Saturday, November 26, 2022

NIA updates : ದೇಶದ 15 ರಾಜ್ಯಗಳ 93 ಸ್ಥಳಗಳಲ್ಲಿ NIA ದಾಳಿ – 45 ಮಂದಿ ಪಿಎಫ್‌ಐ ನಾಯಕರು ಅರೆಸ್ಟ್ ..!

ನವದೆಹಲಿ : ಗುರುವಾದ ಬೆಳಗ್ಗಿನ ಜಾವದಲ್ಲಿ ದೇಶದ 15 ರಾಜ್ಯಗಳ 93 ಸ್ಥಳಗಳಲ್ಲಿ NIA ಅಧಿಕಾರಿಗಳು ಕೇಂದ್ರ ಜಾರಿ ನಿರ್ದೇಶನಲಯ ಮತ್ತು ಅರೆ ಸೇನಾಪಡೆ ಮತ್ತು ಸ್ಥಳೀಯ ಪೊಲೀಸರ ನೆರವಿನೊಂದಿಗೆ ದಾಳಿ ನಡೆಸಿದ್ದು ಒಟ್ಟು 45 ಮಂದಿ ಪಿಎಫ್‌ಐ ಮುಖಂಡರುಗಳನ್ನು ಬಂಧಿಸಿದ್ದಾರೆ.

ಈ ಬಗ್ಗೆ ಸಂಜೆ ಹೊತ್ತಿಗೆ ಎನ್‌ಐಎ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ.

ಬೆಳಗ್ಗಿನ ಜಾವಾ ನಡೆಸಿದ ದಾಳಿ ಮತ್ತು ಶೋಧದ ಸಮಯದಲ್ಲಿ, ದೋಷಾರೋಪಣೆಯ ದಾಖಲೆಗಳು, ನಗದು, ಆಯುಧಗಳು ಮತ್ತು ಹೆಚ್ಚಿನ ಸಂಖ್ಯೆಯ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣಗಳಲ್ಲಿ ಎನ್‌ಐಎ 45 ಮಂದಿಯನ್ನು ಬಂಧಿಸಿದೆ.

ಕೇರಳದಿಂದ 19 ಆರೋಪಿಗಳನ್ನು ಬಂಧಿಸಿದ್ದರೆ, ತಮಿಳುನಾಡಿನಿಂದ 11, ಕರ್ನಾಟಕದಿಂದ 7, ಆಂಧ್ರಪ್ರದೇಶದಿಂದ 4, ರಾಜಸ್ಥಾನದಿಂದ 2, ಯುಪಿ ಮತ್ತು ತೆಲಂಗಾಣದಿಂದ ತಲಾ 1 ಆರೋಪಿಗಳನ್ನು ಬಂಧಿಸಲಾಗಿದೆ ಎಂದು NIA ಹೇಳಿಕೆಯಲ್ಲಿ ತಿಳಿಸಲಾಗಿದೆ.

ಬಂಧಿತರ ಡೀಟೇಲ್ಸ್ :
ಕೇರಳ (ಒಟ್ಟು ಬಂಧಿತರು 19)
1. ಡಿಎಂಎ ಸಲಾಂ ಆಲಿಯಾಸ್ ಅಬ್ದುಲ್ ಸಲಾಂ,.2.ಜಾಸಿರ್ ಕೆಪಿ, 3.ವಿಪಿ ನಝರುದ್ದೀನ್, 4.ಮೊಹಮ್ಮದ್ ಬಷೀರ್, 5.ಶಾಫಿರ್ ಕೆಪಿ, 6.ಇ. ಅಬೂಬಕರ್, 7.ಫ್ರೊ. ಪಿ ಕೋಯಾ, 8.ಇಎಂ ಅಬ್ದುಲ್ ರೆಹಮಾನ್,9.ನಜಮುದ್ದೀನ್ 10.ಸೈಯ್ಯುದ್ದೀನ್ 11. ಯಾಹಿಯ ಕೋಯ ತಂಙಳ್ 12. ಕೆ. ಮುಹಮ್ಮದ್ ಆಲಿ 13. ಸಿ ಟಿ ಸುಲೈಮಾನ್ 14. ಪಿಕೆ ಉಸ್ಮನ್ 15. ಕರಮನ ಅಶ್ಋಫ್ ಮೌಲವಿ 16.ಸಾಧಿಕ್ ಅಹಮ್ಮದ್, 17.ಶಿಹಾಸ್, 18.ಅನ್ಸಾರಿ, ಎಂಎಂ ಮುಜೀಬ್

ಕರ್ನಾಟಕ (ಒಟ್ಟು ಬಂಧಿತರು 8)
1. ಅನಿಸ್ ಅಹಮ್ಮದ್ 2. ಅಫ್ಸರ್ ಪಾಷಾ 3. ಅಬ್ದುಲ್ ವಾಲಿದ್ 4.ಯಾಸರ್ ಅರಫತ್ ಹಸನ್ 5. ಮೊಹಮ್ಮದ್ ಶಾಕಿಬ್ 6.ಮುಹಮ್ಮದ್ ಫಾರೂಕ್ 7. ಶಾಹಿದ್ ನಾಸಿರ್
ತಮಿಳುನಾಡು (ಒಟ್ಟು ಬಂಧಿತರು 11)
1. ಎಂ ಮೊಹಮ್ಮದ್ ಆಲಿ ಜಿನ್ನಾ 2. ಮೊಹಮ್ಮದ್ ಯೂಸೂಫ್ 3. ಎ. ಎಸ್ . ಇಸ್ಮಾಯಿಲ್ 4.ಸೈಯದ್ ಇಸಾಕ್ 5. ನ್ಯಾಯವಾದಿ ಖಾಲಿದ್ ಮೊಹಮ್ಮದ್ 6. ಎ.ಎಂ ಇದ್ರಿಸ್ ಆಲಿಯಾಸ್ ಅಹಮದ್ ಇದ್ರಿಸ್ 7.ಮೊಹಮ್ಮದ್ ಅಬುತಾಹಿರ್ 8.ಎಸ್. ಖಾಜಾ ಮೈದೀನ್ 9.ಯಾಸರ್ ಅರಫತ್ 10.ಬರಕಥುಲ್ಲಾಹ್ 11.ಫಯಾಜ್ ಅಹಮದ್

ಉತ್ತರ ಪ್ರದೇಶ (1)
ವಾಸಿಂ ಅಹಮದ್
ರಾಜಸ್ಥಾನ ಒಟ್ಟು ( ಬಂಧಿತರು 2 )
1. ಮೊಹಮ್ಮದ್ ಆಸಿಫ್ 2. ಸಾದಿಕ್ ಸರಫ್ ತಲಪಾಡ

ಆಂಧ್ರ ಪ್ರದೇಶ( ಒಟ್ಟು ಬಂಧಿತರು 4)
1.ಅಬ್ದುಲ್ ರಹೀಂ 2. ಅಬ್ದುಲ್ ವಾಹಿದ್ ಅಲಿ 3.ಶೇಖ್ ಝಫ್ರುಲ್ಲಾ 4.ರಿಯಾಝ್ ಅಹಮ್ಮದ್

ತೆಲಂಗಣಾ (1)
ಅಬ್ದುಲ್ ವಾರಿಸ್

ಬರೋಬ್ಬರಿ 300 ಎನ್‌ಐಎ ಅಧಿಕಾರಿಗಳು, ಎಲ್ಲಾ ಎಸ್‌ ಪಿ ರಾಂಕಿನ ಅಧಿಕಾರಿಗಳು, ದಾಳಿಯಲ್ಲಿ ಭಾಗವಹಿಸಿದ್ದರು. ಸಿಆರ್‌ಪಿಎಫ್ ಮತ್ತು ಆಯಾಯ ರಾಜ್ಯಗಳ ಸ್ಥಳೀಯ ಪೊಲೀಸರ ನೆರವನ್ನು ಪಡೆಯಲಾಗಿತ್ತು.  ಬಂಧಿಸಿದ 45 ಜನರಲ್ಲಿ 18 ಆರೋಪಿಗಳನ್ನು ದೆಹಲಿ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಸೆಪ್ಟೆಂಬರ್ 26 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನು ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಪಿಎಫ್‌ಐ ಮೇಲೆ ಕಳೆದ ಕೆಲ ವರ್ಷಗಳಿಂದ ಭಯೋತ್ಪದನೆ, ದೇಶ ವಿರೋಧಿ ಚಟುವಟಿಕೆಗಳಿಗೆ, ಉಗ್ರರಿಗೆ ಹಣಕಾಸಿನ ನೆರವು , ಶಸ್ತ್ರಾಸ್ರ ತರಬೇತಿ, ದೇಶ ವಿರೋಧಿ ಚಟುವಟಿಕೆಗಳ ನಿಷೇಧಿತ ಸಂಘಟನೆಗಳಿಗೆ ಸೇರಲು ಬ್ರೇನ್ ವಾಶ್ ಮಾಡುವಂತಹ ಅನೇಕ ಆರೋಪಗಳಿದ್ದು, ಈ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಎನ್‌ ಐಎ ಅಧಿಕಾರಿ ಮೂಲಗಳು ಸ್ಪಷ್ಟಪಡಿಸಿವೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು ಬಲ್ಮಠ ರಸ್ತೆಯಲ್ಲಿ ಕಾರ್ ಬೆಂಕಿಗಾಹುತಿ..!

ಮಂಗಳೂರು : ನಗರದ ಬಲ್ಮಠ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ಕಾರೊಂದು ಬೆಂಕಿಗಾಹುತಿಯಾದ ಘಟನೆ ಇಂದು ಅಪರಾಹ್ನ ಸಂಭವಿಸಿದೆ.ಬಲ್ಮಠ ಜ್ಯೂಸ್ ಜಂಕ್ಷನ್ ಬಳಿ ಪಾರ್ಕ್ ಮಾಡಲಾಗಿದ್ದ ಫೋರ್ಡ್‌ ಕಂಪೆನಿ ಕಾರು ಬೆಂಕಿಗಾಹುತಿಯಾಗಿದೆ.ಕಾರಿನ ಇಂಜಿನ್...

ಬೆಳ್ತಂಗಡಿಯಲ್ಲಿ ರಸ್ತೆ ಅಪಘಾತಕ್ಕೆ ಕಾಲೇಜು ವಿದ್ಯಾರ್ಥಿ ಬಲಿ..! 2 ದಿನದಲ್ಲಿ ಇಬ್ಬರು ಬಲಿ..!

ಬೆಳ್ತಂಗಡಿ:  ಬೆಳ್ತಂಗಡಿಯಲ್ಲಿ 2 ದಿನದಲ್ಲಿ ಒಂದೇ ಕಾಲೇಜಿನ  ಇಬ್ಬರು ವಿದ್ಯಾರ್ಥಿಗಳು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಜೀವಕಳಕೊಂಡಿದ್ದಾರೆ. ಎಳೆ ವಯಸ್ಸಿನ ಮಕ್ಕಳಿಗೆ ದ್ವಿಚಕ್ರವಾಹನಗಳನ್ನು ಕೊಡುವ ಪೋಷಕರಿಗೆ ಎಚ್ಚರಿಕೆಯ ಕರೆ ಗಂಟೆಯಾಗಿದೆ.  ಮಡಂತ್ಯಾರು ಸೆಕ್ರೆಡ್ ಹಾರ್ಟ್...

ಹೆಜಮಾಡಿ ಟೋಲ್ ಶುಲ್ಕ ಹೆಚ್ಚಳಕ್ಕೆ ಉಡುಪಿ ಶಾಸಕ ರಘುಪತಿ ಭಟ್ ತೀವ್ರ ವಿರೋಧ..!

ಸುರತ್ಕಲ್‌ನಲ್ಲಿ ಕಾರ್ಯಾಚರಿಸುತಿದ್ದ ಟೋಲ್‌ಗೇಟ್‌ನ್ನು ಮುಚ್ಚಿ ಅದನ್ನು ಹೆಜಮಾಡಿ ಟೋಲ್‌ಗೆ ವಿಲೀನಗೊಳಿಸಿ ಟೋಲ್ ಶುಲ್ಕ ಹೆಚ್ಚಳ ಮಾಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಧಾರವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ತೀವ್ರವಾಗಿ ವಿರೋಧಿಸಿದ್ದಾರೆ.ಉಡುಪಿ : ಸುರತ್ಕಲ್‌ನಲ್ಲಿ...