Thursday, April 22, 2021

ನೆಲ್ಯಾಡಿಯಲ್ಲಿ ಹೊತ್ತಿ ಉರಿದ ಬಸ್​ನಲ್ಲಿ ಬಚಾವ್​ ಆದ ಖ್ಯಾತ ತುಳು ನಟಿ ನೀಮಾ ರೇ..!

ಕಡಬ : ದಕ್ಷಿಣ ಕನ್ನಡದ ನೆಲ್ಯಾಡಿಯಲ್ಲಿ ನಡೆದ ಭೀಕರ ಬಸ್ – ಟ್ರಕ್ ಅಫಘಾತದಲ್ಲಿ ತುಳು ಚಿತ್ರರಂಗದ ಖ್ಯಾತ ನಟಿ ನೀಮಾ ರೇ ಕೂಡ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಾಗಿ ಬಸ್ ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಬಳಿ ಅಪಘಾತಕ್ಕೆ ಒಳಗಾಗಿದೆ.

ಈ ವೇಳೆ ನಟಿ ಸೇರಿದಂತೆ ಬಸ್‌ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಅವರ ಪೈಕಿ ತುಳು ಚಿತ್ರರಂಗದ ಖ್ಯಾತ ನಟಿ ನೀಮಾ ರೇ ಕೂಡ ಇದ್ದರು. ಅದೃಷ್ಟವಶಾತ್​ ಅವರೆಲ್ಲರೂ ಪಾರಾಗಿದ್ದಾರೆ.

ಈ ಬಗ್ಗೆ ಮಾದ್ಯಮಗಳಿಗೆ ಪ್ರತಿಕ್ರೀಯೆ ನೀಡಿರುವ ನಟಿ ನೀಮಾ ರೇ ಡಿಕ್ಕಿ ಹೊಡೆದ ತಕ್ಷಣ ಬಸ್​ನಲ್ಲಿ ಹೊಗೆ ಆವರಿಸಲು ಆರಂಭ ಆಯಿತು. ಅದರಿಂದ ಎಲ್ಲರೂ ಗಾಬರಿಗೊಂಡಿದ್ದರು.

ಹೇಗೋ ಸಾಹಸಪಟ್ಟು ಬಾಗಿಲು ತೆರೆಯಲು ಪ್ರಯತ್ನಿದೆವು. ಬಾಗಿಲು ತೆಗೆಯುವುದು ತುಂಬ ಕಷ್ಟ ಆಗಿತ್ತು. ಎಲ್ಲವೂ ಜಾಮ್​ ಆಗಿತ್ತು.

ಬೆಂಕಿ ಆವರಿಸಿಕೊಳ್ಳುವ ಮುನ್ನವೇ ಎಲ್ಲರೂ ಬಸ್​ನಿಂದ ಸೇಫಾಗಿ ಹೊರಬಂದೆವು. ಸ್ವಲ್ಪವೇ ತಡವಾಗಿದ್ದರೂ ಎಲ್ಲರೂ ಸಜೀವದಹನ ಆಗಬೇಕಾಗಿತ್ತು. ನಾನು ಈಗ ಚೆನ್ನಾಗಿದ್ದೇನೆ.

ಎಲ್ಲ ಪ್ರಯಾಣಿಕರು ಸೇಫ್​ ಆಗಿದ್ದೇವೆ. ಕೆಲವರಿಗೆ ಗಾಯಗಳಾಗಿವೆ ಎಂದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಘೋಷಣೆಯಾದ 67ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ‘ಅತ್ಯುತ್ತಮ ತುಳು ಸಿನಿಮಾ’ ಎಂಬ ಗೌರವಕ್ಕೆ ಪಾತ್ರವಾದ ‘ಪಿಂಗಾರ’ ಸಿನಿಮಾದಲ್ಲಿ ನೀಮಾ ರೈ ನಟಿಸಿದ್ದಾರೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...