Tuesday, May 30, 2023

ಓಮನ್‌ನಲ್ಲಿ ಹೃದಯಾಘಾತದಿಂದ ಅನಿವಾಸಿ ಭಾರತೀಯ ಮಹಿಳೆ ಮೃತ್ಯು..!

ಓಮನ್‌ ನಲ್ಲಿ ಭಾರತೀಯ ಮೂಲದ ಮಹಿಳೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕೇರಳ ಕೊಟ್ಟಾಯಂನ ಮಹಿಳೆ ಸೈಮಾ ಬಾಲಕೃಷ್ಣ ಮೃತ ಮಹಿಳೆಯಾಗಿದ್ದಾಳೆ.

ಓಮನ್ : ಓಮನ್‌ ನಲ್ಲಿ ಭಾರತೀಯ ಮೂಲದ ಮಹಿಳೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕೇರಳ ಕೊಟ್ಟಾಯಂನ ಮಹಿಳೆ ಸೈಮಾ ಬಾಲಕೃಷ್ಣ ಮೃತ ಮಹಿಳೆಯಾಗಿದ್ದಾಳೆ.

ಚಂಗನಾಶ್ಶೇರಿ ಕರುಕಚ್ಚಲ್‌ನ ನೆಡುಂಕುನ್ನಂ ಮಿನಿ ಮಂದಿರದ ಸಿ.ಎಂ.ಬಾಲಕೃಷ್ಣನ್ ಅವರ ಪತ್ನಿ ಸೈಮಾ ಬಾಲಕೃಷ್ಣನ್  ಕಳೆದ ಹನ್ನೆರಡು ವರ್ಷಗಳಿಂದ ಪತಿ ಬಾಲಕೃಷ್ಣನ್ ಅವರೊಂದಿಗೆ ಓಮನದ ಸಿಟಿ ಸಲಾಲಾದಲ್ಲಿ ವಾಸಿಸುತ್ತಿದ್ದರು.

ಬುಧವಾರ ಮಧ್ಯಾಹ್ನ ಏಕಾಏಕಿ ಅಸ್ವಸ್ಥಗೊಂಡ ಸೈಮಾ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ. ಅಷ್ಟರಲ್ಲಾಗಲೇ ಅವರು ಇಹ ಲೋಕ ತ್ಯಜಿಸಿದ್ದರು ಎಂದು ಆಸ್ಪತ್ರೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಲಾಲಾ ಸುಲ್ತಾನ್ ಖಾಬೂಸ್ ಆಸ್ಪತ್ರೆಯಲ್ಲಿ ಶವಾಗಾರದಲ್ಲಿ ಇರಿಸಲಾಗಿರುವ ಮೃತದೇಹವನ್ನು ಮುಂದಿನ ಕ್ರಮಗಳ ನಂತರ ಕೇರಳ ಕೊಟ್ಟಾಯಂ ಮನೆಗೆ ತರಲಾಗುವುದು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here

Hot Topics