Friday, August 19, 2022

ಮಲ್ಪೆ ಬೀಚ್‌ಗೆ ಇಳಿಯುವುದಕ್ಕೆ ನಿರ್ಬಂಧ: ಉಲ್ಲಂಘಿಸಿದರೆ 500 ರೂ. ದಂಡ

ಉಡುಪಿ: ಕಡಲು ಪ್ರಕ್ಷುಬ್ಧಗೊಂಡಿರುವ ಕಾರಣ ಸುರಕ್ಷತೆಯ ದೃಷ್ಟಿಯಿಂದ ಪ್ರವಾಸಿಗರನ್ನು ಮಲ್ಪೆ ಬೀಚ್‌ಗೆ ಇಳಿಯುವುದಕ್ಕೆ ನಿರ್ಬಂಧ ಹಾಕಲಾಗಿದೆ ಎಂದು ಮಲ್ಪೆ ಬೀಚ್ ನಿರ್ವಹಣಾ ಸಮಿತಿ ತಿಳಿಸಿದೆ.


ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರು ಹೆಚ್ಚಾಗಿ ಇಳಿಯುವ 1 ಕಿ.ಮೀ ಉದ್ದಕ್ಕೆ 6 ಅಡಿ ಎತ್ತರದ ಸುರಕ್ಷತಾ ನೆಟ್‌ ಹಾಕಲಾಗಿದೆ. ಜತೆಗೆ,

ಅಲ್ಲಲ್ಲಿ ಅಪಾಯಕಾರಿ ಮುನ್ನೆಚ್ಚರಿಕೆ ಸಂದೇಶ ರವಾನಿಸುವ ಕೆಂಪು ಧ್ವಜಗಳನ್ನು ಹಾಕಲಾಗಿದೆ. ಪ್ರವಾಸಿಗರು ನಿಯಮಗಳನ್ನು ಪಾಲಿಸಬೇಕು ಎಂದು ಸಮಿತಿ ಮನವಿ ಮಾಡಿದೆ.

ಮಳೆಗಾಲದಲ್ಲಿ ಅಲೆಗಳ ಅಬ್ಬರ ಹಾಗೂ ನೀರಿನ ಸೆಳೆತ ಹೆಚ್ಚಾಗಿರುತ್ತದೆ.

ಈ ಅವಧಿಯಲ್ಲಿ ಸಮುದ್ರಕ್ಕಿಳಿದರೆ ಪ್ರಾಣಕ್ಕೆ ಕುತ್ತು ಬರುವ ಸಾದ್ಯತೆಗಳು ಹೆಚ್ಚಾಗಿರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಬೀಚ್‌ಗಿಳಿಯಲು ನಿರ್ಬಂಧ ಹಾಕಲಾಗಿದೆ.

ಪ್ರವಾಸಿಗರು ಕಡಲಿಗಿಳಿಯದಂತೆ ಧ್ವನಿವರ್ಧಕಗಳ ಮೂಲಕವೂ ಎಚ್ಚರಿಕೆಯ ಸಂದೇಶಗಳನ್ನು ನೀಡಲಾಗುತ್ತಿದೆ. ಸಿಬ್ಬಂದಿ ಗಸ್ತು ವ್ಯವಸ್ಥೆ ಮಾಡಲಾಗಿದೆ.

ನಿಯಮಗಳನ್ನು ಉಲ್ಲಂಘಿಸಿ ನೆಟ್‌ ದಾಟಿ ಬೀಚ್‌ಗೆ ಇಳಿದವರಿಗೆ 500 ದಂಡ ವಿಧಿಸಲಾಗುವುದು. ಕಡಲು ಸಾಮಾನ್ಯಸ್ಥಿತಿಗೆ ಬಂದ ಬಳಿಕ ನೆಟ್‌ ಹಾಗೂ ಕೆಂಪು ಧ್ವಜಗಳನ್ನು ತೆರವುಗೊಳಿಸಿ, ಹಳದಿ ಧ್ವಜಗಳನ್ನು ಹಾಕಲಾಗುವುದು.

ಅಲ್ಲಿಯವರೆಗೂ ಪ್ರವಾಸಿಗರು ನೀರಿಗಿಳಿಯುವಂತಿಲ್ಲ ಎಂದು ಬೀಚ್‌ ನಿರ್ವಹಣಾ ಸಮಿತಿಯ ಕಾರ್ಯ ನಿರ್ವಾಹಕ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಫಾಝಿಲ್ ಕೊಲೆ ಪ್ರಕರಣ: ಆರೋಪಿ ಹರ್ಷಿತ್‌ಗೆ 14 ದಿನ ನ್ಯಾಯಾಂಗ ಬಂಧನ

ಮಂಗಳೂರು: ನಗರ ಹೊರವಲಯದ ಸುರತ್ಕಲ್‌ ಮಂಗಳಪೇಟೆ ನಿವಾಸಿ ಫಾಝಿಲ್ ಕೊಲೆ ಪ್ರಕರಣದಲ್ಲಿ ಬುಧವಾರ ಬಂಧಿಸಲಾಗಿದ್ದ ಆರೋಪಿ ಹರ್ಷಿತ್‌ಗೆ ಜೆಎಂಎಫ್ಸಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.ಆರೋಪಿ ಹರ್ಷಿತ್ ಮೇಲೆ ಫಾಝಿಲ್ ಅವರ...

ಈ ಪುಟ್ಟ ಹುಡುಗನಿಗಿರುವಷ್ಟು ಕಾಳಜಿಯೂ ಜನಪ್ರತಿನಿಧಿ, ಅಧಿಕಾರಿಗಳಿಗೆ ಇಲ್ವಾಲ್ಲಾ ಛೇ..!

ಮಂಗಳೂರು: ಸ್ಮಾರ್ಟ್‌ ಸಿಟಿ ಹೆಸರಿನಲ್ಲಿ ಕೋಟಿ ಗಟ್ಟಲೆ ಹಣವನ್ನು ತಂದು ಮಂಗಳೂರು ನಗರವನ್ನು ಸುಂದರೀಕರಣಗೊಳಿಸಲಾಗುತ್ತಿದೆ. ಆದರೆ ಹೊಂಡಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸುವ ಕೆಲಸಕ್ಕೆ ಯಾರೂ ಮುಂದಾಗುತ್ತಿಲ್ಲ.ಕಾರಿನಲ್ಲಿ ಸಂಚಾರ ಮಾಡುವವರಿಗೆ ಬೈಕಿನ ಸವಾರರ ಕಷ್ಟ...

ಲಾಠಿ ಹಿಡಿದ ಕೈಯಲ್ಲಿ ಪೊರಕೆ ಹಿಡಿದು ಕಲ್ಲಡ್ಕ ಬಸ್ಟ್ಯಾಂಡ್ ಕ್ಲೀನ್: ಮೆಲ್ಕಾರ್ ಟ್ರಾಫಿಕ್ ಪೊಲೀಸರ ಸಮಾಜಮುಖಿ ಕಾರ್ಯ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ‌ ಧೂಳು ಕೆಸರಿನಿಂದ ಕೂಡಿದ್ದ ಬಸ್ ನಿಲ್ದಾಣವನ್ನು ಪ್ರತಿ ವಾರಕ್ಕೊಮ್ಮೆ ಪೊಲೀಸರ ತಂಡ ನೀರು ಹಾಕಿ ತೊಳೆಯುವ ಅದ್ಭುತ ಘಟನೆ ಬಂಟ್ವಾಳದ ಕಲ್ಲಡ್ಕದಲ್ಲಿ ನಡೆಯುತ್ತಿದೆ.ಕಲ್ಲಡ್ಕದ ಪೇಟೆಯಲ್ಲಿರುವ ಬಸ್ ನಿಲ್ದಾಣ...