Saturday, October 1, 2022

ಕುವೈಟ್: ‘ಬದ್ರ್ ಅಲ್ ಸಮಾ’ ದ ನೂತನ ವೈದ್ಯಕೀಯ ಒಪಿಡಿ ಬ್ಲಾಕ್ ಉದ್ಘಾಟನೆ

ಕುವೈಟ್: ಕುವೈಟ್‌ನಲ್ಲಿ ಜನರ ನಂಬಿಕೆ ಮತ್ತು ವಿಶ್ವಾಸಕ್ಕೆ ಪಾತ್ರವಾಗಿರುವ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಫರ್ವಾನಿಯಾದ ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್ ನಲ್ಲಿ ಹೊಸ ವೈದ್ಯಕೀಯ ಒಪಿಡಿ ಬ್ಲಾಕ್ ಮತ್ತು KOC, KNPC, KIPIC ಮತ್ತು ವೀಸಾ ಮೆಡಿಕಲ್‌ ವಿಭಾಗ ಇತ್ತೀಚೆಗೆ ಉದ್ಘಾಟನೆಗೊಂಡಿತು.

ನೂತನ ವಿಭಾಗವನ್ನು ಆಡಳಿತ ಮಂಡಳಿಯ ನಿರ್ದೇಶಕ ಡಾ. ಮೊಹಮ್ಮದ್ ಪಿಎ, ಅಬ್ದುಲ್ ಲತೀಫ್ ಉದ್ಘಾಟಿಸಿದರು. ಸಿಇಒ ಡಾ ಶರತ್ ಚಂದ್ರ ಮತ್ತು ಶಾಖೆ ವ್ಯವಸ್ಥಾಪಕರಾದ ಅಬ್ದುಲ್ ರಜಾಕ್ ಅಧ್ಯಕ್ಷತೆ ವಹಿಸಿದ್ದರು.


ಇದೇ ಸಂದರ್ಭ ಆಡಳಿತ ನಿರ್ದೇಶಕರು ಇನ್ನೂ ಹೊಸ ಎರಡು ಕೇಂದ್ರಗಳನ್ನು ತೆರೆಯುವುದಾಗಿ ಘೋಷಿಸಿದ್ದು, ಕುವೈತ್ನಲ್ಲಿರುವ ಎಲ್ಲಾ ಸಹೃದಯಿ ರಕ್ತದಾನಿಗಳಿಗೆ ಒಂದು ವರ್ಷದ ಅವಧಿವರೆಗೆ ಎಲ್ಲಾ ವಿಬಾಗಗಳಲ್ಲಿ ಉಚಿತ ವೈದ್ಯರ ಸಮಾಲೋಚನೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಆಡಳಿತ ಮಂಡಳಿ ನಿರ್ದೇಶಕರು, ಕುವೈಟ್ ಆರೋಗ್ಯ ಸಚಿವಾಲಯದ ಪ್ರೋಟೋಕಾಲ್ ಮತ್ತು ಆರೋಗ್ಯ ರಕ್ಷಣೆ ನೀತಿಗಳನ್ನು ಅನುಸರಿಸುವ ಮೂಲಕ ಕುವೈಟ್‌ನ ಜನರ ನಿರೀಕ್ಷೆಗೆ ತಕ್ಕಂತೆ ಬದುಕಲು ಸಾಧ್ಯವಾಯಿತು ಎಂದರು. ಹಣ ನಮಗೆ ಆಹಾರ ನೀಡಿದರೆ ರಕ್ತ ನಮಗೆ ಜೀವ ನೀಡುತ್ತದೆ.

ರಕ್ತದಾನ ಮಾಡುವುದರಿಂದ ಜೀವ ಉಳಿಸುವ ಪುಣ್ಯದ ಕೆಲಸ ಮಾಡಿದಂತಾಗುತ್ತದೆ ಎಂದು ರಕ್ತದಾನದ ಮಹತ್ವವನ್ನು ತಿಳಿಸಿದರು.


ಬದ್ರ್ ಅಲ್ ಸಮಾ ಗ್ರೂಪ್ ಆಫ್ ಹಾಸ್ಪಿಟಲ್ಸ್ & ಮೆಡಿಕಲ್ ಸೆಂಟರ್, ಆಡಳಿತ ನಿರ್ದೇಶಕರಾದ ಡಾ ಮೊಹಮ್ಮದ್ ಪಿಎ, ಅಬ್ದುಲ್ ಲತೀಫ್ ಮತ್ತು ಸಿಇಒ ಡಾ ಶರತ್ ಚಂದ್ರ, ಬ್ರಾಂಚ್ ಮಾನೇಜರ್ ಅಬ್ದುಲ್ ರಜಾಕ್ ಅವರ ಅಧ್ಯಕ್ಷತೆಯಲ್ಲಿ ಕಳೆದ 6 ವರ್ಷಗಳಿಂದ ಸಂಸ್ಥೆಯ ಬೆಳವಣಿಗೆಯಲ್ಲಿ ನಿರಂತರ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗಳನ್ನು ಶ್ಲಾಘಿಸಲಾಯಿತು.

ಮಾರ್ಚ್ 2017 ರಲ್ಲಿ ಕುವೈಟ್‌ನಲ್ಲಿ ಪ್ರಾರಂಭವಾದ ಬದ್ರ್ ಅಲ್ ಸಮಾ ‘ಆರೋಗ್ಯ ಕಾಳಜಿಗಿಂತ ಹೆಚ್ಚು….ಮಾನವ ಆರೈಕೆ’ಗೆ ಬದ್ಧವಾಗಿದ್ದು,

ಈ ಕೇಂದ್ರ ಯೂರೋಲಜಿ, ಮೂಳೆಚಿಕಿತ್ಸೆ, ಜನರಲ್ ಸರ್ಜರಿ, ಪೀಡಿಯಾಟ್ರಿಕ್ಸ್, ಇಎನ್ಟಿ, ಡೆಂಟಿಸ್ಟ್ರಿ, ಪ್ರಸೂತಿ ಮತ್ತು ಸ್ತ್ರೀರೋಗ, ಕಣ್ಣಿನ ಚಿಕಿತ್ಸೆ, ಡೆರ್ಮಾಟಾಲಜಿ, ಸೌಂದರ್ಯವರ್ಧಕ ಚಿಕಿತ್ಸೆ, ರೇಡಿಯಾಲಜಿ, ಪ್ರಯೋಗಾಲಯ, ಫಾರ್ಮಸಿ ಮತ್ತು ಕಾಲ್ ಸೆಂಟರ್ ಹೀಗೆ ವ್ಯಾಪಕ ಶ್ರೇಣಿಯ ವಿಶೇಷ ವೈದ್ಯಕೀಯ ಸೇವೆಗಳನ್ನು ನೀಡುತ್ತಾ ಬಂದಿದೆ.
ಇನ್ನು ಬ್ರಾಂಡಿಂಗ್, ಮೀಡಿಯಾ ಮಾರ್ಕೆಟಿಂಗ್ ಸನಾ, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ರಹಜನ್, ಟೆಲಿಮಾರ್ಕೆಟಿಂಗ್,

ಸಾಮಾಜಿಕ ಮಾಧ್ಯಮ ಶೆರಿನ್, ಮಾರ್ಕೆಟಿಂಗ್ ಸಂಯೋಜಕಿ ಪ್ರೀಮಾ, ಫೀಲ್ಡ್ ಮಾರ್ಕೆಟಿಂಗ್ ಕದಿರ್, ಇನ್ಸುರೆನ್ಸ್ ಕಾರ್ಡಿನೇಟರ್ ತಾಸಿರ್ ಸಂಯೋಜಿಸಿದರು. ಅಕೌಂಟ್ಸ್ ಮಾನೇಜರ್ ಜಿಜುಮೋನ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು.


ಬದ್ರ್ ಅಲ್ ಸಮಾ ಕುವೈತ್ ಜನತೆಗೆ ಧನ್ಯವಾದ ಸಲ್ಲಿಸಿದ್ದು, ನಂಬಿಕೆ ಮತ್ತು ವಿಶ್ವಾಸದ ಜೊತೆಗೆ ಕುವೈತ್ ನೆಲದಲ್ಲಿ ಜನರ ಪ್ರೀತಿ, ಭರವಸೆ ಅಪಾರ ಬೆಂಬಲಕ್ಕಾಗಿ ಆಡಳಿತ ಮಂಡಳಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here

Hot Topics

‘ಶೋಭಕ್ಕ ಒಂಜಿ ಸೆಲ್ಫಿ’: ಕಾಂಗ್ರೆಸ್ ಮುಖಂಡ ಮಿಥುನ್ ರೈ ‘ಸೆಲ್ಫಿ’ ಸ್ಪರ್ಧೆಗೆ BJP ಕಾರ್ಯಕರ್ತರ ಖಡಕ್ ರೆಸ್ಪಾನ್ಸ್

ಉಡುಪಿ: ರಸ್ತೆ ಅವ್ಯವಸ್ಥೆ, ಕಳಪೆ ಕಾಮಗಾರಿಯ ವಿರುದ್ಧ ಪ್ರತಿಭಟನೆ ನಡೆಸುವ ಸಂದರ್ಭ ಕಾಂಗ್ರೆಸ್ ಮುಖಂಡ ಮಿಥುನ್ ರೈ ಸೆಲ್ಫಿ ವಿಥ್ ಶೋಭಾ ಕರಂದ್ಲಾಜೆ ಎಂಬ ವೈವಿಧ್ಯಮಯ ಪ್ರತಿಭಟನೆಯ ಬಗ್ಗೆ ಘೋಷಣೆ ಮಾಡಿದ್ದರು.ಸಂಸದೆ ಶೋಭಾ...

ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಮಂಗಳೂರು ತಹಶೀಲ್ದಾರ್ ಸಹಾಯಕ ಶಿವಾನಂದ..!

ಮಂಗಳೂರು: ತಹಶೀಲ್ದಾರ್‌ ಅವರ ಸಹಾಯಕ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಘಟನೆ ಮಂಗಳೂರಿನಲ್ಲಿ ಇಂದು ಮಧ್ಯಾಹ್ನ ನಡೆದಿದೆ.ಮಂಗಳೂರು ಮಿನಿ ವಿಧಾನಸೌಧದಲ್ಲಿರುವ ತಾಲೂಕು ಕಚೇರಿಯಲ್ಲಿ...

ಸಿದ್ಧರಾಮಯ್ಯನಿಗೆ ಧಮ್ ಇದ್ರೆ ಹಿಂದೂಗಳ ಓಟು ಬೇಡ ಎನ್ನಲಿ ನೋಡೋಣ-ರಾಜ್ಯಾಧ್ಯಕ್ಷ ನಳಿನ್

ಹುಬ್ಬಳ್ಳಿ: ನಮಗೆ ಪಿಎಫ್‌ಐ ಬ್ಯಾನ್ ಮಾಡುವಂತೆ ಹಾಕಿದ ಸವಾಲಿಗೆ ತಕ್ಕಂತೆ ಇಂದು ಮಾಡಿ ತೋರಿಸಿದ್ದೇವೆ. ಅಷ್ಟೊಂದು ಧಮ್ ಇದ್ರೆ ಸಿದ್ಧರಾಮಯ್ಯನವರು ಹಿಂದೂಗಳ ಓಟು ನನಗೆ ಬೇಕಾಗಿಲ್ಲ ಎಂದು ಹೇಳಲಿ ನೋಡೋಣ' ಎಂದು ಬಿಜೆಪಿ...