Home ಪ್ರಮುಖ ಸುದ್ದಿ ಬಂಟ್ವಾಳದಲ್ಲಿ ನಟೋರಿಯಸ್ ರೌಡಿ ಮುತ್ತಾಸಿಮ್ ಭೀಕರ ಕೊಲೆ..!!

ಬಂಟ್ವಾಳದಲ್ಲಿ ನಟೋರಿಯಸ್ ರೌಡಿ ಮುತ್ತಾಸಿಮ್ ಭೀಕರ ಕೊಲೆ..!!

ಬಂಟ್ವಾಳದಲ್ಲಿ ನಟೋರಿಯಸ್ ರೌಡಿ ಮುತ್ತಾಸಿಮ್ ಭೀಕರ ಕೊಲೆ..!!

ಬಂಟ್ವಾಳ: ಕೇರಳದ ನಟೋರಿಯಸ್‌ ರೌಡಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ತಾಲೂಕಿನ ಸಜೀಪದಲ್ಲಿ ನಿಗೂಡವಾಗಿ ಕೊಲೆಯಾಗಿದ್ದಾನೆ.

ಕೊಲೆಯಾದವ ನಟೋರಿಯಸ್ ರೌಡಿ ಶೀಟರ್ ‌ಕೇರಳ ಮೂಲದ ಮುತ್ತಾಸಿಮ್ ಯಾನೆ ತಸ್ಲಿಮ್ ಎಂದು ಗುರುತ್ತಿಸಲಾಗಿದ್ದು ಬಂಟ್ವಾಳ ಸಜೀಪದ ನಗ್ರಿ ಗುಡೆಯಲ್ಲಿ ಅನಾಥವಾಗಿದ್ದ ಕಾರ್‌ ಒಂದರಲ್ಲಿ ಈತನ ಶವ ಪತ್ತೆಯಾಗಿದೆ. ಅಪಹರಣ ಮಾಡಿ ಕೊಲೆ ಮಾಡಿ ಇಲ್ಲಿ ಕಾರು ತಂದು ನಿಲ್ಲಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.

2017 ರಲ್ಲಿ ಮಂಗಳೂರು ಹೊರವಲಯದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಯ ಪೆಟ್ರೊಲ್ ಪಂಪ್ ಬಳಿ ಕೇರಳ ಮೂಲದ ನಟೋರಿಯಸ್ ರೌಡಿ ಕಾಲಿಯಾ ರಫೀಕ್ ಮರ್ಡರ್ ಕೇಸ್ಇನಲ್ಲಿ ಈತ ಪ್ರಮುಖ ಆರೋಪಿಗಾಗಿದ್ದ,

2019 ರಲ್ಲಿ ಮಂಗಳೂರು ಪೊಲೀಸರಿಂದ ಬಂಧನಕ್ಕೊಳಗಾಗಿ ಈತ ಬೆಳಗಾವಿ ಜೈಲಿನಲ್ಲಿದ್ದ,ಕಳೆದೆರ ಡು ದಿನದ ಹಿಂದೆ ಬೇಲ್ ಮೇಲೆ ಹೊರ ಬಂದಿದ್ದ ಈತನ ಸ್ಕೆಚ್‌ ಹಾಕಿ ಕೂತಿದ್ದ ತಂಡ ಬೆಳಗಾವಿಯಿಂದ ಕಿಡ್ನಾಪ್ ಮಾಡಿ ತಂದು ಕೊಂದು ಹಾಕಿರುವ ಬಗ್ಗೆ ಗುಮಾನಿ ವ್ಯಕ್ತಪಡಿಸಲಾಗಿದೆ.

ಭೂಗತ ಜಗತ್ತಿನ ನೇರ ಸಂಪರ್ಕ ಹೊಂದಿದ್ದ ಮುತ್ತಾಸಿಮ್ ಮೇಲೆ ಆನೇಕ ಪ್ರಕರಣಗಳು ಕೇರಳಲ್ಲಿ ಹಾಗೂ ಕರ್ನಾಟಕದಲ್ಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಇದೀಗ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭಿಸಲಾಗಿದೆ.

ವಿಡಿಯೋಗಾಗಿ..

- Advertisment -

RECENT NEWS

ಅಮೂಲ್ಯ ವಿರುದ್ಧ ಸಂಸದ ಹೆಗ್ಗಡೆ ವಾಗ್ದಾಳಿ: ಕಠಿಣ ಶಿಕ್ಷೆಗೆ ಆಗ್ರಹ

ಅಮೂಲ್ಯ ವಿರುದ್ಧ ಸಂಸದ ಹೆಗ್ಗಡೆ ವಾಗ್ದಾಳಿ: ಕಠಿಣ ಶಿಕ್ಷೆಗೆ ಆಗ್ರಹ  ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಸಮಾವೇಶದಲ್ಲಿ ಸಿಎಎ ವಿರೋಧಿ ಹೋರಾಟಗಾರ್ತಿ ಅಮೂಲ್ಯ ಲಿಯೋನ ಅವರನ್ನು ಪಾಕಿಸ್ತಾನ ಪರ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ...

ಚೀನಾದಲ್ಲಿ ಕೊರೊನಾ ವೈರಸ್‌ ಅಟ್ಟಹಾಸ: 75,000 ಜನರಲ್ಲಿ ಸೋಂಕು ಪತ್ತೆ 

ಚೀನಾದಲ್ಲಿ ಕೊರೊನಾ ವೈರಸ್‌ ಅಟ್ಟಹಾಸ: 75,000 ಜನರಲ್ಲಿ ಸೋಂಕು ಪತ್ತೆ  ಚೀನಾ: ಚೀನಾದ ಹುಬೈನಲ್ಲಿ ಕೊರೊನಾ ವೈರಸ್ ಗೆ ಮತ್ತೆ 115 ಜನರು ಬಲಿಯಾಗಿದ್ದು ಮೃತರ ಸಂಖ್ಯೆ 2,236ಕ್ಕೆ ತಲುಪಿದೆ. ಚೀನಾದಲ್ಲಿ 75,000 ಜನರು...

ಮಾಜಿ ಸಚಿವ, ಹಿರಿಯ ಜೆಡಿಎಸ್ ನಾಯಕ ಸಿ.ಚೆನ್ನಿಗಪ್ಪ ಇನ್ನಿಲ್ಲ

ಮಾಜಿ ಸಚಿವ, ಹಿರಿಯ ಜೆಡಿಎಸ್ ನಾಯಕ ಸಿ. ಚೆನ್ನಿಗಪ್ಪ ಇನ್ನಿಲ್ಲ ಬೆಂಗಳೂರು: ಮಾಜಿ ಸಚಿವ, ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾಗಿದ್ದ ಸಿ. ಚೆನ್ನಿಗಪ್ಪ ಇಂದು ನಿಧನರಾಗಿದ್ದಾರೆ. ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಚೆನ್ನಿಗಪ್ಪ ಅವರಿಗೆ...

ತ್ಯಾಜ್ಯ ಸಂಸ್ಕರಣಾ ಘಟಕ ಕಡ್ಡಾಯ: ಉಲ್ಲಂಘಿಸಿದವರಿಗೆ ಮ.ನ.ಪಾ ದಂಡ

ತ್ಯಾಜ್ಯ ಸಂಸ್ಕರಣಾ ಘಟಕ ಕಡ್ಡಾಯ: ಉಲ್ಲಂಘಿಸಿದವರಿಗೆ ಮ.ನ.ಪಾ ದಂಡ ಮಂಗಳೂರು: ತ್ಯಾಜ್ಯ ಸಂಸ್ಕರಣಾ ಘಟಕ ಹೊಂದುವಂತೆ ಮಹಾನಗರ ಪಾಲಿಕೆ ಆಯುಕ್ತರು ನೀಡಿದ್ದ ಆದೇಶವನ್ನು ಉಲ್ಲಂಘಿಸಿದ ಹತ್ತು ಅಪಾರ್ಟ್ ಮೆಂಟ್ ಗಳಿಗೆ ದಂಡ ವಿಧಿಸಲಾಗಿದೆ. ಕಳೆದ ಸೆಪ್ಟಂಬರ್...