ಬೆಂಗಳೂರು: 5ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದ ಯುವತಿ ಕೇವಲ ನಾಲ್ಕು ತಿಂಗಳಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಇದೀಗ ಈ ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ನಿಹಾರಿಕಾ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಯುವತಿ.
ಕಾರ್ತಿಕ್ ಹಾಗೂ ನಿಹಾರಿಕಾ ಪರಸ್ಪರ ಐದು ವರ್ಷ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ನಾಲ್ಕು ತಿಂಗಳಲ್ಲೇ ಕಾರ್ತಿಕ್ ಆಕೆಗೆ ಕಿರುಕುಳ ಕೊಡಲು ಪ್ರಾರಂಭಿಸಿದ್ದ.
ಶಾಲಾ ಶಿಕ್ಷಕಿಯಾಗಿದ್ದ ಅವರು ಆತನ ದೈಹಿಕ ಹಾಗೂ ಮಾನಸಿಕ ಕಿರುಕುಳದಿಂದಲೇ ಬೇಸತ್ತಿದ್ದಳು. ಇದು ಆತ್ಮಹತ್ಯೆ ಅಲ್ಲ.
ಆತನೇ ಕೊಲೆ ಮಾಡಿದ್ದಾನೆಂದು ನಿಹಾರಿಕಾ ಪೋಷಕರು ಆರೊಪಿಸಿದ್ದಾರೆ.
ನಿಹಾರಿಕಾಗೆ ಇದ್ದ ಆಸೆಯಂತೆ ಪೋಷಕರು ಅವಳ ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.