Saturday, November 27, 2021

ಮದುವೆಯಲ್ಲಿ ಸನ್ನಿ ಲಿಯೋನ್ ಹಾಡಿಗೆ ಸ್ಟೆಪ್ ಹಾಕಿ ಭರ್ಜರಿ ಎಂಟ್ರಿ ಕೊಟ್ಟ ನೂತನ   ಮಹಾರಾಷ್ಟ್ರದ  ವಧು ಜಾಲತಾಣದಲ್ಲಿ ವೈರಲ್ ಆಯ್ತು ವೀಡಿಯೋ 

 ಮದುವೆಯಲ್ಲಿ ಸನ್ನಿ ಲಿಯೋನ್ ಹಾಡಿಗೆ ಸ್ಟೆಪ್ ಹಾಕಿ ಭರ್ಜರಿ ಎಂಟ್ರಿ ಕೊಟ್ಟ ನೂತನ   ಮಹಾರಾಷ್ಟ್ರದ  ವಧು ಜಾಲತಾಣದಲ್ಲಿ ವೈರಲ್ ಆಯ್ತು ವೀಡಿಯೋ..! 

ಮುಂಬೈ:ಹಿಂದೊಂದು ಕಾಲವಿತ್ತು ಮದುವೆಯೆಂದರೆ ವಧು ನಾಚಿ ನೀರಾಗುತ್ತಿದ್ದಳು. ತಲೆ ಎತ್ತಿ   ನಡೆಯುತ್ತಿರಲಿಲ್ಲ ಆದ್ರೀಗ ಕಾಲ ಬದಲಾಗಿದೆ.ನಾಚಿಕೆಯನ್ನು ಪಕ್ಕಕ್ಕಿಟ್ಟು ಮದುವೆ ಮಂಟಪದಲ್ಲಿ ಡ್ಯಾನ್ಸ್​ ಮಾಡುವ ಮೂಲಕ  ವರನೇ ನಾಚಿಕೊಳ್ಳುವಂತೆ ಮಾಡುತ್ತಿದ್ದಾಳೆ ವಧು.

ಹೌದು, ಈ ಪ್ರಸಂಗ ಮಹಾರಾಷ್ಟ್ರದಲ್ಲಿ ಜರುಗಿದೆ. ವಧುವೊಬ್ಬಳು ಬಾಲಿವುಡ್​ ಮಾದಕ ನಟಿ ಸನ್ನಿ ಲಿಯೋನ್​ ಹಾಡಿಗೆ ಡ್ಯಾನ್ಸ್​ ಮಾಡುತ್ತಲೇ ಮಂಟಪಕ್ಕೆ ಭರ್ಜರಿ ಎಂಟ್ರಿ ಕೊಡುವ ಮೂಲಕ ಮದುವೆಗೆ ಬಂದಿದ್ದ ಅತಿಥಿಗಳು ಹುಬ್ಬೇರುವಂತೆ ಮಾಡಿದ್ದಾಳೆ.ಸನ್ನಿ ಲಿಯೋನ್​ ಅವರ ಮೇರೆ ಸಿಯಾನ್​ ಸೂಪರ್​ಸ್ಟಾರ್​ ಕ್ರೇಜಿ ಹಾಡಿಗೆ ವಧು ಹೆಜ್ಜೆ ಹಾಕಿರುವ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದೆ.

ಮರಾಠಿ ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ಭರ್ಜರಿಯಾಗಿ ಸಿಂಗಾರ ಮಾಡಿಕೊಂಡು, ಕಣ್ಣಿಗೆ ಸನ್​ಗ್ಲಾಸ್​ ಧರಿಸಿ ಮಂಟಪಕ್ಕೆ ಆಗಮಿಸಿದ ವಧು, ವರ ನಿಂತಿದ್ದ ವೇದಿಕೆಯತ್ತ ಸನ್ನಿ ಲಿಯೋನ್​ ಹಾಡಿಗೆ ಸೊಂಟ ಬಳುಕಿಸುತ್ತಾ ಸಾಗಿದಳು.

ಕೊನೆಗೆ ವರನ ಬಳಿ ತೆರಳಿ ಆತನ ಕೈಗೆ ಮುತ್ತು ನೀಡಿ ವೇದಿಕೆ ಏರಿದಳು. ವಧುವಿನ ನೃತ್ಯವನ್ನು ರಪ್ಪೆ ಬಡಿಯದೇ ಅತಿಥಿಗಳು ಕಣ್ತುಂಬಿಕೊಂಡರು.

ಇನ್ನು ಕೆಲವರು ತಮ್ಮ ಮೊಬೈಲ್​ ಕ್ಯಾಮೆರಾ ಕಣ್ಣಲ್ಲಿ ವಧುವಿನ ಡ್ಯಾನ್ಸ್​ ಸೆರೆಹಿಡಿದುಕೊಂಡರು.ವೇದಿಕೆಯಲ್ಲೇ ತನ್ನ ಭಾವೀ ಪತ್ನಿಯ ಡ್ಯಾನ್ಸ್​ ನೋಡುತ್ತಾ ನಿಂತಿದ್ದ ವರನೇ ನಾಚಿ ನೀರಾದನು.

ಸದ್ಯ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದ್ದು, ವಧುವಿನ ನೃತ್ಯಕ್ಕೆ ಜಾಲ ತಾಣಿಗರು ಫಿದಾ ಆಗಿದ್ದಾರೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...