ಬಂಟ್ವಾಳ: ಮಂಗಳೂರಿನ ಗುರುಬೆಳದಿಂಗಳು ಸಂಸ್ಥೆಯ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಪರಾರಿ ಎಂಬಲ್ಲಿ ನಿರ್ಮಾಣಗೊಂಡ ಚಿತ್ರಾಕ್ಷಿ ಅವರ ನೂತನ ಮನೆಯ ಹಸ್ತಾಂತರ ಕಾರ್ಯಕ್ರಮ ನಿನ್ನೆ ನಡೆಯಿತು.
ಪಣಂಬೂರು ಎಸಿಪಿ ಮಹೇಶ್ ಕುಮಾರ್ ಅವರು, ಭಾಗವಹಿಸಿ ಮಾತನಾಡಿ ಹಲವಾರು ಗೃಹಪ್ರವೇಶಕ್ಕೆ ಹೋಗಿದ್ದೇನೆ. ಆದರೆ ಇದೊಂದು ಹೃದಯಸ್ಪರ್ಷಿ ಗೃಹಪ್ರವೇಶದ ಕಾರ್ಯಕ್ರಮ ಎಂದರು.
ಗುರು ಬೆಳದಿಂಗಳು ಸಂಘಟನೆಯ ಅಧ್ಯಕ್ಷ ಪದ್ಮರಾಜ್ ಆರ್. ಅಧ್ಯಕ್ಷತೆ ವಹಿಸಿ ಮಾತನಾಡಿ ಗುರುಬೆಳದಿಂಗಳು ಸಂಘಟನೆಗೆ ಇಂತಹ ಸೇವಾ ಕಾರ್ಯಗಳನ್ನು ಮಾಡಲುವ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶ, ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಯವರು ಗೋಕರ್ಣ ಕ್ಷೇತ್ರದಲ್ಲಿ ಮಾಡಿದ ಜನಪರ ಕಾರ್ಯ ಪ್ರೇರಣೆ ನೀಡಿದೆ. ಯುವಕರ ಪರಿಶ್ರಮದಿಂದ ಹಾಗೂ ಹಲವು ಮಂದಿ ದಾನಿ ಸಹಕಾರದಿಂದ ಮನೆ ನಿರ್ಮಾಣಗೊಂಡಿದೆ ಎಂದು ತಿಳಿಸಿದರು.
ಗೋಕರ್ಣ ಕ್ಷೇತ್ರದ ಅಭಿವೃದ್ದಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ವಿವೇಕ್ ರಾಜ್ ಪೂಜಾರಿ, ಉದ್ಯಮಿ ಕಿಶೋರ್ ದಂಡಕೇರಿ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ, ಮನಪಾ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ಅನಿಲ್ ಕುಮಾರ್ ಪೂಜಾರಿ, ಪ್ರಮುಖರಾದ ವಿಷ್ಣುದಾಸ್ , ರಾಜೇಂದ್ರ ಚಿಲಿಂಬಿ, ಪ್ರೇಮನಾಥ್, ಲೋಕೇಶ್ ಮೊದಲಾದವರು ಉಪಸ್ಥಿತರಿದ್ದರು.
ಸಂಚಾಲಕ ಸುನೀಲ್ ಕುಮಾರ್ ಬಜಾಲ್ ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ರಾಜೇಶ್ ಸುವರ್ಣ ವಂದಿಸಿದರು.