಂಗಳೂರು:  ಫೇಸ್ಬುಕ್‌ ಜಾಲತಾಣದಲ್ಲಿ  ಆತ್ಮೀಯನಾಗಿದ್ದ ಕುಂಬಳೆ ಮೂಲದ ವ್ಯಕ್ತಿಯೊಬ್ಬನನ್ನು ಹನಿಟ್ರ್ಯಾಪ್‌ಗೆ ಒಳಪಡಿಸಿ 5 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ  ಇಬ್ಬರು ಯುವತಿಯರ ಸಹಿತ ನಾಲ್ಕು ಮಂದಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್‌ ಶಶಿಕುಮಾರ್‌ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಮಿಷನರ್  ಜನವರಿ 14ರಂದು ಈ ಕೃತ್ಯವೆಸಗಲಾಗಿದೆ. ಸುರತ್ಕಲ್ ಕೃಷ್ಣಾಪುರದ ಇಬ್ಬರು ಮಹಿಳೆಯರಾದ ರೇಶ್ಮಾ ಯಾನೆ ಸೀಮಾ , ಝೀನತ್ ಯಾನೆ ಝೀನತ್‌ ಮುಬೀನ್‌, ನಾಸಿಕ್‌ ಯಾನೆ ಅಬ್ದುಲ್‌ ಖಾದರ್‌ ನಾಸಿಫ್ ಮತ್ತು ಇಕ್ಬಾಲ್‌ ಮೊಹಮ್ಮದ್‌ ಯಾನೆ ಇಕ್ಬಾಲ್‌ ಇವರನ್ನು ಬಂಧಿಸಲಾಗಿದೆ ಎಂದವರು ವಿವರಿಸಿದರು.

ಫೇಸ್ಬುಕ್‌ನಲ್ಲಿ ಕುಂಬಳೆ ಯುವಕನನ್ನು ಸಂಪರ್ಕಿಸಿ ಕರೆದುಕೊಂಡು ಹೋಗಿ, ಹನಿಟ್ರ್ಯಾಪ್‌ ಮಾಡಿ 5 ಲಕ್ಷಕ್ಕೆ ಬೇಡಿಕೆ ಇಟ್ಟು ಬೆದರಿಸಿದ್ದಾರೆ. ಇವರೆಲ್ಲರೂ ಕೃಷ್ಣಾಪುರದಲ್ಲಿ ವಾಸ್ತವ್ಯ ಹೂಡಿದ್ದವರು  ರೇಶ್ಮಾ ಬೀಡಿ ಕಟ್ಟುತ್ತಿದ್ದರು, ಝೀನತ್‌ ಎಲ್‌ಐಸಿ ಏಜೆಂಟ್‌ ಆಗಿದ್ದರೆ, ಯುವಕರು ಚಾಲಕರಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿದು ಬಂದಿದೆ.

ಇವರು ಹಲವರನ್ನು ಟ್ರ್ಯಾಪ್ ‌ ಮಾಡಿ ದುಡ್ಡು ಮಾಡಿರುವುದು ಗಮನಕ್ಕೆ ಬಂದಿದೆ. ಇನ್ನೂ ನಾಲ್ಕೈದು ಮಂದಿ ಆರೋಪಿಗಳು ಇವರ ಜೊತೆ ಶಾಮೀಲಾಗಿದ್ದಾರೆ.

ಈಗಾಗಲೇ 6 ಜನರನ್ನು ಇವರು ಬೆದರಿಸಿ ಹಣ ವಸೂಲಿ ಮಾಡಿದ್ದಾರೆ. ಬಂದ ಹಣದಿಂದ ಶೋಕಿ ಜೀವನ ನಡೆಸುತ್ತಿದ್ದರು. ಕೇರಳ ಮೂಲದವರನ್ನು ಇವರು ಟಾರ್ಗೆಟ್ ಮಾಡಿ ಹನಿ ಟ್ರ್ಯಾಪ್ ಮಾಡುತ್ತಿದ್ದರು ಎಂದು ಕಮಿಷನರ್‌ ವಿವರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಡಿಸಿಪಿ ವಿನಯ ಗಾಂವ್ಕರ್‌  ಉಪಸ್ಥಿತರಿದ್ದರು..

LEAVE A REPLY

Please enter your comment!
Please enter your name here

Hot Topics