Thursday, December 2, 2021

ಭವ್ಯಶ್ರೀ ಕುಲ್ಕುಂದ ಕಂಠಸಿರಿಯ ‘ನೀ ಕಾಯೋ ಶಿವನೇ..’ ಭಕ್ತಿಗೀತೆ ಲೋಕಾರ್ಪಣೆ

ಮಂಗಳೂರು: ಪೀಠ ಕ್ರಿಯೇಶನ್ ನಿರ್ಮಾಣದಲ್ಲಿ ಯಕ್ಷಗಾನ ಭಾಗವತರಾದ ಭವ್ಯಶ್ರೀ ಕುಲ್ಕುಂದ ಅವರು ಹಾಡಿರುವ ‘ನೀ ಕಾಯೋ ಶಿವನೇ..’ ಭಕ್ತಿಗೀತೆಯ ವೀಡಿಯೋ ನಿನ್ನೆ ಸಂಜೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಬಿಡುಗಡೆಗೊಂಡಿತು.


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು ವೀಡಿಯೋ ಬಿಡುಗಡೆಗೊಳಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಪೀಠ ಕ್ರಿಯೇಶನ್ ತಂಡ ಶಿವ ದೇವರ ಕುರಿತಾಗಿ ನಿರ್ಮಿಸಿದ ಈ ವೀಡಿಯೋ ಉತ್ತಮವಾಗಿ ಮೂಡಿಬಂದಿದೆ.

ಈ ವೀಡಿಯೋ ಹಾಗೂ ಪೀಠ ತಂಡ ಯಶಸ್ಸು ಗಳಿಸಲಿ ಎಂದು ಹಾರೈಸಿದರು.ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಐತ್ತಪ್ಪ ನಾಯ್ಕ್, ರಾಮಚಂದ್ರ ಕಾಮತ್, ಸುಧಾ ರಾವ್, ಬಿ.ಕೆ. ವೀಣಾ ಅತಿಥಿಗಳಾಗಿದ್ದರು.

ವೀಡಿಯೋ ನಿರ್ದೇಶಕ ದಿಲೀಪ್ ರೈ, ನಟ ಯತೀಶ್ ಕುಡುಪು, ದೀಪಕ್ ಶೆಟ್ಟಿ, ರಶ್ಮಿ ದಿಲೀಪ್ ಉಪಸ್ಥಿತರಿದ್ದರು.
ಎಲ್ಲೆಲ್ಲಿಯೂ ಶಿವ ಇದ್ದಾನೆ ಎನ್ನುವ ಪರಿಕಲ್ಪನೆಯಲ್ಲಿ ಈ ಹಾಡು ಹಾಗೂ ವೀಡಿಯೋ ಮೂಡಿಬಂದಿದೆ. ಯಕ್ಷಗಾನ ಭಾಗವತರಾದ ಭವ್ಯಶ್ರೀ ಕುಲ್ಕುಂದ ಅವರು ಧ್ವನಿ ನೀಡಿದ್ದಾರೆ. ಸಾಹಿತ್ಯವನ್ನು ಯತೀಶ್ ಕುಡುಪು ಒದಗಿಸಿದ್ದು,

ದಿಲೀಪ್ ರೈ ಸಂಕಲನ ಮತ್ತು ನಿದೇರ್ಶನ ಮಾಡಿದ್ದಾರೆ. ಮಹೇಶ್ ಮೂಲ್ಯ ಛಾಯಾಗ್ರಹಣ, ಸಂದೀಪ್ ಸಂಗೀತ ನೀಡಿದ್ದಾರೆ.

ಸುವಿನ್ಯಾ ಆಚಾರ್ಯ ಸಹಗಾಯಕಿಯಾಗಿದ್ದಾರೆ. ಈ ವೀಡಿಯೋ ಯೂಟ್ಯೂಬ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ.

 

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...