Connect with us

  DAKSHINA KANNADA

  BJP ಸರ್ಕಾರ ಇರುವಾಗ ಯಾವುದೇ ಪ್ರಕರಣವನ್ನು CBI ತನಿಖೆಗೆ ಕೊಟ್ಟಿಲ್ಲ-ಮಾಜಿ ಸಚಿವ ರೈ ವ್ಯಂಗ್ಯ

  Published

  on

  ಮಂಗಳೂರು: ‘ಯಡಿಯೂರಪ್ಪನವರ ಸರ್ಕಾರ ಇರುವಾಗ ಒಂದೇ ಒಂದು ಸಿಬಿಐ ತನಿಖೆ ಮಾಡಿಲ್ಲ. ಅದೇ ಸಿದ್ಧರಾಮಯ್ಯ ಸರ್ಕಾರ ಇರುವಾಗ 7 ಸಿಬಿಐ ತನಿಖೆ ಆಗಿದೆ. ಪರೇಶ್ ಮೆಸ್ತಾ ವಿಷಯದಲ್ಲಿ ಕೂಡಾ ಸಿಬಿಐ ತನಿಖೆ ಮಾಡಿಸಿದ್ದೇವೆ. ಸರ್ಕಾರ ನಮ್ಮದಲ್ಲ. ಆದ್ರೂ ಮಾಡಿಸಿದ್ದೇವೆ. ಸಚಿವ ಈಶ್ವರಪ್ಪ ತನಿಖೆ ಅದು ಕೇಸ್ ಈಗ ಮುಚ್ಚಿದ್ದಾರೆ ಅದು ಬಿಡಿ. ಆದ್ರೆ ಅದೊಂದು ಗಂಭೀರ ಪ್ರಕರಣ. 40 ಕಮಿಷನ್ ಆರೋಪ ಅದು ಕೂಡಾ ತನಿಖೆ ಆಗ್ಬೇಕಿತ್ತು. ಆದ್ರೆ ಮಾಡ್ಲಿಲ್ಲ’ ಎಂದು ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಚಿವ ರಮಾನಾಥ ರೈ ವ್ಯಂಗ್ಯವಾಡಿದ್ದಾರೆ.


  ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು ‘ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ ಒಂದು ಹೇಳಿಕೆ ಗಮನಿಸಿದೆ. ನಾವು ಮಂತ್ರಿಯನ್ನು ರಾಜೀನಾಮೆ ಕೊಡಿಸ್ಲಿಕ್ಕೆ ಕಾಂಗ್ರೆಸ್ ಅಲ್ಲ. ನಮ್ಮದು ಬಿಜೆಪಿ ಸರ್ಕಾರ ಅಂತ. ಇವತ್ತು ರೈತರನ್ನು ಹತ್ಯೆ ಮಾಡಿದ್ದಾರೆ ಅಲ್ಲವಾ…ಅದಕ್ಕೂ ನ್ಯಾಯ ಕೊಡಿಸ್ಲಿಕ್ಕೆ ಆಗಿಲ್ಲ. ಹೀಗೆಲ್ಲಾ ಮಾಡಿ ಅವರಿಗೆ ಗೊತ್ತಿದೆ ಜನರನ್ನು ಭಾವನಾತ್ಮಕವಾಗಿ ಮಂಗ ಮಾಡಬಹುದು ಅಂತ. ಅದಕ್ಕೆ ದೇಶದಲ್ಲಿ ಅನೇಕ ಪ್ರಕರಣಗಳು ಆಗುತ್ತಿದೆ’ ಎಂದು ಹೇಳಿದರು.


  ಇನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿಕೆ ಬಗ್ಗೆ ಮಾತನಾಡಿ ‘ರೌಡಿಶಿಟರ್‌ನವರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.

  ಇದು ನಾವು ಮೊದಲಿನಿಂದಲೂ ನೋಡ್ತಾ ಬಂದಿರುವುದು. ಸಂಭಾವಿತ ರಾಜಕಾರಣಿಗಳನ್ನು ದೂರ ತಳ್ಳಿ ಇಂತಹ ವ್ಯಕ್ತಿಗಳಿಗೆ ಮಣೆ ಹಾಕುತ್ತಿರುವುದು ಅವರಿಗೂ ನಮಗೂ ಇರುವ ಪ್ರಮುಖ ವ್ಯತ್ಯಾಸ.
  ಅವರು ಒಂದು ಹೇಳಿಕೆ ಕೊಡ್ತಾರೆ ನಾನು ರೌಡಿಶೀಟರ್ ಅಂತ.

  ನಾವು ಸಾಮಾಜಿಕ ಬದುಕಿನಲ್ಲಿ, ರಾಜಕೀಯ ಬದುಕಿನಲ್ಲಿ ಇರುವವರು. ಆದ್ದರಿಂದ ನಮ್ಮ ಮೇಲೆ ಅನೇಕ ಆರೋಪ , ಕೇಸ್‌ಗಳು ಬರುತ್ತದೆ ಅಂತ. ಆದ್ರೆ ರಾಜಕೀಯ ಜೀವನದಲ್ಲಿ ಇರುವವರು. ಹಾಗಂತ ಯಾರೂ ಕೂಡಾ ರೌಡಿಶಿಟರ್ ಆಗಬೇಕೆಂದಿಲ್ಲ.

  ಅನೇಕ ಕ್ರೈಮ್ ಮಾಡ್ತಾ ಇರುವವರನ್ನು ನಾವು ರೌಡಿಶೀಟರ್ಸ್ ಎಂದು ಕರೆಯುತ್ತೇವೆ. ಹಾಗಿರುವಾಗ ಇಂತಹ ಹೇಳಿಕೆ ಕೊಟ್ಟು ಅವರನ್ನು ಪರೋಕ್ಷವಾಗಿ ಬೆಂಬಲಿಸುವುದು ಎಷ್ಟು ಸರಿ..? ‘ ಎಂದು ಪ್ರಶ್ನಿಸಿದರು.

  DAKSHINA KANNADA

  ಕಂಬಳ ಕ್ಷೇತ್ರದಲ್ಲಿ ಹಲವು ಮೆಡಲ್‌ಗಳನ್ನು ಗಳಿಸಿದ “ಲಕ್ಕಿ” ಇನ್ನಿಲ್ಲ..

  Published

  on

  ಕಿನ್ನಿಗೋಳಿ: ಕಂಬಳ ಕ್ಷೇತ್ರದ ಸಾಧಕ, ಹಲವಾರು ಮೆಡಲ್ ಗಳನ್ನು ತನ್ನದಾಗಿಸಿದ ಕೋಣ  ಲಕ್ಕಿ ಸಾವನ್ನಪ್ಪಿದೆ. ಐಕಳ ದಿವಾಕರ ಚೌಟ ಮಾಲಕತ್ವದ ಕೋಣ ಲಕ್ಕಿ ಕಳೆದ ಏಳೆಂಟು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳವಾರ(ಜು.16) ಕಾರ್ಕಳದಲ್ಲಿ ಲಕ್ಕಿಗೆ ಅಪರೇಷನ್ ಕೂಡ ನಡೆದಿತ್ತು.

  ಮಳೆ ಸೃಷ್ಟಿಸಿದ ಅವಾಂತರ.. ಲಾರಿ ಏರಿ ಜಿಲ್ಲಾಧಿಕಾರಿ ಪ್ರಯಾಣ..!!

  ಖ್ಯಾತ ವೈದ್ಯ ವಾಸುದೇವ ಪೈ ಅಪರೇಷನ್ ನಡೆಸಿದ್ದು, ಮತ್ತೆ ಇಂದು ಚಿಕಿತ್ಸೆಗಾಗಿ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ವೈದ್ಯರನ್ನು ನೋಡಿದ ಲಕ್ಕಿ ಹೆದರಿ ಅತ್ತಿಂದಿತ್ತ ಓಡತೊಡಗಿತ್ತು. ಲಕ್ಕಿಯ ಮಾಲಕರು ಮತ್ತು ಒಡನಾಡಿಗಳಿಗೂ ನಿಯಂತ್ರಣಕ್ಕೆ ಸಿಗದಾಯಿತು. ಕೊನೆಗೆ ಮರಕ್ಕೆ ಕಟ್ಟಿ ಹಾಕಿದ್ದು ಸ್ವಲ್ಪ ಹೊತ್ತಿನಲ್ಲೇ ಅಸು ನೀಗಿದೆ. ಲಕ್ಕಿ ಒಬ್ಬಂಟಿ ಕೋಣವಾಗಿದ್ದು ಕಂಬಳ ಸಂದರ್ಭ ಅದಕ್ಕೆ ಸರಿಯಾದ ಜೊತೆ ಹುಡುಕಿ ಕಂಬಳದಲ್ಲಿ ಓಡಿಸಲಾಗುತ್ತಿತ್ತು. ಈ ಬಾರಿ 5 ಮತ್ತು ಕಳೆದ ವರ್ಷ 5 ಮೆಡಲ್ ಗಳನ್ನು ತನ್ನದಾಗಿಸಿದ್ದ ಲಕ್ಕಿ ಹಲವಾರು ಮೆಡಲ್ ಗಳನ್ನು ಪಡೆದುಕೊಂಡಿತ್ತು.

  Continue Reading

  DAKSHINA KANNADA

  ಹಳೆಯ ಸಿದ್ದರಾಮಯ್ಯ ಕಳೆದು ಹೋಗಿದ್ದಾರೆ: ವಿ.ಸೋಮಣ್ಣ

  Published

  on

  ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದು ಹೋಗಿದ್ದಾರೆ. ಹಳೆ ಸಿದ್ದರಾಮಯ್ಯನವರು ಇಲ್ಲ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

  ಬುಧವಾರ ಮಂಗಳೂರಿನಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ಮುಡಾ ಹಗರಣ ವಿಚಾರದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಸೋಮಣ್ಣ ಅವರು ಈ ಉತ್ತರ ನೀಡಿದರು.

  ನಾನು‌ ಅವರ ಜೊತೆ ಮಂತ್ರಿಯಾಗಿ, ಶಾಸಕನಾಗಿ ಕೆಲಸ ಮಾಡಿದ್ದೇನೆ. ಆ ಸಿದ್ದರಾಮಯ್ಯನವರು ಇವತ್ತು ಇಲ್ಲ. ಇವತ್ತು ಇರುವ ಸಿದ್ದರಾಮಯ್ಯನವರ ಕುರಿತು ನನಗೂ ಒಂದು ರೀತಿ ಅನುಮಾನ ಆಗಿದೆ ಎಂದರು. ‘ವಾಸ್ತವವನ್ನು ಯಾರೂ ಮುಚ್ಚಿಡಲು ಆಗಲ್ಲ. ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ಲ ಎಂದು ಯಾರೂ ತಿಳಿದುಕೊಳ್ಳಬಾರದು’

  ಸಿದ್ದರಾಮಯ್ಯನವರು ಅದನ್ನು ತಿದ್ದಿಕೊಂಡು ಜನರಿಗೆ ವಾಸ್ತವಾಂಶ ಏನೆಂದು ತಿಳಿಸಲಿ. ಆಗ ಅವರು ಹಳೆ ಸಿದ್ದರಾಮಯ್ಯ ಆಗುತ್ತಾರೆ ಎಂದು ಸಚಿವ ಸೋಮಣ್ಣ ಅವರು ಹೇಳಿದರು.

  Continue Reading

  DAKSHINA KANNADA

  ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ ಮಂಗಳೂರಿಗೆ ಭೇಟಿ

  Published

  on

  ಮಂಗಳೂರು: ರೈಲ್ವೆ ಅಭಿವೃದ್ಧಿ ಕುರಿತು ಪ್ರಗತಿ ಪರಿಶೀಲನೆಗಾಗಿ ಮಂಗಳವಾರ ರಾತ್ರಿ ಆಗಮಿಸಿದ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಸಂಸದ ಬ್ರಿಜೇಶ್ ಚೌಟ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

  ಮೇಯರ್ ಸುಧೀರ್ ಶೆಟ್ಟಿ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಉಪಸ್ಥಿತರಿದ್ದರು.

  ಸಚಿವ ಸೋಮಣ್ಣ ಅವರು ಜುಲೈ 17 ರಂದು ಬೆಳಗ್ಗೆ ಒಂಭತ್ತು ಗಂಟೆಗೆ ಮಂಗಳೂರು ಸೆಂಟ್ರಲ್ ನಿಲ್ದಾಣ, ಬಳಿಕ ಮಂಗಳೂರು ಜಂಕ್ಷನ್ ನಿಲ್ದಾಣಕ್ಕೆ ಭೇಟಿ ನೀಡಿದರು. ಬಳಿಕ ಕೊಟ್ಟಾರದಲ್ಲಿರುವ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರೈಲ್ವೆ ಸಂಬಂಧಿಸಿ ಸಭೆಯ ನೇತೃತ್ವ ವಹಿಸಲಿದ್ದಾರೆ.

  Continue Reading

  LATEST NEWS

  Trending