LATEST NEWS
‘ಅಗ್ನಿಪಥ’ ಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲ : ಕೇಂದ್ರದಿಂದ ಸ್ಪಷ್ಟನೆ
ನವದೆಹಲಿ: ‘ನೂತನ ಅಗ್ನಿಪಥ ಯೋಜನೆಯಡಿ ಸೇನೆಯ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ.
ಯೋಜನೆಯಡಿ ಮೊದಲ ವರ್ಷದಲ್ಲಿ ನೇಮಕಗೊಳ್ಳುವ ಸಿಬ್ಬಂದಿ ಪ್ರಮಾಣ ಸೇನಾಪಡೆಗಳ ಶೇ 3ರಷ್ಟು ಇರಲಿದೆ’ ಎಂದು ಕೇಂದ್ರ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ.
‘ಅಗ್ನಿಪಥ’ ಯೋಜನೆ ವಿರೋಧಿಸಿ ದೇಶದ ವಿವಿಧೆಡೆ ವ್ಯಾಪಕ ಪ್ರತಿಭಟನೆ, ಹಿಂಸಾಚಾರ ನಡೆದಿರುವ ಬೆನ್ನಲ್ಲೇ ಸರ್ಕಾರದಿಂದ ಈ ಸ್ಪಷ್ಟನೆ ಹೊರಬಿದ್ದಿದೆ. ‘ಸೇನೆಯಲ್ಲಿ ಸೇವೆ ಸಲ್ಲಿಸ ಬಯಸುವ ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು ಈ ಯೋಜನೆಯ ಉದ್ದೇಶ.
ಜೊತೆಗೆ, ನೇಮಕವಾಗುವ ಸಿಬ್ಬಂದಿ ಪ್ರಮಾಣವು ಈಗಿನದ್ದಕ್ಕಿಂತ ಮೂರುಪಟ್ಟು ಹೆಚ್ಚಾಗಲಿದೆ’ ಎಂದೂ ಹೇಳಿದೆ.
‘ನೇಮಕಗೊಂಡವರು ಅಲ್ಪಾವಧಿಗೆ ಸೇವೆ ಸಲ್ಲಿಸುವುದರಿಂದ ಸೇನಾಪಡೆಗಳ ಕಾರ್ಯಕ್ಷಮತೆಗೆ ಧಕ್ಕೆಯಾಗುವುದು ಎಂಬ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಇಂಥ ವ್ಯವಸ್ಥೆಯನ್ನು ಒರೆಗೆ ಹಚ್ಚಲಾಗಿದ್ದು, ಅತ್ಯುತ್ತಮ ವಿಧಾನ ಎಂಬುದಾಗಿ ಪರಿಗಣಿಸಲಾಗಿದೆ.
ಈ ವ್ಯವಸ್ಥೆ ಈಗಾಗಲೇ ಹಲವಾರು ದೇಶಗಳಲ್ಲಿ ಜಾರಿಯಲ್ಲಿದೆ’ ಎಂದೂ ಕೇಂದ್ರ ಸರ್ಕಾರ ಹೇಳಿದೆ.
LATEST NEWS
ಡೆಂಗ್ಯೂಗೆ 2 ವರ್ಷದ ಮಗು ಬ*ಲಿ!
ದಾವಣಗೆರೆ: ಶಂಕಿತ ಡೆಂಗ್ಯೂಗೆ 2 ವರ್ಷ 11 ತಿಂಗಳ ಮಗು ಸಾ*ವನ್ನಪ್ಪಿದ ಘಟನೆ ದಾವಣಗೆರೆ ಚನ್ನಗಿರಿ ತಾಲೂಕಿನ ಚಿಕ್ಕೊಡ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ನಿರ್ವಾಣ ಕುಮಾರ್(2) ಎಂದು ಗುರುತಿಸಲಾಗಿದೆ. ಡೆಂಗ್ಯೂನಿಂದ ಬಳಲುತ್ತಿದ್ದ ಬಾಲಕನನ್ನು ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಬಾಲಕ ಮೃ*ತಪಟ್ಟಿದ್ದಾನೆ.
ಗ್ರಾಮದಲ್ಲಿ ಶುಚಿತ್ವ ಇರದ ಹಿನ್ನೆಲೆ ಡೆಂಗ್ಯೂ ಜ್ವರ ತಗುಲಿ ಬಾಲಕ ಮೃ*ತಪಟ್ಟಿದ್ದಾನೆ ಎನ್ನಲಾಗಿದೆ.
LATEST NEWS
ಬುದ್ದಿ ಹೇಳಿದ್ದೇ ತಪ್ಪಾಯ್ತಾ? ತಂದೆಯನ್ನೇ ಕೊಂ*ದ ಪಾಪಿ ಮಗ!
ಮಂಗಳೂರು/ಆನೇಕಲ್: ಕ್ಷುಲ್ಲಕ ಕಾರಣಕ್ಕೆ ಅಪ್ಪ-ಮಗನ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಮಗ ಮನೆಯಲ್ಲಿದ್ದ ಚಾಕುವಿನಿಂದ ಇರಿದು ತಂದೆಯನ್ನು ಹ*ತ್ಯೆಗೈದಿದ್ದಾನೆ. ಈ ಘಟನೆ ನಡೆದಿರೋದು ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಪೋಸ್ಟ್ ಆಫೀಸ್ ರಸ್ತೆಯಲ್ಲಿ.
ವೇಲಾಯುದನ್ (76) ಕೊ*ಲೆಯಾದವರು. ವಿನೋದ್ ಕುಮಾರ್ ಕೊ*ಲೆ ಆರೋಪಿ. ಇವರು ಮೂಲತಃ ಕೇರಳ ಮೂಲದ ಏರಿಮಲೆ ಮೂಲದವರು. ಪ್ರಸ್ತುತ ಬೆಂಗಳೂರಿನ ಬನ್ನೇರುಘಟ್ಟದ ಜನತಾ ಕಾಲೋನಿಯಲ್ಲಿ ವಾಸವಾಗಿದೆ.
ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ಮನೆಯಲ್ಲಿದ್ದ ಚಾಕು ತೆಗೆದುಕೊಂಡು ತಂದೆಗೆ ಇರಿದಿದ್ದಾನೆ. ತೀವ್ರ ರ*ಕ್ತಸ್ರಾವವಾಗಿ ವೇಲಾಯುದನ್ ಸ್ಥಳದಲ್ಲೇ ಸಾ*ವನ್ನಪ್ಪಿದ್ದಾರೆ. ಸ್ಥಳಕ್ಕಾಗಮಿಸಿದ ಬನ್ನೇರುಘಟ್ಟ ಪೊಲೀಸರು, ಮೃತದೇಹವನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಯ ಶ*ವಗಾರಕ್ಕೆ ರವಾನಿಸಿದ್ದಾರೆ. ಆರೋಪಿ ವಿನೋದ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.
ಬುದ್ದಿ ಹೇಳಿದ್ದೇ ತಪ್ಪಾಯ್ತಾ?
ತಮ್ಮ ವಿಫುಲ್ ಕುಮಾರ್ಗೆ 300 ರೂಪಾಯಿ ಹಣ ನೀಡಿ ಎಣ್ಣೆ ತರಿಸಿದ ವಿನೋದ್, ಎಂದಿನಂತೆ ತಂದೆಗೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿದ್ದಾನೆ. ಬರಿ ಚಡ್ಡಿ ಧರಿಸಿ ಓಡಾಡುತ್ತಿರುವುದನ್ನು ಕಂಡು ಪಂಚೆ ಉಟ್ಟುಕೊಳ್ಳುವಂತೆ ಹೇಳಿದಕ್ಕೆ ತಂದೆಯ ಮೇಲೆ ಕ್ರೌ*ರ್ಯ ಮೆರೆದಿದ್ದಾನೆ.
ಇದನ್ನೂ ಓದಿ : ಇಂದು ನಟ ದರ್ಶನ್ ಗೆ `ಬಿಗ್ ಡೇ’ : ಕೆಲವೇ ಕ್ಷಣಗಳಲ್ಲಿ `ದಾಸ’ ನ ಜಾಮೀನು ಭವಿಷ್ಯ ನಿರ್ಧಾರ!
ತಂದೆ ಮೇಲೆ ಹ*ಲ್ಲೆ ನಡೆಸಿ, ಗೋಡೆಗೆ ತಲೆಯನ್ನು ಗುದ್ದಿ ಕೆಳಗೆ ಬೀಳಿಸಿದ್ದಾನೆ. ಅಷ್ಟಕ್ಕೇ ಬಿಡದೆ ಕಾಲಿನಿಂದ ಮನಸೋ ಇಚ್ಛೆ ಹ*ಲ್ಲೆ ನಡೆಸಿ ಬಳಿಕ ಚಾಕುವಿನಿಂದ ಕತ್ತು ಸೀಳಿ ಕೊಂ*ದಿದ್ದಾನೆ.
ಸೈಕೋ..ಕುಡಿತದ ಚಟ!
ಆರೋಪಿ ವಿನೋದ್ ಕುಮಾರ್ ಕುಡಿತದ ಚಟಕ್ಕೆ ದಾಸನಾಗಿದ್ದು, ಸೈಕೋ ರೀತಿಯಲ್ಲಿ ವರ್ತನೆ ಮಾಡುತ್ತಿದ್ದನಂತೆ. ಈ ಹಿಂದೆ ಕೂಡ ತಂದೆ ವೇಲಾಯುಧನ್ ಮತ್ತು ತಮ್ಮ ವಿಫುಲ್ ಕುಮಾರ್ ಮೇಲೆ ಹ*ಲ್ಲೆ ನಡೆಸಿದ್ದು, ರ*ಕ್ತ ಗಾ*ಯಗಳಾಗಿತ್ತು ಎಂದು ತಿಳಿದು ಬಂದಿದೆ. ಕೆಲಸಕ್ಕೆ ಹೋಗದೆ ಸದಾ ಮನೆಯಲ್ಲಿಯೇ ಇರುತ್ತಿದ್ದ ವಿನೋದ್, ತಂದೆ ಪೆನ್ಷನ್ ಹಣವನ್ನು ಬೆದರಿಸಿ ಕಸಿಯುತ್ತಿದ್ದನು.
ತಾಯಿ ಕ್ಯಾನ್ಸರ್ ರೋಗಿ, ತಮ್ಮ ಮಾನಸಿಕವಾಗಿ ದುರ್ಬಲನಾಗಿದ್ದು, ತಂದೆಯ ಪೆನ್ಷನ್ ಹಣದಿಂದ ಹೇಗೋ ಸಂಸಾರ ಸಾಗುತ್ತಿತ್ತು. ಆದ್ರೆ, ಈಗ ಮನೆಗೆ ಅಧಾರವಾಗಿದ್ದ ತಂದೆ ಸಾ*ವನ್ನಪ್ಪಿದ್ದು, ಮಗ ಜೈಲು ಪಾಲಾಗಿದ್ದಾನೆ.
FILM
ಇಂದು ನಟ ದರ್ಶನ್ ಗೆ `ಬಿಗ್ ಡೇ’ : ಕೆಲವೇ ಕ್ಷಣಗಳಲ್ಲಿ `ದಾಸ’ ನ ಜಾಮೀನು ಭವಿಷ್ಯ ನಿರ್ಧಾರ!
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ನಟ ದರ್ಶನ್ ಹಾಗೂ ಪವಿತ್ರಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಜಾಮೀನು ಅರ್ಜಿಯ ವಾದ, ಪ್ರತಿವಾದ ಆಲಿಸಿದ್ದಂತ ನ್ಯಾಯಾಲಯವು, ತೀರ್ಪು ಇಂದಿಗೆ ಕಾಯ್ದಿರಿಸಿತ್ತು. ಇದೀಗ ಇಂದು ನಟ ದರ್ಶನ್ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ.
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಎ2 ಆರೋಪಿಯಾಗಿರುವಂತ ನಟ ದರ್ಶನ್ ಜಾಮೀನು ಕೋರಿ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸರ್ಕಾರದ ಅಭಿಯೋಜಕ ಎಸ್ ಪಿಪಿ ಪ್ರಸನ್ನ ಕುಮಾರ್ ಹಾಗೂ ದರ್ಶನ್ ಪರವಾಗಿ ವಕೀಲ ಸಿ.ವಿ ನಾಗೇಶ್ ತಮ್ಮ ವಾದ ಪ್ರತಿವಾದವನ್ನು ಮಂಡಿಸಿದ್ದರು. ಈ ಬಳಿಕ ಕೋರ್ಟ್ ಇಂದಿಗೆ ಜಾಮೀನು ಅರ್ಜಿಯ ತೀರ್ಪು ಕಾಯ್ದರಿಸಿತ್ತು.
ಇದಲ್ಲದೇ ಎ.1 ಆರೋಪಿ ಪವಿತ್ರಾ ಗೌಡ, ರವಿ, ನಾಗರಾಜ್, ಲಕ್ಷ್ಮಣ್ ಹಾಗೂ ದೀಪಕ್ ಜಾಮೀನು ಅರ್ಜಿಯನ್ನು ಕೂಡ ಇಂದು ನ್ಯಾಯಾಲಯ ನಡೆಸಲಿದೆ. ನಟ ದರ್ಶನ್ ಅವರಿಗೆ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜಾಮೀನು ದೊರೆಯದೇ ಇದ್ದರೇ, ಹೈಕೋರ್ಟ್ ಮೊರೆ ಹೋಗುವಂತ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇಂದು ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯ ನಟ ದರ್ಶನ್ ಜಾಮೀನು ಕುರಿತು ಯಾವ ತೀರ್ಪು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
- FILM6 days ago
ಎರಡನೇ ಮದುವೆಯಾಗುತ್ತಿರುವ ಬಿಗ್ಬಾಸ್ ಕಂಟೆಸ್ಟೆಂಟ್
- LATEST NEWS6 days ago
ನ.8 ಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ನಿವೃತ್ತಿ..! 15 ದಿನದಲ್ಲಿ 8 ಪ್ರಮುಖ ತೀರ್ಪು ಸಾಧ್ಯತೆ..!
- BIG BOSS7 days ago
ಇದೇ ಕಾರಣಕ್ಕೆ ಮೊದಲ ವಾರವೇ ಯಮುನಾ ಶ್ರೀ ನಿಧಿ ಬಿಗ್ಬಾಸ್ ಮನೆಯಿಂದ ಔಟ್ ಆದದ್ದು..!
- BIG BOSS6 days ago
BBK11: ಬಿಗ್ ಬಾಸ್ ನರಕ ನಿವಾಸಿಗಳಿಗೆ ಬಂಪರ್ ಆಫರ್
Sarvesh. H. Rao
16/06/2022 at 9:14 PM
What job