ಉಡುಪಿ: ಜಿಲ್ಲೆಯ ಖಾಸಗಿ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಪೂರೈಕೆಯಾಗದ ಹಿನ್ನೆಲೆ ಒಂದರ ಹಿಂದೆ ಒಂದರಂತೆ ಮುಚ್ಚುತ್ತಿವೆ.
ಇದರಿಂದ ಮೊದಲೇ ದರ ಏರಿಕೆಯಿಂದ ನಲುಗಿರುವ ಗ್ರಾಹಕರು, ಇದೀಗ ಪೆಟ್ರೋಲ್ ಬಂಕ್ ಗಳಿಗೆ ಪ್ರದಕ್ಷಿಣೆ ಹಾಕಲಾರಂಭಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಎಸ್ ಆರ್ ಹಾಗೂ ನಯರಾ ಪೆಟ್ರೋಲ್ ಬಂಕುಗಳು ಮುಚ್ಚಿವೆ. ಸುಮಾರು 15 ದಿನಗಳಿಂದೀಚೆಗೆ ಹಂತಹಂತವಾಗಿ ಒಂದೊಂದೇ ಪೆಟ್ರೋಲ್ ಬಂಕ್ ಗಳು ಮುಚ್ಚಲಾರಂಭಿಸಿವೆ.
ಇಷ್ಟಕ್ಕೂ, ಕಾರಣ ಪೂರೈಕೆದಾರರು ಮತ್ತು ಡೀಲರ್ ಗಳ ನಡುವಿನ ತಿಕ್ಕಾಟ. ಪೆಟ್ರೋಲ್, ಡೀಸೆಲ್ ದರ ಏರಿಕೆ ಆಗುವುದರ ಮುನ್ಸೂಚನೆ ಅರಿತ, ಪೂರೈಕೆದಾರರು ಮೊದಲೇ ಸ್ಟಾಕ್ ಮಾಡಿರಿಸಿದ್ದರು. ಡೀಲರ್ ಗಳಿಗೆ ಸರಬರಾಜು ನಿಲ್ಲಿಸಿದ್ದರು.
ಇದರಿಂದ ತೀವ್ರ ಸಂಕಷ್ಟ ಅನುಭವಿಸಿದ ಪೆಟ್ರೋಲ್ ಬಂಕ್ ಡೀಲರ್ ಗಳು ಕಂಗಾಲಾದರು. ಈಗ ಪೆಟ್ರೋಲ್ ಡೀಸೆಲ್ ಸರಬರಾಜು ಆಗುತ್ತಿದೆ,
ಆದರೆ ಉಳಿದ ಬಂಕುಗಳ ದರಕ್ಕಿಂತ ಎರಡು ರೂಪಾಯಿ ಹೆಚ್ಚಿನ ದರ ನಿಗದಿಯಾಗಿದೆ. ಇದೇ ಕಾರಣಕ್ಕೆ ಉಡುಪಿ ಜಿಲ್ಲೆಯ ಡೀಲರ್ ಗಳು ಪೆಟ್ರೋಲ್ ಪಂಪ್ ಗಳನ್ನು ಬಂದ್ ಮಾಡಿದ್ದಾರೆ.
ಪೆಟ್ರೋಲ್ ದರ ಏರಿಕೆಯ ಬೇರೆಬೇರೆ ಪರಿಣಾಮಗಳನ್ನು ಕಂಡಿದ್ದೇವೆ.
ದಿನಬಳಕೆ ವಸ್ತುಗಳ ದರ ಏರಿಕೆ, ಜೊತೆ ಉಳಿದ ಬಂಕ್‌ಗಳಿಗಿಂತ ದರ ಹೆಚ್ಚಳ ಮಾಡಿ ಪೆಟ್ರೋಲ್ ಮಾರಲು ಸಾಧ್ಯವಿಲ್ಲ, ಯಾಕೆಂದರೆ ಹೀಗೆ ಮಾಡಿದರೆ ಬಂಕ್ ಗಳ ವಿಶ್ವಾಸಾರ್ಹತೆ ಹಾಳಾಗುತ್ತದೆ.
ಸದ್ಯ ಇಲ್ಲಿ ಪೆಟ್ರೋಲ್ ಹಾಕುತ್ತಿದ್ದ ವಾಹನ ಸವಾರರು ಬಂಕ್ ಗೆ ಬಂದು ವಾಪಾಸು ಹೋಗುತ್ತಿದ್ದಾರೆ.
ಒಟ್ಟಾರೆ ದರ ಏರಿಕೆಯ ಬಿಸಿ ಎಲ್ಲ ವರ್ಗಕ್ಕೂ ತಟ್ಟುತ್ತಿದೆ, ಸ್ವತಃ ಪೆಟ್ರೋಲ್ ಬಂಕ್ ಮಾಲಕರೇ ಏರಿಕೆ ಬಿಸಿಗೆ ಬಂದ್ ಮಾಡುವ ನಿರ್ಧಾರ ಕೈಗೊಂಡಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.