ಮಂಗಳೂರು/ಬೀಜಿಂಗ್ : ಪ್ರಾಚೀನ ಭಾರತೀಯ ನೃತ್ಯ ಪ್ರಕಾರವೊಂದು ನೆರೆಯ ದೇಶದಲ್ಲಿ ಜನಪ್ರಿಯತೆ ಗಳಿಸಿದೆ. ಹೌದು, ಚೀನಾದ 13 ವರ್ಷದ ಬಾಲಕಿಯೊಬ್ಬಳು ಭರತನಾಟ್ಯ ರಂಗಪ್ರವೇಶ ಮಾಡಿದ್ದಾಳೆ. ಈ ಮೂಲಕ ಇತಿಹಾಸ ಬರೆದಿದ್ದಾಳೆ.
ಲೀ ಮುಝಿ ಈ ಸಾಧನೆಗೈದ ಮೇರು ಪ್ರತಿಭೆ. ಖ್ಯಾತ ಭರತನಾಟ್ಯ ಕಲಾವಿದೆ ಲೀಲಾ ಸ್ಯಾಮ್ಸನ್, ಭಾರತೀಯ ರಾಜತಾಂತ್ರಿಕರು ಮತ್ತು ಚೀನಾ ಜನತೆಯ ಸಮ್ಮುಖದಲ್ಲಿ ಬಾಲಕಿ ರಂಗಪ್ರವೇಶ ಮಾಡಿದಳು. ಚೀನಾದ ಭರತನಾಟ್ಯ ಅಭಿಮಾನಿಗಳಿಗೆ ಇದೊಂದು ಅದ್ಭುತ ಕ್ಷಣವಾಗಿತ್ತು. ಅಲ್ಲದೇ, ಇದು ಚೀನಾದಲ್ಲಿ ಮೊದಲ ಬಾರಿಗೆ ನಡೆದ ‘ಅರಂಗೇಟ್ರಂ’ ಭರತನಾಟ್ಯ ಕಾರ್ಯಕ್ರಮವಾಗಿತ್ತು.
ಚೀನಾದ ಸಂಪೂರ್ಣ ತರಬೇತಿ ಪಡೆದ ವಿದ್ಯಾರ್ಥಿನಿಯೊಬ್ಬರು ಚೀನಾದಲ್ಲಿ ನೀಡಿದ ಮೊದಲ ರಂಗಪ್ರವೇಶ ಇದಾಗಿದೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತೀಯ ರಾಯಭಾರ ಕಚೇರಿಯ ಸಂಸ್ಕೃತಿ ವಿಭಾಗದ ಉಸ್ತುವಾರಿ ವಹಿಸಿರುವ ಮೊದಲ ಕಾರ್ಯದರ್ಶಿ ಟಿ.ಎಸ್.ವಿವೇಕಾನಂದ್ ಹೇಳಿರುವ ಬಗ್ಗೆ ಪಿಟಿಐ ವರದಿ ಮಾಡಿದೆ. ಅತ್ಯಂತ ಸಾಂಪ್ರದಾಯಿಕ ವಿಧಾನದಲ್ಲಿ ಅಚ್ಚುಕಟ್ಟಾಗಿ ನಡೆದ ಆರಂಗೇಟ್ರಂ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.
ಎರಡು ಗಂಟೆಗಳ ಪ್ರದರ್ಶನ ನೀಡಿ ಲೀ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ. ಲೀಲಾ ಸ್ಯಾಮ್ಸನ್ ಜೊತೆಗೆ ಚೆನ್ನೈನಿಂದ ಆಗಮಿಸಿದ್ದ ಸಂಗೀತಗಾರರ ತಂಡದಿಂದ ಶಾಸ್ತ್ರೀಯ ಸಂಗೀತ ಪ್ರದರ್ಶನ ನಡೆಯಿತು. ಭಾರತದ ರಾಯಭಾರಿ ಪ್ರದೀಪ್ ರಾವತ್ ಅವರ ಪತ್ನಿ ಶ್ರುತಿ ರಾವತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಅಂದಹಾಗೆ, ಈ ತಿಂಗಳ ಅಂತ್ಯದಲ್ಲಿ ಲೀ ಚೆನ್ನೈನಲ್ಲೂ ಭರತನಾಟ್ಯ ಪ್ರದರ್ಶನ ನೀಡಲಿದ್ದಾಳೆ. 1999 ರಲ್ಲಿ ನವದೆಹಲಿಯಲ್ಲಿ ತನ್ನ ಆರಂಗೇಟ್ರಂ ಪ್ರದರ್ಶನ ನೀಡಿದ್ದ ಚೀನಾದ ಮೊದಲ ಖ್ಯಾತ ಭರತನಾಟ್ಯ ಕಲಾವಿದೆ ಜಿನ್ ನಡೆಸುತ್ತಿರುವ ಭರತನಾಟ್ಯ ಶಾಲೆಯಲ್ಲಿ ಲೀ 10 ವರ್ಷಗಳ ಕಾಲ ತರಬೇತಿ ಪಡೆದಿದ್ದಾಳೆ.
ಮಂಗಳೂರು/ಇರಾಕ್: ಸಣ್ಣ ವಯಸ್ಸಿನಲ್ಲಿ ಆಟ-ಪಾಠ ಅಂತ ಮಕ್ಕಳು ಬೆಳೆಯೋದು ಸಾಮಾನ್ಯ. ಆದರೆ ಇಲ್ಲೊಂದು ಕಡೆ 9 ವರ್ಷದ ಪುಟ್ಟ ಬಾಲಕಿ ಗರ್ಭಿಣಿಯಾಗಿ ಆಶ್ಚರ್ಯಪಡಿಸಿರೋದು ಸುಳ್ಳಲ್ಲ. ಭಾರತೀಯರಿಗೆ ಈ ಸಂಗತಿ ಆಶ್ಚರ್ಯ ಎನಿಸಿದರೂ ಇರಾಕ್ ದೇಶಕ್ಕೆ ಹೊಸದಲ್ಲ. ಯಾಕೆಂದರೆ, ಇರಾಕ್ ದೇಶ ಮದುವೆ ವಿಚಾರವಾಗಿ ಹೊಸ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.
ಮದುವೆ ವಯಸ್ಸಲ್ಲಿ ಇಳಿಕೆ!
ಸಮಾಜದಲ್ಲಿ ಅಸಮಾನತೆ ಮತ್ತು ಮಕ್ಕಳ ಶೋಷಣೆ ಜಾಸ್ತಿಯಾಗಿದೆ. ಇದರ ನಡುವೆ ಇರಾಕ್ ಸರ್ಕಾರವು ತನ್ನ ದೇಶದ ವಿವಾಹ ಕಾನೂನಿನಲ್ಲಿ ಬದಲಾವಣೆ ಮಾಡಲು ಹೊರಟಿದೆ ಎಂದು ಹೇಳಲಾಗುತ್ತಿದೆ. ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 18 ವರ್ಷದಿಂದ 9 ವರ್ಷಕ್ಕೆ ಇಳಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇರಾಕ್ ನ ಈ ವಿಚಿತ್ರ ಕಾನೂನಿಗೆ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹೊಸ ಕಾನೂನಿನಿಂದ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳು ಗರ್ಭಿಣಿಯರಾಗುತ್ತಿದ್ದಾರೆ.
ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಕಂಡು ಬರುವ ಹುಡುಗಿಗೆ, ಏನೂ ಅರಿಯದ 9 ವರ್ಷ. ಈ ಬಾಲಕಿ ಪ್ರೆಗ್ನೆಂಟ್ ಆಗಿದ್ದು ಅದೇ ಖುಷಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಪಟ್ಟಿದ್ದಾಳೆ. ಒಂದು ಕೈಯಲ್ಲಿ ಹೊಟ್ಟೆ ಹಿಡಿದು, ಇನ್ನೊಂದು ಕೈಯಲ್ಲಿ ಬಣ್ಣಗಳನ್ನು ಉಗುಳುತ್ತಿರುವ ಪಟಾಕಿ ಸಿಡಿಸುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇನ್ನು ವೈರಲ್ ಆಗಿರುವ ವೀಡಿಯೋದ ಸತ್ಯಾಸತ್ಯತೆ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಮಂಗಳೂರು/ಪೇಶಾವರ : ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಶನಿವಾರ(ನ.9) ಬಾಂ*ಬ್ ದಾ*ಳಿ ನಡೆದಿದೆ. ಘಟನೆಯಲ್ಲಿ ಕನಿಷ್ಠ 20 ಜನರು ಸಾ*ವನ್ನಪ್ಪಿದ್ದು, 30 ಕ್ಕೂ ಅಧಿಕ ಮಂದಿ ಗಾ*ಯಗೊಂಡಿದ್ದಾರೆ.
ರೈಲು ಪ್ಲಾಟ್‌ಫಾರ್ಮ್‌ಗೆ ಬರುವ ಮುನ್ನವೇ ರೈಲ್ವೆ ನಿಲ್ದಾಣದ ಬುಕ್ಕಿಂಗ್ ಕಚೇರಿಯಲ್ಲಿ ಸ್ಫೋ*ಟ ಸಂಭವಿಸಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಜಾಫರ್ ಎಕ್ಸ್‌ಪ್ರೆಸ್ ಬೆಳಗ್ಗೆ 9 ಗಂಟೆಗೆ ಪೇಶಾವರಕ್ಕೆ ಹೊರಡಬೇಕಿತ್ತು. ಆದರೆ, ಆಗಮನ ತಡವಾಗಿತ್ತು. ಸ್ಫೋ*ಟ ಸಂಭವಿಸಿದಾಗ ರೈಲು ಇನ್ನೂ ಪ್ಲಾಟ್‌ಫಾರ್ಮ್‌ಗೆ ಬಂದಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಮಂಗಳೂರು/ರಿಯಾದ್ : ಸೌದಿ ಅರೇಬಿಯಾ ಮರಳುಗಾಡನ್ನು ಹೊಂದಿರುವ ಪ್ರದೇಶ. ಸುಡುವ ಬಿಸಿಲಿರುವ ಮರುಭೂಮಿಯಲ್ಲಿ ಹಿಮಪಾತವಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಸೌದಿ ಅರೇಬಿಯಾದ ಹಲವು ಭಾಗಗಳಲ್ಲಿ ಹಿಮಪಾತವಾಗಿದೆ. ಮರಳು ಗುಡ್ಡಗಳ ಮೇಲೆ ಹಿಮಗಳ ರಾಶಿ ಕಾಣಿಸುತ್ತಿದೆ. ಅಲ್ -ಜಾವ್ನ್ ಪ್ರಾಂತ್ಯದ ಉತ್ತರ ಗಡಿಪ್ರದೇಶಗಳಾದ ರಿಯಾದ್, ಮೆಕ್ಕಾ, ಆರ್ಸಿ, ತಬೂಕ್ ಮತ್ತು ಅಲ್ ಬಹಾಹ್ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಆಲಿಕಲ್ಲು ಮಳೆ ಮತ್ತು ಹಿಮ ಬೀಳುತ್ತಿದೆ.
ಮರುಭೂಮಿಯಲ್ಲಿ ಹಿಮ ಮತ್ತು ಮಳೆಯಾಗುತ್ತಿರುವುದು ಅಚ್ಚರಿ ಉಂಟು ಮಾಡಿದ್ದು, ಇದರ ವೀಡಿಯೊ, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಹಿಮ ಬೀಳಲು ಕಾರಣವೇನು?
ಅರಬ್ಬಿ ಸಮುದ್ರದಲ್ಲಿ ಉಂಟಾದ ಕಡಿಮೆ ಒತ್ತಡದ ಪರಿಣಾಮ ಒಮಾನ್‌ಗೂ ಅವರಿಸಿದೆ. ಇದರಿಂದಾಗಿ ಶುಷ್ಕತೆಯಿಂದ ಇರುವ ಪ್ರದೇಶದಲ್ಲಿ ತೇವಾಂಶದಿಂದ ಕೂಡಿರುವ ಗಾಳಿ ಬೀಸುತ್ತಿದೆ. ಹೀಗಾಗಿ ಸೌದಿ ಅರೇಬಿಯಾ ಮತ್ತು ನೆರೆಯ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಯಾದ್ಯಂತ ಗುಡುಗು, ಆಲಿಕಲ್ಲು ಮಳೆ, ಹಿಮ ಬೀಳಲು ಕಾರಣವಾಗಿದೆ ಎಂದು ಯುಎಇಯ ರಾಷ್ಟ್ರೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಪ್ರತಿಕೂಲ ಹವಾಮಾನ ಇರುವ ಕಾರಣ ಅಲ್-ಜಾವ್‌ನಾದ್ಯಂತ ಭಾರಿ ಪ್ರಮಾಣದಲ್ಲಿ ಆಲಿಕಲ್ಲು ಮಳೆ, ತೀವ್ರ ಗಾಳಿ ಬೀಸಲಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.
ಅಪರೂಪದ ವಿದ್ಯಮಾನ :
ಮರುಭೂಮಿಯಲ್ಲಿ ಹಿಮ ಬೀಳುವುದು ತೀರಾ ಅಪರೂಪದ ವಿದ್ಯಮಾನವಾಗಿದೆ. ಆದರೆ ಹಿಮ ಬೀಳುವುದೇ ಇಲ್ಲ ಎನ್ನುವಂತಿಲ್ಲ ಎಂಬುದು ತಜ್ಞರ ಮಾಹಿತಿ.
ಕೆಲವು ವರ್ಷಗಳ ಹಿಂದೆ ಸಹರಾ ಮರುಭೂಮಿ ಪ್ರದೇಶದ ಪಟ್ಟಣದಲ್ಲಿ ತಾಪಮಾನ 58 ಡಿಗ್ರಿಗೆ ಏರಿಕೆಯಾಗಿತ್ತು. ಆದರೆ ಏಕಾಏಕಿ ಆದ ಹಿಮಪಾತದಿಂದ ತಾಪಮಾನ ಇಳಿಕೆಯಾಗಿ ಮೈನಸ್ 2 ಡಿಗ್ರಿಗೆ ತಲುಪಿತ್ತು. ಹವಾಮಾನ ಬದಲಾವಣೆಯ ಕಾರಣದಿಂದಾಗಿ ಈ ರೀತಿ ವಿದ್ಯಮಾನವು ಸಂಭವಿಸುತ್ತದೆ. ಹವಾಮಾನ ವೈಪರೀತ್ಯಗಳ ಪರಿಣಾಮಗಳಿಗೆ ಪಶ್ಚಿಮ ಏಷ್ಯಾವು ಹೆಚ್ಚು ಒಳಗಾಗುತ್ತವೆ.
ಜಾಗತಿಕ ಹವಾಮಾನ ಬದಲಾವಣೆಯಿಂದಾಗಿ ವಾತಾವರಣದ ಪರಿಸ್ಥಿತಿಗಳಲ್ಲೂ ಬದಲಾವಣೆಯಾಗುತ್ತವೆ. ಆದ್ದರಿಂದ ಮರುಭೂಮಿಗಳಲ್ಲಿ ಹಿಮಪಾತ ಸೇರಿದಂತೆ ಇಂತಹ ಅಸಾಮಾನ್ಯ ಹವಾಮಾನ ಘಟನೆಗಳು ಆಗಾಗ ಆಗುತ್ತವೆ ಎಂಬುದು ತಜ್ಞರ ಉವಾಚ.