Connect with us

BIG BOSS

ಬಿಗ್ ಬಾಸ್​ನಲ್ಲಿ ಈ ವಾರ ಇರಲ್ಲ ಯಾವುದೇ ಎಲಿಮಿನೇಷನ್; ಕಾರಣ ಏನು ಗೊತ್ತಾ?

Published

on

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಎರಡನೇ ವಾರಾಂತ್ಯಕ್ಕೆ ಸ್ಪರ್ಧಿಗಳು ರೆಡಿ ಆಗಿದ್ದಾರೆ. ಈಗಾಗಲೇ ಸ್ಪರ್ಧಿಗಳ ಮಧ್ಯೆ ಸಾಕಷ್ಟು ಕಾಂಪಿಟೇಷನ್ ಮೂಡಿದ್ದು, 16 ಮಂದಿ ಮಾತ್ರ ಉಳಿದುಕೊಂಡಿದ್ದಾರೆ. ಈ ವಾರ ಬಹುತೇಕರು ನಾಮಿನೇಟ್ ಆಗಿದ್ದು, ಹೊರ ಹೋಗುವವರು ಯಾರು ಎನ್ನುವ ಪ್ರಶ್ನೆ ಮೂಡಿದೆ. ಈ ಬಾರಿ ಯಾವುದೇ ಎಲಿಮಿನೇಷನ್ ಇರುವುದಿಲ್ಲ ಎನ್ನುವ ಮಾತು ಕೂಡ ಕೇಳಿ ಬಂದಿದೆ.

ಈ ವಾರ ನಿಯಮ ಬ್ರೇಕ್ ಮಾಡಿ ಬಿಗ್ ಬಾಸ್​ನಲ್ಲಿ ಎಲ್ಲರೂ ನಾಮಿನೇಟ್ ಆದರು. ನಂತರ ಬಿಗ್ ಬಾಸ್ ನಾಮಿನೇಷನ್​ನಿಂದ ಬಚಾವ್ ಆಗಲು ಕೆಲವು ಚಾನ್ಸ್ ಕೊಟ್ಟರು. ಅಂತಿಮವಾಗಿ ಭವ್ಯಾ ಗೌಡ, ಧನರಾಜ್, ಧರ್ಮ ಕೀರ್ತಿರಾಜ್​, ರಂಜಿತ್, ತ್ರಿವಿಕ್ರಂ, ಮಾನಸಾ, ಐಶ್ವರ್ಯಾ, ಗೋಲ್ಡ್ ಸುರೇಶ್, ಹಂಸಾ, ಜಗದೀಶ್, ಅನುಷಾ ರೈ ನಾಮಿನೇಷನ್ ಲಿಸ್ಟ್​ನಲ್ಲಿ ಇದ್ದಾರೆ.

ಹಾಗಾದರೆ ಇವರ ಪೈಕಿ ಹೊರ ಹೋಗುವವರು ಯಾರು? ಈ ಪ್ರಶ್ನೆಗೆ ಉತ್ತರ ಸಿಗಬೇಕು ಎಂದರೆ ಭಾನುವಾರ (ಅಕ್ಟೋಬರ್ 13) ರಾತ್ರಿವರೆಗೆ ಕಾಯಲೇಬೇಕು. ಈ ವಾರ ನಾಮಿನೇಷನ್ ಇಲ್ಲದೆಯೂ ಇರಬಹುದು ಎಂದು ಕೆಲವರು ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಏಕೆಂದರೆ ಜಿಯೋ ಸಿನಿಮಾದಲ್ಲಿ ಈವರೆಗೆ ಯಾವುದೇ ವೋಟಿಂಗ್ ಲೈನ್ ಬಿಟ್ಟಿಲ್ಲ.

ಕಳೆದ ನವರಾತ್ರಿ ಸಂದರ್ಭದಲ್ಲಿ ಬಿಗ್ ಬಾಸ್ ಯಾವುದೇ ಎಲಿಮಿನೇಷನ್ ಮಾಡಿರಲಿಲ್ಲ. ಎಲಿಮಿನೇಷನ್ ಪ್ರಕ್ರಿಯೆ ನಡೆಸಿದ್ದರೂ ಕೊನೆಯಲ್ಲಿ ಡ್ರಾಮಾ ಮಾಡಿ ಸ್ಪರ್ಧಿಗಳನ್ನು ಹಿಂದಕ್ಕೆ ಕರೆಯಲಾಯಿತು. ಈ ಬಾರಿಯೂ ಅದೇ ರೀತಿಯಲ್ಲಿ ನಡೆಯಬಹುದು ಎಂದು ಊಹಿಸಿಲಾಗಿದೆ. ಇಂದು (ಅಕ್ಟೋಬರ್ 12) ಸುದೀಪ್ ಈ ಬಗ್ಗೆ ಅನೌನ್ಸ್ ಕೂಡ ಮಾಡಬಹುದು.

ಸದ್ಯ ಇರುವ ಎಲ್ಲರೂ ಸ್ಟ್ರಾಂಗ್ ಸ್ಪರ್ಧಿಗಳು ಎನಿಸಿಕೊಂಡಿದ್ದಾರೆ. ಯಾರೇ ಎಲಿಮಿನೇಟ್ ಆದರೂ ಅದು ಮನೆಗೆ ನಷ್ಟವೇ. ಈ ಕಾರಣಕ್ಕೆ ಈ ಬಾರಿ ಯಾವುದೇ ಎಲಿಮಿನೇಷನ್ ನಡೆಸದೇ ಇರಲು ನಿರ್ಧರಿಸಲಾಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

BIG BOSS

ಗಾಂಚಲಿ ಮಾತುಗಳು ಬೇಡ; ಹನುಮಂತನಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ

Published

on

ಮಂಗಳೂರು/ಬೆಂಗಳೂರು: ಶನಿವಾರದ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಮನೆಯ ಹಲವು ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡರು. ಅದರಲ್ಲೂ ಹನುಮಂತನಿಗೆ ಕೆಲವು ಎಚ್ಚರಿಕೆಗಳನ್ನು ಕೊಟ್ಟರು.

ಈ ವಾರದ ಪಂಚಾಯ್ತಿಯಲ್ಲಿ ಟಾಸ್ಕ್‌ಗಳ ಗಲಾಟೆಯನ್ನೇ ಚರ್ಚಿಸಿದ ಕಿಚ್ಚ ಸುದೀಪ್ ಅವರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಎಲ್ಲರಿಗೂ ಎಚ್ಚರಿಕೆ ಕೊಟ್ಟ ಕಿಚ್ಚ ಸುದೀಪ್, ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್‌ಗಳನ್ನ ಕರೆಕ್ಟ್‌ ಆಗಿ ಆಡೋಕೆ ಆದ್ರೆ ಆಡಿ. ಇಲ್ಲದಿದ್ದರೆ ಈ ವೇದಿಕೆ ಮೂಲಕ ನಾನೇ ಮಾತು ಕೊಡುತ್ತಿದ್ದೇನೆ. ಟಾಸ್ಕ್‌ ನಡೆಸೋದಕ್ಕೆ ನಾನೇ ಬಿಡಲ್ಲ. ಹಾಗೇ ಇರೋಣ ಎಂದಿದ್ದಾರೆ.

ಅದರಲ್ಲೂ,ಬಿಗ್ ಬಾಸ್ ಮನೆಯಲ್ಲಿ ಹನುಮಂತ ಅವರನ್ನು ಸುದೀಪ್ ಸದಾ ಹೊಗಳುತ್ತಾ ಬರುತ್ತಿದ್ದರು. ಅವರ ಮಾತಿಗೆ ಮೆಚ್ಚುಗೆ ಸೂಚಿಸುತ್ತಿದ್ದರು. ಆದರೆ, ಈ ವಾರ ಬೇರೆಯದ್ದೇ ರೀತಿಯಲ್ಲಿ ಎಪಿಸೋಡ್ ಸಾಗಿದೆ. ಸುದೀಪ್ ಅವರು ಹನುಮಂತ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದಕ್ಕೆ ಹನುಮಂತ ಅವರು ಸೈಲೆಂಟ್ ಆಗಿ ತಲೆ ಆಡಿಸಿದ್ದಾರೆ.

ಇದನ್ನೂ ಓದಿ: ಚೈತ್ರಾಗೆ ಗೇಟ್ ಪಾಸ್ ಕೊಡಲು ಮುಂದಾದ ಮನೆಮಂದಿ ?

ಬಿಗ್ ಬಾಸ್ ಪ್ರತಿ ವಾರ ಕಷ್ಟ ಪಟ್ಟು ಟಾಸ್ಕ್​ಗಳ ರಚನೆ ಮಾಡಿ ಅದನ್ನು ನೀಡುತ್ತಾರೆ. ಇದನ್ನು ಸ್ಪರ್ಧಿಗಳು ಆಡಬೇಕು. ಆದರೆ, ಅವರು ಮಾಡುವ ಎಡವಟ್ಟಿನಿಂದ ಕೆಲವೊಮ್ಮೆ ಟಾಸ್ಕ್ ರದ್ದಾದ ಉದಾಹರಣೆ ಇದೆ. ಈ ವಾರವೂ ಹಾಗೆಯೇ ಆಗಿದೆ. ದೊಡ್ಮನೆಯಲ್ಲಿ ಫಲಿತಾಂಶ ಘೋಷಿಸಲು ಸ್ಪರ್ಧಿಗಳು ಒಪ್ಪದ ಕಾರಣ ಟಾಸ್ಕ್ ರದ್ದಾಗಿದೆ. ಇದು ಸುದೀಪ್ ಕೋಪಕ್ಕೆ ಕಾರಣ ಆಗಿದೆ. ಅವರು ಈ ಬಗ್ಗೆ ಕ್ಲಾಸ್ ತೆಗೆದುಕೊಳ್ಳುವಾಗ ಕಠಿಣ ಎಚ್ಚರಿಕೆ ನೀಡಿದ್ದಾರೆ.

‘ಸರಿಯಾಗಿ ಟಾಸ್ಕ್ ಆಡಿ. ಕೆಲವೊಮ್ಮೆ ಉಸ್ತುವಾರಿಗಳಾಗಿ ನೀವು ನಡೆದುಕೊಳ್ಳೊದು ಸರಿ ಇರಲ್ಲ. ಅದನ್ನು ಸರಿ ಮಾಡಿಕೊಳ್ಳಿ. ಚೈತ್ರಾ ಅವರು ನಡೆಸಿಕೊಟ್ಟ ಉಸ್ತುವಾರಿ ನನಗೆ ಹೇಸಿಗೆ ತಂದಿತ್ತು. ಮಾತಾಡಿದ್ರೆ ಫೌಲ್ ಎನ್ನುತ್ತಾರೆ. ನಿಮ್ಮದೇ ರೂಲ್ಸ್ ಮಾಡಿಕೊಂಡಿದ್ರಿ’ ಎಂದರು ಸುದೀಪ್. ಆ ಬಳಿಕ ಹನುಮಂತ ಅವರ ವಿಚಾರಕ್ಕೆ ಬಂದರು.

ಹನುಮಂತು ಅವರ ಹೆಸರನ್ನು ಪ್ರಸ್ತಾಪಿಸಿದ ಕಿಚ್ಚ ಸುದೀಪ್, ನಿಮ್ಮ ಬಾಯಿಂದ ಇನ್ನೊಂದು ಸಾರಿ ಟಾಸ್ಕ್‌ ರದ್ದಾದ್ರು ಪರವಾಗಿಲ್ಲ ಅಂತ ಬಂದ್ರೆ ಸರಿ ಇರಲ್ಲ. ನಿಮಗೆ ಎಷ್ಟೇ ವೋಟ್ ಬೀಳುತ್ತಾ ಇರಲಿ. ಹೊರಗಡೆ ಕಳಿಸೋ ಜವಾಬ್ದಾರಿ ನನ್ನದು ಎಂದು ಸುದೀಪ್ ನೇರವಾಗಿ ಎಚ್ಚರಿಸಿದರು. ರದ್ದಾದ್ರೂ ಪರ್ವಾಗಿಲ್ಲ ಅನ್ನೋ ಗಾಂಚಲಿ ಮಾತುಗಳು ಯಾರ ಬಾಯಲ್ಲೂ ಬೇಡ ಮಾ.. ಇದು ಯಾರ ಅಪ್ಪನ ಮನೆಯೂ ಅಲ್ಲ. ಟಾಸ್ಕ್ ರದ್ದಾಗಬೇಕೋ, ಬೇಡಾವೋ ಅಂತ ಬಿಗ್‌ ಬಾಸ್ ಡಿಸೈಡ್ ಮಾಡುತ್ತಾರೆ ಎಂದು ಮನೆಯ ಎಲ್ಲಾ ಸದಸ್ಯರಿಗೂ ಕಿಚ್ಚ ಸುದೀಪ್ ಖಡಕ್ ಕಿವಿಮಾತು ಹೇಳಿದ್ದಾರೆ.

ಈ ಮಾತಿಗೆ ಹನುಮಂತ ಸೈಲೆಂಟ್ ಆಗಿದ್ದಾರೆ. ಏನು ಮಾತುಗಳನ್ನಾಡದೇ ಸುಮ್ಮನೆ ತಲೆ ಆಡಿಸಿದರು. ಒಟ್ಟಿನಲ್ಲಿ ಸುದೀಪ್ ಅವರು ಹಮನುಮಂತ ಬಳಿ ಇಷ್ಟು ಕಠಿಣವಾಗಿ ನಡೆದುಕೊಂಡಿದ್ದು ಇದೇ ಮೊದಲು.

 

Continue Reading

BIG BOSS

ಚೈತ್ರಾಗೆ ಗೇಟ್ ಪಾಸ್ ಕೊಡಲು ಮುಂದಾದ ಮನೆಮಂದಿ ?

Published

on

ಮಂಗಳೂರು/ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 11’ ಈಗಾಗಲೇ 80 ದಿನಗಳನ್ನು ಪೂರೈಸಿದೆ. ಈ ವಾರದ ಸೂಪರ್ ಸಂಡೇ ಕೂಡ ಎಂದಿನಂತೆ ಸ್ಪೆಷಲ್ ಆಗಿರಲಿದೆ. ಅದರಲ್ಲೂ ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಅವರನ್ನು ಮನೆಯಿಂದ ಹೊರಗಟ್ಟಿಯೇ ಸಿದ್ದ ಎಂದು ಮನೆಮಂದಿ ನಿರ್ಧರಿಸಿದಂತಿದೆ.

ಭಾನುವಾರದ ಎಪಿಸೋಡ್ ನಲ್ಲಿ ಈ ವಾರದ ಟಾಸ್ಕ್ ಗಳ ಬಗ್ಗೆ ಕಿಚ್ಚನ ಪಂಚಾಯ್ತಿ ಮುಂದುವರಿದಿದ್ದು, ಬಿಗ್ ಬಾಸ್ ಮನೆಗೆ ಕಸದ ಬುಟ್ಟಿ ಬಂದಿದೆ.

ಸೂಪರ್ ಸಂಡೇ ಶೋನಲ್ಲಿ ಕಿಚ್ಚ ಸುದೀಪ್ ಅವರು ಮನೆಯ ಸದಸ್ಯರಿಗೆ ಒಂದು ಸ್ಪೆಷಲ್ ಟಾಸ್ಕ್ ನೀಡಿದ್ದಾರೆ. ನಿಮ್ಮ ಪ್ರಕಾರ ಬಿಗ್ ಬಾಸ್ ಮನೆಯ ಕಸ ಯಾರೆಂದು ತಿಳಿಸಿ, ಅವರ ಫೋಟೋವನ್ನು ಮೂಟೆಗೆ ಅಂಟಿಸಿ ಕಸದ ಬುಟ್ಟಿಗೆ ಹಾಕಬೇಕು ಎಂದಿದ್ದಾರೆ ಈ ಆಟದಲ್ಲಿ ಬಿಗ್ ಬಾಸ್ ಮನೆಯ ಬಹುತೇಕ ಎಲ್ಲಾ ಸದಸ್ಯರು ಚೈತ್ರಾ ಚಿತ್ರವನ್ನು ಕಸದ ಬ್ಯಾಗಿಗೆ ಅಂಟಿಸಿ ಅದನ್ನು ಕಸದ ಡಬ್ಬಿಗೆ ಹಾಕಿದ್ದಾರೆ.

ಇದನ್ನೂ ಓದಿ: ತೆಲಂಗಾಣ ಸರ್ಕಾರದಿಂದ ಟಾಲಿವುಡ್‌ಗೆ ಭಾರೀ ದೊಡ್ಡ ಹೊಡೆತ !!

ಭವ್ಯ, ಮೋಕ್ಷಿತಾ, ರಜತ್, ಐಶ್ವರ್ಯಾ, ಗೌತಮಿ, ಹನುಮಂತ ಎಲ್ಲರೂ ಚೈತ್ರಾ ಕುಂದಾಪುರ ಅವರನ್ನೇ ಕಸದ ಬುಟ್ಟಿಗೆ ಹಾಕಿದ್ದಾರೆ. ಇದಕ್ಕೆ ಪ್ರತಿಯೊಬ್ಬರು ಸೂಕ್ತವಾದ ಕಾರಣಗಳನ್ನ ನೀಡಿದ್ದು, ಚೈತ್ರಾ ಅವರ ಕಣ್ಣು ನಿಜಕ್ಕೂ ಕೆಂಪಗಾಗಿಸಿದೆ.

ಐಶ್ವರ್ಯಾ ಅವರು ಚೈತ್ರಾ ಅವರಿಗೆ ನೀವು ಮುಖವಾಡ ಕಳಚುತ್ತೇನೆ ಎಂದಿದ್ದೀರಿ. ಆದರೆ ಅವರೇ ಒಂದು ವೇಷ ತೊಟ್ಟುಕೊಂಡು ಆಟ ಆಡುತ್ತಿದ್ದಾರೆ ಎಂದಿದ್ದಾರೆ. ಹನುಮಂತು ಕೂಡ ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಅನ್ನೋ ಹಂಗೆ ಚೈತ್ರಕ್ಕ ಈ ಮನೆಯನ್ನೇ ಕೆಡಿಸಿಬಿಟ್ಟಿದ್ದಾಳೆ ಎಂದು ಖಡಕ್ ಡೈಲಾಗ್ ಹೇಳಿದ್ದಾರೆ.

ಮೋಕ್ಷಿತಾ ಅವರು, ಕಳಪೆ ಬಂತು ಅಂದ್ರೆ ಚೈತ್ರಾ ಫುಲ್ ಹುಷಾರು ತಪ್ಪುತ್ತಾರೆ. ವೀಕೆಂಡ್‌ನಲ್ಲಿ ಫುಲ್ ಡಲ್ ಆಗಿರುತ್ತಾರೆ. ಮತ್ತೆ ರಾತ್ರಿ ಇಮಿಡಿಯೇಟ್ ಆಗಿ ಚಾರ್ಜ್ ಆಗ್ತಾರೆ. ಫೈರ್ ಬ್ರಾಂಡ್ ಈಸ್ ಬ್ಯಾಕ್ ಅಂತಾರೆ ಇದು ಹೇಗೆ ಅನ್ನೋದು ಗೊತ್ತಿಲ್ಲ ಎಂದಿದ್ದಾರೆ. ಇನ್ನು ಈ ಡೌವ್‌ಗಳನ್ನ ಬಿಟ್ಟು ಮನೆ ಕಡೆ ಹೋಗೋದು ಒಳ್ಳೆಯದು ಎಂದು ಚೈತ್ರಾ ಅವರಿಗೆ ರಜತ್ ಖಡಕ್ ಗೇಟ್‌ ಪಾಸ್ ಕೊಟ್ಟಿದ್ದಾರೆ.

ಮನೆಯ ಸದಸ್ಯರು ಎಲ್ಲರೆದುರು ತಮ್ಮನ್ನು ಕಸಕ್ಕೆ ಹೋಲಿಸಿರುವುದನ್ನು ಕಂಡು ಚೈತ್ರಾಗೆ ಆಘಾತ ಉಂಟುಮಾಡಿದೆ.

Continue Reading

BIG BOSS

BBK11: ಆಟದ ದಿಕ್ಕು, ದಾರಿ ತಪ್ಪಿಸಿದ್ರಾ ಚೈತ್ರಾ ಕುಂದಾಪುರ? ಕಿಚ್ಚ ಸುದೀಪ್​ ಖಡಕ್ ಕ್ಲಾಸ್‌!

Published

on

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11, 14ನೇ ವಾರಕ್ಕೆ ಕಾರಲಿಡಲು ಸಜ್ಜಾಗಿ ನಿಂತಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಗೆ ಕಿಚ್ಚ ಸುದೀಪನ ಎಂಟ್ರಿಯಾಗಿದೆ. ಇಡೀ ವಾರ ಬಿಗ್​​ಬಾಸ್​ ಮನೆಯಲ್ಲಿ ಏನೆಲ್ಲಾ ಆಯ್ತು, ಯಾರದ್ದು ಸರಿ, ಯಾರದ್ದು ತಪ್ಪು ಅಂತ ಕ್ಲಾಸ್​ ತೆಗೆದುಕೊಳ್ಳೋದಕ್ಕೆ ಕಿಚ್ಚ ಸುದೀಪ್​ ಅವರು ರೆಡಿಯಾಗಿದ್ದಾರೆ.

ಇನ್ನೂ ಈ ವಾರದಲ್ಲಿ ಬಿಗ್​ಬಾಸ್​ ಮನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಹೀಗಾಗಿ ಕಿಚ್ಚ ಸುದೀಪ್​ ಅವರು ಬಿಗ್​ಬಾಸ್​​ ಮನೆಗೆ ಎಂಟ್ರಿ ಕೊಡುತ್ತಲೇ ಓರ್ವ ಸ್ಪರ್ಧಿಯ ಉಸ್ತುವಾರಿ ಬಗ್ಗೆ ಮಾತಾಡುತ್ತಾ ಬಂದಿದ್ದಾರೆ. ಉಸ್ತುವಾರಿಗಳು ಜವಾಬ್ದಾರಿಗಳನ್ನು ಮರೆತು ಆಟದ ದಾರಿಯನ್ನು ತಪ್ಪುಸುತ್ತಿದ್ದಾರೆ. ಮಾತಿನ ಮಿತಿಗಳು ಮಿರುತ್ತಾ ಹೋಗುತ್ತಿವೆ ಖಡಕ್​ ಡೈಲಾಂಗ್​ ಹೊಡೆದಿದ್ದಾರೆ.

ಇನ್ನೂ, ಮೊನ್ನೆ ಬಿಗ್​​ಬಾಸ್​ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಕಿತ್ತಾಟ ಜೋರಾಗಿತ್ತು. ತೀವ್ರ ಪೈಪೋಟಿಯಿಂದಾಗಿ ಜಿದ್ದಿಗೆ ಬಿದ್ದವರಂತೆ ಸ್ಪರ್ಧಿಗಳು ಕಚ್ಚಾಡಿಕೊಳ್ತಿದ್ದರು. ಇದರಿಂದ ಟಾಸ್ಕ್​ ಪೂರ್ಣಗೊಳಿಸೋದೇ ಇಡೀ ಮನೆ ಮಂದಿ ಕೈಚಲ್ಲಿ ಕುಳಿತುಕೊಂಡಿದ್ದರು. ಇದನ್ನು ನೋಡಿದ ಬಿಗ್​ಬಾಸ್​ ಟಾಸ್ಕ್ ಅನ್ನು ಅರ್ಧಕ್ಕೆ​ ರದ್ದು ಮಾಡಿದ್ದರು.

ಇದರಿಂದ ಕೆಲವು ಸ್ಪರ್ಧಿಗಳು ಚೈತ್ರಾ ಕುಂದಾಪುರ ಮೇಲೆ ಬೇಸರ ಹೊರ ಹಾಕಿದ್ದರು. ಚೈತ್ರಾ ಕುಂದಾಪುರ ಪದೇ ಪದೇ ಆಟದ ಮಧ್ಯೆ ಫೌಲ್ ಕೊಟ್ಟಿದ್ದಕ್ಕೆ, ಹಾಗೂ ಇಬ್ಬರು ಉಸ್ತುವಾರಿಗಳು ಸರಿಯಾದ ನಿರ್ಧಾರಕ್ಕೆ ಬರದಿದ್ದ ಕಾರಣಕ್ಕೆ ಟಾಸ್ಕ್​ ಅರ್ಧಕ್ಕೆ ನಿಲ್ಲುವಂತೆ ಆಗಿತ್ತು. ಇದೇ ವಿಚಾರ ಬಗ್ಗೆ ಇಂದು ಕಿಚ್ಚ ಸುದೀಪ್​ ಮಾತಾಡಲಿದ್ದಾರೆ. ಚೈತ್ರಾ ಕುಂದಾಪುರಗೆ ಮತ್ತೆ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ.

Continue Reading

LATEST NEWS

Trending

Exit mobile version