Monday, January 24, 2022

ಉದ್ಯಮಿ ಬಿ.ಆರ್​.ಶೆಟ್ಟಿಗೆ ಮತ್ತೊಂದು ಸಂಕಷ್ಟ: 131 ಮಿಲಿಯನ್‌ ಡಾಲರ್‌ ಪಾವತಿಸುವಂತೆ ಕೋರ್ಟ್ ಆದೇಶ

ದುಬೈ: ಕರಾವಳಿ ಮೂಲದ ಅನಿವಾಸಿ ಉದ್ಯಮಿ ಬಿ.ಆರ್​.ಶೆಟ್ಟಿ ಮತ್ತೊಂದು ಅಘಾತ ಎದುರಾಗಿದ್ದು, ಪ್ರಕರಣವೊಂದರಲ್ಲಿ ಲಂಡನ್‌ ಮೂಲದ ಬಾರ್‌ಕ್ಲೇಸ್‌ ಕಂಪನಿಗೆ 131 ಮಿಲಿಯನ್‌ ಡಾಲರ್‌ ಪಾವತಿ ಮಾಡಬೇಕು ಎಂದು ದುಬೈ ಕೋರ್ಟ್ ಆದೇಶಿಸಿದೆ.
2020ರಲ್ಲಿ ಬಾರ್‌ಕ್ಲೇಸ್‌ ಜತೆ ಹಣಕಾಸು ವ್ಯವಹಾರ ಮಾಡಿಕೊಂಡಿದ್ದ ಬಿ.ಆರ್ ಶೆಟ್ಟಿ ಒಡೆತನದ ವಿದೇಶಿ ಹಣ ವಿನಿಮಯ ಸಂಸ್ಥೆ,

ಇದನ್ನು ಮಾರುಪಾವತಿ ಮಾಡಲು ವಿಫಲವಾಗಿತ್ತು. ಹೀಗಾಗಿ ಹಣ ವಸೂಲಿ ಮಾಡಿಕೊಡಬೇಕು ಎಂದು ಬಾರ್‌ಕ್ಲೇಸ್‌,

ದುಬೈ ನ್ಯಾಯಾಲಯದ ಮೊರೆ ಹೋಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ದುಬೈ ಕೋರ್ಟ್‌ ಇದೀಗ ಬಾರ್‌ಕ್ಲೇಸ್‌ ಸಂಸ್ಥೆಗೆ 131 ಮಿಲಿಯನ್‌ ಡಾಲರ್‌ ಪಾವತಿ ಮಾಡಬೇಕು ಎಂದು ಆದೇಶಿಸಿದೆ.
ದುಬೈನಲ್ಲಿ ಎನ್‌ಎಂಸಿ ಹೆಲ್ತ್‌ ಎನ್ನುವ ವೈದ್ಯಕೀಯ ಸಂಸ್ಥೆ ಸ್ಥಾಪಿಸಿದ್ದ ಬಿ.ಆರ್ ಶೆಟ್ಟಿ, ಅದರಲ್ಲಿ ಭಾರೀ ನಷ್ಟ ಅನುಭವಿಸಿದ್ದರು.

ಪರಿಣಾಮ ತಾನು ಸ್ಥಾಪಿಸಿದ ಕಂಪನಿಯಿಂದಲೇ ಹೊರ ದಬ್ಬಲ್ಪಟ್ಟಿದ್ದರು. ಬಳಿಕ ವಿಶ್ವಾದ್ಯಂತ ಇರುವ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು ಎಂದು ಲಂಡನ್‌ ಕೋರ್ಟ್‌ ಆದೇಶ ಮಾಡಿತ್ತು.

Hot Topics

ಮಂಗಳೂರು: ಮಾಲೀಕನ ಎದುರೇ ಸ್ಕೂಟರ್‌ ಕದ್ದೊಯ್ದ ಕಳ್ಳ

ಮಂಗಳೂರು: ಮಾಲೀಕನ ಎದುರಿನಲ್ಲಿಯೇ ಕಳ್ಳನೊಬ್ಬ ಸ್ಕೂಟರ್‌ ಕಳವು ಮಾಡಿದ ಘಟನೆ ನಗರದಲ್ಲಿ ನಡೆದಿದೆ.ರಿನ್ಸ್‌ ಮೋನ್‌ ಕ್ಸೇವಿಯರ್‌ ಅವರು ಜ.7ರಂದು ಬೆಳಗ್ಗೆ 11.30ರ ವೇಳೆಗೆ ಪಾರ್ಸಲ್‌ ಬಸ್‌ಗೆ ನೀಡಲು ಜ್ಯೋತಿ ವೃತ್ತದ ಬಳಿ ಸ್ಕೂಟರ್‌...

‘ಸುಳ್ಳುಗಳ ಮೂಲಕ ನಾರಾಯಣಗುರುವಿಗೆ ಮಾಡಿದ ಅಪಚಾರವನ್ನು ಮುಚ್ಚಿಟ್ಟುಕೊಳ್ಳಲಾಗದು’

ಮಂಗಳೂರು: ಸುಳ್ಳುಗಳ ಮೂಲಕ ಸಾಮಾಜಿಕ ಸುಧಾರಣೆಯ ಹರಿಕಾರ  ನಾರಾಯಣ ಗುರು ಅವರಿಗೆ ಮಾಡಿದ ಅಪಚಾರವನ್ನು ಬಿಜೆಪಿ ಮುಚ್ಚಿಟ್ಟುಕೊಳ್ಳಲಾಗದು ಎಂದು ಸಿಪಿಐಎಂ ಹೇಳಿದೆ.ಕೇರಳ ರಾಜ್ಯ ಸರಕಾರ ಸೂಚಿಸಿದ ನಾರಾಯಣಗುರು ಇರುವ ಸ್ಥಬ್ದ ಚಿತ್ರವನ್ನು ಪರಿಗಣಿಸದೇ...

ನೇತಾಜಿ ಸುಭಾಸ್ ಚಂದ್ರ ಬೋಸ್ ಜನ್ಮ ದಿನದ ಪ್ರಯುಕ್ತ ರಕ್ತದಾನ ಶಿಬಿರ

ಮಂಗಳೂರು: ಸ್ವಾತಂತ್ರ ಸೇನಾನಿ ನೇತಾಜಿ ಸುಭಾಸ್ ಚಂದ್ರ ಬೋಸ್ 125 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್ ಮತ್ತು ಬಿರುವೆರ್ ಕುಡ್ಲ(ರಿ) ನೇತೃತ್ವದಲ್ಲಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆ ಸಹಯೋಗದಲ್ಲಿ ರಕ್ತದಾನ...