ಉಗುಳು ರೋಟಿ ಬೇಯಿಸಿದ ನೌಷಾದ್ ; ಛಳಿ ಬಿಡಿಸಿದ ಮೀರತ್ ಪೊಲೀಸರು..!
ಲಕ್ನೋ: ಮದುವೆ ಸಮಾರಂಭವೊಂದರಲ್ಲಿ ರೋಟಿ ಸಿದ್ಧಪಡಿಸುತ್ತಿದ್ದ ವ್ಯಕ್ತಿ ಲಟ್ಟಿಸಿದ್ದ ರೋಟಿಗೆ ಉಗುಳಿ ನಂತರ ಅದನ್ನು ಬೇಯಿಸಿದ್ದಾನೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ನೌಶಾದ್, ಸೋಹೈಲ್ ಎಂದು ಗುರುತಿಸಲಾಗಿದ್ದು, ಈತ ಮೀರತ್ ನಿವಾಸಿಯಾಗಿದ್ದಾನೆ.
ಘಟನೆ ವಿಚಾರವಾಗಿ ಮಾತನಾಡಿದ ಮೀರತ್ ಪೊಲೀಸರು, ಸದ್ಯ ಘಟನೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ವೀಡಿಯೋದಲ್ಲಿ ಆರೋಪಿ ಲಟ್ಟಿಸಿದ ರೋಟಿಗೆ ಉಗುಳಿ ನಂತರ ಅದನ್ನು ಬೇಯಲು ತಂದೂರಿ ಮೇಕರ್‍ನಲ್ಲಿ ಇಡುತ್ತಿರುವ ದೃಶ್ಯ ಕಾಣಿಸುತ್ತದೆ. ಈ ದೃಶ್ಯವನ್ನು ಅಲ್ಲೇ ಇದ್ದ ವ್ಯಕ್ತಿಯೋರ್ವ ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.