DAKSHINA KANNADA
ಹುತಾತ್ಮ ಸಿಆರ್ ಪಿಎಫ್ ಯೋಧ ಉದಯ ಕುಟುಂಬಕ್ಕೆ ಅನ್ಯಾಯ ..! ಹುತಾತ್ಮ ಯೋಧನ ಕುಟುಂಬಕ್ಕೆ ಇಲ್ಲವಾಗಿದೆ ರಕ್ಷಣೆ..
ಹುತಾತ್ಮ ಸಿಆರ್ ಪಿಎಫ್ ಯೋಧ ಉದಯ ಕುಟುಂಬಕ್ಕೆ ಅನ್ಯಾಯ ..! ಹುತಾತ್ಮ ಯೋಧನ ಕುಟುಂಬಕ್ಕೆ ಇಲ್ಲವಾಗಿದೆ ರಕ್ಷಣೆ..
ಮಂಗಳೂರು : ಛತ್ತೀಸ್ ಗಢದಲ್ಲಿ 2006ರಲ್ಲಿ ನಡೆದ ನಕ್ಸಲ್ ತಂಡದೊಂದಿದೆ ನಡೆದ ಹೋರಾಟದಲ್ಲಿ ಹುತಾತ್ಮನಾದ ಮಂಗಳೂರಿನ ವೀರಯೋಧ ಉದಯ ಕುಮಾರ್ ಕುಟುಂಬಕ್ಕೆ ವ್ಯಕ್ತಿಯೊಬ್ಬ ವಂಚನೆ ನಡೆಸಿ ಯೋಧನ ಕುಟುಂಬದ ಆಸ್ತಿಯನ್ನು ಫೋರ್ಜರಿ ದಾಖಲೆ ಮೂಲಕ ಕಬಳಿಸಿರುವುದು ಬೆಳಕಿಗೆ ಬಂದಿದೆ.
51ನೇ Central Reserve Police Force (CRPF) ಬೆಟಾಲಿಯನ್ ಯೋಧನಾಗಿದ್ದ ಉದಯ ಕುಮಾರ್ 2006 ಆಗಸ್ಟ್ 2ರಂದು ಹುತಾತ್ಮರಾಗಿದ್ದರು. ಆಗ ಅವರಿಗೆ ವಯಸ್ಸು 34 ಮತ್ತು ಎಲ್ ಕೆಜಿ ಮತ್ತು ಒಂದನೇ ತರಗತಿಯಲ್ಲಿ ಮಕ್ಕಳು ಕಲಿಯುತ್ತಿದ್ದರು. ಐದು ದಿವಸಗಳ ಅನಂತರವಷ್ಟೇ ಯೋಧನ ಮೃತದೇಹ ಮಂಗಳೂರು ತಲುಪಿತ್ತು. ಯೋಧನ ನೆನಪಿಗೆ ಮಂಗಳೂರು ಕೆಪಿಟಿ ಯ ಮೊದಲ ಅಡ್ಡರಸ್ತೆಗೆ ಉದಯ ಕುಮಾರ್ ಹೆಸರಿಡಲಾಗಿದೆ.
ಹುತಾತ್ಮನಾದ ಪತಿಯ ಪರಿಹಾರ ಧನದಿಂದ ಮಡದಿ ಯೆಯ್ಯಾಡಿ ಸಮೀಪ ಮನೆಯೊಂದನ್ನು ನಿರ್ಮಿಸಿ ಮನೆಯ ಮೇಲಿನ ಮಹಡಿಯನ್ನು ಬಾಡಿಗೆಗೆ ನೀಡಿ ಮನೆ ನಿರ್ವಹಣೆ ಮಾಡುತ್ತಿದ್ದರು. ಹೀಗಿರುವಾಗ ನಾಲ್ಕು ವರ್ಷಗಳ ಹಿಂದೆ ಮನೆ ಬಾಡಿಗೆಗೆ ಆಗಮಿಸಿದ ಸುನೀಲ್ ಕುಮಾರ್ ಎಂಬ ವ್ಯಕ್ತಿಯು ವಾಮಮಾರ್ಗದ ಮೂಲಕ ಮನೆಯ ಒಂದು ಭಾಗವನ್ನು ತನ್ನ ಹೆಸರಿಗೆ ಬರೆಸಿ ದಾಖಲೆ ನಿರ್ಮಿಸಿರುತ್ತಾನೆ.
ಮಾತ್ರವಲ್ಲದೆ, ಕಳೆದ ಮೂರು ವರ್ಷಗಳಿಂದ ಮನೆ ಬಾಡಿಗೆ ನೀಡದೆ ಯೋಧನ ಮಡದಿ ಮತ್ತು ಮಕ್ಕಳಿಗೆ ಮಾನಸಿಕ ಕಿರುಕುಳ ನೀಡುತ್ತಾ, ದೇವರು ಮತ್ತು ವಾಮಾಚಾರಾದ ಹೆಸರಿನಲ್ಲಿ ಬೆದರಿಸಿ ಕಿರುಕುಳ ನೀಡುತ್ತಿದ್ದು, ಇದೀಗ ಯೋಧನ ಮಡದಿ ವಸಂತಿ ಅವರು ಪಾಂಡೇಶ್ವರ ಅವರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಮಧ್ಯೆ, ಸುನೀಲ್ ಎಂಬಾತನ ಇವರ ಮನೆಯ ಆವರಣದೊಳಗೆ ಅತಿಕ್ರಮಣ ಮಾಡಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಮಾತ್ರವಲ್ಲದೆ, ಹುತಾತ್ಮ ಯೋಧನ ಉದಯ ಕುಮಾರ್ ಮಕ್ಕಳ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ನೀಡಿದ್ದಾನೆ. ವಾಸ್ತವಾಂಶ ಪರಿಶೀಲಿಸದ ಪೊಲೀಸರು ಯೋಧನ ಮಕ್ಕಳಿಬ್ಬರ ವಿರುದ್ಧ ಪ್ರಕರಣ ಕೂಡ ದಾಖಲಿಸಿದ್ದಾರೆ..!
ಮನೆ ಸಾಲದ ಕಂತು ಪಾವತಿಸಿಸ ಉಳಿಕೆಯಾಗುವ ಪಿಂಚಣಿ ಹಣದಲ್ಲಿ ಜೀವನ ಸಾಗಿಸುತ್ತಿದ್ದ, ಮಹಿಳೆಗೆ ಈಗ ಮಕ್ಕಳಿಗೆ ಶಿಕ್ಷಣ ಮುಂದುವರಿಸುವುದೇ ಸವಾಲಾಗಿದೆ. ಸ್ವಾಭಿಮಾನಿ ಮಹಿಳೆಯು ಯಾರೊಂದಿಗೆ ತನ್ನ ಕಷ್ಟ ಹೇಳಿಕೊಂಡಿರಲಿಲ್ಲ.
ಇದೀಗ Central Reserve Police Force (CRPF) ಬೆಂಗಳೂರಿನ ಹಿರಿಯ ಅಧಿಕಾರಿಗಳ ಗಮನಕ್ಕೆ ವಿಚಾರ ತರಲಾಗಿದ್ದು, ಕುಟುಂಬದ ಪರವಾಗಿ ನಿಲ್ಲುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಬೆಂಗಳೂರಿನ ಸಿ ಆರ್ ಪಿ ಎಫ್ ಅಧಿಕಾರಿಗಳು ವಿಚಾರವನ್ನು ರಾಜ್ಯ ಸರಕಾರ ಗಮನಕ್ಕೆ ತಂದಿದ್ದು, ನ್ಯಾಯ ಕೊಡುವಂತೆ ವಿನಂತಿಸಿದ್ದಾರೆ.
ಮಾತ್ರವಲ್ಲದೆ, ಸಿ ಆರ್ ಪಿ ಎಫ್ ಅಧಿಕಾರಿಗಳ ತಂಡವೊಂದು ಸೋಮವಾರ ನಗರಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಮತ್ತು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಆಗಲಿದ್ದಾರೆ.
ಬಾಡಿಗೆಗೆ ಮನೆಯಲ್ಲಿ ವಾಸವಾಗಿರುವ ವ್ಯಕ್ತಿಯು ಯೋಧನ ಮಕ್ಕಳನ್ನು ಜೈಲಿಗೆ ಹಾಕಿ, ಯೋಧನ ಮಡದಿಯನ್ನು ಬೀದಿ ಪಾಲು ಮಾಡುವುದಾಗಿ ಆಕೆಗೆ ಬೆದರಿಕೆ ಹಾಕಿರುವುದನ್ನು ವಸಂತಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮಾಹಿತಿ ತಿಳಿದ ಸ್ಥಳೀಯರು ಯೋಧನ ಕುಟುಂಬದ ಬೆಂಬಲ ನೀಡಿದ್ದು, ಸರಕಾರಿ ಅಧಿಕಾರಿಗಳನ್ನು ಭೇಟಿಯಾಗಿ ನ್ಯಾಯ ಒದಗಿಸಲು ಮನವಿ ಮಾಡಲಿದ್ದಾರೆ.
ಯೋಧನ ಮೃದ ದೇಹ ಮಂಗಳೂರಿಗೆ ತಲುಪುವಾಗ ಐದು ದಿವಸಗಳು ವಿಳಂಬವಾದ ಪರಿಣಾಮ ಯೋಧನ ಮಡದಿಯು ಕೆಲವು ದಿನಗಳ ಮಂಗಳೂರಿನ ಎಸ್ ಸಿ ಎಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
ಮನಸ್ಸಿಗೆ ತೀವೃತರವಾದ ನೋವು, ಕೆಲವು ದಿನಗಳ ಸ್ಮೃತಿ ಇಲ್ಲದ ಕಾರಣ ಮಹಿಳೆಗೆ ತೀವೃ ಮಾನಸಿಕ ಒತ್ತಡ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಇದೇ ಕಾರಣದಿಂದಾಗಿ ಪರಿಹಾರ ರೂಪದಲ್ಲಿ ಉದ್ಯೋಗ ಕೂಡ ದೊರಕಿರಲಿಲ್ಲ ಎನ್ನಲಾಗಿದೆ.
ಮಹಿಳೆಯ ಆರೋಗ್ಯ ಸಮಸ್ಯೆ, ಅತಿಯಾದ ದೈವಿ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡಿರುವ ಆರೋಪಿಯು ವಂಚನೆಯ ಮೂಲಕ ಆಸ್ತಿಯ ಫೋರ್ಜರಿ ದಾಖಲೆ ಸೃಷ್ಟಿಸಿರುವ ಸಾಧ್ಯತೆ ಇದೆ.
ಹುತಾತ್ಮ ಯೋಧನ ಮಡದಿಗೆ ಮತ್ತು ಕುಟುಂಬಕ್ಕೆ ನ್ಯಾಯ ಒದಗಿಸುವುದು ಕೇವಲ ಸರಕಾರಿ ಅಧಿಕಾರಿಗಳಲ್ಲದೆ, ನಾಗರಿಕ ಸಮಾಜದ ಕರ್ತ್ಯವ್ಯ ಕೂಡ ಆಗಿರುತ್ತದೆ.
DAKSHINA KANNADA
ರಾಜಕೀಯ ಲಾಭಕ್ಕಾಗಿ ಮಾತನಾಡುತ್ತಿರುವ ಬಿಜೆಪಿ ಜಿಲ್ಲಾಧ್ಯಕ್ಷ- ಬಿರುವೆರ್ ಕುಡ್ಲ ಉದಯ್ ಪೂಜಾರಿ
ಮಂಗಳೂರು : ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನರೇಂದ್ರ ಮೋದಿಯವರು ರೋಡ್ ಶೋ ನಡೆಸಿದ್ದರು. ಮುಂಬರುವ ಚುನಾವಣೆಯಲ್ಲಿ ದ.ಕ ಜಿಲ್ಲಾ ಅಭ್ಯರ್ಥಿ ಬ್ರಿಜೇಶ್ ಚೌಟ ಹಾಗೂ ಉಡುಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಪರ ಬ್ಯಾಟ್ ಬೀಸಿದ್ದರು. ಈ ವೇಳೆ ನಾರಾಯಣ ಗುರು ಸರ್ಕಲ್ ನಲ್ಲಿರುವ ಗುರುಗಳ ಮೂರ್ತಿಗೆ ಮಾಲಾರ್ಪಣೆ ಮಾಡಿದ್ದರು.
ಆದರೆ ಈ ಸಂದರ್ಭ ಬಿಜೆಪಿ ಬೆಂಬಲಿಗರಾದ ಬಿರುವೆರ್ ಕುಡ್ಲ ಸಂಘಟನೆಯನ್ನು ಕಡೆಗಣಿಸಿರುವುದಕ್ಕೆ ಬಿರುವೆರ್ ಕುಡ್ಲ ಸಂಸ್ಥಾಪಕ ಉದಯ ಪೂಜಾರಿ ಬೇಸರ ವ್ಯಕ್ತಪಡಿಸಿದ್ದಾರೆ.
ನಾರಾಯಣ ಗುರು ವೃತ್ತ ನಿರ್ಮಾಣ ಮಾಡುವಾಗ ಸತೀಶ್ ಕುಂಪಲ ಎಲ್ಲಿದ್ದರು…?
ಮಂಗಳೂರಿನಲ್ಲಿ ನಾರಾಯಣ ಗುರು ವೃತ್ತವನ್ನು ಲೇಡಿಹಿಲ್ ಸರ್ಕಲ್ ಬಳಿ ನೂತನವಾಗಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸತೀಶ್ ಕುಂಪಲ ಎಲ್ಲಿದ್ದರು…? ನಾವು ಸರ್ಕಲ್ ಮಾಡಲು ಹೋರಾಟ ಮಾಡುವಾಗ ಅವರು ಎಲ್ಲಿದ್ದರು..? ಇಂದು ಕೇವಲ ತನ್ನ ರಾಜಕೀಯ ಲಾಭಕ್ಕಾಗಿ ಮಾತನಾಡುತ್ತಿದ್ದಾರೆ. ಅವರು ಬಿಲ್ಲವ ಎನ್ನುವ ಕಾರಣಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ಮಾಡಲಾಗಿದೆ. ಆದರೆ, ಅವರು ಬಿಲ್ಲವರಿಗೋಸ್ಕರ, ಬಿಲ್ಲವ ಸಮುದಾಯಕ್ಕೆ ಏನು ಕೊಡುಗೆ ನೀಡಿದ್ದಾರೆ ಎನ್ನುವುದನ್ನು ಮೊದಲು ಹೇಳಲಿ ಎಂದು ಉದಯ ಪೂಜಾರಿ ಹೇಳಿದ್ದಾರೆ.
ಇದನ್ನೂ ಓದಿ..;ಜೆಪಿಯಿಂದ ಬಿಲ್ಲವ ನಾಯಕ ಔಟ್..? ನಾರಾಯಣ ಗುರು ಹೈಜಾಕ್..!
ಬಿಲ್ಲವ ಸಂಘಟನೆಗಳ ಮನವಿ ಬಳಿಕ ನಾರಾಯಣ ಗುರು ವೃತ್ತ ನಿರ್ಮಾಣ
ನಾರಾಯಣ ಗುರು ವೃತ್ತ ನಿರ್ಮಾಣ ಮಾಡಿದ್ದು, ಬಿಜೆಪಿ ನಾಯಕರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ ಬಿರುವೆರ್ ಕುಡ್ಲದ ಮುಖಂಡ ಉದಯ್ ಪೂಜಾರಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ 13 ವರ್ಷಗಳ ಹಿಂದೆ ನಾವು ಕಾಂಗ್ರೆಸ್ ಸರಕಾರ ಇದ್ದಾಗ ಅಲ್ಲಿ ನಾರಾಯಣ ಗುರು ವೃತ್ತ ಮಾಡಲು ಮನವಿ ಮಾಡಿದ್ದೆವು. ಸಂಸದ ನಳಿನ್ ಕುಮಾರ್ ಸಹಿತ ಎಲ್ಲಾ ಶಾಸಕರಿಗೂ ಮನವಿ ನೀಡಿದ್ದೆವು. ಸುಮಾರು 200 ಬಿಲ್ಲವ ಸಂಘಟನೆಗಳು ಮನವಿ ನೀಡಿದ ಬಳಿಕ ಅಲ್ಲಿ ನಾರಾಯಣ ಗುರು ವೃತ್ತ ಮಾಡಲಾಗಿದೆ ಎಂದು ಹೇಳಿದ್ರು.
ಬಿರುವೆರ್ ಕುಡ್ಲ ಸಂಘಟನೆ ದೂರವಿಟ್ಟಿದ್ದಕ್ಕೆ ಆಕ್ರೋಶ
ಆದರೆ, ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿಯನ್ನು ಸ್ವಾಗತಿಸಲು ಉದ್ಯಮಿಗಳು, ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ ನಮ್ಮ ಸಂಘಟನೆಯನ್ನು ದೂರ ಇಟ್ಟಿರುವುದು ನಮಗೆ ಬೇಸರ ಮೂಡಿಸಿದೆ ಎಂದರು. ಕನಿಷ್ಠ ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಎಚ್ ಎಸ್ ಸಾಯಿರಾಂ ಅವರನ್ನಾದರೂ ಕರೆಯಬಹುದಿತ್ತು ಎಂದರು. ನಳಿನ್ ಕುಮಾರ್ ಕಟೀಲು, ವೇದವ್ಯಾಸ ಸಹಿತ ಹಲವು ಮಂದಿ ನಾಯಕರು ನಮ್ಮ ಕಷ್ಟಕ್ಕೆ ಸ್ಪಂದಿಸಿದ್ದವರು. ಆದರೆ ಇಂದು ಬಿಜೆಪಿಯಲ್ಲೇ ಎರಡು ಬಣ ಆಗಿದೆ. ಇದು ನಮಗೆ ಬೇಸರ ತರುವ ಕೆಲಸ ಎಂದರು. ಬಿಜೆಪಿ ನಡೆಯಿಂದ ನಮ್ಮ ಸಂಘಟನೆಗೆ ಬೇಸರವಾಗಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ನಾವು ಇಂಥವರಿಗೇ ಮತ ಚಲಾಯಿಸಿ ಎಂದು ಯಾರಿಗೂ ಹೇಳಲ್ಲ. ಯಾರು ಒಳ್ಳೆಯ ಅಭ್ಯರ್ಥಿ ಇದ್ದಾರೋ ಅವರಿಗೆ ಮತ ಹಾಕಿ ಎಂದರು.
DAKSHINA KANNADA
ನಾಳೆ ನಿಮ್ಮೂರಿಗೆ ಬರ್ತಿದ್ದಾನೆ ಮೇಘರಾಜ: ತಂಪಾಗಲಿದೆ ಇಳೆ
ಬೆಂಗಳೂರು: ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆಯಾಗಲಿದೆ. ಮಲೆನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಮಾಹಿತಿ ನೀಡಿದೆ.
ಈ ಬಾರಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಜೂನ್ ವೇಳೆಗೆ ರಾಜ್ಯದಲ್ಲಿ ನೀರಿನ ಸಮಸ್ಯೆ ದೂರವಾಗಲಿದೆ ಎಂದು ಹೇಳಲಾಗುತ್ತಿದೆ.
ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ
ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಾಗುವ ಸಾಧ್ಯತೆಗಳಿದ್ದು, 85.2 ಸೆಂ.ಮಿ ಮಳೆ ಬೀಳುವ ನಿರೀಕ್ಷೆಗಳಿವೆ. ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಕ್ರಮವಾಗಿ 19.9 ಸೆಂ.ಮೀ., 27.1 ಸೆಂ.ಮೀ., ಆಗಸ್ಟ್ 22 ಸೆಂ.ಮೀ ಹಾಗೂ 16.1 ಸೆಂಮೀ ಮಳೆಯಾಗುವ ನಿರೀಕ್ಷೆಗಳಿವೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಹೇಳಿದೆ.
ನಾಳೆ ಈ ಜಿಲ್ಲೆಗಳಲ್ಲಿ ಆಗಲಿದೆ ಮಳೆ
ನಾಳೆ ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ವಿಜಯಪುರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿಕ್ಕಮಗಳೂಉರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಇನ್ನುಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.
DAKSHINA KANNADA
ಸೀರೆ ಉಟ್ರೆ ಕ್ಯಾನ್ಸರ್ ಬರುತ್ತಂತೆ..! ಏನಿದು ಸೀರೆ ಕ್ಯಾನ್ಸರ್?
ಬೆಂಗಳೂರು: ಸೀರೆ ಭಾರತೀಯ ಮಹಿಳೆಯ ಗುರುತು. ಐದೂವರೆಯಿಂದ ಆರು ಮೀಟರ್ ಉದ್ದದ ಈ ಸುಂದರವಾದ ಉಡುಪು ಮಹಿಳೆಯರ ಅಂದವನ್ನು ದುಪ್ಪಟ್ಟಾಗಿಸುವುದರಲ್ಲಿ ಅನುಮಾನವಿಲ್ಲ. ಆದರೆ, ಸೀರೆ ಕೂಡಾ ಕ್ಯಾನ್ಸರ್ ಗೆ ಕಾರಣವಾಗಬಹುದು ಎಂಬುದು ನಿಮಗೆ ಗೊತ್ತೇ? ಇದಲ್ಲದೆ, ಇತರ ಬಟ್ಟೆಗಳನ್ನು ತಪ್ಪಾಗಿ ಧರಿಸಿದರೆ ಕ್ಯಾನ್ಸರ್ ಉಂಟಾಗುತ್ತದೆ. ಸೀರೆ ಕ್ಯಾನ್ಸರ್ ಭಾರತದಲ್ಲಿ ಮಾತ್ರ ಕಂಡುಬರುತ್ತದೆ. ಏಕೆಂದರೆ ಭಾರತದಲ್ಲಿ ಮಾತ್ರ ಸೀರೆಯನ್ನು ಹೆಚ್ಚಾಗಿ ಮಹಿಳೆಯರು ಧರಿಸುತ್ತಾರೆ.
ದೆಹಲಿಯ ಪಿಎಸ್ ಆರ್ ಐ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕರ ಪ್ರಕಾರ, ಮಹಿಳೆ ಒಂದೇ ಉಡುಪನ್ನು ದೀರ್ಘಕಾಲದವರೆಗೆ ಧರಿಸಿದರೆ, ಅದು ಸೊಂಟದ ಮೇಲೆ ಉಜ್ಜಲು ಪ್ರಾರಂಭಿಸುತ್ತದೆ. ಅಲ್ಲಿ ಚರ್ಮವು ಸಿಪ್ಪೆ ಸುಲಿದು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದು ಪುನರಾವರ್ತಿತವಾಗುತ್ತಾ ನಿಧಾನವಾಗಿ ಕ್ಯಾನ್ಸರ್ ಪ್ರಾರಂಭವಾಗಬಹುದು.
ಸೀರೆ ಕ್ಯಾನ್ಸರ್ಗೆ ಅಸ್ವಚ್ಛತೆಯೇ ಹೆಚ್ಚು ಕಾರಣ. ಹೆಚ್ಚಿನ ಶಾಖ ಮತ್ತು ಆರ್ದ್ರತೆ ಇರುವ ಪ್ರದೇಶಗಳಲ್ಲಿ ಈ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಬಿಹಾರ ಮತ್ತು ಜಾರ್ಖಂಡ್ನಲ್ಲಿ ಇದರ ಪ್ರಕರಣಗಳು ಸಾಮಾನ್ಯವಾಗಿ ವರದಿಯಾಗುತ್ತವೆ. ಭಾರತದಲ್ಲಿ ಮಹಿಳೆಯರಲ್ಲಿ ಕಂಡುಬರುವ ಎಲ್ಲಾ ಕ್ಯಾನ್ಸರ್ಗಳಲ್ಲಿ ಸೀರೆ ಕ್ಯಾನ್ಸರ್ ಶೇಕಡಾ 1 ರಷ್ಟಿದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಸ್ಕ್ವಾಮಸ್ ಸೆಲ್ ಕಾರ್ಸಿನೋಮ ಎಂದು ಕರೆಯಲಾಗುತ್ತದೆ.
ಮುಂಬೈನಲ್ಲಿ ಕಂಡು ಬಂದ ಮೊದಲ ಪ್ರಕರಣ:
ಮುಂಬೈನ ಆರ್ ಎನ್ ಕೂಪರ್ ಆಸ್ಪತ್ರೆಯಲ್ಲಿ 68 ವರ್ಷದ ಮಹಿಳೆಗೆ ಸೀರೆಯಿಂದಾಗಿ ಕ್ಯಾನ್ಸರ್ ಬಂದ ಕಾರಣ ವೈದ್ಯರು ಸೀರೆ ಕ್ಯಾನ್ಸರ್ ಎಂಬ ಹೆಸರನ್ನು ನೀಡಿದ್ದಾರೆ. ತುಂಬಾ ಬಿಗಿಯಾದ ಬಟ್ಟೆಗಳನ್ನು ಗಂಟೆಗಳ ಕಾಲ ಹಾಕಿದರೆ ಅದು ದೇಹಕ್ಕೆ ಹಾನಿ ಮಾಡುತ್ತದೆ.
ಇನ್ನು ತುಂಬಾ ಬಿಗಿಯಾದ ಫಿಟ್ ಜೀನ್ಸ್ ಪುರುಷರಲ್ಲಿ ಕ್ಯಾನ್ಸರ್ ಗೆ ಕಾರಣವೆಂದು ಪರಿಗಣಿಸಲಾಗಿದೆ. ವಾಸ್ತವವಾಗಿ, ತುಂಬಾ ಬಿಗಿಯಾದ ಬಟ್ಟೆಗಳನ್ನು ಗಂಟೆಗಳ ಕಾಲ ಧರಿಸಿದರೆ ಅದು ದೇಹಕ್ಕೆ ಹಾನಿ ಮಾಡುತ್ತದೆ. ಆ ಪ್ರದೇಶದಲ್ಲಿ ಆಮ್ಲಜನಕದ ಹರಿವಿಗೆ ತೊಂದರೆಯಾಗಬಹುದು.
ಸೀರೆ ಕ್ಯಾನ್ಸರ್ನ ಲಕ್ಷಣಗಳು:
ಸೀರೆ ಕ್ಯಾನ್ಸರ್ನ ಪ್ರಮುಖ ಲಕ್ಷಣಗಳೆಂದರೆ, ಸೊಂಟದ ಸುತ್ತಲೂ ತುರಿಕೆ ಉಂಟಾಗಿ ಕಿರಿಕಿರಿ ಇರುತ್ತದೆ. ಈ ಸಮಸ್ಯೆ ಕಾಣಿಸಿದ ವ್ಯಕ್ತಿಯ ಸೊಂಟದ ಬಳಿ ವಾಸಿಯಾಗದ ಗಾಯಗಳು ಆಗಬಹುದು. ಈ ಗಾಯದಿಂದ ಕೆಟ್ಟ ವಾಸನೆ ಬರುತ್ತದೆ. ಹೆಸರೇ ಸೂಚಿಸುವಂತೆ, ಸೀರೆಯೇ ಈ ‘ಸೀರೆ ಕ್ಯಾನ್ಸರ್’ಗೆ ಕಾರಣವಾಗಬಹುದು. ಇತ್ತೀಚಿನ ದಿನಗಳಲ್ಲಿ ಈ ಸೀರೆ ಕ್ಯಾನ್ಸರ್ ಮಾರಣಾಂತಿಕ ರೂಪವನ್ನು ಪಡೆಯುತ್ತಿದ್ದು, ಅನೇಕ ಮಹಿಳೆಯರು ಇದಕ್ಕೆ ಬಲಿಯಾಗುತ್ತಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಒಂದು ಸೀರೆಯನ್ನು ತುಂಬಾ ಸಲ ಬಳಸಿ, ಅದನ್ನು ಒಗೆಯದೇ ಇರುವುದರಿಂದ, ಇಲ್ಲವಾದರೆ ತುಂಬಾ ಗಂಟೆಗಳ ಕಾಲ ಹಾಕುವುದರಿಂದ ಸೀರೆ ಕ್ಯಾನ್ಸರ್ ಬರಬಹುದು.
ಇದನ್ನೂ ಓದಿ: ದೀಪಿಕಾ ಪಡುಕೋಣೆ ಜೊತೆ ಒಪ್ಪಂದ ಮಾಡಿಕೊಂಡ ನಿಶಾ ಅಂಬಾನಿ..! ಏನು ಗೊತ್ತಾ?
(more…)
- LATEST NEWS6 days ago
‘ಬಿಗ್ ಬಾಸ್’ ಮತ್ತೆ ಆರಂಭ.. ಇಲ್ಲಿದೆ ಸ್ಪರ್ಧಿಗಳ ಲಿಸ್ಟ್..!
- DAKSHINA KANNADA6 days ago
ಬತ್ತೇರಿ ಹೆಸರು ‘ಗಣಪತಿ ವೆಟ್ಟಂ’… ಟೀಕೆಗೆ ಗುರಿಯಾದ ಸುರೇಂದ್ರನ್ ಹೇಳಿಕೆ.
- LATEST NEWS6 days ago
ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡಿದ ಸೂಪರ್ ಹಿಟ್ ಧಾರಾವಾಹಿ ‘ಕೃಷ್ಣ ರುಕ್ಮಿಣಿ’ ನಟಿ
- chikkamagaluru6 days ago
ರಾಜ್ಯದ ಹಲವೆಡೆ ಮಳೆಯ ಸಿಂಚನ.. ಸಿಡಿಲಿನ ಅಬ್ಬರಕ್ಕೆ ಇಬ್ಬರ ಬ*ಲಿ..!!