ಮಂಗಳೂರು: ನಗರದ ಪಡೀಲ್ ದರ್ಬಾರ್ ಹಿಲ್ ನಲ್ಲಿರುವ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ವಿದ್ಯುತ್ ಇಲ್ಲದೇ, ಜನರೇಟರೂ ಇಲ್ಲದೆ ಹಲವು ಗಂಟೆಗಳ ಕಾಲ ಪ್ರಯಾಣಿಕರು ಮೊಬೈಲ್ ಟಾಚ್೯ ಹಿಡಿದುಕೊಂಡೇ ರೈಲನ್ನೇರಿದ ಪ್ರಸಂಗ ಮಂಗಳವಾರ ರಾತ್ರಿ ವೇಳೆ ನಡೆದಿದೆ.
ಪಡೀಲ್ ದರ್ಬಾರ್ ಹಿಲ್‌ನಲ್ಲಿರುವ ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣ. ಅತ್ಯಂತ ಜನನಿಬಿಡ ರೈಲ್ವೇ ಜಂಕ್ಷನ್ ಆಗಿದ್ದು, ಉತ್ತರ ಮತ್ತು ದಕ್ಷಿಣದ ರೈಲುಗಳು ಈ ನಿಲ್ದಾಣದ ಮೂಲಕ ಮಂಗಳೂರು ತಲುಪುತ್ತವೆ.
ನಿನ್ನೆ ರಾತ್ರಿಯೂ ಉತ್ತರಭಾರತ ಹಾಗೂ ಕೇರಳಕ್ಕೆ ತೆರಳುವ ರೈಲನ್ನೇರಲು ಸಾವಿರಕ್ಕಿಂತಲೂ ಅಧಿಕ ಪ್ರಯಾಣಿಕರಿದ್ದರು. ಅದರೆ ಸಂಜೆ 7 ರ ಸುಮಾರಿಗೆ ರೈಲು ನಿಲ್ದಾಣದಲ್ಲಿ ವಿದ್ಯುತ್ ಹೋಗಿತ್ತು.
ಅದರ ಬದಲಿಗೆ ಕಾರ್ಯಾಚರಿಸಬೇಕಾದ ಜನರೇಟರ್ ಕಾರ್ಯಾಚರಿಸದೇ, ಇಡೀ ರೈಲು ನಿಲ್ದಾಣ ಕತ್ತಲೆಯಲ್ಲಿ ಮುಳುಗಿತ್ತು.
ಕೆಲ ಗಂಟೆ ಕಾಲ ಟಿಕೆಟ್ ಕೌಂಟರ್ ಒಂದು ಇನ್ವರ್ಟರ್ ಮೂಲಕ ಕಾರ್ಯಾಚರಣೆ ನಡೆಸಿದ್ದ ಫಲವಾಗಿ ಪ್ರಯಾಣಿಕರಿಗೆ ಟಿಕೇಟ್ ವ್ಯವಸ್ಥೆ ಆಯಿತು. ಆದರೆ ಬಳಿಕ ಇನ್ವರ್ಟರ್ ಕೂಡಾ ಸ್ಥಗಿತವಾಗಿ, ರೈಲ್ವೆ ನಿಲ್ದಾಣವಿಡೀ ಕತ್ತಲೆಯಿಂದ ಮುಳುಗಿತು.
ಪ್ರಯಾಣಿಕರಿಗೆ ರೈಲುಗಳ ಮಾಹಿತಿಯೂ ಸಿಗದೆ, ದೀಪಗಳಿಲ್ಲದೆ ನಡೆದುಕೊಂಡು ಹೋಗಲು ಸಾಧ್ಯವಾಗದೇ, ಅಲ್ಲಲ್ಲಿ ಎದ್ದುಬಿದ್ದು ಪ್ರಯಾಣಿಕರು ರೈಲನ್ನೇರಿದರು.
ಅವ್ಯವಸ್ಥೆ ಕುರಿತು ಜವಾಬ್ದಾರಿ ಹೊರಬೇಕಾದ ಅಧಿಕಾರಿಗಳು ಪ್ರಯಾಣಿಕರ ಕಣ್ಣಿಗೆ ಸಿಗದೇ ತಪ್ಪಿಸಿಕೊಂಡರು.
ಇದೇ ನಿಲ್ದಾಣದ ಮಾರ್ಗವನ್ನ ವಿಶ್ವದರ್ಜೆಗೆ ಏರಿಸುವ ಪ್ರಸ್ತಾವನೆಯಿದ್ದರೂ, ವಿದ್ಯುತ್ ಇಲ್ಲದೇ ಪರದಾಡಿದ ಪ್ರಯಾಣಿಕರು ಇದೊಂದು ಹಾಸ್ಯಾಸ್ಪದ ಅನ್ನುವಂತೆ ಆಗಿದೆ.
Bad title.
This station either controlled by SR, KR, SWR.. Always technically it’s SR-KR.. Nobody taking intiality to merge this to SWR.. This will comon.. B coz officers are not reports to our karnataka Mysore Division.. At least this is eye opener for our MP Nalinkumarji