Home ಪ್ರಮುಖ ಸುದ್ದಿ ಕೊನೆಗೂ ತಿಹಾರ್‌ ಜೈಲಿನಲ್ಲಿ ಗಲ್ಲಿಗೇರಿದ ನಿರ್ಭಯ ಹಂತಕರು..!!

ಕೊನೆಗೂ ತಿಹಾರ್‌ ಜೈಲಿನಲ್ಲಿ ಗಲ್ಲಿಗೇರಿದ ನಿರ್ಭಯ ಹಂತಕರು..!!

ಕೊನೆಗೂ ತಿಹಾರ್‌ ಜೈಲಿನಲ್ಲಿ ಗಲ್ಲಿಗೇರಿದ ನಿರ್ಭಯ ಹಂತಕರು..!!

ನವದೆಹಲಿ : ದೇಶದಲ್ಲಿ ಕಳೆದ ಅನೇಕ ವರ್ಷಗಳಿಂದ ಬಹು ಚರ್ಚಿತವಾಗಿದ್ದ ನಿರ್ಭಯ ಹಂತಕರು ಕೊನೆಗೂ ಗಲ್ಲಿಗೇರಿದ್ದಾರೆ. ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಇಂದು ಬೆಳಗ್ಗೆ 5.30ಕ್ಕೆ ದೆಹಲಿಯ ತಿಹಾರ್ ಜೈಲಿನಲ್ಲಿ ಮರಣ ದಂಡನೆ ನೀಡಲಾಗಿದೆ.

ನ್ಯಾಯಾಲಯ ಜಾರಿ ಮಾಡಿರುವ ಡೆತ್ ವಾರೆಂಟ್‌ಗೆ ಮೆಜಿಸ್ಟ್ರೇಟರ್ ಸಹಿ ಹಾಕಿದ ಕೆಲವೇ ಗಂಟೆಗಳಲ್ಲಿ ಅಪರಾಧಿಗಳನ್ನು ಗಲ್ಲಿಗೇರಿಸಲಾಯಿತು.

ಮುಕೇಶ್ ಸಿಂಗ್ (32), ಪವನ್ ಗುಪ್ತಾ (25) ವಿನಯ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ ಸಿಂಗ್ (31) ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳನ್ನು 5.30ಕ್ಕೆ ಗಲ್ಲಿಗೇರಿಸಲಾಗಿದೆ ಎಂದು ತಿಹಾರ್ ಜೈಲಿನ ಮಹಾ ನಿರ್ದೇಶಕ ಸಂದೀಪ್ ಗೋಯೆಲ್ ಹೇಳಿದ್ದಾರೆ.

ತಿಹಾರ್ ಜೈಲಿನಲ್ಲಿ ಇದೇ ಮೊದಲ ಬಾರಿ ನಾಲ್ವರು ಅಪರಾಧಿಗಳನ್ನು ಒಟ್ಟಿಗೆ ಗಲ್ಲಿಗೇರಿಸಿದ್ದು. 2012 ಡಿಸೆಂಬರ್ 16ರಂದು ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ 23ರ ಹರೆಯದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ತಪ್ಪಿಸತ್ಥರಾದ ಇವರಿಗೆ ಮರಣ ದಂಡನೆ ವಿಧಿಸಲಾಗಿದೆ.

ಅತ್ಯಾಚಾರಕ್ಕೊಳಗಾದ ಯುವತಿಯು ಘಟನೆ ನಡೆದ 13 ದಿನಗಳ ನಂತರ ಸಾವಿಗೀಡಾಗಿದ್ದಳು. ಅಪರಾಧಿಗಳಿಗೆ ಗಲ್ಲು ಶಿಕ್ಷೆ ತೀರ್ಪು ಪ್ರಕಟವಾಗಿದ್ದರೂ ಜನವರಿ ತಿಂಗಳಿನಿಂದ ಮೂರು ಬಾರಿ ಗಲ್ಲಿಗೇರಿಸುವ ದಿನಾಂಕ ಬದಲಾಗಿತ್ತು.

ಅಪರಾಧಿಗಳು ಕಾನೂನಿನ ಪ್ರಕ್ರಿಯೆಗಳನ್ನು ಪೂರೈಸಲು ತೆಗೆದುಕೊಂಡ ಸಮಯದಿಂದಾಗಿ ದಿನಾಂಕ ಬದಲಾಗುತ್ತಲೇ ಇತ್ತು.ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಅಪ್ರಾಪ್ತ ಬಾಲಕ ಸೇರಿದಂತೆ 6 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು.

ಇದರಲ್ಲಿ ಆರನೇ ಆರೋಪಿ ರಾಮ್ ಸಿಂಗ್ 2013 ಮಾರ್ಚ್ 11ರಂದು ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನು .ಅದೇ ವೇಳೆ ಬಾಲಾಪರಾಧಿಗೆ ಮೂರು ವರ್ಷ ಶಿಕ್ಷೆ ನೀಡಿ ಬಿಡುಗಡೆ ಮಾಡಲಾಗಿದೆ.

‘ಕೊನೆಗೂ ಅವರನ್ನು ಗಲ್ಲಿಗೇರಿಸಲಾಯಿತು. ಇದೊಂದು ಸುದೀರ್ಘ ಹೋರಾಟ. ನಿರ್ಭಯಾಳಿಗೆ ಇಂದು ನ್ಯಾಯ ಸಿಕ್ಕಿತು.

ದೇಶದ ಹೆಣ್ಣು ಮಕ್ಕಳಿಗೆ ಈ ದಿನ ಅರ್ಪಣೆ. ಸರ್ಕಾರ ಹಾಗೂ ಕಾನೂನು ವ್ಯವಸ್ಥೆಗೆ ಧನ್ಯವಾದ’ ಎಂದು ನಿರ್ಭಯಾಳ ಅಮ್ಮ ಪ್ರತಿಕ್ರಿಯಿಸಿದ್ದಾರೆ

ವಿಡಿಯೋ

- Advertisment -

RECENT NEWS

ಕೇರಳ-ಕರ್ನಾಟಕ ಬಾರ್ಡರ್ ಸಮಸ್ಯೆ ಪರಿಹಾರಕ್ಕೆ ಪತ್ರದ ಮೂಲಕ ದೇವೇಗೌಡ ಮನವಿ

ಕೇರಳ-ಕರ್ನಾಟಕ ಬಾರ್ಡರ್ ಸಮಸ್ಯೆ ಪರಿಹಾರಕ್ಕೆ ಪತ್ರದ ಮೂಲಕ ದೇವೇಗೌಡ ಮನವಿ ಮಂಗಳೂರು: ಸದ್ಯ ಕೊರೊನಾ ವೈರಸ್ ಹಿನ್ನಲೆ ಕೇರಳ ಹಾಗೂ ಕರ್ನಾಟಕ ಗಡಿ ಸಮಸ್ಯೆ ತಾರಕಕ್ಕೇರಿದ್ದು, ಇದೀಗ ಈ ಸಮಸ್ಯೆ ಪರಿಹರಿಸಲು ಮಾಜಿ ಪ್ರಧಾನಿ...

ಎಂಅರ್ ಜಿ ಗ್ರೂಪ್ ನ‌ ಕೆ.ಪ್ರಕಾಶ್ ಶೆಟ್ಟಿಯರಿಂದ 1 ಕೋಟಿ.ರೂ.ವೆಚ್ಚದ ದಿನಸಿ ಕಿಟ್ ವಿತರಣೆ

ಎಂಅರ್ ಜಿ ಗ್ರೂಪ್ ನ‌ ಕೆ.ಪ್ರಕಾಶ್ ಶೆಟ್ಟಿಯರಿಂದ 1 ಕೋಟಿ.ರೂ.ವೆಚ್ಚದ ದಿನಸಿ ಕಿಟ್ ವಿತರಣೆ ಮಂಗಳೂರು: ಎಮ್ ರ್ ಜಿ ಗ್ರೂಪ್ ನ ಆಡಳಿತ ನಿರ್ದೇಶಕ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಅವರ ಉದಾರ ದಾನವಾಗಿ...

ಕೊರೊನಾ ವಿರುದ್ದದ ಸಮರಕ್ಕೆ ತನ್ನ ಪಾಕೆಟ್‌ ಮನಿಯನ್ನೇ ದೇಣಿಗೆ ನೀಡಿದ 5 ವರ್ಷದ ಬಾಲಕ..!

ಕೊರೊನಾ ವಿರುದ್ದದ ಸಮರಕ್ಕೆ ತನ್ನ ಪಾಕೆಟ್‌ ಮನಿಯನ್ನೇ ದೇಣಿಗೆ ನೀಡಿದ 5 ವರ್ಷದ ಬಾಲಕ..! ಮಂಗಳೂರು : ಇಂದು ಐದು ವರ್ಷದ ಬಾಲಕನೊಬ್ಬ ಸಿಎಂ ಪರಿಹಾರ ನಿಧಿಗೆ ತನ್ನ ಪಾಕೆಟ್ ಮನಿಯನ್ನೇ ದೇಣಿಗೆ ನೀಡಿ...

ದೆಹಲಿ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 11 ಮಂದಿಗೆ ಕೊರೊನಾ ಪಾಸಿಟಿವ್

ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 11 ಮಂದಿಗೆ ಕೊರೊನಾ ಪಾಸಿಟಿವ್ ಬೀದರ್: ಬೀದರ್‌ನಲ್ಲಿ 11 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ 11 ಮಂದಿಯೂ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಾಗಿದ್ದಾರೆ. ಬೀದರ್‌ನಿಂದ ದೆಹಲಿಗೆ ತೆರಳಿದ್ದ...