Connect with us

    LATEST NEWS

    ಮಹಾರಾಷ್ಟ್ರದಲ್ಲಿ ಓಮೈಕ್ರಾನ್ ಉಪತಳಿ ಪತ್ತೆ : ಕರ್ನಾಟಕದಲ್ಲಿ ಹೈ ಅಲರ್ಟ್..!

    Published

    on

    ಬೆಂಗಳೂರು :  ಮಹಾರಾಷ್ಟ್ರದಲ್ಲಿ ಕೊರೊನಾ ವೈರಾಣುವಿನ ರೂಪಾಂತರಿ ಓಮೈಕ್ರಾನ್‌ನ ಉಪತಳಿಗಳು ಪತ್ತೆಯಾಗಿರುವುದರಿಂದ ರಾಜ್ಯದಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

    ಈ ಬಗ್ಗೆ ಇಲಾಖೆ ಆಯುಕ್ತ ಡಿ. ರಂದೀಪ್ ಸುತ್ತೋಲೆ ಹೊರಡಿಸಿದ್ದಾರೆ.

    ‘ಅಮೆರಿಕದಲ್ಲಿ ಬಿಕ್ಯೂ.1, ಮಹಾರಾಷ್ಟ್ರದಲ್ಲಿ ಬಿಎ 2.75 ಹಾಗೂ ಬಿಜೆ.1 ಉಪತಳಿಗಳು ಪತ್ತೆಯಾಗಿವೆ.

    ದೀಪಾವಳಿ, ಕನ್ನಡ ರಾಜ್ಯೋತ್ಸವ ಸೇರಿ ವಿವಿಧ ಉತ್ಸವಗಳು ನಡೆಯುವುದರಿಂದ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕೋವಿಡ್ ನಿಯಮಗಳನ್ನು ಈ ಅವಧಿಯಲ್ಲಿ ಪಾಲಿಸಬೇಕು’ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

    ‘ಜ್ವರ, ಕೆಮ್ಮು, ಶೀತ, ಗಂಟಲು ನೋವು, ಉಸಿರಾಟದ ಸಮಸ್ಯೆ ಕಂಡು ಬಂದಲ್ಲಿ ಕೂಡಲೇ ಆಸ್ಪತ್ರೆಗೆ ತೆರಳಿ, ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು.

    ರೋಗ ಗುಣಮುಖವಾಗುವವರೆಗೂ ಸ್ವಯಂ ಪ್ರೇರಿತವಾಗಿ ಮನೆಯಲ್ಲಿಯೇ ಇರಬೇಕು. ಹೊರಗಡೆ ಹೋಗುವಾಗ ಮುಖಗವಸು ಧರಿಸಬೇಕು’ ಎಂದು ತಿಳಿಸಲಾಗಿದೆ.

    ‘ಈಗಾಗಲೇ ಎರಡು ಡೋಸ್ ಲಸಿಕೆ ಪಡೆದವರು ಇನ್ನೊಂದು ಡೋಸ್ ಲಸಿಕೆಯನ್ನು ಪಡೆದುಕೊಳ್ಳಬೇಕು.

    60 ವರ್ಷ ಮೇಲ್ಪಟ್ಟವರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ರೋಗ ಲಕ್ಷಣ ಹೊಂದಿರುವವರಿಂದ ಅಂತರ ಕಾಯ್ದುಕೊಳ್ಳಬೇಕು’ ಎಂದು ಸೂಚಿಸಲಾಗಿದೆ.

    LATEST NEWS

    ಅಂಬುಲೆನ್ಸ್‌ನಲ್ಲಿ 16ರ ಬಾಲಕಿ ಮೇಲೆ ಗ್ಯಾಂಗ್ ರೇಪ್ – ಇಬ್ಬರು ಅರೆಸ್ಟ್

    Published

    on

    ಭೂಪಾಲ್: ಅಂಬುಲೆನ್ಸ್‌ನಲ್ಲಿ 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ದಾರುಣ ಘಟನೆ ಮಧ್ಯಪ್ರದೇಶದ ಮೌಗಂಜ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಒಟ್ಟು ನಾಲ್ವರು ಆರೋಪಿಗಳಿದ್ದು, ಆ ಪೈಕಿ ಇಬ್ಬರು ಆರೋಪಿಗಳಾದ ಮೌಗಂಜ್ ಜಿಲ್ಲೆಯ ನೈಗರ್ಹಿ ತಹಸಿಲ್‌ನ ನಿವಾಸಿಗಳಾದ ಅಂಬ್ಯುಲೆನ್ಸ್ ಚಾಲಕ ವಿರೇಂದ್ರ ಚತುರ್ವೇದಿ ಹಾಗೂ ಆತನ ಸ್ನೇಹಿತ ರಾಜೇಶ ಕೇವತ್‌ನನ್ನು ಬಂಧಿಸಿದ್ದಾರೆ.

    ಮೌಗಂಜ್‌ನಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಹನುಮಾನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಮಧ್ಯಪ್ರದೇಶ ಸರ್ಕಾರವು ಪಿಪಿಪಿ ಮಾದರಿಯಲ್ಲಿ ಗ್ರಾಮೀಣ ಭಾಗದ ಮಹಿಳೆಯರು, ಮಕ್ಕಳು ಹಾಗೂ ಬಿಪಿಎಲ್ ಕುಟುಂಬಗಳ ಆರೋಗ್ಯ ರಕ್ಷಣೆಗಾಗಿ ಜನನಿ ಎಕ್ಸ್ಪ್ರೆಸ್ ಅಂಬುಲೆನ್ಸ್ ಸೌಲಭ್ಯ ಒದಗಿಸಿತ್ತು. ಈ 108 ಅಂಬುಲೆನ್ಸ್‌ನಲ್ಲೇ ಕೃತ್ಯ ನಡೆದಿದೆ.

    ಮಾಹಿತಿ ಪ್ರಕಾರ, ಅಪ್ರಾಪ್ತೆಯು ತನ್ನ ಸಹೋದರಿ ಹಾಗೂ ಮಾವನೊಂದಿಗೆ ಅಂಬುಲೆನ್ಸ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಲಕ ಹಾಗೂ ಆತನ ಮೂವರು ಸಹಚರರು ಸಹ ಅಂಬುಲೆನ್ಸ್‌ನಲ್ಲಿದ್ದರು. ಮಾರ್ಗಮಧ್ಯೆ ನೀರು ತರಲೆಂದು ಬಾಲಕಿಯ ಸಹೋದರಿ ಹಾಗೂ ಆಕೆಯ ಮಾವ ಕೆಳಗಿಳಿದಿದ್ದಾರೆ. ಅವರಿಗಾಗಿ ಕಾಯದೇ ಅಂಬುಲೆನ್ಸ್‌ನ್ನೂ ಚಲಾಯಿಸಿಕೊಂಡು ಬಂದಿದ್ದು, ಚಾಲಕನ ಸ್ನೇಹಿತ ರಾಕೇಶ್ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಆ ದಿನ ರಾತ್ರಿ ಆಕೆಯನ್ನು ವಾಹನದಲ್ಲಿಯೇ ಇರಿಸಿಕೊಂಡು ಮಾರನೇ ದಿನ ರಸ್ತೆಯ ಬದಿಯಲ್ಲಿ ಬಿಸಾಡಿ ಹೋಗಿದ್ದಾರೆ. ಬಳಿಕ ಅಪ್ರಾಪ್ತೆ ಮನೆ ತಲುಪಿದ್ದು, ನಡೆದ ವಿಷಯವನ್ನು ತಾಯಿಗೆ ತಿಳಿಸಿದ್ದಾಳೆ. ಇದ್ದರಿಂದ ಗಾಬರಿಯಾದ ತಾಯಿ ಮನೆಯ ಮರ್ಯಾದೆ ಪ್ರಶ್ನೆ ಎಂದು ದೂರು ದಾಖಲಿಸಿರಲಿಲ್ಲ.

    ಬಳಿಕ ನ.25 ರಂದು ಸಂತ್ರಸ್ತೆ ಹಾಗೂ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದು, ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ. ನ.27 ರಂದು ನಾಲ್ವರ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಇನ್ನೂ ಈ ಕೃತ್ಯದಲ್ಲಿ ಸಂತ್ರಸ್ತೆಯ ಸಹೋದರಿ ಹಾಗೂ ಮಾವ ಭಾಗಿಯಾಗಿರುವುದಾಗಿ ತಿಳಿಸಿದ್ದು, ಅವರನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎಂದು ತಿಳಿಸಿದ್ದಾರೆ.

    ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅತ್ಯಾಚಾರ ಎಸಗಿರುವುದಾಗಿ ದೃಢಪಟ್ಟಿದ್ದು, ಇನ್ನುಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    Continue Reading

    BANTWAL

    ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

    Published

    on

    ವಿಟ್ಲ: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿಯೋರ್ವಳು ಮೃ*ತಪಟ್ಟ ಘಟನೆ ನ.28ರ ಗುರುವಾರ ನಡೆದಿದೆ.

    ವಿಟ್ಲ ಕುಂಡಡ್ಕ ಪಾದೆ ನಿವಾಸಿ ದಿ.ನಾರಾಯಣ ಮೂಲ್ಯ ಅವರ ಪುತ್ರಿ ರಕ್ಷಿತಾ (20) ಮೃ*ತಪಟ್ಟ ಯುವತಿ ಎನ್ನಲಾಗಿದೆ.

    ಮೃ*ತರು ತಾಯಿ, ಅಕ್ಕ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

    Continue Reading

    LATEST NEWS

    ಕಾರ್ಕಳ: ದುರ್ಗಾ ಫಾಲ್ಸ್‌ಗೆ ಈಜುಲು ಹೋದ ಕಾಲೇಜು ವಿದ್ಯಾರ್ಥಿ ನೀರುಪಾಲು

    Published

    on

    ಕಾರ್ಕಳ: ದುರ್ಗಾ ಫಾಲ್ಸ್‌ಗೆ ಈಜುಲು ಹೋದ ವಿದ್ಯಾರ್ಥಿಯೋರ್ವ ನೀರು ಪಾಲಾದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.

    ಮೃ*ತ ವಿದ್ಯಾರ್ಥಿಯನ್ನು ಜಾಯಲ್ ಡಯಾಸ್ (19) ಎಂದು ಗುರುತಿಸಲಾಗಿದೆ. ಈತ ಉಡುಪಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಂ. ಪದವಿ ವ್ಯಾಸಂಗ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.

    7 ಮಂದಿ ವಿದ್ಯಾರ್ಥಿಗಳ ತಂಡ ದುರ್ಗಾ ಫಾಲ್ಸ್‌ ಗೆ ಬಂದಿದ್ದು, ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭ ಜಾಯಲ್ ಡಯಾಸ್ ಆಯ ತಪ್ಪಿ ನೀರು ಪಾಲಾಗಿದ್ದಾನೆ ಎಂದು ತಿಳಿದುಬಂದಿದೆ. ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

    Continue Reading

    LATEST NEWS

    Trending