Connect with us

    ಕರ್ನಾಟಕದಲ್ಲಿ ಜಾರಿಯಾಯಿತು ಹೊಸ ಕ್ವಾರಂಟೈನ್ ನಿಯಮ..!

    Published

    on

    ಕರ್ನಾಟಕದಲ್ಲಿ ಜಾರಿಯಾಯಿತು ಹೊಸ ಕ್ವಾರಂಟೈನ್ ನಿಯಮ..!

    ಬೆಂಗಳೂರು: ಕರ್ನಾಟಕದಲ್ಲಿ ಹೊಸ ಕ್ವಾರಂಟೈನ್ ನಿಯಮ ಜಾರಿಗೆ ಬಂದಿದೆ. 7 ದಿನಗಳಲ್ಲಿ ರೋಗ ಲಕ್ಷಣ ಕಂಡುಬರದಿದ್ದರೆ ಮನೆಗೆ ಕಳುಹಿಸುವ ಹೊಸ ವ್ಯವಸ್ಥೆ ಜಾರಿಗೆ ಬಂದಿದೆ.

    ಆದರೆ ಈ ಹೊಸ ನಿಯಮ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ನಡೆಸುತ್ತಿರುವ ಅವಿರತ ಹೋರಾಟಕ್ಕೆ ಹಿನ್ನಡೆ ಉಂಟು ಮಾಡುತ್ತಿದೆ ಎನ್ನಲಾಗಿದೆ.

    ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ಅಥವಾ ಹೊರದೇಶಗಳಿಂದ ಬಂದ ಎಲ್ಲರೂ ಕಡ್ಡಾಯವಾಗಿ 14 ದಿನ ಹೋಟೆಲ್ ಕ್ವಾರಂಟೈನ್, ಅದರ ನಂತರ 14 ದಿನ ಹೋಮ್ ಕ್ವಾರಂಟೈನ್ ನಲ್ಲಿ ಇರಲೇಬೇಕು.

    ಇದಲ್ಲದೇ ಯಾವುದೇ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದವರಿಗೂ ಇದೇ ನಿಯಮ ಅನ್ವಯಿಸುತ್ತದೆ.

    ಆದರೆ ರಾಜ್ಯ ಸರ್ಕಾರ ನಿಧಾನಕ್ಕೆ ಈ ನಿಯಮಗಳನ್ನು ಸಡಿಲಿಸುತ್ತಿದೆ.

    ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ತಮಿಳುನಾಡು ಮತ್ತು ಗುಜರಾತ್ ರಾಜ್ಯಗಳಿಂದ ಬಂದವರನ್ನು ಹೊರತುಪಡಿಸಿ,

    ಉಳಿದೆಲ್ಲಾ ಪ್ರಯಾಣಿಕರು 7 ದಿನಗಳವರಗೆ ಮಾತ್ರ ಹೋಟೆಲ್ ಕ್ವಾರಂಟೈನ್ ನಲ್ಲಿ ಇದ್ದರೆ ಸಾಕು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

    ಇವರೆಲ್ಲ ಮನೆಗಳಲ್ಲಿ ಕೂಡ 7 ದಿನ ಕ್ವಾರಂಟೈನ್ ನಲ್ಲಿ ಇದ್ದರೆ ಸಾಕಾಗುತ್ತದೆ. ಆದರೆ, ಈಗ ಈ ನಿಯಮದಲ್ಲೂ ಒಂದಷ್ಟು ಸಡಿಲಿಕೆ ಮಾಡಲಾಗಿದೆ.

    ಕೇಂದ್ರ ಸರ್ಕಾರದ ಆದೇಶದಂತೆ ಕ್ವಾರಂಟೈನ್ ನಲ್ಲಿ ಇರುವ ಯಾವುದೇ ಅಂತರ ರಾಜ್ಯ ಪ್ರಯಾಣಿಕರಿಗೆ ಏಳನೇ ದಿನದವರೆಗೂ ಯಾವುದೇ ರೋಗ ಲಕ್ಷಣ ಕಂಡು ಬರದಿದ್ದರೆ ಪರೀಕ್ಷೆ ಇಲ್ಲದೇ ಹೋಮ್ ಕ್ವಾರಂಟೈನ್ ಗೆ ತೆರಳಲು ಅವಕಾಶ ನೀಡಲಾಗಿದೆ.

    ಇದುವರೆಗೆ ಹೋಟೆಲ್ ಕ್ವಾರಂಟೈನ್ ನಲ್ಲಿ ಇದ್ದವರನ್ನು ಐದನೇ ದಿನ ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು.

    ಅದರಲ್ಲಿ ನೆಗೆಟಿವ್ ರಿಪೋರ್ಟ್ ಬಂದ ಮೇಲಷ್ಟೇ ಮನೆಗೆ ತೆರಳಿ ಹೋಮ್ ಕ್ವಾರಂಟೈನ್ ನಲ್ಲಿ ಇರಲು ಅವಕಾಶ ನೀಡಲಾಗುತ್ತಿತ್ತು.

    ಆದರೆ, ರೋಗಲಕ್ಷಣ ಇಲ್ಲದ ವ್ಯಕ್ತಿಗಳಿಂದ ಸೋಂಕು ಹರಡುವ ಅಪಾಯ ಬಹಳ ಅಪರೂಪದ್ದು. ಆದ್ದರಿಂದ ಅವರನ್ನು ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲ.

    ಹೋಮ್ ಕ್ವಾರಂಟೈನ್ ನಲ್ಲಿ ಇದ್ದಾಗಲೂ ಅವರು ಪ್ರತ್ಯೇಕವಾಗಿಯೇ ಇರುತ್ತಾರೆ.

    ಹಾಗಾಗಿ, ನಂತರ ರೋಗಲಕ್ಷಣ ಕಂಡುಬಂದರೆ ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಅವರನ್ನು ಪರೀಕ್ಷೆ ಮತ್ತು ಚಿಕಿತ್ಸೆಗೆ ಒಳಪಡಿಸುತ್ತಾರೆ.

    ಇದರಿಂದಾಗಿ ಪರೀಕ್ಷೆ ಮಾಡಿಸಿ ರಿಪೋರ್ಟ್ ಗಾಗಿ ಕಾಯುತ್ತಾ ಹೆಚ್ಚು ದಿನ ಹೋಟೆಲ್ ಕ್ವಾರಂಟೈನ್ ನಲ್ಲಿ ಇದ್ದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ.

    ಕ್ವಾರಂಟೈನ್ ಅವಧಿ ಕಡಿಮೆ ಎನ್ನುವುದರ ಜೊತೆಗೆ ಪರೀಕ್ಷೆ ಕೂಡ ಇಲ್ಲದಿರುವುದು ಅವರಿಗೆ ಮತ್ತಷ್ಟು ಸಮಾಧಾನ ತಂದಿದೆ.

    ಉಡುಪಿಯಲ್ಲಿ ಈಗಾಗಲೇ ಹೊರದೇಶ, ಹೊರರಾಜ್ಯಗಳಿಂದ ಬಂದು ಜಿಲ್ಲೆಯ ವಿವಿಧ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿ,

    ಏಳು ದಿನಗಳ ವಾಸ್ತವ್ಯವನ್ನು ಪೂರ್ಣಗೊಳಿಸಿದ ಎಲ್ಲರನ್ನೂ ನಿನ್ನೆಯೇ (ಮೇ29)  ಮನೆಗೆ ಕಳುಹಿಸಲಾಗಿದೆ. ಎಂದು ಅಧಿಕಾರಿಗಳು ಹೇಳಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಕನ್ನಡಿಗ ಅಧಿಕಾರಿಯೇ ಮಹಾಕುಂಭ ಮೇಳದ ಸಾರಥಿ !

    Published

    on

    ಮಂಗಳೂರು/ಪ್ರಯಾಗ್ ರಾಜ್ : ಉತ್ತರಪ್ರದೇಶದ ಪ್ರಯಾಗರಾಜ್ ನಲ್ಲಿ ಮಹಾ ಕುಂಭಮೇಳ ಆರಂಭಗೊಂಡಿದ್ದು, ಭಕ್ತ ಸಾಗರವೇ ಹರಿದು ಬರುತ್ತಿದೆ.

    ಈ ಬಾರಿಯ ಪ್ರಯಾಗರಾಜ್ ಮಹಾಕುಂಭ ಮೇಳ ಕನ್ನಡಿಗನ ಸಾರಥ್ಯದಲ್ಲಿ ನಡೆಯುತ್ತಿದೆ. ಮಹಾಕುಂಭ ಮೇಳದ ಮೇಲಾಧಿಕಾರಿಯಾಗಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಕನ್ನಡಿಗ ಐಎಎಸ್ ಅಧಿಕಾರಿಯನ್ನೇ ನೇಮಕ ಮಾಡಿದ್ದಾರೆ. ಬೆಂಗಳೂರು ಮೂಲದ ವಿಜಯ್ ಕಿರಣ್ ಆನಂದ್ ಅವರು ಮಹಾಕುಂಭಮೇಳದ ಸಾರಥ್ಯವಹಿಸಿದ್ದಾರೆ.

    ಇದನ್ನೂ ಓದಿ: ಮಹಾ ಕುಂಭಮೇಳದಿಂದ ಉತ್ತರಪ್ರದೇಶ ಸರ್ಕಾರ ಗಳಿಸುವ ಆದಾಯ ಎಷ್ಟು ?

    ವಿಜಯ್ ಕಿರಣ್ ಆನಂದ್ ಈ ಹಿಂದೆ ಗೋರಖ್ ಪುರ ಜಿಲ್ಲಾಧಿಕಾರಿಯಾಗಿದ್ದರು. ಈ ವೇಳೆ ವಿಜಯ್ ಕಿರಣ್ ದಕ್ಷತೆಯನ್ನು ಸಿಎಂ ಯೋಗಿ ಆದಿತ್ಯನಾಥ್ ಅವರು ಹತ್ತಿರದಿಂದ ನೋಡಿದ್ದರು. ಹೀಗಾಗಿ ಈಗ ಪ್ರಯಾಗರಾಜ್ ಜಿಲ್ಲಾಧಿಕಾರಿಯಾಗಿ ಅವರನ್ನೇ ನೇಮಿಸಿ ಮಹಾಕುಂಭ ಮೇಳದ ಮಹತ್ವದ ಜವಾಬ್ದಾರಿಯನ್ನು ನೀಡಿದ್ದಾರೆ. ವಿಜಯ್ ಕಿರಣ್ ಆನಂದ್ ಅವರನ್ನು ಮಹಾಕುಂಭಮೇಳದ ಮೇಲಾಧಿಕಾರಿಯಾಗಿ ನೇಮಕ ಮಾಡಿದ್ದಾರೆ.

    ಈ ಹಿಂದೆ 2021ರ ಹರಿದ್ವಾರದ ಕುಂಭ ಮೇಳಕ್ಕೆ ಮೇಲಾಧಿಕಾರಿಯಾಗಿ ಕನ್ನಡಿಗ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ಅವರನ್ನು ನೇಮಿಸಲಾಗಿತ್ತು. ಇದೀಗ ಮತ್ತೊಬ್ಬ ಕನ್ನಡಿಗರ ನೇತೃತ್ವದಲ್ಲಿ ಪ್ರಯಾಗರಾಜ್ ನ ಮಹಾ ಕುಂಭಮೇಳ ನಡೆಯುತ್ತಿದೆ.

     

    Continue Reading

    LATEST NEWS

    ರಾಮೇಶ್ವರಂ ಕೆಫೆ ರೀತಿ 6 ಗಣ್ಯರ ಮನೆ ಸ್ಫೋ*ಟಿಸುವುದಾಗಿ ಬೆದ*ರಿಕೆ ಕರೆ

    Published

    on

    ಮಂಗಳೂರು/ಬೆಂಗಳೂರು : ರಾಮೇಶ್ವರಂ ಕೆಫೆ ರೀತಿ ಬಾಂ*ಬ್ ಬ್ಲಾ*ಸ್ಟ್ ಮಾಡುವುದಾಗಿ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿರುವ ಬಗ್ಗೆ ವರದಿಯಾಗಿದೆ. ಗಣರಾಜ್ಯೋತ್ಸವದಂದು ಬೆಂಗಳೂರಿನ ಆರು ಜನ ಗಣ್ಯರ ಮನೆ ಸ್ಫೋ*ಟಿಸುವುದಾಗಿ ಬೆ*ದರಿಕೆ ಬಂದಿದೆ. ಬೆಂಗಳೂರಿನ ಪೊಲೀಸ್ ಆಯುಕ್ತರ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಆಗಂತುಕ ಬೆ*ದರಿಕೆ ಹಾಕಿದ್ದಾನೆ.

    ಸದ್ಯ ಬಾಂ*ಬ್ ಬೆ*ದರಿಕೆ ಕರೆ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಜ.9 ರಂದು ಸಂಜೆ ಬೆಂಗಳೂರಿನ ಪೊಲೀಸ್ ಆಯುಕ್ತರ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದು, ರಾಮೇಶ್ವರಂ ಕೆಫೆ ರೀತಿಯಲ್ಲಿ ಬಾಂ*ಬ್ ಬ್ಲಾ*ಸ್ಟ್ ಮಾಡುವುದಾಗಿ ಹುಸಿ ಬಾಂ*ಬ್ ಎಂದು ಬೆ*ದರಿಕೆ ಹಾಕಿದ್ದಾನೆ. ಈ ಬಗ್ಗೆ ವಿಧಾನಸೌಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಅಪರಿಚಿತ  ವ್ಯಕ್ತಿ ನೀಡಿದ ಮಾಹಿತಿ ಮೇರೆಗೆ 6 ಜನರ ಹೆಸರು, ವಿಳಾಸವನ್ನು ಆಯ ವ್ಯಾಪ್ತಿಯ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ.  ಕರೆ ಮಾಡಿದ ವ್ಯಕ್ತಿಯ ಜಾಡು ಹಿಡಿದು ಹೊರಟ ಪೊಲೀಸರು ಶಂಕಿತ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ : ಬಿಗ್‌ ಬಾಸ್‌ ನಿಂದ ಹೊರ ಬಂದ ಚೈತ್ರಾ ಕುಂದಾಪುರ ಪಡೆದ ಸಂಭಾವನೆ ಎಷ್ಟು ಗೊತ್ತೇ?
    ಗಣರಾಜ್ಯೋತ್ಸವಕ್ಕೂ ಮುನ್ನ ಬೆಂಗಳೂರು ಪೊಲೀಸ್ ಆಯುಕ್ತರ ನಿಯಂತ್ರಣ ಕೊಠಡಿಗೆ ಬಂದ ಹುಸಿ ಬಾಂ*ಬ್ ಬೆದ*ರಿಕೆ ಕರೆ ಆತಂಕ ಹುಟ್ಟು ಹಾಕಿದೆ. ಬೆಂಗಳೂರಿನಾದ್ಯಂತ ಪೊಲೀಸ್ ಭದ್ರತೆ ಹೆಚ್ಚಿಸಲು ಇಲಾಖೆ ಸಿದ್ಧತೆ ನಡೆಸಿದೆ.

    Continue Reading

    BIG BOSS

    ಬಿಗ್‌ ಬಾಸ್‌ ನಿಂದ ಹೊರ ಬಂದ ಚೈತ್ರಾ ಕುಂದಾಪುರ ಪಡೆದ ಸಂಭಾವನೆ ಎಷ್ಟು ಗೊತ್ತೇ?

    Published

    on

    ಬಿಗ್‌ ಬಾಸ್‌ ಮನೆಯಿಂದ ಎಲಿಮಿನೇಟ್‌ ಆಗಿರುವ ಚೈತ್ರಾ ಕುಂದಾಪುರ ಪಡೆದ ಒಟ್ಟು ಹಣವೆಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಮಾತಿನಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಚೈತ್ರಾ ಕುಂದಾಪುರ ಬಿಗ್‌ ಬಾಸ್‌ ನಿಂದ ಎಲಿಮಿನೇಟ್‌ ಆಗಿ ಹೊರ ಬಂದಿದ್ದಾರೆ.

    ಚೈತ್ರಾ ಕುಂದಾಪುರ ಅವರು ಟಾಸ್ಕ್‌ಗಳಲ್ಲಿ ಅಷ್ಟಾಗಿ ಮಿಂಚಿರಲಿಲ್ಲ. ಆದರೆ ಮಾತು, ವಾದ, ವಾಗ್ವಾದಗಳಿಂದಲೇ ಬಿಗ್‌ ಬಾಸ್‌ ವೀಕ್ಷಕರ ಗಮನಸೆಳೆದಿದ್ದರು. ಉಳಿದ ಸ್ಪರ್ಧಿಗಳಿಗೆ ಹೋಲಿಸಿದರೆ ಚೈತ್ರಾ ಕುಂದಾಪುರ ನೇರವಾಗಿ ಮಾತನಾಡುತ್ತಿದ್ದರು. ತಮ್ಮ ಮಾತಿನಿಂದಲೇ ಹಲವು ಬಾರಿ ಮನೆಯವರ ಕೆಂಗಣ್ಣಿಗೆ ಸಹ ಚೈತ್ರಾ ಗುರಿಯಾಗಿದ್ದರು.

    ಚೈತ್ರಾ ಕುಂದಾಪುರ ಎಲಿಮಿನೇಟ್‌ ಆದ ವಿಚಾರ ತಿಳಿಯುತ್ತಿದ್ದಂತೆ ಅವರು ಬಿಗ್‌ ಬಾಸ್‌ ನಿಂದ ಪಡೆದ ಸಂಭಾವನೆ ಸುದ್ದಿ ವೈರಲ್‌ ಆಗುತ್ತಿದೆ. ಚೈತ್ರಾ ಕುಂದಾಪುರ ವಾರಕ್ಕೆ 1 ಲಕ್ಷದವರೆಗೆ ಸಂಭಾವನೆ ಪಡೆಯುತ್ತಿದ್ದರು ಎಂದು ಕೆಲವು ವರದಿಗಳಲ್ಲಿ ಹೇಳಲಾಗಿದೆ. ಈ ಪ್ರಕಾರ 15 ವಾರಗಳಿಗೆ ಒಟ್ಟು 15,00,000 ರೂಪಾಯಿ ಸಂಭಾವನೆ ಪಡೆದಂತಾಗುತ್ತದೆ. ಇದಲ್ಲದೇ ಚೈತ್ರಾ ಕುಂದಾಪುರ ಅವರಿಗೆ 1,50,000 ರೂಪಾಯಿ ಸ್ಪಾನ್ಸರ್‌ ಕಡೆಯಿಂದ ಬಹುಮಾನದ ಮೊತ್ತ ಸಿಗಲಿದೆ. ಜೊತೆಗೆ 50,000 ದ ಗಿಫ್ಟ್‌ ವೋಚರ್‌ ಸಹ ಸಿಗಲಿದೆ.

    ಇದೆಲ್ಲವನ್ನೂ ಒಟ್ಟುಗೂಡಿಸಿದರೆ ಚೈತ್ರಾ ಕುಂದಾಪುರ ಬಿಗ್‌ಬಾಸ್‌ ನಿಂದ ಒಟ್ಟು 16,50,000 ರೂಪಾಯಿ ಹಣ ಪಡೆದಂತಾಗುವುದು. (ಇದು ವರದಿಗಳನ್ನು ಮತ್ತು ವೈರಲ್‌ ಸಂಗತಿಗಳನ್ನು ಆಧರಿಸಿ ಬರೆದ ಸುದ್ದಿಯಾಗಿದೆ. ನಿಖರ ಮಾಹಿತಿಯಲ್ಲ.)

    Continue Reading

    LATEST NEWS

    Trending