Monday, July 4, 2022

ಮುಂದಿನವಾರದಿಂದ ಪ್ರವಾಸಕ್ಕೆ ತಯಾರಾಗಿ

ಬೆಂಗಳೂರು: ಮುಂದಿನವಾರದಿಂದ ಪ್ರವಾಸಕ್ಕೆ ತಯಾರಾಗಿ, ಹೌದು  ಮುಂದಿನ ವಾರದಿಂದ ಪ್ರವಾಸಿ ತಾಣಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ತಿಳಿಸಿದರು. ಕೊವಿಡ್​ನಿಂದ ನಲುಗಿರುವ ಪ್ರವಾಸೋದ್ಯಮ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.

185 ಕೋಟಿ ಮೊತ್ತದ ಟೆಂಡರ್ ಕರೆದು ಜೋಗ ಜಲಪಾತದ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ಜೋಗದಲ್ಲಿ 200-300 ಕ್ಯೂಸೆಕ್ಸ್ ನೀರು ಹರಿಸಿ ವರ್ಷಪೂರ್ತಿ ನೀರು ಹರಿಯುವಂತೆ ಮಾಡಲಿದ್ದೇವೆ. ಹೊನ್ನಾವರದಿಂದ ಜಲಮಾರ್ಗದ ಮೂಲಕ ಗೇರುಸೊಪ್ಪೆಗೆ ತರಲು ಸ್ಪೀಡ್ ಬೋಟ್ ವ್ಯವಸ್ಥೆ ಮಾಡಲಿದ್ದೇವೆ. ಕೇವಲ ವಿದ್ಯುತ್ ಗೆ ಮಾತ್ರ ಜೋಗದ ನೀರು ಬಳಕೆಯಾಗುತ್ತಿತ್ತು. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವುದರಿಂದ ಜೋಗದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಹೆಚ್ಚಾಗಲಿದೆ. ಕೇರಳದಿಂದ ಗೋವಾ ಹೋಗುವ ಪ್ರವಾಸಿಗರನ್ನು ಸೆಳೆಯಲು ಸಹ ಕೆಲಸ ನಡೆಯುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ತಿಳಿಸಿದರು.

LEAVE A REPLY

Please enter your comment!
Please enter your name here

Hot Topics

ಕಾರ್ಕಳದಲ್ಲಿ ಅಕ್ರಮ ಗೋಸಾಗಾಟ: ಓರ್ವ ಪರಾರಿ-ಕಾರಿನಲ್ಲೇ ಅಸುನೀಗಿದ ದನ

ಕಾರ್ಕಳ: ಕಾರಿನಲ್ಲಿ ಎರಡು ಗೋವುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಕಳ್ಳರನ್ನು ಖಚಿತ ಮಾಹಿತಿ ಮೇರೆಗೆ ಸಿನಿಮಾ ಶೈಲಿಯಲ್ಲಿ ಪೊಲೀಸರು ಚೇಸ್ ಮಾಡಿದ ಘಟನೆ ಕಾರ್ಕಳದ ಹೆಬ್ರಿ ಕೆರೆಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಡೆದಿದೆ.ಉಡುಪಿಯ ಮಲ್ಪೆ...

ಮಂಗಳೂರು: ಮಿಲಾಗ್ರಿಸ್‌ ಚರ್ಚ್‌ನ ಒಳಭಾಗದಲ್ಲಿ ಸಮಾಧಿ ಕುಸಿತ-ಶತಮಾನದ ಕಟ್ಟಡಕ್ಕೆ ಹಾನಿ ಭೀತಿ

ಮಂಗಳೂರು: ಶತಮಾನದ ಇತಿಹಾಸವಿರುವ ನಗರದ ಹೃದಯಭಾಗದಲ್ಲಿರುವ ಮಿಲಾಗ್ರಿಸ್‌ ಚರ್ಚ್‌ನ ಒಳಭಾಗದಲ್ಲಿ ಎರಡು ಹೊಂಡ ನಿರ್ಮಾಣವಾಗಿದೆ.ಮಿಲಾಗ್ರಿಸ್ ಚರ್ಚ್‌ನ ಕಟ್ಟಡಕ್ಕೆ 125 ವರ್ಷಗಳ ಇತಿಹಾಸವಿದ್ದು, ಚರ್ಚ್‌ನ ಒಳಗೆ 108 ಜನರ ಮೃತ ದೇಹಗಳನ್ನು ಸಮಾಧಿ ಮಾಡಲಾಗಿದೆ.ಕಳೆದ...

ಕೆರೆಗೆ ಬಿದ್ದ ಹಾಲಿನ ವಾಹನ-ನೀರುಪಾಲಾದ ಲೀಟರ್‌ಗಟ್ಟಲೆ ಹಾಲು

ದಾವಣಗೆರೆ: ಚಾಲಕನ ನಿಯಂತ್ರಣ ತಪ್ಪಿ ಹಾಲು ತುಂಬಿಸಿಕೊಂಡು ಹೋಗುತ್ತಿದ್ದ ವಾಹನ ಕೆರೆಯಲ್ಲಿ ಮುಳುಗಿದ ಘಟನೆ ದಾವಣಗೆರೆಯ ಚೆನ್ನಗಿರಿ ತಾಲ್ಲೂಕಿನ ದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ.ಬೆಳಿಗ್ಗೆ ಅಂಗಡಿಗೆ ನಂದಿನಿ ಹಾಲು ಪೂರೈಸುತ್ತಿದ್ದ ವಾಹನ ದೇವರಹಳ್ಳಿ ಕೆರೆಯಲ್ಲಿ...