Connect with us

LATEST NEWS

ಗಮನಿಸಿ: ನಾಳೆ ಮಂಗಳೂರು ನಗರದ ಕೆಲವೆಡೆ ನೀರು ಇರಲ್ಲ

Published

on

ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ತುಂಬೆ ರೇಚಕ ಸ್ಥಾವರವನ್ನು ಉನ್ನತೀಕರಣಗೊಳಿಸುವ ಯೋಜನೆಗೆ ಸಂಬಂಧಿಸಿ ಮೇಯರ್ ಪ್ರೇಮಾನಂದ ಶೆಟ್ಟಿ ಇಂದು ತುಂಬೆ ರೇಚಕ ಸ್ಥಾವರಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.

ಕಾಮಗಾರಿಯನ್ನು ತ್ವರಿತವಾಗಿ ನಿವ೯ಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಅದರಂತೆ ಸದ್ರಿ ಕಾಮಗಾರಿಯು ತುತಾ೯ಗಿ ಪೂಣ೯ಗೊಳ್ಳುತ್ತಿದ್ದು, ಅ.29 ರಂದು ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಭಾಗಶ: ಪಡೀಲ್, ಶಕ್ತಿನಗರ, ಮಂಗಳಾದೇವಿ, ಮೋಗ೯ನ್ಸ್ ಗೇಟ್, ಭಾಗಶ: ಪಾಂಡೇಶ್ವರ, ಭಾಗಶ: ಲೇಡಿಹಿಲ್ ಮತ್ತು ಬಿಜೈ ಕದ್ರಿ ಪ್ರದೇಶಗಳಿಗೆ ಅಪರಾಹ್ನದ ನಂತರ ನೀರು ಪೂರೈಕೆ ಮಾಡಲಾಗುವುದು ಎಂದು ಮೇಯರ್ ರವರ ಪ್ರಕಟಣೆ ತಿಳಿಸಿದೆ.

Click to comment

Leave a Reply

Your email address will not be published. Required fields are marked *

DAKSHINA KANNADA

ವೋಟ್ ಮಾಡಿ, ಊಟ ಮಾಡಿ: ಹೋಟೆಲ್‌ಗಳಲ್ಲಿ ಸಿಗಲಿದೆ ಫ್ರೀ ದೋಸೆ, ಸಿಹಿ ತಿಂಡಿ!

Published

on

ಬೆಂಗಳೂರು: ಮತದಾನದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಮತ್ತು ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ಬೆಂಗಳೂರಿನ ಕೆಲವು ಹೋಟೆಲ್‌ಗಳು ವಿಶಿಷ್ಟ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿವೆ. ಕಳೆದ ವರ್ಷ ವಿಧಾನ ಚುನಾವಣೆಯಲ್ಲಿ ಮಾಡಿದಂತೆಯೇ ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿ ಬಂದವರಿಗೆ ಉಚಿತ ಆಹಾರ, ರಿಯಾಯಿತಿ ದರದಲ್ಲಿ ತಿಂಡಿ ನೀಡುವ ಬಗ್ಗೆ ಘೋಷಣೆ ಮಾಡಿವೆ.

ವೋಟ್ ಮಾಡಿ, ಊಟ ಮಾಡಿ:

ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಹೋಟೆಲ್‌ ವೋಟ್ ಮಾಡಿ, ಊಟ ಮಾಡಿ’ ಅಭಿಯಾನದಡಿ ಮತದಾನದ ದಿನದಂದು ಮತದಾನ ಮಾಡಿದ ಗುರುತು ತೋರಿಸಿದವರಿಗೆ ಬೆಣ್ಣೆ ದೋಸೆ, ಲಡ್ಡು ಮತ್ತು ಜ್ಯೂಸ್ ನೀಡುವುದಾಗಿ ಘೋಷಿಸಿದೆ. 2018 ರ ವಿಧಾನಸಭಾ ಚುನಾವಣೆ ವೇಳೆಯೂ ಹೋಟೆಲ್ ಇಂತಹ ಕೊಡುಗೆ ನೀಡಿತ್ತು.

ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ನಮ್ಮ ಹಕ್ಕು. ಈ ಕುರಿತು ಜಾಗೃತಿ ಮೂಡಿಸುವ ನಮ್ಮ ನಿರಂತರ ಪ್ರಯತ್ನದ ಭಾಗವಾಗಿ ಕೆಲವು ಹೋಟೆಲ್​​ಗಳು ಕೆಲವು ತಿನಿಸುಗಳನ್ನು ರಿಯಾಯಿತಿ ದರದಲ್ಲಿ ಅಥವಾ ಉಚಿತವಾಗಿ ಮತದಾನದ ದಿನದಂದು ನೀಡುತ್ತವೆ. ಸಿಹಿತಿಂಡಿಗಳು ಮತ್ತು ಕೇಕ್‌ಗಳಂತಹ ಕೆಲವು ಆಹಾರ ಪದಾರ್ಥಗಳನ್ನು ಉಚಿತವಾಗಿ ನೀಡುತ್ತಿವೆ.

SawaariZimmedariKi ಅಭಿಯಾನದಡಿ ಶುಕ್ರವಾರ ಹಿರಿಯ ನಾಗರಿಕರು ಮತ್ತು ವಿಕಲಚೇತನ ಮತದಾರರಿಗೆ ಉಚಿತ ಆಟೋರಿಕ್ಷಾ ಮತ್ತು ಕ್ಯಾಬ್ ಸೇವೆ ದೊರೆಯಲಿದೆ.
ಈ ವಿಶೇಷ ಸೇವೆಯನ್ನು ಪಡೆಯಲು ಮತದಾರರು ‘VOTENOW’ ಕೋಡ್ ಅನ್ನು ಬಳಸಬಹುದು ಎಂದು Rapido ತಿಳಿಸಿದೆ.

ಬಿಡದಿ ಬಳಿಯ ಜನಪ್ರಿಯ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್ಲಾ, ಮತದಾನದ ಗುರುತು ಪ್ರದರ್ಶಿಸುವವರಿಗೆ ಏಪ್ರಿಲ್ 26, 27 ಮತ್ತು 28 ರಂದು ಟಿಕೆಟ್‌ ಮೇಲೆ ಶೇಕಡಾ 15 ರಷ್ಟು ರಿಯಾಯಿತಿಯನ್ನು ಘೋಷಿಸಿದೆ.

Continue Reading

LATEST NEWS

ಇಂದಿನಿಂದ 5 ದಿನ ರಾಜ್ಯದಲ್ಲಿ ಬಿಸಿಗಾಳಿ; ಕರ್ನಾಟಕಕ್ಕೆ ಆರೆಂಜ್ ಅಲರ್ಟ್

Published

on

ಬೆಂಗಳೂರು: ಅಬ್ಬಾ.. ಸಾಕಪ್ಪಾ ಸಾಕು ಅನ್ನೋ ಬೇಸಿಗೆಯ ಬಿಸಿ ಮತ್ತೆ ಏರಿಕೆಯಾಗುತ್ತಿದೆ. ಗರಿಷ್ಠ ತಾಪಮಾನ ಸಹಿಸಿಕೊಳ್ಳಲಾಗದೇ ಪರದಾಡುತ್ತಿರುವ ಜನರಿಗೆ ಮತ್ತೊಂದು ಶಾಕಿಂಗ್‌ ನ್ಯೂಸ್‌ ಬಂದಿದೆ. ಇಂದಿನಿಂದ ಅಂದ್ರೆ ಏಪ್ರಿಲ್ 25ರಿಂದ ಮುಂದಿನ 5 ದಿನಗಳವರೆಗೆ ಬಿಸಿಗಾಳಿ ಮತ್ತು ತಾಪಮಾನ ಹೆಚ್ಚಾಗುವ ಸಾಧ್ಯತೆಯಿದೆ.

ನಾಳೆ ದೇಶದ 13 ರಾಜ್ಯಗಳ 89 ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ. ನಾಳೆ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಬಿಸಿಗಾಳಿಯ ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ಪಶ್ಚಿಮ ಬಂಗಾಳ ರಾಜ್ಯಕ್ಕೆ ರೆಡ್‌ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಕರ್ನಾಟಕ ರಾಜ್ಯಕ್ಕೆ ಆರೆಂಜ್ ಅಲರ್ಟ್ ನೀಡಲಾಗಿದೆ.

ನಾಳೆ ಕೇರಳ, ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಹೆಚ್ಚಿನ ಉಷ್ಣಾಂಶ ಇರುವ ಮುನ್ಸೂಚನೆ ನೀಡಲಾಗಿದೆ. ಕೇರಳ ರಾಜ್ಯದಲ್ಲಿ 36-40 ಡಿಗ್ರಿ ಉಷ್ಣಾಂಶ ದಾಖಲಾಗುವ ಮುನ್ಸೂಚನೆ ಇದೆ. ಚುನಾವಣಾ ಆಯೋಗವು ಬಿಸಿ ಗಾಳಿ ಸಮಸ್ಯೆ ಎದುರಿಸಲು ಟಾಸ್ಕ್ ಪೋರ್ಸ್ ರಚಿಸಿದೆ. ಪೋಲಿಂಗ್ ಬೂತ್‌ಗಳಲ್ಲಿ ಕುಡಿಯುವ ನೀರು, ಫ್ಯಾನ್‌ಗಳ ವ್ಯವಸ್ಥೆಯನ್ನು ಚುನಾವಣಾ ಆಯೋಗ ಮಾಡಿದೆ.

ಏಪ್ರಿಲ್ 25ರಿಂದ ಏಪ್ರಿಲ್ 29ರವರೆಗೆ ಬಿಸಿಗಾಳಿ, ತೀವ್ರ ಬಿಸಿಗಾಳಿ ಕರ್ನಾಟಕದ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಾಗಿರುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕದಲ್ಲಿ ಬಿಸಿ ಮತ್ತು ಶುಷ್ಕ ವಾತಾವರಣವು ಹೆಚ್ಚಾಗಿರುವ ಸಾಧ್ಯತೆಯಿದೆ ಎಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

Continue Reading

BANTWAL

ಅನಾರೋಗ್ಯದ ನಡುವೆಯೂ ಮತ ಚಲಾಯಿಸಿ ಕೊ*ನೆಯುಸಿರೆಳೆದ ನಿವೃತ್ತ ಯೋಧ

Published

on

ಬಂಟ್ವಾಳ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಮಾಜಿ ಸೈನಿಕರೊಬ್ಬರು ಮತದಾನ ಪೂರೈಸಿ ಮರಳಿ ಅಸ್ಪತ್ರೆಗೆ ದಾಖಲಾಗಿದ್ದು, ಈಗ ಚಿಕಿತ್ಸೆಗೆ ಸ್ಪಂದಿಸದೆ ಮೃ*ತಪಟ್ಟಿದ್ದಾರೆ.

ಬಂಟ್ವಾಳ ವಗ್ಗ ನಿವಾಸಿ, ನಿವೃತ್ತ ಯೋಧ ಮಾಧವ ಪ್ರಭು (83) ಅನಾರೋಗ್ಯದ ನಡುವೆಯೂ ಪವಿತ್ರ ಮತದಾನ ಕರ್ತವ್ಯ ಪೂರೈಸಿದವರು.

ಮಾಧವ ಪ್ರಭುಗಳು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 85 ವರ್ಷ ಮತ್ತು ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನಕ್ಕೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಮಾಧವ ಪ್ರಭುಗಳು ವೈದ್ಯರ ಅನುಮತಿ ಪಡೆದು ನೇರವಾಗಿ ಮನೆಗೆ ತೆರಳಿ ಅಲ್ಪಿ ಏ.15 ರಂದು ಮತದಾನ ಕರ್ತವ್ಯ ಪೂರೈಸಿ ಆಸ್ಪತ್ರೆಗೆ ಮರಳಿದ್ದರು. ಮಾಧವ ಪ್ರಭುಗಳು ಆಸ್ಪತ್ರೆಯಲ್ಲಿ ಬುಧವಾರ ಮೃ*ತಪಟ್ಟಿದ್ದಾರೆ.

ಸೈನ್ಯಕ್ಕೆ ಸೇರುವ ಮೊದಲು ಮಲೇರಿಯಾ ನಿರ್ಮೂಲನಾ ವಿಭಾಗದ ಇನ್‌ಸ್ಪೆಕ್ಟರ್ ಆಗಿದ್ದರು. ಸೈನ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ನಂತರ ಇವರು ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾಗಿದ್ದರು. ಮೃ*ತರು ಪತ್ನಿ ಹಾಗೂ ಇಬ್ಬರು ಪುತ್ರಿ ಮತ್ತು ಪುತ್ರರನ್ನು ಅ*ಗಲಿದ್ದಾರೆ.

Continue Reading

LATEST NEWS

Trending