ಉಡುಪಿ: ಕಾಂಗ್ರೆಸ್‌ನ ನಾಯಕ ಹಾಗೂ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಪಕ್ಷಕ್ಕೆ ಸೇರುವ ಬಗ್ಗೆ ನಮ್ಮ ಬಳಿ ಯಾವುದೇ ಚರ್ಚೆಯಾಗಿಲ್ಲ ಎಂದು ಉಡುಪಿ ಬಿಜೆಪಿಯ ಹಾಲಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ ಬಗ್ಗೆ ಇಂದು ಉಡುಪಿಯಲ್ಲಿ ಪತ್ರಕರ್ತರು ಕೇಳಿ ಪ್ರಶ್ನೆಗೆ ನಗುತ್ತಾ ಉತ್ತರಿಸಿದ ಅವರು,
ನಿಮ್ಮಿಂದಲೇ ಎಲ್ಲವೂ ಕೇಳುತ್ತಿದ್ದೇನೆ. ರಾಜಕೀಯದಲ್ಲಿರುವವನಿಗೆ ಪಕ್ಷದೊಳಗೆ ಅಥವಾ ಪಕ್ಷದ ಹೊರಗಡೆ ಎದುರಾಳಿ ಇದ್ದೇ ಇರುತ್ತಾನೆ. ನಾವು ಮಾತ್ರ ತಯಾರಾಗಿರಬೇಕು ಎಂದರು.
ಅವರು ಪಕ್ಷ ಸೇರಿದರೆ ನಿಮಗೆ ಎದುರಾಳಿ ಇರುವುದಿಲ್ಲವಲ್ಲಾ ಎಂದು ಕೇಳಿದಾಗ, ಅವರು ಪಕ್ಷಕ್ಕೆ ಬಂದಾಗ ಹೊರಗಡೆಗಿಂತ ಪಕ್ಷದೊಳಗಡೆಯೇ ಎದುರಾಳಿಯಾಗಬಹುಲ್ವಾ. ರಾಜಕೀಯದಲ್ಲಿರುವವನಿಗೆ ಪಕ್ಷದೊಳಗೆ ಅಥವಾ ಪಕ್ಷದ ಹೊರಗಡೆ ಎದುರಾಳಿ ಇದ್ದೇ ಇರುತ್ತಾನೆ.
ನಾವು ಮಾತ್ರ ತಯಾರಾಗಿರಬೇಕು. ಎದುರಾಳಿ ಬಂದರೂ ಹೋರಾಟ ಮಾಡುವ ಶಕ್ತಿ ಉಳಿಸಿಕೊಳ್ಳಬೇಕು. ಅವರು ಪಕ್ಷಕ್ಕೆ ಬರುವುದರಲ್ಲಿ ನನ್ನದೇನೂ ಆಕ್ಷೇಪವಿಲ್ಲ ಎಂದು ಹೇಳಿದರು.