ನವದೆಹಲಿ: ಅಖಿಲ ಭಾರತ ನಯಾರ ಹಿತರಕ್ಷಣಾ ಸಂಘ ಹಾಗೂ ಕರ್ನಾಟಕ ಪೆಟ್ರೋ ಡೀಲರ್ಸ್ ವೆಲ್‍ಫೇರ್ ಅಸೋಷಿಯೇಷನ್‌ನ ನಿಯೋಗ
ನಿನ್ನೆ ಕೇಂದ್ರ ಇಂಧನ ಸಚಿವರಾದ ಹರ್ದೀಪ್ ಸಿಂಗ್ ಪುರಿ ಇವರನ್ನು ಭೇಟಿ ಮಾಡಿ ಭಾರತದ ನಯಾರ/ಎಸ್ಸಾರ್ ಪೆಟ್ರೋಲ್ ಬಂಕ್ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತು ಚರ್ಚಿಸಿದರು. ಈ ವೇಳೆ ಮಾಲೀಕರ ಬೇಡಿಕೆಗಳನ್ನು ಸಚಿವರು ಈಡೇರಿಸುವ ಭರವಸೆ ನೀಡಿದ್ದಾರೆ.
ದೇಶದೆಲ್ಲೆಡೆ ಇರುವ ಪೆಟ್ರೋಲ್ ಬಂಕ್‌ಗಳಿಗೆ ನಯಾರ ಕಂಪನಿ ಇಂಧನ ಪೂರ್ಣ ಪ್ರಮಾಣದಲ್ಲಿ ಪೂರೈಸದೇ ಇರುವುದರಿಂದ ಸರಬರಾಜಿನ ವ್ಯತ್ಯಯದಿಂದಾಗಿ ಎಲ್ಲ ಔಟ್ ಲೆಟ್‌ಗಳಲ್ಲೂ ‘ನೋ ಸ್ಟಾಕ್‘ ಬೋರ್ಡ್ ಹಾಕುವಂತಾಗಿದೆ. ಅಲ್ಲದೇ ಸರ್ಕಾರಿ ಸ್ವಾಮ್ಯದ ಪೆಟ್ರೋಲ್/ಡಿಸೆಲ್ ಬೆಲೆ 5 ರೂ ಹೆಚ್ಚಿದೆ. ನಮ್ಮ ಪೆಟ್ರೋಲ್ ಬಂಕ್ ಗಳು ಹೆಚ್ಚು ಗ್ರಾಮೀಣ ಭಾಗದಲ್ಲಿದ್ದು, ಆದ್ದರಿಂದ ಇದು ಸಾಧ್ಯವಿಲ್ಲದ ಮಾತು.
ಪ್ರತಿ ಪೆಟ್ರೋಲ್ ಬಂಕ್‌ನಲ್ಲಿ 2 ಸಾವಿರ ಇಂಧನ ಸ್ಟಾಕ್ ಇಡಲೇಬೇಕೆಂಬ ನಿಯಮ ವಿಧಿಸಿದ್ದಾರೆ. ನೀವು ನಮ್ಮ ಸಹಾಯಕ್ಕೆ ಬರದೇ ಹೋದರೆ ದೇಶಾದ್ಯಂತ 6500 ಪೆಟ್ರೋಲ್
ಬಂಕ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿ ಹಾಕಿಕೊಳ್ಳುತ್ತಾರೆ ಎಂದು ಸಮಸ್ಯೆ ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಿಮ್ಮ ಸಮಸ್ಯೆಗಳ ಪೂರ್ಣ ಅರಿವು ನನಗಿದೆ.
ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಜೊತೆಯಲ್ಲಿ ನಯಾರ ಕಂಪನಿಯವರನ್ನು ಕರೆಸಿ ಮಾತನಾಡಿ ನಿಮ್ಮ ಬೇಡಿಕೆಗಳನ್ನು ಆದಷ್ಟು ಶೀಘ್ರ ಬಗೆಹರಿಸುವುದಾಗಿ ನಿಯೋಗಕ್ಕೆ ಭರವಸೆ ನೀಡಿದ್ದಾರೆಂದು ಕರ್ನಾಟಕ ಪೆಟ್ರೋ ಡೀಲರ್ಸ್ ವೆಲ್‍ಫೇರ್ ಅಸೋಷಿಯೇಷನ್‌ನ ಅಧ್ಯಕ್ಷ ಕೊಟ್ರೇಶ್ ನಾಯಕ್ ತಿಳಿಸಿದ್ದಾರೆ.
ಈ ನಿಯೋಗದಲ್ಲಿ ಕೇಂದ್ರ ಸಂಘದ ಅಧ್ಯಕ್ಷ ರಾಜವೀರ್ ಚವಾಣ್, ರಾಮಸಿಂಗ್, ರೋಹಿತ್ ಜಾಮಟಾನಿ, ರಾಜ್ಯ ಸಂಘದ ಅಧ್ಯಕ್ಷರು, ಕೇಂದ್ರ ಸಂಘದ ಉಪಾಧ್ಯಕ್ಷಕೊಟ್ರೇಶ್ ನಾಯಕ್,
ಉಪಾಧ್ಯಕ್ಷ ಚಂದ್ರಶೇಖರ ಪಾಟೀಲ್, ಕಾರ್ಯದರ್ಶಿ ಜಾಹೀರ್ ಶಾ ಮನಿಪಾಡಿ, ಖಚಾಂಚಿ ಸುನಿಲ್ ಮಾರ್ಕುಂಬಿ ಮೊದಲಾದವರು ಇದ್ದರು.