Connect with us

    LATEST NEWS

    ನ್ಯೂ ಇಯರ್ ಆಫರ್; ಜೋಗ ಜಲಪಾತ ವೀಕ್ಷಣೆ ನಿರ್ಬಂಧ ತೆರವು

    Published

    on

    ಮಂಗಳೂರು/ಶಿವಮೊಗ್ಗ: ಹೊಸ ವರ್ಷಾಚರಣೆ ಪ್ರಯುಕ್ತ ಜಿಲ್ಲಾಡಳಿತವು ಪ್ರವಾಸಿಗರಿಗೆ ಸರಕಾರವು ಹೊಸ ಸಂದೇಶವನ್ನು ಹೊರಡಿಸಿದೆ. ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿರುವ ಕಾರಣ ಜನವರಿ 1 ರಿಂದ ಮಾರ್ಚ್ 15 ರವರೆಗೆ ಜೋಗ ಜಲಪಾತಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿ ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಆದರೆ, ಇದೀಗ ಜೋಗ ನಿರ್ವಹಣಾ ಪ್ರಾಧಿಕಾರದ ಮುಖ್ಯ ದ್ವಾರವನ್ನು ಹೊರತುಪಡಿಸಿ ಉಳಿದೆಲ್ಲ ಪರ್ಯಾಯ ಸ್ಥಳಗಳಿಂದ ಪ್ರವಾಸಿಗರಿಗೆ ಜೋಗ ಜಲಪಾತ ವೀಕ್ಷಿಸಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.

    ಜೋಗ ವೀಕ್ಷಿಸಬಹುದಾದ ಪ್ರದೇಶಗಳು :

    ಪ್ರತಿ ವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ಜೋಗಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿತ್ತು. ಆದರೆ, ಈ ವರ್ಷ ಪ್ರವೇಶ ನಿಷೇಧಿಸುವ ಮುನ್ನವೇ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಪ್ರವಾಸಿಗರು ವ್ಯೂ ಪಾಯಿಂಟ್, ಯಾತ್ರಿ ನಿವಾಸ, ರಾಣಿ ಫಾಲ್ಸ್, ಮುಂಬೈ ಬಂಗಲೆ ಮೊದಲಾದೆಡೆಯಿಂದ ಜಲಪಾತವನ್ನು ವೀಕ್ಷಿಸಬಹುದು ಎಂದು ಜಿಲ್ಲಾಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಜೋಗ ವೀಕ್ಷಣೆಯ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಜಂಟಿ ಕಾರ್ಯದರ್ಶಿ ಧರ್ಮಪ್ಪ ತಿಳಿಸಿದ್ದಾರೆ.

    ಭಾರತದ ಎರಡನೇ ಅತಿ ಎತ್ತರದ ಜಲಪಾತ ಎಂದೇ ಖ್ಯಾತಿವೆತ್ತ ಜೋಗ ಜಲಪಾತ ಕರ್ನಾಟಕ ರಾಜಧಾನಿ ಬೆಂಗಳೂರಿನಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ಶಿವಮೊಗ್ಗ ಜಿಲ್ಲೆಯಲ್ಲಿದೆ. 253 ಮೀಟರ್ ಆಳಕ್ಕೆ ಧುಮ್ಮಿಕ್ಕುವ ಈ ಜಲಪಾತನವನ್ನು ನೋಡಲು ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಜೋಗ ಜಲಪಾತದಿಂದ 20 ಕಿ.ಮೀ ದೂರದಲ್ಲಿರುವ ತಾಳಗುಪ್ಪದಲ್ಲಿ ರೈಲು ನಿಲ್ದಾಣ ಇದೆ. ಬೆಂಗಳೂರಿನಿಂದ ಪ್ರತಿದಿನ ರೈಲುಗಳ ಸಂಚಾರ ಇದೆ. ಸಾಗರ (40 ಕಿ.ಮೀ) ಮತ್ತು ಶಿವಮೊಗ್ಗ (105 ಕಿ.ಮೀ) ಹತ್ತಿರದ ಪಟ್ಟಣಗಳು. ಜೋಗ ಜಲಪಾತ ಉತ್ತಮ ​​ರಸ್ತೆ ಮತ್ತು ಸಾರ್ವಜನಿಕ ಸಾರಿಗೆ ಸಂಪರ್ಕ ಕೂಡ ಹೊಂದಿವೆ. ಜೋಗ ಜಲಪಾತ ವೀಕ್ಷಣೆ ಜಾಕ್ಕೆ ತೆರಳಲು ಶಿವಮೊಗ್ಗ ಅಥವಾ ಸಾಗರ ಪಟ್ಟಣಗಳಿಂದ ಟ್ಯಾಕ್ಸಿಗಳನ್ನು ಪಡೆಯಬಹುದು. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕೂಡ ಇದ್ದು, ಬೇರೆ ರಾಜ್ಯಗಳ ಪ್ರವಾಸಿಗರು ಈನ ಸೌಕರ್ಯವನ್ನೂ ಬಳಸಿಕೊಳ್ಳಬಹುದಾಗಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಚಹಲ್-ಧನಶ್ರೀ ದಾಂಪತ್ಯದಲ್ಲಿ ಬಿರುಕು; ಖಚಿತ ಪಡಿಸಿತು ಕ್ರಿಕೆಟರ್ ಮಾಡಿದ ಆ ಒಂದು ಕೆಲಸ !

    Published

    on

    ಮಂಗಳೂರು/ಮುಂಬೈ : ಟೀಂ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಹಲ್ ಹಾಗೂ ಖ್ಯಾತ ಕೊರಿಯೋಗ್ರಾಫರ್ ಧನಶ್ರೀ ವರ್ಮಾ ದಾಂಪತ್ಯ ಜೀವನ ಮುರಿದುಬಿತ್ತಾ ಎಂಬ ಅನುಮಾನ ಶುರುವಾಗಿದೆ.

    ಕಳೆದ ಕೆಲವು ವರ್ಷಗಳಿಂದಲೂ ಚಹಲ್-ಧನಶ್ರೀ ದಾಂಪತ್ಯ ಜೀವನದಲ್ಲಿ ಬಿರುಕುಬಿಟ್ಟಿದೆ ಎನ್ನುವಂತಹ ಮಾತುಗಳು ಕೇಳಿ ಬಂದಿದ್ದವು.

    ಇದೀಗ ಅಚ್ಚರಿ ಎಂಬಂತೆ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಇಬ್ಬರು ಇನ್ ಸ್ಟಾಗ್ರಾಂನಲ್ಲಿ ಒಬ್ಬರಿಗೊಬ್ಬರು ಅನ್ ಫಾಲೋ ಮಾಡಿದ್ದಾರೆ. ಚಹಲ್ ಅವರು ಧನಶ್ರೀ ಅವರೊಂದಿಗಿನ ಎಲ್ಲಾ ಫೋಟೊಗಳನ್ನು ಸಾಮಾಜಿಕ ಮಾಧ್ಯಮ ಇನ್ ಸ್ಟಾಗ್ರಾಂನಲ್ಲಿ ಅಳಿಸಿ ಹಾಕಿದ್ದಾರೆ. ಆದರೆ, ಚಹಲ್ ಅವರನ್ನು ಅನ್ ಫಾಲೋ ಮಾಡಿರುವ ಧನಶ್ರೀ ಅವರೊಂದಿಗಿನ ಫೋಟೊಗಳನ್ನು ಈವರೆಗೆ ಅಳಿಸಿ ಹಾಕಿಲ್ಲ.

    ಇದನ್ನೂ ಓದಿ: 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಟೀಂ ಇಂಡಿಯಾ

    2023ರಲ್ಲಿ ಧನಶ್ರೀ ಅವರು ಇನ್ ಸ್ಟಾಗ್ರಾಂ ಯುಸರ್ ನೇಮ್ ನಿಂದ ‘ಚಹಲ್’ ಅನ್ನು ಕೈಬಿಟ್ಟ ನಂತರ ವಿಚ್ಛೇದನ ವದಂತಿಗಳು ಹರಿದಾಡಿದ್ದವು. ಆದರೆ, ಈ ವದಂತಿಯನ್ನು ಆಗ ಯಜುವೇಂದ್ರ ಚಹಲ್ ನಿರಾಕರಿಸಿದ್ದರು.

    ಲಾಕೌಡೌನ್ ಸಮಯದಲ್ಲಿ ಪರಸ್ಪರ ಪರಿಚಯವಾಗಿದ್ದ ಚಹಲ್ ಮತ್ತು ಧನಶ್ರೀ, 2020ರ ಡಿಸೆಂಬರ್ 11ರಂದು ವಿವಾಹವಾಗಿದ್ದರು.

     

    Continue Reading

    LATEST NEWS

    ಅಜ್ಮೀರ ದರ್ಗಾಕ್ಕೆ ‘ಚಾದರ್’ ಸಮರ್ಪಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು..!

    Published

    on

    ಮಂಗಳೂರು/ಜೈಪುರ : ಭಾರತದ ಶ್ರೀಮಂತ ಆಧ್ಯಾತ್ಮಿಕ ಪರಂಪರೆ ಮತ್ತು ಶಾಂತಿ ಮತ್ತು ಏಕತೆಯ ಸಂದೇಶ ಸಾರುವ ಅಜ್ಮೀರ್ ಷರೀಫ್ ದರ್ಗಾದಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಭಾಗವಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ದರ್ಗಾಗೆ ಭೇಟಿ ನೀಡಿ ಚಾದರ್ ಸಮರ್ಪಿಸುವ ಮೂಲಕ ಖ್ವಾಜಾ ಮೊಯಿನುದ್ದೀನ್ ಚಸ್ತಿ ಅವರ 813 ನೇ ಉರೂಸ್ ನಲ್ಲಿ ಭಾಗವಹಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಸತತ ಹನ್ನೊಂದು ವರ್ಷಗಳಿಂದ ಅಜ್ಮೀರ್ ಷರೀಫ್ ದರ್ಗಾದ ಉರೂಸ್‌ ಸಮಯದಲ್ಲಿ ದರ್ಗಾಕ್ಕೆ ಚಾದರ್ ಸಮರ್ಪಣೆ ಮಾಡಿದ್ದಾರೆ. ಈ ಬಾರಿ ಸಚಿವ ಕಿರಣ್ ರಿಜಿಜು ಅವರು ಪ್ರಧಾನಿ ಮೋದಿ ಅವರ ಪರವಾಗಿ ದರ್ಗಾಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಸಚಿವ ರಿಜಿಜು, “ಅಜ್ಮೀರ್ ಉರೂಸ್ ಸಮಯದಲ್ಲಿ ಗರೀಬ್ ನವಾಜ್ ದರ್ಗಾಕ್ಕೆ ಭೇಟಿ ನೀಡುವುದು ದೇಶದ ಹಳೆಯ ಸಂಪ್ರದಾಯವಾಗಿದೆ. ಸೌಹಾರ್ದತೆ ಮತ್ತು ಭಾತೃತ್ವದ ಸಂದೇಶವನ್ನು ರವಾನಿಸಲು ಪ್ರಧಾನಿ ಮೋದಿ ಅವರ ಪರವಾಗಿ ಚಾದರ್ ಅರ್ಪಿಸುವ ಅವಕಾಶ ಸಿಕ್ಕಿದೆ. ಉರೂಸ್‌ ಸಂದರ್ಭದಲ್ಲಿ ದೇಶದಲ್ಲಿ ಶಾಂತಿಯುತ ವಾತಾವರಣಕ್ಕಾಗಿ ನಾವು ಆಶೀರ್ವಾದವನ್ನು ಬಯಸುತ್ತಿದ್ದೇನೆ” ಎಂದು ಹೇಳಿದ್ದಾರೆ.

    ಇದೇ ವೇಳೆ ದರ್ಗಾಕ್ಕೆ ಭೇಟಿ ನೀಡುವ ಲಕ್ಷಾಂತರ ಯಾತ್ರಾರ್ಥಿಗಳಿಗೆ ಅನುಕೂಲ ಆಗುವ ಎಲ್ಲಾ ಮೂಲಸೌಕರ್ಯಗಳನ್ನು ಸುಧಾರಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.

    Continue Reading

    LATEST NEWS

    ಕಮರಿಗೆ ಬಿದ್ದ ಸೇನಾ ವಾಹನ; ಇಬ್ಬರೂ ಯೋಧರ ಸಾವು, ಮೂವರಿಗೆ ಗಂಭೀರ ಗಾಯ

    Published

    on

    ಮಂಗಳೂರು/ಶ್ರೀನಗರ: ಜಮ್ಮು ಕಾಶ್ಮೀರದ ಬಂಡಿಪೊರಾದಲ್ಲಿ ಸೇನಾ ವಾಹನ ಕಂದಕಕ್ಕೆ ಬಿದ್ದ ಹಿನ್ನೆಲೆಯಲ್ಲಿ ಇಬ್ಬರು ಯೋಧರು ಮೃತಪಟ್ಟಿದ್ದಾರೆ.

    ಈ ದುರ್ಘಟನೆಯಲ್ಲಿ 3 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಂಡಿಪೋರಾದ ವುಲರ್ ವ್ಯೂಪಾಯಿಂಟ್ ಬಳಿ ಸೇನಾ ವಾಹನವೊಂದು ರಸ್ತೆಯಿಂದ ಕೆಳಗಿಳಿದು ಆಳವಾದ ಕಮರಿಗೆ ಉರುಳಿದ ಘಟನೆ ನಡೆದಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

    ಉತ್ತರ ಕಾಶ್ಮೀರ ಜಿಲ್ಲೆಯ ಎಸ್.ಕೆ ಪಯೆನ್ ಬಳಿ ಸೇನಾ ವಾಹನ ಕಮರಿಗೆ ಬಿದ್ದು ಇಬ್ಬರು ಸೈನಿಕರ ಸಾವು, ಮೂವರು ಗಂಭೀರವಾಗಿರುವುದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಬಂಡಿಪೋರಾ- ಶ್ರೀನಗರ ರಸ್ತೆಯ ಎಸ್ ಕೆ ಪಯೀನ್ ಬಳಿ ವಾಹನ ಸ್ಕಿಡ್ ಆಗಿ ಆಳವಾದ ಕಮರಿಗೆ ಬಿದ್ದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ಚೀನಾದ ನಿಗೂಢ ವೈರಸ್ ಕುರಿತು ಆರೋಗ್ಯ ಸಂಸ್ಥೆ ಮಾಹಿತಿ !

    ಈ ಘಟನೆಯಲ್ಲಿ ಐವರು ಯೋಧರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ಬಂಡಿಪೋರಾಕ್ಕೆ ಕರೆದೊಯ್ಯಲಾಯಿತು. ಇಲ್ಲಿ ಇಬ್ಬರು ಬರುವಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ತೀವ್ರವಾಗಿ ಗಾಯಗೊಂಡ ಮೂವರು ಸೈನಿಕರನ್ನು ಚಿಕಿತ್ಸೆಗಾಗಿ ಶ್ರೀನಗರಕ್ಕೆ ಸ್ಥಳಾಂತರಿಸಲಾಗಿದೆ.

    Continue Reading

    LATEST NEWS

    Trending