Connect with us

ಮಂಗಳೂರು- ಉಡುಪಿಗೆ ಕೊರೋನಾ ಭಯದಿಂದ ಕೊಂಚ ನೆಮ್ಮದಿ- ಕಾಸರಗೋಡಿಗೆ ಭಾರಿ ಭೀತಿ..!!

Published

on

ಮಂಗಳೂರು- ಉಡುಪಿಗೆ ಕೊರೋನಾ ಭಯದಿಂದ ಕೊಂಚ ನೆಮ್ಮದಿ- ಕಾಸರಗೋಡಿಗೆ ಭಾರಿ ಭೀತಿ..!!

ಮಂಗಳೂರು /ಉಡುಪಿ/ಕಾಸರಗೋಡು :
ಇಂದು ಕೂಡ ಕರಾವಳಿಯ ಜನತೆಗೆ ನಮ್ಮದಿಯ ಉಸಿರು ಬಿಟ್ಟಿದ್ದಾರೆ. ಕೋರೊನದ ವಿರುದ್ದದ ಜಿಲ್ಲಾಡಳಿತಗಳು, ಸರ್ಕಾರ, ಜನಪ್ರತಿನಿಧಿಗಳು ನಡೆಸುತ್ತಿರುವ ಸಮರಕ್ಕೆ ಜನತೆ ನೀಡಿದ ಬೆಂಬಲ ಪ್ರತಿಫಲನವಾಗುತ್ತಿದೆ.

ದಕ್ಷಿಣ ಕನ್ನಡ:

ಇಂದು ಅವಿಭಾಜ್ಯ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್‌ ಪ್ರಕರಣ ದಾಖಲಾಗಿಲ್ಲ.ಕಳುಹಿಸಿದ ಎಲ್ಲಾ ವರದಿಗಳು ನೆಗೆಟಿವ್ ಆಗಿ ಬಂದಿವೆ ಇಂದು ಸ್ವೀಕರಿಸಲ್ಪಟ್ಟ 16 ಮಂದಿಯ ವರದಿಯು ನೆಗೆಟಿವ್ ಆಗಿದೆ.

ಇದು ದ.ಕ.ಜಿಲ್ಲೆಯ ಮಟ್ಟಿಗೆ ಸಮಾಧಾನಕರ ಅಂಶವಾಗಿದ್ದು,ಮತ್ತೆ 43 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.

72 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದೆ. ಈವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 38,518 ಮಂದಿಯ ಸ್ಕ್ರೀನಿಂಗ್ ಮಾಡಿದಂತಾಗಿದೆ.

ಹೋಂ ಕ್ವಾರಂಟೈನ್‌ನಲ್ಲಿರುವವ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿದೆ.ನಿನ್ನೆ 5,875 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದರೆ, ಇಂದು ಆ ಸಂಖ್ಯೆಯು 4,727ಕ್ಕೆ ಇಳಿದಿದೆ.

ಇನ್ನು ದಿಲ್ಲಿಯ ಮರ್ಕಝ್ ನಿಝಾಮುದ್ದೀನ್‌ನ ಧಾರ್ಮಿಕ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲೆಯಿಂದ ಪಾಲ್ಗೊಂಡ ಮಂದಿಯ ಪೈಕಿ ತೊಕ್ಕೊಟ್ಟು ಸಮೀಪದ ಇಬ್ಬರು ವ್ಯಕ್ತಿಗಳ ವರದಿಯು ನೆಗೆಟಿವ್ ಬಂದಿದೆ. ಉಳಿದ 19 ಮಂದಿಯ ವರದಿ ಬರಬೇಕಿದೆ.

ಉಡುಪಿ:
ಇನ್ನು ನೆರೆ ಜಿಲ್ಲೆ ಉಡುಪಿಯಲ್ಲೂ ಇಂದು ಯಾವುದೇ ಹೊಸ ಕೊರೋನಾ ಶಂಕಿತ ರೋಗಿಗಳು ದಾಖಲಾಗಿಲ್ಲ.15 ಜನರ ಪರೀಕ್ಷಾ ವರದಿ ಬರಬೇಕಿದೆ.68 ಮಂದಿ ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್‌ ನಲ್ಲಿದ್ದಾರೆ.124 ಜನ ಈಗಾಗಲೇ ಹೋಂ ಕ್ವಾರಂಟೈನ್ ಮುಗಿಸಿದ್ದಾರೆ. 15 ಮಂದಿ 28 ದಿನಗಳ ಹೋಂ ಕ್ವಾರಂಟೈನ್‌ ಮುಗಿಸಿದ್ದಾರೆ. ಇವರೆಗೆ 192 ಮಂದಿಯ ಗಂಟಲ ದ್ರವ ಮಾದರಿ ರವಾನೆ ಮಾಡಲಾಗಿದ್ದು174 ಮಂದಿಯದ್ದು ನೆಗೆಟೀವ್ ಬಂದಿದೆ. ಇವತ್ತು ಮತ್ತೆ 16 ಮಂದಿಯ ರೀಪೋರ್ಟ್‌ ಕೂಡ ನೆಗೆಟೀವ್‌ ಬಂದಿದೆ. ಉಡುಪಿ ಜಿಲ್ಲೆಯಲ್ಲಿ ಕೇವಲ ಮೂರು ಪ್ರಕರಣ ಮಾತ್ರ ಪಾಸಿಟಿವ್ ಆಗಿದೆ,
ಇನ್ನು ರಾಜ್ಯಕ್ಕೆ ಬಂದರೆ ರಾಜ್ಯದಲ್ಲಿ ಇಂದು ನಾಲ್ಕು ಪ್ರಕರಣಗಳು ಪಾಸಿಟಿವ್‌ ಬಂದಿದೆ. ಬಾಗಲಕೋಟೆಯಲ್ಲಿ ಒಂದು ಬೆಳಗಾವಿಯಿಂದ ಮೂರು ಪ್ರಕರಣಗಳಲ್ಲಿ ಪಾಸಿಟಿವ್‌ ರಿಪೋರ್ಟ್‌ ಬಂದಿದೆ, ಬೆಳಗಾವಿಯ ಮೂರು ಪಾಸಿಟಿವ್‌ ಬಂದ ವ್ಯಕ್ತಿಗಳು ದಿಲ್ಲಿಯಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡಿದ್ದರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.ಒಟ್ಟಾರೆ ಸೋಂಕಿತರ ಸಂಖ್ಯೆ 128ಕ್ಕೆ ಏರಿಕೆಯಾಗಿದೆ. ಈ ಪೈಕಿ ಮೂರು ಜನ ಸಾವನ್ನಪಿದ್ದು 11 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಕಾಸರಗೋಡು:
ಕಾಸರಗೋಡಿನಲ್ಲಿ 7 ಪಾಸಿಟಿವ್: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 7 ಕೊರೊನಾ ಸೋಂಕಿತ ಪ್ರಕರಣ ವರದಿಯಾಗಿದೆ. ಈ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 135 ಕ್ಕೇರಿದೆ.

Click to comment

Leave a Reply

Your email address will not be published. Required fields are marked *

LATEST NEWS

ಡಿವೈಡರ್ ಗೆ ಡಿ*ಕ್ಕಿ ಹೊಡೆದ ಬೈಕ್; ಸವಾರ ಸ್ಥಳದಲ್ಲೇ ಸಾ*ವು

Published

on

ಕುಂದಾಪುರ : ಬೈಕ್ ಸ್ಕಿಡ್ ಆಗಿ ಡಿವೈಡರ್ ಗೆ ಡಿ*ಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾ*ವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಮಸೀದಿ ಬಳಿ ನಡೆದಿದೆ. ಕೋಟ ಮಣೂರು ನಿವಾಸಿ ವಿಕಾಸ್ ಆಚಾರ್ಯ(22) ಮೃ*ತಪಟ್ಟ ಯುವಕ.

ಸೋಮವಾರ ರಾತ್ರಿ 1.30ರ ಸುಮಾರಿಗೆ ವಿಕಾಸ್ ಸಾಸ್ತಾನದಿಂದ ಕೋಟ ಮಣೂರು ಕಡೆ ಬರುತ್ತಿದ್ದ

ವೇಳೆ ಈ ದುರಂ*ತ ಸಂಭವಿಸಿದೆ. ಕೋಟ ಗುಜಿರಿ ಅಂಗಡಿ ಸಮೀಪ ಬೈಕ್ ನಿಯಂತ್ರಣ ತಪ್ಪಿದೆ. ಪರಿಣಾಮ ಹೆದ್ದಾರಿಯ ಡಿವೈಡರ್ ಗೆ ಡಿ*ಕ್ಕಿ ಹೊಡೆದು ಪಲ್ಟಿಯಾಗಿದೆ ಎನ್ನಲಾಗಿದೆ. ಗಂಭೀ*ರವಾಗಿ ಗಾಯಗೊಂಡ ವಿಕಾಸ್ ಸ್ಥಳದಲ್ಲೇ ಮೃ*ತಪಟ್ಟಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ULLALA : ಮಲಗಿದ್ದಲ್ಲೇ ಹೃದಯಾಘಾ*ತಕ್ಕೆ ಬ*ಲಿಯಾದ ಯುವಕ

Continue Reading

DAKSHINA KANNADA

ಗಂಡ-ಹೆಂಡತಿ ಬೇರೆ ಬೇರೆ ಮಲಗಿದ್ರೆ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?

Published

on

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಜನರು ರಾತ್ರಿಯ ಹೊತ್ತನ್ನು ಮೊಬೈಲ್, ಆನ್ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಳೆಯುತ್ತಾರೆ. ಇದು ಅವರಿಗೆ ನಿದ್ರಾಹೀನತೆ ಸಮಸ್ಯೆಗೂ ಕಾರಣವಾಗುತ್ತದೆ. ರಾತ್ರಿ ಬೇಗ ಮಲಗದೇ ಇರುವುದು ಮತ್ತು ಮಧ್ಯಾಹ್ನ ನಿದ್ದೆ ಮಾಡುವುದು ಹೀಗೆ ಮಾಡಿದರೆ ಆರೋಗ್ಯ ಹಾಳಾಗುತ್ತದೆ. ರಾತ್ರಿಯ ಹೊತ್ತು ಚಿಕ್ಕ ಮಕ್ಕಳು ಅಪ್ಪ ಅಮ್ಮನ ಒಟ್ಟಿಗೆ ಮಲಗುತ್ತಾರೆ. ಅದೇ ರೀತಿ ಗಂಡ ಹೆಂಡತಿಯರು ಒಟ್ಟಿಗೆ ಮಲಗುವುದು ಸರ್ವೇ ಸಾಮಾನ್ಯ.

ಮದುವೆಯ ನಂತರ ಸಾಮಾನ್ಯವಾಗಿ ಗಂಡ ಹೆಂಡತಿ ಒಟ್ಟಿಗೆ ಮಲಗುತ್ತಾರೆ. ಇದು ಸಮಾಜದ ಸಾಮಾನ್ಯ ನಿಯಮ ಸಹ ಹೌದು ಎನ್ನಬಹುದು. ಮದುವೆಯ ನಂತರ ಪತಿ-ಪತ್ನಿಯರ ನಡುವಿನ ಚರ್ಚೆಗಳು, ಮಾತುಗಳು ಸಾಮಾನ್ಯವಾಗಿ ಮಲಗುವ ಸಮಯದಲ್ಲೇ ಆಗುತ್ತದೆ. ಇನ್ನು ಪತಿ-ಪತ್ನಿಯರು ಪ್ರತ್ಯೇಕವಾಗಿ ಮಲಗುವುದರಿಂದಲೂ ಹಲವಾರು ರೀತಿಯ ಪ್ರಯೋಜನಗಳಿವೆ ಎಂದು ವರದಿ ಮೂಲಕ ತಿಳಿದುಬಂದಿದೆ.

ಮೊದಲಿಗೆ, ಈ ವಿಷಯದ ಬಗ್ಗೆ ಮಾಡಿದ ಎಲ್ಲಾ ಸಂಶೋಧನೆಗಳು ಗಂಡ ಮತ್ತು ಹೆಂಡತಿ ಪ್ರತ್ಯೇಕವಾಗಿ ಮಲಗುವುದು ತಪ್ಪಲ್ಲ ಎಂದು ತೋರಿಸುತ್ತದೆ ಮತ್ತು ಪ್ರತಿ ದಂಪತಿಗಳು ತಮ್ಮದೇ ಆದ ನಿಯಮಗಳನ್ನು ಮಾಡುವ ಹಕ್ಕನ್ನು ಹೊಂದಿದ್ದಾರೆ ಎಂದು ತಿಳಿಸಿದೆ. ಆದರೆ ಅನೇಕ ಬಾರಿ ಜನರು ಇಂತಹ ಮಾತುಗಳನ್ನು ಕೇಳಲು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ ಮತ್ತು ಈ ದಂಪತಿಗಳ ಜೀವನದಲ್ಲಿ ಏನೋ ಸರಿಯಾಗಿಲ್ಲ ಎಂದು ಭಾವಿಸುತ್ತಾರೆ.

ಆದರೆ ಅಷ್ಟೇ ಅಲ್ಲ, ಕೆಲವೊಮ್ಮೆ ಬೇರೆ ಬೇರೆ ಕೋಣೆಗಳಲ್ಲಿ ದಂಪತಿಗಳಿಗೆ ಮಲಗುವುದರಿಂದ ದಂಪತಿಗಳಿಗೆನೇ ಹೆಚ್ಚು ಅನುಕೂಲಕರವಾಗಿರುತ್ತದೆ. ಸಂಶೋಧನೆಯ ಪ್ರಕಾರ ನೀವು ಪ್ರತ್ಯೇಕವಾಗಿ ಏಕೆ ಮಲಗುವುದರಿಂದ ಯಾವುದೇ ನಿದ್ರಾ ಭಂಗವನ್ನು ಉಂಟುಮಾಡುವುದಿಲ್ಲ. ಇದರಿಂದ ಸುಖಕರವಾಗಿ ನಿದ್ರೆ ಮಾಡಬಹುದು.

ರಾತ್ರಿಯಲ್ಲಿ ಗೊರಕೆ ಹೊಡೆಯುವುದು, ಒದೆಯುವುದು, ದೇಹದ ಉಷ್ಣತೆಯ ಬದಲಾವಣೆ ವಿಭಿನ್ನವಾಗಿರುತ್ತದೆ. ನೀವು ಕೆಲವೊಮ್ಮೆ ಪ್ರತ್ಯೇಕವಾಗಿ ಮಲಗಲು ಪ್ರಯತ್ನಿಸಿದರೆ ನಿಮ್ಮ ದೇಹವು ಅರಾಮವಾಗಲು ಸಹಾಯಕವಾಗುತ್ತದೆ. ಸ್ವಲ್ಪ ಸಮಯದ ಅಂತರವು ನಿಮ್ಮ ಸಂಬಂಧವನ್ನು ಹೆಚ್ಚು ಉತ್ತಮಗೊಳಿಸುತ್ತದೆ. ನಿಮಗೆ ವಿಶ್ರಾಂತಿ ಪಡೆಯಲು ಸಮಯ ಸಿಗುತ್ತದೆ.


ಜೊತೆಗೆ ಕೆಲವೊಮ್ಮೆ ದಂಪತಿಗಳ ನಡುವೆ ಮನಸ್ಥಾಪವಾದಾಗ ಈ ರೀತಿ ಕೆಲ ದಿನ ದೂರ ಮಲಗಿದರೆ ಆ ವಿರಹ ವೇದನೆಯಿಂದ ಕೋಪವೂ ತಣ್ಣಗಾಗುತ್ತದೆ. ದೈಹಿಕ ಅನ್ಯೋನ್ಯತೆ ಮತ್ತು ಭಾವನಾತ್ಮಕ ಪ್ರೀತಿಯ ಅವಶ್ಯಕತೆ ಯಾವಾಗಲೂ ಇರುತ್ತದೆ ಮತ್ತು ಆದ್ದರಿಂದ ಕೆಲವೊಮ್ಮೆ ಪ್ರತ್ಯೇಕವಾಗಿ ಮಲಗುವುದು ಉತ್ತಮ. ಜೊತೆಗೆ ಕೆಲವೊಮ್ಮೆ ಜ್ವರ ರೀತಿಯ ಅನಾರೋಗ್ಯವಿದ್ದಾಗ ದೂರ ಮಲಗಿದರೆ ಒಬ್ಬರಿಂದ ಒಬ್ಬರಿಗೆ ಅದು ಹರಡುವುದಿಲ್ಲ.

ಇದನ್ನೂ ಓದಿ ULLALA : ಮಲಗಿದ್ದಲ್ಲೇ ಹೃದಯಾಘಾ*ತಕ್ಕೆ ಬ*ಲಿಯಾದ ಯುವಕ

ಕೆಲವೊಮ್ಮೆ ದಂಪತಿಗಳಿಗೆ ಸ್ವಲ್ಪ ಅಂತರ ಕಾಯ್ದುಕೊಳ್ಳುವುದು ಅವರ ಲೈಂಗಿಕ ಜೀವನಕ್ಕೆ ಒಳ್ಳೆಯದು ಎಂದು ಸಂಶೋಧನೆ ಸೂಚಿಸುತ್ತದೆ. ಇದರಿಂದ ದಣಿವು ಆಗುವುದು ಕಡಿಮೆ ಆಗುತ್ತದೆ. ಪರಿಣಾಮವಾಗಿ, ಲೈಂಗಿಕ ಜೀವನವನ್ನು ಸುಧಾರಿಸಬಹುದು.

Continue Reading

LATEST NEWS

ಹನುಮಂತ ತನ್ನ ಹೆಂಡತಿಯೊಂದಿಗೆ ಕುಳಿತಿರುವ ವಿಶಿಷ್ಟ ದೇವಾಲಯ ಎಲ್ಲಿದೆ ಗೊತ್ತಾ!?

Published

on

ಹನುಮಂತ ವಿಶ್ವದ ಅನೇಕ ಭಾಗಗಳಲ್ಲಿ ಆರಾಧಿಸಲ್ಪಡುವ ಶಕ್ತಿ. ಅಂಜನೀಪುತ್ರ, ಕೇಸರಿನಂದನ, ಮಾರುತಿ, ವಾಯು ಪುತ್ರ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಭಗವಂತ. ಆತನನ್ನು ನಂಬಿದರೆ ಸಂಕಷ್ಟ ದೂರವಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಅದರೊಂದಿಗೆ ಮತ್ತೊಂದು ವಿಚಾರವಿದೆ. ಅದು, ಹನುಮಂತ ಬ್ರಹ್ಮಚಾರಿ ಎಂಬುದು. ಅಂದರೆ, ಆತನಿಗೆ ವಿವಾಹವಾಗಿಲ್ಲ ಎಂದು ಅರ್ಥ. ಆದರೆ, ಹನುಮನು ಕೂಡ ವಿವಾಹವಾಗಿದ್ದ ಎಂದು ಸಾರುವ ದೇವಾಲಯ ಒಂದಿದೆ.

ಎಲ್ಲಿದೆ ದೇವಾಲಯ?


ರಾಮಾಯಣದ ಪ್ರಕಾರ, ಈ ಭೂಮಿಯ ಮೇಲೆ ಅಮರತ್ವ ಪಡೆದ ಏಳು ಋಷಿಗಳಲ್ಲಿ ಭಜರಂಗ ಬಲಿಯೂ ಒಬ್ಬ. ಇಡೀ ವಿಶ್ವವು ಹನುಮಂತನನ್ನು ಬಾಲ ಬ್ರಹ್ಮಚಾರಿ ಎಂದು ಹೇಳುತ್ತದೆ. ಆದರೆ ಹನುಮನು ಕೂಡ ವಿವಾಹವಾಗಿದ್ದಾನೆ ಎನ್ನುತ್ತದೆ ಈ ದೇಗುಲ.

ಆಂಜನೇಯನಿಗೆ ವಿವಾಹವಾಗಿತ್ತು ಎಂದು ಹೇಳುವ ದೇಗುಲ ತೆಲಂಗಾಣದಲ್ಲಿದೆ. ಹೈದರಾಬಾದ್ ನಿಂದ 220 ಕಿ.ಮೀ ದೂರದಲ್ಲಿದೆ ಈ ದೇವಸ್ಥಾನ. ಖಮ್ಮಮ್ ಜಿಲ್ಲೆಯಲ್ಲಿರುವ ದೇವಸ್ಥಾನದಲ್ಲಿ ಹನುಮಂತ ಮತ್ತು ಪತ್ನಿ ಸುವರ್ಚಲಾ ದೇವಿಯ ದೇವಾಲಯವಿದೆ.

ಇದು ಪ್ರಾಚೀನ ಮಂದಿರವಾಗಿದೆ. ಇಲ್ಲಿ ಹನುಮಂತ ಮತ್ತು ಅವನ ಪತ್ನಿಯ ವಿಗ್ರಹವಿದೆ. ಈ ದೇವಾಲಯಕ್ಕೆ ಬಂದು ಭಕ್ತಿಯಿಂದ ಬೇಡಿಕೊಂಡಲ್ಲಿ ವೈವಾಹಿಕ ಸಮಸ್ಯೆಗಳು ಬಗೆ ಹರಿಯಲಿವೆ ಎಂದು ನಂಬಲಾಗಿದೆ.

ಇದನ್ನೂ ಓದಿ : ದೇವಸ್ಥಾನದಲ್ಲಿ ಚಪ್ಪಲಿ ಕಳೆದುಹೋದರೆ ಒಳ್ಳೆಯದಾ..? ಕೆಟ್ಟದ್ದಾ..?

ಭಜರಂಗಿ ಮದುವೆ ಹಿಂದಿನ ಕಥೆ ಏನು?


ಸೂರ್ಯ ದೇವರು ಆಂಜನೇಯನಿಗೆ ಮಾರ್ಗದರ್ಶಕರಾಗಿದ್ದರು. ಆಂಜನೇಯ ಸೂರ್ಯ ದೇವರಿಂದ ಒಂಬತ್ತು ವಿಷಯಗಳನ್ನು ಕಲಿಯಬೇಕಾಗಿತ್ತು. ಮೊದಲ ಐದು ವಿದ್ಯೆಗಳನ್ನು ಕಲಿಸಿದ ನಂತರ ಸೂರ್ಯ ದೇವರು ಹನುಮಂತನನ್ನು ಮದುವೆಯಾಗಲು ವಿನಂತಿಸಿದರು.

ಮದುವೆಯ ನಂತರವಷ್ಟೇ ಭಜರಂಗಿ ಮುಂದಿನ ನಾಲ್ಕು ವಿದ್ಯೆಗಳನ್ನು ಅವನಿಗೆ ಕಲಿಯಬಹುದಾಗಿತ್ತು. ಏಕೆಂದರೆ ಅವುಗಳನ್ನು ವಿವಾಹಿತ ವ್ಯಕ್ತಿಗಳಿಗೆ ಮಾತ್ರ ಕಲಿಸಬೇಕು ಎಂಬ ನಿಯಮವಿತ್ತು. ಆಂಜನೇಯ ಸ್ವಾಮಿಯು ಸೂರ್ಯ ದೇವರ ಸೂಚನೆಗಳಿಗೆ ಅನುಗುಣವಾಗಿ ಮದುವೆಯಾಗಲು ನಿರ್ಧರಿಸಿದರು. ಸೂರ್ಯ ದೇವರೇ ಆಂಜನೇಯನಿಗಾಗಿ ವಧುವನ್ನು ಅನ್ವೇಷಿಸಿದರು. ಅವರು ಅನ್ವೇಷಿಸಿದ ವಧು ಬೇರೆ ಯಾರು ಅಲ್ಲ, ಸ್ವತಃ ತಮ್ಮ ಪುತ್ರಿಯ ಹೆಸರನ್ನೇ ಪ್ರಸ್ತಾಪಿಸಿದರು.

ಇದನ್ನೂ ಓದಿ : ಕಾಗೆ ನಿಜಕ್ಕೂ ನಮ್ಮ ಪಿತೃನಾ..?
ಸೂರ್ಯದೇವರ ಅತ್ಯಂತ ಪ್ರತಿಭಾವಂತ ಮಗಳಾದ ಸುವರ್ಚಲಾದೇವಿ ಮತ್ತು ಆಂಜನೇಯ ಸ್ವಾಮಿ ವಿವಾಹವಾದರು. ಇತ್ತ ಮದುವೆಯ ನಂತರ ಆಂಜನೇಯ ಉಳಿದ ನಾಲ್ಕು ವಿದ್ಯೆಗಳನ್ನು ಕಲಿತರೆ ಸುವರ್ಚಲಾ ದೇವಿ ಮದುವೆಯ ನಂತರ ತೀವ್ರವಾದ ತಪಸ್ಸನ್ನು ಆಚರಿಸಿದರು. ಹೀಗಾಗಿ ಮದುವೆಯಾದರೂ ಹನುಮಂತ ಬ್ರಹ್ಮಚರ್ಯವನ್ನು ಬಿಡಲಿಲ್ಲ ಎಂಬ ನಂಬಿಕೆಯಿದೆ.

Continue Reading

LATEST NEWS

Trending