Sunday, July 3, 2022

ಸೌದಿಯ ‘ಗ್ರೀನ್‌ ಕಾರ್ಡ್‌’ ಪಡೆದು ಇತಿಹಾಸ ನಿರ್ಮಿಸಿದ ಮೂಲ್ಕಿ ಕರ್ನಿರೆಯ ಕೆ.ಎಸ್. ಶೇಖ್..!

ಮಂಗಳೂರು: ದೊಡ್ಡದಾದ ಕನಸು ಮತ್ತು ಹಠಬಿಡದ ಛಲವೊಂದಿದ್ದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂಬುವುದನ್ನು ಹಲವು ಕರಾವಳಿಗರು ಅದರಲ್ಲೂ ನಮ್ಮ ತುಳುವರು ನಿರೂಪಿಸಿದ್ದಾರೆ.

ಅದರಂತೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಹೊರವಲಯದ ಮುಲ್ಕಿಯ ಕರ್ನಿರೆ ಎಂಬ ಕುಗ್ರಾಮದಿಂದ ಸಪ್ತಸಾಗರದಾಚೆ ಇರುವ ಕೊಲ್ಲಿ ರಾಷ್ಟ್ರ ಸೌದಿ ಅರೇಬಿಯಾದಲ್ಲಿ ತನ್ನದೇ ಸಾಮ್ರಾಜ್ಯ ನಿರ್ಮಿಸಿ ಪ್ರೀಮಿಯಂ ರೆಸಿಡೆನ್ಸಿ ಅರ್ಥಾತ್‌ ಗ್ರೀನ್‌ ಕಾರ್ಡ್‌ ಪಡೆದ ಕೆಲವೇ ಭಾರತೀಯರ ಸಾಲಿಗೆ ಎಕ್ಸ್‌ಪರ್ಟೈಸ್ ಕಾಂಟ್ರಾಕ್ಟಿಂಗ್ ಲಿಮಿಟೆಡ್‌ನ ಉಪಾಧ್ಯಕ್ಷ ಕೆ.ಎಸ್. ಶೇಖ್ ಕರ್ನಿರೆ ಅವರು ಸೇರಿ ಇತಿಹಾಸ ಬರೆದಿದ್ದಾರೆ.

ಏನಿದು ಗ್ರೀನ್‌ ಕಾರ್ಡ್‌
ಸೌದಿ ಅರೇಬಿಯಾ ಸರಕಾರವು ತನ್ನ ದೇಶದಲ್ಲಿ ಆರ್ಥಿಕತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅನಿವಾಸಿಯರಿಗೆ ತನ್ನ ದೇಶದಲ್ಲಿ ಪೌರತ್ವ ನೀಡುವ ಸಂಪ್ರಾದಾಯ ಇಟ್ಟುಕೊಂಡಿದೆ.

ಸದ್ಯ ಸೌದಿ ಅರೇಬಿಯಾದ ವಿಷನ್ 2030 ಸುಧಾರಣಾ ಯೋಜನೆಯ ಭಾಗವಾಗಿ ಪ್ರೀಮಿಯಂ ರೆಸಿಡೆನ್ಸಿಯನ್ನು ಪರಿಚಯಿಸಲಾಗಿದೆ.

ಪ್ರೀಮಿಯಂ ರೆಸಿಡೆನ್ಸಿ ಕಾರ್ಡ್ ಸೌದಿ ಅರೇಬಿಯಾದಲ್ಲಿ ಯಾವುದೇ ಪ್ರಾಯೋಜಕರ ಅಗತ್ಯವಿಲ್ಲದೇ ವಾಸಿಸುವ, ಕೆಲಸ ಮಾಡುವ ಮತ್ತು ವ್ಯಾಪಾರ ಹಾಗೂ ಆಸ್ತಿಯನ್ನು ಹೊಂದುವ ಹಕ್ಕನ್ನು ವಲಸಿಗರಿಗೆ ನೀಡುತ್ತಿದೆ.


ಈ ಸಂತೋಷದ ಸುದ್ದಿಯ ಕುರಿತು ಪ್ರತಿಕ್ರಿಯಿಸಿರುವ ಉದ್ಯಮಿ ಶೇಖ್ ಕರ್ನಿರೆ ಇದು ನನ್ನ ಜೀವನದ ಹೆಮ್ಮೆಯ ಕ್ಷಣವಾಗಿದೆ.

‘ಸೌದಿ ಅರೇಬಿಯಾದ ರಾಜ ಸಲ್ಮಾನ್, ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಮತ್ತು ಇಡೀ ಸೌದಿ ಸರ್ಕಾರಕ್ಕೆ ನಾನು ಅಭಾರಿಯಾಗಿದ್ದೇನೆ.

ಮಂಗಳೂರಿನ ಕರ್ನಿರೆ ಎಂಬ ಪುಟ್ಟ ಗ್ರಾಮದಿಂದ 35 ವರ್ಷದ ಹಿಂದೆ ಉದ್ಯೋಗ ಅರಸಿ ದೊಡ್ಡ ಕನಸಿನೊಂದಿಗೆ ಬಂದು ಇಂದು ದೇವರ ದಯೆಯಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ.

ಸೌದಿ ಅರೇಬಿಯಾದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದರೂ ತಾನು ಮಂಗಳೂರಿಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಶೇಖ್ ಕರ್ನಿರೆ.

ಸದ್ಯ ಶೇಖ್ ಕರ್ನಿರೆ ಸಾರಥ್ಯದ ಎಕ್ಸ್‌ಪರ್ಟೈಸ್ ಕಂಪನಿಯಲ್ಲಿ 20 ದೇಶಗಳ ಸರಿಸುಮಾರು 10 ಸಾವಿರಕ್ಕೂ ಅಧಿಕ ಜನ ಉದ್ಯೋಗಿಗಳಾಗಿದ್ದಾರೆ. ಅದರಲ್ಲೂ ಹೆಚ್ಚಿನವರು ಭಾರತೀಯರಾಗಿದ್ದರೂ ಮಂಗಳೂರಿಗರಿಗೆ ಮೊದಲ ಆದ್ಯತೆ ನೀಡಿದ್ದಾರೆ.


“ಎಕ್ಸ್‌ಪರ್ಟೈಸ್” ಸಂಸ್ಥೆ
ಆಟೋಮೊಬೈಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ಮುಲ್ಕಿ ಮೂಲದ ಶೇಖ್ ಕರ್ನಿರೆ 1999 ರಲ್ಲಿ ತನ್ನ ಐದು ಸಹೋದರರೊಂದಿಗೆ ಸೇರಿ ಸೌದಿಯಲ್ಲಿ ʼಎಕ್ಸ್‌ಪರ್ಟೈಸ್ʼ  ಕಂಪನಿ ಸ್ಥಾಪಿಸಿದರು.

5,000 ಕ್ಕೂ ಹೆಚ್ಚು ಅತ್ಯಾಧುನಿಕ ತಂತ್ರಜ್ಞಾನದ ಸಲಕರಣೆಗಳು ಹೊಂದಿರುವ ಈ ಕಂಪೆನಿಯು ಸೌದಿ ಅರೇಬಿಯಾದ ಹೆಸರಾಂತ ಕೈಗಾರಿಕಾ ಸೇವಾ ಪೂರೈಕೆದಾರರಾಗಿದ್ದಾರೆ.

ಪೆಟ್ರೋ ಕೆಮಿಕಲ್, ತೈಲ ಮತ್ತು ಅನಿಲ, ರಸಗೊಬ್ಬರ, ಉಕ್ಕು, ಸಿಮೆಂಟ್, ನೀರಿನ ಸಂಸ್ಕರಣೆ ಹಾಗೂ ವಿದ್ಯುತ್ ಉತ್ಪಾದನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸಿದೆ. ಸೌದಿಯ ಇಂಡಸ್ಟ್ರಿಯಲ್ ನಗರ ಜುಬೈಲ್‌ ನಲ್ಲಿ ಕಂಪೆನಿ ಪ್ರಧಾನ ಕಚೇರಿ ಹೊಂದಿದ್ದು ಹಲವು ಶಾಖೆಗಳನ್ನು ಹೊಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲೂಕಿನ ಕರ್ನಿರೆ ಗ್ರಾಮದಲ್ಲಿ ದಿ. ಹಾಜಿ ಕೆ.ಎಸ್‌. ಸಯೀದ್‌ ಹಾಗೂ ಅಮೀನಾ ದಂಪತಿ ತಮ್ಮ 11 ಮಕ್ಕಳೊಂದಿಗೆ ಸಂಸಾರದ ನೌಕೆ ಸಾಗಿಸಿದವರು.

ಈ ತುಂಬು ಸಂಸಾರದಲ್ಲಿ ಕೆ.ಎಸ್‌ ಶೇಖ್‌ ಹಿರಿಯವರು. ಆ ಕಾಲದಲ್ಲೂ ಮಕ್ಕಳಿಗೆ ಶಿಕ್ಷಣಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡರು ಈ ದಂಪತಿ.

ಸಾಮಾಜಿಕ ನೇತಾರರಾಗಿದ್ದ ಹಾಜಿ ಕೆ ಎಸ್ ಸಯೀದ್ ತಮ್ಮ ಗ್ರಾಮದಲ್ಲಿರುವ ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆಯುತ್ತಿದ್ದರು.

ಇದನ್ನು ಇಂದಿಗೂ ಹಲವರು ಸ್ಮರಿಸುತ್ತಿದ್ದಾರೆ. ಈ ಗೌರವಸ್ಥ ಕುಟುಂಬದ ಮತ್ತೊಂದು ವಿಶೇಷತೆ ಎಂದರೆ ಆರು ಸಹೋದರರು ಕೂಡ ಒಟ್ಟಿಗೆ ಒಂದೇ ಕಂಪನಿಯಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.

ಇದೀಗ ತಂದೆ ದಿವಂಗತ ಕೆ.ಎಸ್ ಸಯೀದ್ ಅವರ ಹೆಸರಿನಲ್ಲಿ ನಡೆಸುತ್ತಿರುವ ಚಾರಿಟಬಲ್ ಟ್ರಸ್ಟ್‌ ಹಲವು ಬಡ ಕುಟುಂಬಗಳಿಗೆ ಆಹಾರ, ವಸತಿ ಮತ್ತು ಶಿಕ್ಷಣಕ್ಕೆ ದಾರಿ ದೀಪವಾಗಿದೆ.

ಮಹಾಮಾರಿ ಕೊರೋನಾ ಸಾಂಕ್ರಾಮಿಕ ಕಾಲದಲ್ಲಿ 10 ಕ್ಕೂ ಅಧಿಕ ಚಾರ್ಟೆಡ್‌ ಫ್ಲೈಟ್‌ ಗಳ ಮೂಲಕ ಭಾರತದ ವಿವಿಧ ಭಾಗಗಳಿಗೆ ತಮ್ಮ ಕಂಪೆನಿಯ 2000ಕ್ಕೂ ಅಧಿಕ ಉದ್ಯೋಗಿಗಳನ್ನು ತಾಯ್ನಾಡಿಗೆ ಸೇರಿಸಿ ತಮ್ಮ ಮಾನವೀಯತೆ ಮೆರೆದಿದ್ದಾರೆ.

ಒಂದು ಉತ್ತಮ ಗೌರವಯುತ ಕುಟುಂಬವಾಗಿದ್ದು, ಕಳೆದ 3 ದಶಕದಿಂದ ವಿದೇಶದಲ್ಲಿದ್ದರೂ ತಾನು ಹುಟ್ಟಿ ಬೆಳೆದ ಊರು, ಭಾಷೆಯನ್ನು ಮರೆತಿಲ್ಲ. ಜೊತೆಗೆ ತುಂಬಾ ಕಷ್ಟದಿಂದ ಶಿಕ್ಷಣ ಪಡೆದು ಈ ಮಟ್ಟಕ್ಕೆ ಏರಿದ್ದಾರೆ. ಅವರ ಈ ಪ್ರಗತಿ ನಮಗೆ ಖುಷಿ ತಂದಿದೆ.
ಕರ್ನಿರೆ ವಿಶ್ವನಾಥ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ

ಶೇಖ್ ಕರ್ನಿರೆ ಅವರಿಗೆ ಸೌದಿ ಅರೇಬಿಯಾದಲ್ಲಿ ಗ್ರೀನ್‌ ಕಾರ್ಡ್‌ ಸಿಕ್ಕಿದ್ದು ತುಂಬಾ ಹೆಮ್ಮೆ ಮತ್ತು ಖುಷಿಯಾಗಿದೆ. ಇದು ಕರ್ನಿರೆ ಗ್ರಾಮಕ್ಕೆ ಸಿಕ್ಕಿದ ಗೌರವ ಎಂದು ನಾನು ಭಾವಿಸುತ್ತೇನೆ. ಇವರ ತಂದೆ ಶೇಖ್‌ ಸಯೀದ್‌ ಸಹ ತುಂಬಾ ಒಳ್ಳೆಯ ಸಹೃದಯಿ ಜೀವಿ. ಅವರ ಮಕ್ಕಳು ಸಹ ಇಷ್ಟು ಎತ್ತರಕ್ಕೆ ಬೆಳೆದರೂ ಬಾಲ್ಯದಲ್ಲಿ ಇದ್ದಂತಹ ಸ್ನೇಹ, ಗೌರವ ಮತ್ತು ಪ್ರೀತಿಯನ್ನು ಈಗಲೂ ತೋರಿಸುತ್ತಿರುವುದು ಸಂತಸದ ವಿಷಯ.
ಗಂಗಾಧರ್‌ ನಾರಾಯಣ ಅಮೀನ್‌ ಕರ್ನಿರೆ,
ಬಾಲ್ಯದ ಗೆಳೆಯ, ಹೋಟೇಲ್‌ ಉದ್ಯಮಿ ಮುಂಬೈ

LEAVE A REPLY

Please enter your comment!
Please enter your name here

Hot Topics

ಮರವಂತೆಯಲ್ಲಿ ಸಮುದ್ರಪಾಲಾದ ಕಾರು: ಓರ್ವ ಸ್ಪಾಟ್ ಡೆತ್-ಓರ್ವ ನಾಪತ್ತೆ

ಕುಂದಾಪುರ: ಚಲಿಸುತ್ತಿದ್ದ ಕಾರೊಂದು ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸಮುದ್ರ ಪಾಲಾಗಿ ಕಾರಿನೊಳಗಿದ್ದ ನಾಲ್ವರ ಪೈಕಿ ಚಾಲಕ ಸಾವನ್ನಪ್ಪಿದ್ದು, ಓರ್ವ ನಾಪತ್ತೆಯಾಗಿ ಇಬ್ಬರು ಪ್ರಯಾಣಿಕರು ಗಾಯಾಳುಗಳಾಗಿ ಆಸ್ಪತ್ರೆಗೆ ಸೇರಿದಂತಹ ದಾರುಣ ಘಟನೆ ಉಡುಪಿ...

ಸೆಗಣಿ ತಿಂದು ಬದುಕುತ್ತಿದ್ದ ಮಾನಸಿಕ ಅಸ್ವಸ್ಥನ ಬಾಳಿಗೆ ಬೆಳಕಾದ ಸಮಾಜ ಸೇವಕ ಈಶ್ವರ್ ಮಲ್ಪೆ

ಉಡುಪಿ: ಸೆಗಣಿ ತಿಂದು ಬದುಕುತ್ತಿದ್ದ ಮಾನಸಿಕ ಅಸ್ವಸ್ಥನೊಬ್ಬನನ್ನು ಉಡುಪಿಯ ಹೊಸಬೆಳಕು ಆಶ್ರಮಕ್ಕೆ ಸೇರಿಸಿ ಹೊಸ ಬದುಕು ನೀಡಿದ ಉಡುಪಿ ಸಮಾಜ ಸೇವಕ ಈಶ್ವರ್ ಮಲ್ಪೆ ಅವರ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.ಕಾರವಾರ...

ವಿಟ್ಲದಲ್ಲಿ ನಿರಂತರ ಮಳೆಗೆ ನೀರುಪಾಲಾದ ತೋಡು-ಮನೆ ಕುಸಿಯುವ ಭೀತಿ

ವಿಟ್ಲ: ವಿಟ್ಲ ಮುಡ್ನೂರು ಗ್ರಾಮದ ಪಿಲಿಂಜ ಎಂಬಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತೋಡಿನ ಬದಿ ಕುಸಿದು ಮನೆ ಅಪಾಯದಂಚಿನಲ್ಲಿದೆ.ವಿಟ್ಲ ಮುಡ್ನೂರು ಗ್ರಾಮದ ಪಿಲಿಂಜ ನಿವಾಸಿ ರಾಮಣ್ಣ ಪಿಲಿಂಜ ಅವರಿಗೆ ಸೇರಿದ ಮನೆಯ ಪಕ್ಕದಲ್ಲಿ...